*ಕಸ... ರಸ*
*ಕಸ... ರಸ* ಕಸ ಮತ್ತು ರಸಗಳು ಕೂಡಿ ಕೂಡಿ ಇರುವಂತಹವುಗಳು. ರಸವಿದ್ದಲ್ಲಿ ಕಸವಿದೆ, ಕಸವಿರುವಲ್ಲಿ ರಸವಿದೆ. ಕಸ ಬಳಿಸಿದಾಗಲೇ ರಸ. ರಸ ಬಳಿಸಿ ಆದಮೇಲೆಯೆ ಕಸ. ಹೀಗೆ ಕಸ ರಸಗಳು ಒಂದಕ್ಕೆ ಒಂದು ಪೂರಕ. *ಕೈ ಕೆಸರಾದರೆ ಬಾಯಿ ಮೊಸರು.* ಕನ್ನಡ ಪ್ರಸಿದ್ಧ ನಾಣ್ಣುಡಿ. ಕೈ ಕೆಸರಾಗಬೇಕು ಎಂದರೆ ಕಸ ಇರಬೇಕು. ಕಸವಿದ್ದಲ್ಲೇ ಕೆಸರು. ರಸ ಪಡೆಯಬೇಕು ಎಂದಾದರೆ ಕಸದಲ್ಲಿ ಶ್ರಮಿಸಿ, ಕೆಸರಿನಲ್ಲಿ ದುಡಿದಾಗ ಮುಂದೆ ಬಾಯಿಗೆ ಮೊಸರೆಂಬ ರಸ ಸಿದ್ಧ. ಕೆಲವೊಮ್ಮೆ ಹೀಗಾಗುವದು.. ಕಷ್ಡದ ದಿನಗಳೆ ತ್ಸುನಾನಾಮಿಯಂತೆ ಅಪ್ಪಳಿಸುತ್ತಿರುವಾಗ, ರಸ ತುಂಬ ದೂರದ ಮಾತು. ಕನಸದ್ಸಿನ ಕುದುರೆ, ಅಥವಾ ಹಗಲ್ಗನಸು ಹೀಗೆ ಆಗಿರುತ್ತದೆ. ಈಗಂತೂ ಕರೋನಾಕಾಲಕಷ್ಟಗಳೂ ಪ್ರಾಣಾಂತಿಕವೇ ಆಗಿದೆ. ಕರೋನಾ ಬಂದರೆ ಸಾವು ಒಂದೆಡೆಯಾದರೆ ದೈನಿಂದಿನ ದುಡಿದು ತಿನ್ನುವವರ ಬದುಕು ಇನ್ನೂ ಘೋರ. ಈ ಪ್ರಸಂಗದಲ್ಲಿ ಕಸವೂ ಇಲ್ಲ. ರಸವೂ ಇಲ್ಲ. ಅನೇಕರ ಸ್ಥಿತಿ ಹೀಗೇ ಇದೆ. ಕಸವೂ ಇಲ್ಲದ ರಸವೂ ಇಲ್ಲದ ಈ ದುರವಸ್ಥೇಯಲ್ಲಿ ಮುಣುಗಿದಾಗ, ಕಸದಲ್ಲೇ ನಿಂತು, ತಾವು ತಮ್ಮ ಕೈ ಕಸಮಾಡಿಕೊಂಡು, ಕ್ಷಣ ಕ್ಷಣಕ್ಕೆ ಬೆಂಬಲವಾಗಿ ಇದ್ದು, ಉತ್ಸಾಹ ತುಂಬಿ, ಭಯ ಹತಾಶೆಗಳನ್ನು ತೊಡಗಿಸಿ, ಕಾನ್ಫಿಡೆಂಟ್ ತುಂಬಿ, ಅನೇಕ ಉಪಾಯಗಳನ್ನು ತೋರಿ, ವಿಘ್ನಗಳನ್ನು ಪರಿಹರಿಸಿ, ದೈವಬಲವನ್ನು ಹೆಚ್ಚಿಸಿ, ನಮಗೆ ರಸ ಸಿಗಲು ತಮ್ಮ ಕೈ ಕೆಸರು ಮಾಡಿಕೊಂಡಿರುತ್ತಾರೆ. ಅಂತಹವರೂ ಇಂದೂ...