*"ಕ್ಷೇಮಾಯ ನೋ ಭವತಿ ವೋ ಬಲವದ್ವಿರೋಧಃ"*
"ಬಲಿಷ್ಠರ ವಿರೋಧ ನಮಗೆ ಮಂಗಲವನ್ನು ಉಂಟುಮಾಡುವದಿಲ್ಲ" ಎಂಬ ದುರ್ಯೋಧನಾದಿಗಳ ಕುರಿತಾದ ಧೃತರಾಷ್ಟ್ರನ ಮಾತು ಧೃತರಾಷ್ಟ್ರನಿರುವಾಗಲೇ ಋಜುವಾಯಿತು.
ಎಂದಿಗೂ ಬಲಿಷ್ಠರ ವಿರೋಧ ಒಳಿತನ್ನು ಮಾಡಿಲ್ಲ. ಮಾಡುವದೂ ಇಲ್ಲ.
*ಬಲಿಷ್ಠರು ಯಾರು.. ??*
ಉತ್ತಮ ಕುಲೀನರು ಕುಲದಿಂದ ಬಲಿಷ್ಠರು. ಹಣವಂತರು ಹಣದಿಂದ ಬಲಿಷ್ಠರು. ಜ್ಙಾನಿಗಳು ಜ್ಙಾನದಿಂದ ಬಲಿಷ್ಠರು. ವಯೋವೃದ್ಧರು ವಯಸ್ಸಿನಿಂದ ಬಲಿಷ್ಠರು. ಧಾರ್ಮಿಕರು ಧರ್ಮದಿಂದ ಬಲಿಷ್ಠರು. ಈ ತರಹದ ಬಲಿಷ್ಠರ ವಿರೋಧ ಮಾಡಿದವ ಎಂತಹ ಬಲಿಷ್ಠನೇ ಆಗಿರಲಿ ಅವನಿಗೆ ಹಿವಾಗುವದಿಲ್ಲ ಇದು ಪ್ರತಿಶತಃ ನೂರರಷ್ಟು ಸಿದ್ಧ.
ಈ ಎಲ್ಲ ಬಲಗಳೂ ಒಂದೆಡೇ ಇದ್ದು ಮಹಾ ಬಲಿಷ್ಠನಾದರೆ ಅವನವಸ್ಥ ಹೇಳತೀರದು. ನಿದರ್ಶನ ದುರ್ಯೋಧನ, ಹಿರಣ್ಯಕಶಿಪು, ರಾವಣ ಇತ್ಯಾದಿಗಳೇ.
ಈಗಿನ ಪ್ರಸಂಗದಲ್ಲಿ ನಮ್ಮ ವಿರೋಧಿಗಳಿಗೆ ಕ್ಷೇಮವೇ ಆಗುತ್ತಾ ಇದೆ. ಉಚ್ಛ್ರಾಯವೇ ಸಿಗುತ್ತಿದೆ. ದಿನೆ ದಿನೇ ಬೇಳಿಯುತ್ತಿದ್ದಾರೆ. *ನಮ್ಮ ವಿರೋಧದಿಂದಲೇ ನಾ ಅನಾಯಾಸೇನ ಮೇಲರೆರಬಹುದು ಎನ್ನುವಷ್ಟರಮಟ್ಟಿಗೆ ಸಾಗ್ತಾ ಇದೆ...* ಹೀಗೇಕೆ...???
ಬಲಿಷ್ಠರಲ್ಲಿ ಬಲ ಇಲ್ಲದಿರುವದರಿಂದಲೇ ಈ ದುರವಸ್ಥೆ. ಕೇವಲ ನಾವು ಬಲಿಷ್ಠರು ಎಂದು ಕುಳಿತರೆ ಸಾಲದು, ಬಲವಿದೆಯೋ ಇಲ್ಲವೋ ಎಂಬ ಯೋಚನೇಯೂ ಅತ್ಯವಶ್ಯಕ.
"ಬಲಿಷ್ಠರ ವಿರೋಧ ಕೆಡುಕು ಆಗುವದು" ಎಂಬ ವೇದವ್ಯಾಸದೇವರ ಹಾಗೂ ಶ್ರೀಮದಾಚಾರ್ಯರ ಮಾತು ಸಾರ್ವಕಾಲಿಕ ಸತ್ಯ. ಈ ವಿಶಯದಲ್ಲಿ ಸಂಶಯ ಬೇಡ. ನಮ್ಮ (ಬ್ರಾಹ್ಮಣರ) ಬಲವೆಂದರೆ ಧರ್ಮ ಹಾಗೂ ಜ್ಙಾನಗಳ ಬಲವೇ ಮೂಲಬಲ. ಆ ಬಲವಿಲ್ಲದಿರೆ ತುಳಿಯುವವರು ಹೆಚ್ಚಾಗಿದ್ದಾರೆ. *ಜ್ಙಾನಬಲ ಧರ್ಮಬಲ* ಇವುಗಳು ಇವೆ ಎಂದಾದರೆ ತುಳಿದವರಿಗೆ ಹಿತವಾಗುವದಿಲ್ಲ ಇದುವೂ ಅಷ್ಟೇ ಸತ್ಯ.
ಕೇವಲ ಜ್ಙಾನವಿರುವದರಿಂದ ಹಣ ಸಂಪಾದನೆಗೆ ಏನೂ ಕಡಿಮೆ ಆಗಿಲ್ಲ. ಆದರೆ ಧರ್ಮ ಕಳೆದುಕೊಂಡಿರುವದರಿಂದ ಮಹಾ ಅನರ್ಥಕ್ಕಂತೂ ಬಲಿಯಾಗಿದ್ಧೇವೆ. ದುರ್ಬಲರಾಗಿದ್ದೇವೆ. ವೈಯಕ್ತಿಕವಾಗಿ ಸುಖ ಶಾಂತಿಗಳಿಲ್ಲ. ಸಮಾಜದಲ್ಲಿ ತುಳಿತಕ್ಕೂ ಒಳಗಾಗಿದ್ದೇವೆ. ಇರುವಷ್ಟು ಧರ್ಮವೂ ಇಳಿಮುಖವಾಗುತ್ತಾ ಸಾಗುತ್ತಿದೆ . ಹೀಗೇ ಮುಂದೆವರೆದಲ್ಲಿ ಇರುವ ಜ್ಙಾನವನ್ನೂ ಕಳೆದುಕೊಳ್ಳುತ್ತೇವೆ. ಜ್ಙಾನವೂ ಹೋದರೆ ನಮ್ಮಂತಹ ಅತಿ ದುರ್ಬಲರು ಜಗತ್ತಿನಲ್ಲಿಯೇ ಯಾರು ಇರುವದಿಲ್ಲ....
ಧರ್ಮವಿಲ್ಲದಿರುವದರಿಂದ ಅಂತೆಯೇ ದುರ್ಬಲರಾದ ನಮ್ಮ ವಿರೋಧ ಪರರಿಗೆ ಅನುಕೂಲವಾಗುತ್ತದೆಯೆ ವಿನಹ ಪ್ರತಿಕೂಲವಂತೂ ಆಗಲಾರದು.
ಆದ್ದರಿಂದ *ಧಾರ್ಮಿಕತೆಯನ್ನು ಬೆಳಿಸಿಕೊಂಡು ನಾವು ಬಲಿಷ್ಠರಾದರೆ , ನಮ್ಮನ್ನು ತುಳಿಯುವವರ ಹಾಗು ನಮ್ಮನ್ನು ವಿರೋಧಿಸುವವರ ಗತಿ ದುರ್ಯೋಧನಾದಿಗಳ ಗತಿಯನ್ನೇ ಕಾಣುತ್ತಾರೆ......*
ಶ್ರೀಮದಾಚಾರ್ಯರ ಮಾತು ಸಾರ್ವಕಾಲಿಕ ಸತ್ಯ ಎಂದು ಪ್ರತಿಪಾದನೆ ಮಾಡುವದಕ್ಕಾದರೂ ಧರ್ಮವನ್ನು ಉಳಿಸೋಣ. ಬೆಳಿಸೋಣ. ಪಾಂಡವರ ಹಾಗೆ ಬಲಿಷ್ಠರಾಗೋಣ. ಈ ದೃಷ್ಟಿಕೋನದಲ್ಲಿ ದಿನದ ಒಂದು ಗಂಟೆಯನ್ನಾದರೂ ಮೀಸಲಿಡೋಣ. ಶ್ರೀಮದಾಚಾರ್ಯರಿಗೆ ಪ್ರಿಯರಾಗೋಣ. ಪಾಂಡವರ ಹಾಗೆ ಸುಖ ಶಾಂತಿಗಳನ್ನು ಪಡೆದು, ಪಾಂಡವರ ಹಾಗೆ ಮಹಾ ಧಾರ್ಮಿಕರು ಎಂಬ ಶಾಶ್ವತ ಕೀರ್ತಿಗೆ ನಮ್ಮ ಯೋಗ್ಯತಾನುಸಾರ ಭಾಗಿಯಾಗೋಣ.....
*✍🏽✍🏽ನ್ಯಾಸ.....*
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ.
Comments