*ಸಹವಾಸ - ಅತ್ಯಂತ ಯೋಗ್ಯವೇ ಆಗಿರಬೇಕು...*
*ಸಹವಾಸ - ಅತ್ಯಂತ ಯೋಗ್ಯವೇ ಆಗಿರಬೇಕು...* "ಸಜ್ಜನರ ಸಂಗವ ಮಾಡದಿದ್ದರೆ ಎನಗೇ ಆಣೆ ರಂಗ, ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ರಂಗ..." ಸಜ್ಜನರ ಹಿತೈಷಿಗಳ, ನಮ್ಮ ಪರವಾಗಿ ನಮಗೇ ಗೊತ್ತರದ ಹಾನೆ ನಿರಂತರ ಬೇಡಿಕೊಳ್ಳುವ ಮಹಾತ್ಮರ ಸಹವಾಸ ಮಾಡದಿದ್ದರೆ ಎನಗೆ ಆಣೆ, ದುಷ್ಟರ ಸಹವಾಸ ಬಿಡಿಸದಿದ್ದರೆ ನಿನಗೆ ಆಣೆ ಎಂದು ದಾಸರಾಯರು ಆಣಿ ಹಾಕಿಕೊಳ್ಳುತ್ತಾರೆ. ದೇವರಿಗೂ ಆಣೆ ಹಾಕುತ್ತಾರೆ. *ಸಹವಾಸದ ಶಕ್ತಿ ಮಹಾನ್ ಆಗಿದೆ* ನಮ್ಮನ್ನ ಬದಲಾಯಿಸುವ ಶಕ್ತಿ ಇರುವದು ಸಹವಾಸದಲ್ಲಿ. ಯಾವ ವ್ಯಕ್ತಿಯ ಎಂಥ ವ್ಯಕ್ತಿಯ ಸಹವಾಸ ಆಗುತ್ತದೆಯೋ ಆ ತರಹ, ಅಂಥ ವ್ಯಕ್ತಿ ತಾನಾಗುತ್ತಾನೆ. ನಮ್ಮನ್ನು ಪೂರ್ಣವಾಗಿ ಬದಲಾಯಿಸಿಬಿಡುತ್ತದೆ ಸಹವಾಸಗಳು. *ರಾಮಯಾಣದ ಸುಂದರ ಕಥೆ...* ವನದಲ್ಲಿ ಇರುವಾಗ ಸೀತೆ ರಾಮನಿಗೆ ಒಂದು ಕಥೆ ಹೇಳುತ್ತಾಳೆ.... ಒಬ್ಬ ಶ್ರೇಷ್ಠ ಋಷಿಗಳು ೧೦೦೦೦ ವರುಷದ ಸುದೀರ್ಘ ತಪಸ್ಸಿಗೆ ಆಸೀನರಾಗಿರುತ್ತಾರೆ. ಆಗ ಇಂದ್ರದೇವ ಒಬ್ಬ ಸೈನಿಕನ ವೇಶದಲ್ಲಿ ಬಂದು ಒಂದು ಮೊನುಚಾದ ಖಡ್ಗವನ್ನು ಕೊಟ್ಟು ಹೇಳುತ್ತಾರೆ, ನಾ ತಿರುಗಿ ಬರುವವರೆಗೆ ಈ ಖಡ್ಗ ನಿಮ್ಮ ಸನಿಹದಲ್ಲಿರಲಿ. ಸಂರಕ್ಷಣೆ ಮಾಡಿರಿ. ಪುನಃ ಬಂದು ಒಯ್ಯುತ್ತೇನೆ ಎಂದು. ಆ ಮಾತನ್ನು ಒಪ್ಪಿಕೊಂಡ ಮಹಾತಾಪಸಿ, ಅ ಖಡ್ಗವನ್ನು ತನ್ನ ಸನಿಹ ಇಟ್ಟುಕೊಳ್ಳುವ. ಪ್ರತಿನಿತ್ಯ ಮಲಗುವಾಗ ಏಳುವಾಗ ಆ ಖಡ್ಗವಿದೆಯೋ ಇಲ್ಲವೋ ಎಂದು ನೋಡುತ್...