ಶ್ರೇಷ್ಠತೆಯ ವ್ಯಸನದಿಂದ ಮಠಗಳು ಹಾಗೂ ಮಠದ ಪಂಡಿತರು ಹೊರಗೆ (ಕೇವಲ ಮಾಧ್ವರಿಗೆ ಮಾತ್ರ) ಬರಬೇಕಾಗಿದೆ* ಇದು ಇಂದಿನ ಟ್ರೆಂಡ್.
*ಶ್ರೇಷ್ಠತೆಯ ವ್ಯಸನದಿಂದ ಮಠಗಳು ಹಾಗೂ ಮಠದ ಪಂಡಿತರು ಹೊರಗೆ (ಕೇವಲ ಮಾಧ್ವರಿಗೆ ಮಾತ್ರ) ಬರಬೇಕಾಗಿದೆ* ಇದು ಇಂದಿನ ಟ್ರೆಂಡ್.
ದ್ವೈತಿಗಳು ಅದ್ವೈತವನ್ನು ಹಾಗೂ ಅದ್ವೈತಿಗಳನ್ನು ವಿಮರ್ಷೆ ಮಾಡಿದ್ದು ಇದೆ. ಅದೇರೀತಿಯಾಗಿ ಅದ್ವೈತಿಗಳು ದ್ವೈತವನ್ನು ಹಾಗೂ ದ್ವೈತಿಗಳನ್ನು ವಿಮರ್ಷೆ ಮಾಡಿದ್ದು ಇದೆ. ಇದು ಇಂದಿನ ವಿಷಯಗಳಲ್ಲ. ತಲತಲಮಾರುಗಳಿಂದಲೂ ಬಂದ ವಿಷಯ. ಶಾಸ್ತ್ರಗ್ರಂಥಗಳಲ್ಲಿ ನಿಬಂಧಿತವಾದ ವಿಷಯಗಳು.
ಮಾಧ್ವರಲ್ಲಿಯ ಕೆಲ ಆಧುನಿಕ ವಿಚಾರವಾದಿಗಳು *ಮಾಧ್ವಗ್ರಂಥದ ಅಥವಾ ಅದ್ವೈತಗ್ರಂಥಗಳ ಅರಿವೇ ಇಲ್ಲದ ಗ್ರಂಥಗಳ ಪರಿಚಯವಿಲ್ಲದ, ಗ್ರಂಥಗಳನ್ನು ಗುರುಮುಖಾಂತರ ಅಧ್ಯಯನ ಮಾಡದ* ಕೆಲ ವಿಚಾರಿಕರು *"ಶ್ರೇಷ್ಠತೆಯ ವ್ಯಸನದಿಂದ ಮಠಗಳು ಹಾಗೂ ಮಠದ ಪಂಡಿತರು ಹೊರಗೆ (ಕೇವಲ ಮಾಧ್ವರಿಗೆ ಮಾತ್ರ) ಬರಬೇಕಾಗಿದೆ" ಈ ತರಹದ ಸ್ಟೇಟ್ಮೆಂಟಗಳನ್ನು ಕೊಟ್ಟು ಹಾಕುತ್ತಾರೆ.
ಅವರಿಗೆ ಕೇಳುವದಿಷ್ಟೆ ??
ರಾಜಾಂಗಣದಲ್ಲಿ ಆ ಬಲಕಿಯರ ಮಾತಿನಿಂದ ನಿಮಗೆಷ್ಟು ನೋವು ಆಗಿದೆಯೋ ಅಷ್ಟು ನೋವು ಅದ್ವೈತ ಪೀಠಾಧಿಪತಿಗಳಿಂದ ವ್ಯಾಸರಾಜರಿಗೆ ಆಡಿದ ಮಾತುಗಳಿಂದ ನಿಮಗೆ ಆಗಿದೆಯಾ ?? ಅದರ ಹತ್ತಂಶರಷ್ಡಾದರೂ ಆಗಿದೆಯಾ ??
ಅದ್ವೈತ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿಯೇ *ದ್ವೈತಹಾಲಾಹಲ* ಎಂಬ ಶ್ಲೋಕವನ್ನು ಸ್ವಾಗತ ಶ್ಲೋಕದಲ್ಲಿ ಹೇಳಿದ್ದು ಕೇಳುತ್ತೇವೆ ಇದರಿಂದ ನಿಮಗೆಷ್ಟು ನೋವಾಗಿದೆ ??
ನೀವು *ಶ್ರೇಷ್ಠತೆಯ ವ್ಯಸನದಿಂದ ಹೊರ ಬಂದ ಕಾರಣ "ದ್ವೈತ ಹಾಲಾಹಲ ಎಂದಾಗಾಗಲಿ, ಅಥವಾ ಶ್ರೀವ್ಯಾಸರಾಜರನ್ನು " ದುರಾಗ್ರಹದಿಂದ ಕೂಡಿದವರಲ್ಲಿ ಪ್ರಧಾನರು" ಎಂದಾಗಾಗಲಿ ಯಾಕೆ ನೋವಾಗಲಿಲ್ಲ... ???*
ಆ ಬಾಲಕಿಯರ ಮಾತಿಗೆ ಬೆಂಕಿ ಉರಿಸಿಕೊಂಡ *ಬ್ರಾಹ್ಮಮಹಾಸಭಾ ಆಡಳಿತ ವರ್ಗಕ್ಕೆ ಈ ಮೇಲಿನ ಮಾತು ಕಾಣಲಿಲ್ಲವೆ... ??* ಮಾಧ್ವರು ಶ್ರೇಷ್ಠರಲ್ಲ, ಅದ್ವೈತಿಗಳೇ ಶ್ರೇಷ್ಠರು ಎಂಬ ಶ್ರೇಷ್ಠತೆಯ ವ್ಯಸನ ಅವರಿಗೆ ಅಂಟಿಕೊಂಡಿದೆ ಎಂದು ನಮ್ಮ ಮಾಧ್ವ ಆಧುನಿಕ ವೈಚಾರಿಕರು ಒಪ್ಪಿಕೊಂಡಿದ್ದಾರೆಯಾ ??
*ಅಲ್ಲಾ ಹೋ ಅಕ್ಬರ್* ಎಂದು ನಿತ್ಯ ಕೂಗಿದರೂ ಈ ವಿಷ್ಣು ಭಕ್ತರಿಗೆ ಕೇಳಿಸದ ಮಾತು ರಾಜಾಂಗಣದ ಬಾಲಕಿಯರ ಮಾತು ಕಿವಿಯಲ್ಲಿ ಕಾಸಿದ ಶೀಶ ಹಾಕಿದ ಹಾಗಾಯ್ತಾ ??
ದೈನಂದಿನ ಜೀವನದಲ್ಲಿ ೮೦% ಪ್ರತಿಶತಃ ಕ್ರಿಶ್ಚಿಯನ್ ಧರ್ಮವನ್ನು ಅಪ್ಪಿಕೊಂಡ ಒಪ್ಪಿಕೊಂಡ, ಮಾಧ್ವಸಂಪ್ರದಾಯದ ವೈಷ್ಣವ ಚಿಹ್ನೆಗಳಾದ ಅತಿ ಕೆಳಹಂತದ ಗೋಪಿಚಂದನ ಗಂಧ ಅಕ್ಷತೆಯನ್ನೂ ಧರಿಸಲು ಬಾರದ ಇವರಿಗೆ ಈ ಅವಸ್ಥೆ ಬಂದಿರುವದು ಶ್ರೇಷ್ಠತೆಯ ವ್ಯಸನದಿಂದ ದೂರಾಗಿರುವದಕ್ಕೇ ನಾ ??? ಆ ಕಾರಣದಿಂದಲೇ ಈ ಅವಸ್ಥೆಗೆ ತಲುಪಿದ್ದಾರೆಯಾ ??
ಮಠಗಳು ಮಠದ ಪಂಡಿತರುಗಳು ಹರಿಕಥೆ ಮಾಡುವವರು ಉಪನ್ಯಾಸ ಮಾಡುವವರು ತಮ್ಮ ಕೆಲಸ ಮಾಡುತ್ತಾರೆ. ಏನೇ ಚರ್ಚೆಗಳು ವಿವಾದಗಳು ಇದ್ದರೂ ಅವರ ಬಳಿ ಹೋಗಿ ಚರ್ಚಿಸಬೇಕಲ್ಲವೇ ??
ನಿಮ್ಮ ಕಂಪನಿಯ ಕುಂದು ಕೊರತೆಗಳ ಚರ್ಚೆಗಳನ್ನು ಹೀಗೆಯೆ ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಮಾಡುವದಿಲ್ಲ ?? ನಿಮ್ಮ ಮೀಟಿಂಗ್ ರೂಮಲ್ಲೇ ಮಾಡುವದೇತಕೆ ?? ನೀವು ಶ್ರೇಷ್ಠತೆಯ ವ್ಯಸನದಿಂದ ದೂರಬಂದಿದ್ದಕ್ಕೇ ನಾ ?? ಹೇಗೆ ??
ಏನು ನಿಮ್ಮ ವ್ಯಸನೆ ??
ಯಾಕಿಷ್ಟು ಅದ್ವೈತಿಗಳ ಪರ .. ?? ಶ್ರೇಷ್ಠತೆಯ ವ್ಯಸನ ಕಳೆದುಕೊಂಡದ್ದಕ್ಕಾಗಿಯೇ ಅದ್ವೈತಿಗಳ ಅದ್ವೈತದ ಪರವೋ ??
ಅದ್ವೈತಿಗಳಿಗೆ ಹಾಗೂ ಅದ್ವೈತಕ್ಕೆ ಶ್ರೇಷ್ಠತೆಯ ವ್ಯಸನ ಇಲ್ಲವೇ ?? ಅದಕ್ಕೇ ಈ ಬಾಲಕಿಯರ ಮಾತು ಅಷ್ಟು ಖಾರವಾಗಿ ಕಾಣಿಸಿತೆ ??
ತಮ್ಮ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ನಡೆದ ವಿಷಾರಗಳು ದ್ವೈತ ಹಾಹಲ ಹಾಗೂ ದ್ವೈತಿಗಳು ದುರಾಗ್ರಹದಿಂದ ಕೂಡಿದವರು, ವ್ಯಾಸರಾಜರು ಅವರಲ್ಲಿ ಶ್ರೇಷ್ಠರು ಈ ಮಾತುಗಳು ಶ್ರೇಷ್ಠತೆಯ ವ್ಯಸನದಿಂದ ಹೊರಬಂದದಕ್ಕೇ ಕಾಣಿಸಿಲ್ಲವೇ ??
Comments