Posts

Showing posts from January, 2022

ಗೋಪಾಲದಾಸರ ಚರಿತ್ರೆ ಪದ

 ಶ್ರೀಗೋಪಾಲದಾಸರ ಅನುಜರೂ, ಶಿಷ್ಯರೂ, ಅಪರೋಕ್ಷಜ್ಞಾನಿಗಳೂ ಆದ   *ಶ್ರೀ ತಂದೆಗೋಪಾಲವಿಠಲದಾಸಾರ್ಯ (ರಂಗಪ್ಪ ದಾಸರು) ವಿರಚಿತ*   *ಶ್ರೀ ಗೋಪಾಲದಾಸರ ಚರಿತ್ರೆ ಪದ*   *ರಾಗ ಆನಂದಭೈರವಿ                ಆದಿತಾಳ*  ಭಜಿಸಿ ಬದುಕಿರೊ ಅಜನಪಿತ ಶ್ರೀವಿಜಯವಿಟ್ಠಲರಾಯನಾ । ಭಜನಿ ಮಾಡುವ ವಿಜಯರಾಯರೆ ನಿಜಗುರುಗಳೆಂದೆನಿಪನಾ॥ಪ॥  ಮೂಲ ಪೇಳ್ವೆ ವಿಶಾಲ ಮಹಿಮ ಸುಶೀಲ ವಿಜಯರಾಯರ । ಕಾಲಕಾಲಕೆ ಸ್ಮರಿಪ ಶ್ರೀಗೋಪಾಲದಾಸರಾಯರಾ ॥ 1 ॥  ದಧಿಪಾಷಾಣದಧಿಪನೆನಿಸುವ ಮುದಗಲಾಖ್ಯ ಪುತ್ರನಾ । ಉದರದಲಿ ಉದುಭವಿಸಿದರು ನಾಲ್ವರದರೊಳಗೆ ಬುಧವರ್ಯನಾ॥ 2 ॥  ಪುಟ್ಟಿದಾಗಲೆ ಪಿತ ಮುರಾರಿಯ ಶಿಷ್ಟ ಶಿಶುವೆಂದೆನುತಲಿ । ಇಟ್ಟ ಈ ವಸುಧಿಯೊಳು ಪೆಸರನು ಧಿಟ್ಟ ಭಾಗಣ್ಣನೆನುತಲಿ ॥ 3 ॥  ಪಂಚವತ್ಸರ ಬರಲು ಮನೆಯೊಳು ಸಂಚಿತದ ಸಂಪತ್ತನು । ಪಂಚಬಾಣನ ಪಿತನ ಆಜ್ಞದಿ ಕೊಂಚವಾಗೆ ವೆಂಕಮ್ಮನು ॥ 4 ॥  ವೇಂಕಟರಮಣನ್ನ ಸ್ಮರಿಸುತ ಮಂಕುಮಗುಗಳ ಸಹಿತದಿ । ಸಂಕಟಾಬಡುತಲ್ಲೇ ನಿಂತರಾ ಸುಂಕಪುರದಾ ಸ್ಥಳದಲಿ ॥ 5 ॥  ಉದರಗೋಸುವಾಗಿ ಮತ್ತೆ ಸದನಗಳು ಬಲು ತಿರುಗುತಾ । ವಿಧಿಲಿಖಿತ ತಪ್ಪದುಯೆನುತಾ ಕೃಷಿ ಅದರ ವ್ಯಾಪಾರ ನಡಿಸುತಾ ॥ 6 ॥  ಏಳು ವರ್ಷವು ಸಾಗಿಸಿ ಶ್ರಮ ತಾಳದಲೆ ವಟ ವೃಕ್ಷದಾ । ಮೂಲದಲಿ ಮಲಗಿರಲು ದೇಹದ ಮ್ಯಾಲೆ ಸರ್ಪನಂದದಿ ॥ 7 ॥ ...

ನೀನು ಕೊಟ್ಟ ಸ್ವತಂತ್ರದ ಫಲ ನಿನಗೆ ಅರ್ಪಿಸುವೆನೆಂದು - ಬಂದೇ ಬಂದೇ ಸ್ವಾಮಿ*

Image
(ಗೋಪಾಲದಾಸರ ಗಾಯತ್ರೀಸಿದ್ಧಿಯ ಸಿದ್ಧಭೂಮಿ, ಸಂಕಾಪುರ)  * ನೀನು ಕೊಟ್ಟ ಸ್ವತಂತ್ರದ ಫಲ ನಿನಗೆ ಅರ್ಪಿಸುವೆನೆಂದು - ಬಂದೇ ಬಂದೇ ಸ್ವಾಮಿ* ಇಂದು ದಾಸಶ್ರೇಷ್ಠ ಗೋಪಾಲ ದಾಸರ ಆರಾಧನಾ ಮಹೋತ್ಸವ. ಗೋಪಾಲ ದಾಸರು ಭಕ್ತಿಯಲ್ಲಿ ಮಿಂದೆದ್ದವರು. ಅಂತೆಯೇ ಭಕ್ತಿಯಲಿ ಭಾಗಣ್ಣನೆಂದು ಪ್ರಸಿದ್ಧರು. ಸುಳಾದಿ ಹಾಡು ಪದ ಉಗಾಭೋಗ ಗದ್ಯ ಹೀಗೆ ನಾನಾತರಹದಿಂದ ಕೀರ್ತನೆಗಳನ್ನು ರಚಿಸಿ ದಾಸಸಾಹಿತ್ಯವನ್ನು ಪ್ರಬುದ್ಧ ಪಡಿಸಿದ ಪುಣ್ಯಾತ್ಮರು ಗೋಪಾಲದಾಸರು. ಅವರ ಕೃತಿಗಳು ತಿಳಿಯಲೂ ಹಾಗೂ ಹಾಡಲೂ ತುಂಬ ಕಠಿಣ. ಅಂತೆಯೇ ಇಂದಿನ cd ಯುಗದಲ್ಲಿಯೂ ಅವರ ಕೆಲ ಕೃತಿಗಳು ಮಾತ್ರ ಪ್ರಸಿದ್ದ. ಉಳಿದ ಕೃತಿಗಳು ಪುಸ್ತಕದಲ್ಕಿ ಮಾತ್ರ.  ಅನೇಕ‌ಕೃತಿಗಳಲ್ಲಿ ಒಂದು ಕೃತಿ "ಬಂದೇ ಬಂದೇ ಸ್ವಾಮಿ" ಎಂಬುವದೂ. ಆ ಕೃತಿಯಲ್ಲಿ ನಾವೆಲ್ಲ ಯಾವ ಕಾರಣಕ್ಕೆ ಭೂಮಿಗೆ ಬಂದಿದ್ದು...?? ಅದರಲ್ಲೂ ಮಾಧ್ವರಾಗಿ ಹುಟ್ಟಿದ್ದು.. ?! ಎನ್ನುವದನ್ನು ತುಂಬ ಸರಳವಾಗಿ ಮನ ಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ.  ನೀನೇ ಎನಗೆ ಅತ್ಯಾಪ್ತ. ಅನಿಮಿತ್ತ ಬಂಧು, ಎಲ್ಲೆಡೆ ವ್ಯಾಪ್ತ. ಸದ್ಗುಣಪೂರ್ಣ. ಅಂತಹ ನಿನ್ಬ ಅಡೆದಾವರೆಗೆ ನಾನು ಬಂದಿದ್ದು ನಿನ್ನ ದರ್ಶನಕ್ಜೆ ಮಾತ್ರ.  ಹೇ ಭಕ್ತವತ್ಸಲ...!!!  ನಾನು ನಾದಿಯಿಂದ ಅನಂತ ಪಾಪಗಳನ್ನು ಮಾಡಿದ್ದೇನೆ. ಆ ಎಲ್ಲ ಪಾಪಗಳನ್ನೂ ನಿನ್ನೆದುರಿಗೆ ಒಪ್ಪಿಕೊಳ್ಳುವೆ. ವಾತ್ಸಲ್ಯದಗಣಿಯಾದ ನೀನು ಆ ಎಲ್ಲ ಪಾಪಗಳನ್ನು ಮನ್ನಿಸಬಾರದೇ...!! ನ...

ನೋವು ಬೇಕಾ.. ?? ಬೇಕು ಬೇಡ.*

Image
  * ನೋವು ಬೇಕಾ.. ??  ಬೇಕು ಬೇಡ.* ನೋವು ಇದೊಂದು ವಿಚಿತ್ರ ಪದಾರ್ಥ. ಯಾರನ್ನೂ ಬಿಟ್ಟಿಲ್ಲ. ಯಾರು ನೋವನ್ನು ಮೆಟ್ಟಿದ್ದಾರೆ ಅವರಂತೂ ಜಗತ್ತನ್ನು ಗೆದ್ದಿದ್ದಾರೆ.  ಆಯುಷ್ಯವನ್ಬೆಲ್ಲ ನೋವನಲ್ಲೇ ಕಳೆಯುವಂತಹ ಅನೇಕ ಜನರನ್ನು  ನಾವು ಕಾಣುತ್ತೇವೆ.  ಕಾಣುವ ಸಕಲದರಲ್ಲಿಯೂ ನೋವನ್ನೇ ಅನುಭವಿಸುತ್ತಾರೆ. ಛಳಿ ಇದ್ದರೆ ಏನ ಚಳಿ ಮಾರಾಯ್ರೇ ಸಾಕಾಯ್ತಪಾ ಅಂತಾರೆ, ಬಿಸಿಲು ನೋಡಿನೂ ಉರಿಬಿಸಿಲು ಅಂತಾರೆ, ಮಳೆಬಂದರೂ ನೋವು ಅನುಭವಿಸುತ್ತಾರೆ, ಮಳೆ ಬಿಸಿಲು ಛಳಿ ಇರದೆ ಇನ್ನೇನು ಇರಬೇಕು... ?? ಅದು ನೋವು ಉಣ್ಣುವ ಅವರ ಪರಿಪಾಕವಷ್ಟೇ.  ಪ್ರತಿಯೊಬ್ಬ ಜೀವನೂ *ಅನಿರ್ವಚನೀಯ ವೈಭವದ ಸಂಪತ್ಕುಮಾರರು* ಆಗಿದ್ದಾರೆ.  ಚಿನ್ಬದ ಗಣಿಯಲ್ಲಿ ಚಿನ್ನ ಹುದುಗಿದಂತೆ, ಎಲ್ಲ ವೈಭವಗಳೂ ಪ್ರತಿಯೊಬ್ಬರಲ್ಲಿಯೂ ಹುದುಗಿ ಕುಳಿತಿದೆ. ಅರಿವು ಇಲ್ಲವಷ್ಟೆ.  ವಿಚಿತ್ರವೆಂದರೆ ತಮ್ಮ ಕಾಲಮೇಲೆ ತಾವೇ ಕಲ್ಲು ಹಾಕಿಕೊಂಡು ಶಪಿಸಿವದು ದೇವರನ್ನು. ಇನ್ನೊಬ್ವರಿಗೆ ಬಯ್ಯುವದು ಆಡುವದರಿಂದ ಕ್ಷುದ್ರ ಆನಂದವನ್ನು ಅನುಭವುಸುವದು ಇವರ ಗಾಳವಾಗಿದೆ. ಪರಮಶುದ್ಧ ಆನಂದದ ಗಣುಯಾದ ದೇವರೇ ತಮ್ಮ ಮನೆಯಲ್ಕಿ ಬಂದು ಕುಳಿತಿದ್ದರೂ, ಆ ದೇವರನ್ನು ನಿಂದಿಸುತ್ತಾ ಮನೆಯ ಮುರುಕ ರಾವಣನ ತೋಳ್ ತೆಕ್ಜೆಗೆ ಧಾವಿಸುತ್ತಾರೆ. ಅಂತಹವರಿಗೆ ನೋವೇ ಕೊನೆಯ ಗತಿ. ಏನೆಲ್ಲವಿದ್ದರೂ ಅದರಲ್ಲು ನೋವೇ ಕಾಣುವ ಗತಿ ಅವರದಾಗಿಬಿಡುತ್ತದೆ.  ಈ ತರಹದ ವಿನಾರಣ ನ...

ಪಿತ್ರಾರ್ಜಿತ ಆಸ್ತಿ ಧರ್ಮವೇ ಅಥವಾ ಹಣವೇ ??*

 *ಪಿತ್ರಾರ್ಜಿತ ಆಸ್ತಿ ಧರ್ಮವೇ ಅಥವಾ ಹಣವೇ ??* ತಂದೆ ತಾನು ಧರ್ಮವನ್ನು ಮಾಡಿ ಮಕ್ಕಳಲ್ಲಿ ಧರ್ಮವನ್ನೇ ಬೆಳಿಸಿ ಇಡುವದು ಬಹಳ ಉತ್ತಮವಾದದ್ದೇ. ಹಿಂದಿನ ಎಲ್ಲ ಹಿರಿಯರೂ ಆ ಕೆಲಸವನ್ನೇ ಹೆಚ್ಚು ಮಾಡಿದ್ದರು.  ಧರ್ಮ ಘಳಿಸಿಟ್ಟವರು ಕೆಲವರು, ಹಣ ಮಾಡಿಟ್ಟವರು ಹಲವರು.   ಎರಡರ ಉಪಯೋಗವೂ ವಿರುದ್ಧ ದಿಕ್ಕಿನಲ್ಲಿರುವದು.  ಹಣವಂತ ಧರ್ಮವಂತ ಇಬ್ಬರಿಗೂ ಕಷ್ಟಗಳು ಬರುವದು ಸಹಜ. ಮೊದಲಿಗೆ ಕೇವಲ  ಹಣ ಮಾಡಿಟ್ಟವರು ಕಷ್ಟಗಳು ಬಂದೊಡನೆ  "ಆತ್ಮಹತ್ಯೆಗೋ, ಕುಡಿತಕ್ಕೋ, ಸಿಗರೇಟಿಗೋ, ಮುಂತಾದ ಕೆಟ್ಟ ಚಟಗಳಿಗೆ ಬೆನ್ನು ಬೀಳುವದು ಸಹಜ.  ಮೊದಲೇ ಧರ್ಮವಿಲ್ಲ. ಈ ಚಟಗಳಿಗೆ ಬಲಿಯಾದರೆ ಇನ್ನೂ ದುರಂತವೇ.  ಕಷ್ಟಗಳು ಎದುರಾದಾಗ ದೇವರೆಡೆ ತಿರುಗುವದಾರಿ ಬಹಳ ಉತ್ತಮ ದಾರಿ. ಸಂಪೂರ್ಣ ಪ್ರಯೋಜನಕಾರಿಯಾದ ದಾರಿ.   *ಧರ್ಮ ಕಲಿಯದ ಮಕ್ಕಳಿಗೆ ಎಷ್ಟು ಧಾರಾಳವಾದ ಪಿತ್ರಾರ್ಜಿತ ಆಸ್ತಿಕೊಟ್ಟರೂ ಅದು ಅವರನ್ನು ವಿಪರೀತ ಆಪತ್ತಿನಲ್ಲಿ ರಕ್ಷಿಸಲಾರದು, ತೃಪ್ತಿ ನೆಮ್ಮದಿಯನ್ನು ಸಂತೋಷ ವನ್ನು ಈಯದು* ಇದು ಅತ್ಯಂತ ನಿಶ್ಚಿತ. ಆದ್ದರಿಂದ ಹಣದ ಜೊತೆಗೆ ಧರ್ಮವೂ ಪಿತ್ರಾರ್ಜಿತ ಆಸ್ತಿಯಾಗಿರಲಿ. ಧರ್ಮವೇ ಪಿತ್ರಾರ್ಜಿತ ಆಸ್ತಿಯಾಗಿರಬೇಕು.  ಯಾರ ಪಿತ್ರಾರ್ಜಿತ ಧರ್ಮವೂ ಆಗಿದೆ ಅವನ ತೃಪ್ತಿ ನೆಮ್ಮದಿ ಸಂತೋಷ ಒಂದೊಂದೂ ಅದ್ಭುತ...  ಒಂದು ನಮ್ಮ ತಂದೆಯವರು ಹಿಂದೆಂದೋ ಹೇಳಿದ ಸುಂದರ ಕಥೆ.. ರಮಣೀಯವ...