ಪಿತ್ರಾರ್ಜಿತ ಆಸ್ತಿ ಧರ್ಮವೇ ಅಥವಾ ಹಣವೇ ??*

 *ಪಿತ್ರಾರ್ಜಿತ ಆಸ್ತಿ ಧರ್ಮವೇ ಅಥವಾ ಹಣವೇ ??*


ತಂದೆ ತಾನು ಧರ್ಮವನ್ನು ಮಾಡಿ ಮಕ್ಕಳಲ್ಲಿ ಧರ್ಮವನ್ನೇ ಬೆಳಿಸಿ ಇಡುವದು ಬಹಳ ಉತ್ತಮವಾದದ್ದೇ. ಹಿಂದಿನ ಎಲ್ಲ ಹಿರಿಯರೂ ಆ ಕೆಲಸವನ್ನೇ ಹೆಚ್ಚು ಮಾಡಿದ್ದರು. 


ಧರ್ಮ ಘಳಿಸಿಟ್ಟವರು ಕೆಲವರು, ಹಣ ಮಾಡಿಟ್ಟವರು ಹಲವರು.   ಎರಡರ ಉಪಯೋಗವೂ ವಿರುದ್ಧ ದಿಕ್ಕಿನಲ್ಲಿರುವದು. 


ಹಣವಂತ ಧರ್ಮವಂತ ಇಬ್ಬರಿಗೂ ಕಷ್ಟಗಳು ಬರುವದು ಸಹಜ. ಮೊದಲಿಗೆ ಕೇವಲ  ಹಣ ಮಾಡಿಟ್ಟವರು ಕಷ್ಟಗಳು ಬಂದೊಡನೆ  "ಆತ್ಮಹತ್ಯೆಗೋ, ಕುಡಿತಕ್ಕೋ, ಸಿಗರೇಟಿಗೋ, ಮುಂತಾದ ಕೆಟ್ಟ ಚಟಗಳಿಗೆ ಬೆನ್ನು ಬೀಳುವದು ಸಹಜ.  ಮೊದಲೇ ಧರ್ಮವಿಲ್ಲ. ಈ ಚಟಗಳಿಗೆ ಬಲಿಯಾದರೆ ಇನ್ನೂ ದುರಂತವೇ. 


ಕಷ್ಟಗಳು ಎದುರಾದಾಗ ದೇವರೆಡೆ ತಿರುಗುವದಾರಿ ಬಹಳ ಉತ್ತಮ ದಾರಿ. ಸಂಪೂರ್ಣ ಪ್ರಯೋಜನಕಾರಿಯಾದ ದಾರಿ. 


 *ಧರ್ಮ ಕಲಿಯದ ಮಕ್ಕಳಿಗೆ ಎಷ್ಟು ಧಾರಾಳವಾದ ಪಿತ್ರಾರ್ಜಿತ ಆಸ್ತಿಕೊಟ್ಟರೂ ಅದು ಅವರನ್ನು ವಿಪರೀತ ಆಪತ್ತಿನಲ್ಲಿ ರಕ್ಷಿಸಲಾರದು, ತೃಪ್ತಿ ನೆಮ್ಮದಿಯನ್ನು ಸಂತೋಷ ವನ್ನು ಈಯದು* ಇದು ಅತ್ಯಂತ ನಿಶ್ಚಿತ. ಆದ್ದರಿಂದ ಹಣದ ಜೊತೆಗೆ ಧರ್ಮವೂ ಪಿತ್ರಾರ್ಜಿತ ಆಸ್ತಿಯಾಗಿರಲಿ. ಧರ್ಮವೇ ಪಿತ್ರಾರ್ಜಿತ ಆಸ್ತಿಯಾಗಿರಬೇಕು. 


ಯಾರ ಪಿತ್ರಾರ್ಜಿತ ಧರ್ಮವೂ ಆಗಿದೆ ಅವನ ತೃಪ್ತಿ ನೆಮ್ಮದಿ ಸಂತೋಷ ಒಂದೊಂದೂ ಅದ್ಭುತ...  ಒಂದು ನಮ್ಮ ತಂದೆಯವರು ಹಿಂದೆಂದೋ ಹೇಳಿದ ಸುಂದರ ಕಥೆ..


ರಮಣೀಯವಾದ ಹರಿದ್ವಾರ. ಅಲ್ಲಿ ಒಂದು ಆಶ್ರಮ. ಆಶ್ರಮದಲ್ಲಿ *ಸೀತಾರಾಮ ಸೀತಾರಾಮ* *ಶ್ರೀಕೃಷ್ಣಃ ಶರಣಂ ಮಮ* ಎಂಬ ಸುಗಮವಾದ ಸುಶ್ರಾವ್ಯ ಭಕ್ತಿಯುಕ್ತ ಸಂಗೀತ. ಎರಡು ಮೂರು ಗಂಟೆ ಕಳೆದ ನಂತರ ಆ ಹಾಡುವ ವ್ಯಕ್ತಿ ಸ್ವಲ್ಪ ವಿಶ್ರಮಿಸಿದ. 


ತಂ... ಹಾಡು ತುಂಬ ಚೆನ್ನಾಗಿ ಭಕ್ತಿಪೂರ್ವಕ, ಭಕ್ತಿ ತರಿಸುವಂತೆ ಹಾಡುತ್ತೀರಾ ತುಂಬ ಸಂತೋಷ.

ಭ.. ಹೌದಾ... ಸಂತೋಷ. ನಮ್ಮ ಮನೆತನದ ಬಳವಳಿ ಇದು.  ರಾಮ ಕೃಷ್ಣರ ಅನುಗ್ರಹ. 


ತಂ.. ಅರೇ.. ನಿಮಗೆ ಕಣ್ಣು ಇಲ್ಲ ಅಲ್ವೇ... ಹುಟ್ಟಿನಿಂದ ಇಲ್ಲವೇನೋ ??? ಎಷ್ಟು ಕಷ್ಟ ಅಲ್ಲವೇ...

ಭ..) ಅಪಘಾತದಲ್ಲಿ ನಡುವೆ ಹೋಗಿದ್ದು.  ಕಣ್ಣು ಇದ್ದು ಕುರುಡನಾಗಿದ್ದೆ, ಕಣ್ಣು ಹೋಗಿ ಬೆಳಕಿನಲ್ಲಿ ಇದ್ದೇನೆ. ದುಃಖವೇನಿಲ್ಲ.


ತಂ....) ಕಣ್ಣಿಲ್ಲದಿದ್ದರೂ ಇಷ್ಟು ಉಲ್ಲಾಸಭರಿತ ನಾಮಸ್ಮರೆಣೆಗೆ ನನ್ನ ನಮಸ್ಕಾರ. ಇದು ನನ್ನ ಕಿರು ಕಾಣಿಕೆ ಎಂದು ಐದು ರೂಪಾಯಿ ಎಂದು ಕೈಗೆ ಕೊಟ್ಟರು. 


ಭ..) ಈ ಹಣ ನನಗೆ ಬೇಡ. ದಯಮಾಡಿ ನನ್ನನ್ನು ಪಾಪಿಷ್ಠನನ್ನಾಗಿ  ಮಾಡಬೇಡಿ. ಇವರಿಗೋ ಆಶ್ಚರ್ಯ. ಹಣ ನಿನ್ನ ಉಪಜೀವನಕ್ಜೆ ಆಗಲಿ ಎಂದು ಆಗ್ರಹ ಮಾಡಿದರು. ಸ್ವೀಕರಿಸಲಿಲ್ಲ. ಹಣ ಪಾಪವನ್ನೇ ಹೆಚ್ಚು ಮಾಡಿಸುವದು ಆದ್ದರಿಂದ ಹಣ ಬೇಡ.


ತಂ.. ) ಆಗಾಗ ಈ ಆಶ್ರಮಕ್ಕೆ ಬರುತ್ತಿರುತ್ತೀರಾ.. ??

ಭ..) ನನ್ನ ಸ್ಥಿತಿಗತಿ ಉತ್ತಮವಾಗಿದೆ. ಮತ್ತು ಆಗಾಗ ಬರುವದಲ್ಲ. ಹೆಚ್ಚುಕಾಲ ಇಲ್ಲೇ ಇರುವೆ. ತುಂಬಸಂತೋಷ. 


ತಂ..) ಸ್ಥಿತಿ ಗತಿ ಉತ್ತಮವಾಗಿದೆ ಎಂದರೆ ಹೊಲ ಗದ್ದೆ ಆಸ್ತಿ ಇರುವದೇ.. ?? 

ಭ..) ಕೋಟ್ಟ್ಯಾವಧಿ ಬೆಲೆಬಾಳುವ ಆಸ್ತಿ ಇದೆ. ಮಕ್ಕಳು ಮರಿಗಳು ಇದ್ದಾರೆ. ಆದರೆ ಎಲ್ಲದಕ್ಕೂ ಅತ್ಯುತ್ತಮ *ರಾಮ ಕೃಷ್ಣ*ರೆಂಬ ಆಸ್ತಿ  ನನಗೆ ನಮ್ಮ ತಂದೆಯವರು ಕೊಟ್ಟು ಹೋಗಿದ್ದಾರೆ. ಈ ಮಂತ್ರಗಳನ್ನು ಜಪಿಸುತ್ತಾ ನಾನು ಅತ್ಯಂತ ಸಂತುಷ್ಟನಾಗಿ ಇದ್ದೇನೆ. 


ತಂ..) ಆಯಿತು ನಾನು ಬರುವೆ. ಎಂದು ಗದ್ಗದಿತರಾಗಿ ಹೊರಡಲು ಸಿದ್ಧರಾಗಿ, ಹೋಗುವಾಗ *ಬೇಗ ನಿನ್ನ ದೃಷ್ಟಿ ನಿನಗೆ ಆ ರಾಮ ಕೃಷ್ಣರು ಕರುಣಿಸಲಿ* ಎಂದು ಹರಿಸ್ತಾ ಹೊರಡುತ್ತಾರೆ.


ಭ..) ಜೀ.... ದಯಮಾಡಿ ಹಾಗೆ ಪ್ರಾರ್ಥಿಸಬೇಡಿ. ಇವರಿಗೋ ತುಂಬ ಆಶ್ಚರ್ಯ.... 

ತಂ..) ಅಲ್ಲೋ ಮಹರಾಯ ನಿನ್ನ  ಈ ಪ್ರಾರ್ಥನೆ ಸೇವೆ ನಾಮಸ್ಮರಣೆ ಪುನಃ ಕಣ್ಣು ದೃಷ್ಟಿ ಬರಲಿ ಎಂದಲ್ಲವೆ..??


ಭ..) ಸರ್ವಥಾ ಅಲ್ಲ. ನಾನು ಸಾಯುವವರೆಗೂ ಕಣ್ಣು ಬರುವದು ಬೇಡ.  ದೃಷ್ಟಿಬಂದರೆ *ಲೋಕವು ಪುನಃ ದೇವರಿಂದ ತನ್ನೆಡೆಗೆ ಕತ್ತಲಲ್ಲಿ ಸೆಳದೀತು*  ಇಂದು ನಾನು ರಾಮ ಕೃಷ್ಣ ನಾಮದ ಬೆಳಕಿನಲ್ಲಿ ತೇಲಾಡುತ್ತಿದ್ದೇನೆ. ನನ್ನನ್ನು ಕುರಡನನ್ನಾಗಿ ಮಾಡಬೇಡಿ. ನನ್ನ ಸಂತೋಷ ನೆಮ್ಮದಿ ತೃಪ್ತಿಯನ್ನು ಕಸೆದುಕೊಳ್ಳಬೇಡಿ. ಎಂದು ಉಸುರಿಸುತ್ತಾ *ಸೀತಾರಾಮ ಸೀತಾರಾಮ* ಎಂದು ಆರಂಬಿಸಿಯೇ ಬಿಟ್ಟ. 


ಈ ತರಹದ ತೃಪ್ತಿ ಆನಂದಕ್ಕೆ ಬೇಕಾದ ಆಸ್ತಿಯೇ ಪಿತ್ರಾರ್ಜಿತ ಆಸ್ತಿ. ಆದು ಧರ್ಮ ವಿಜ್ಙಾನ ಭಕ್ತಿ ಇವುಗಳೆ ಅಲ್ಲವೇ.....


*✍🏻✍🏻✍🏻ನ್ಯಾಸ*

ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*