*-: ಹರಿದಿನದ (ಏಕಾದಶಿ) ವೈಭವ:-*


 *-: ಹರಿದಿನದ (ಏಕಾದಶಿ) ವೈಭವ:-*


ವೈಷ್ಣವರು ಎಂದೆನಿಸಿಕೊಳ್ಳಲು ಹರಿದಿನವನ್ನು ಕಡ್ಡಾಯವಾಗಿ ಪಾಲನೆ ಮಾಡುವದು ಅತ್ಯಂತ ಅನಿವಾರ್ಯ. ಏಕಾದಶೀ ಉಪವಾಸ ಅತ್ಯನಿವಾರ್ಯ ಎಂದು ಶೃತಿ ಸ್ಮೃತಿ ಇತಿಹಾಸ ಹಾಗೂ ವೇದಗಳು ಚೆನ್ನಾಗಿ ಪ್ರತಿಪಾದಿಸಿವೆ. ಆ ತತ್ವವನ್ನು ಶ್ರೀಮಾದಾಚಾರ್ಯರು ಮಾತ್ರ ಬಹಳವಾಗಿ ಪ್ರತಿಪಾದಿಸುತ್ತಾರೆ.


"ನೇದೃಶಂ ಪಾವನಂ ಕಿಂಚಿತ್ ನರಾಣಾಂ ಭುವಿ ವಿದ್ಯತೇ |

ಯಾದೃಶಂ ಪದ್ಮನಾಭಸ್ಯ ದಿನಂ ಪಾತಕನಾಶನಮ್ ||"

 

ಪಾಪ ಪರಿಹಾರಕವಾದ ಹರಿವಾಸರದಂತಹ (ಏಕಾದಶಿ) ಪರಮಪುಣ್ಯ ದಿನ ಮನುಷ್ಯರಿಗೆ ಇನ್ನೊಂದಿಲ್ಲ. ಪಾಪ ಪರಿಹಾರ ಮಾಡುವ ದಿನವೂ ಮತ್ತೊಂದಿಲ್ಲ ಎಂದು ಪ್ರತಿಪಾದಿಸುತ್ತಾರೆ.


"ನ ಕಾಶೀ ನ ಗಯಾ ಗಂಗಾ ನ ರೇವಾ ನ ಚ ಗೌತಮೀ |

 ನ ಚಾಪಿ ಕೌರವಂ  ಕ್ಷೇತ್ರಂ ತುಲ್ಯಂ ಭೂಪ ಹರೇರ್ದಿನಾತ್||" (ಶ್ರೀ.ಕೃ.ಮ.)


 ಕಾಶಿ, ಗಯೆ, ಗಂಗೆ , ನರ್ಮದೆ, ಗೋದಾವರಿ, ಕುರುಕ್ಷೇತ್ರ ಇವುಗಳು ಪಾಪಗಳನ್ನು ಪರಿಹರಿಸುವ ಅತ್ಯುತ್ತಮ ಕ್ಷೇತ್ರಗಳು. ಆದರೆ  ಏಕಾದಶಿ ಸರ್ವಥಾ ಸಮವಲ್ಲ.  ಏಕಾದಶೀ ಉಪಾವಾಸದಿಂದ ಏನು ಪಾಪ ಪರಿಹಾರವಾಗತ್ತೆ, ಅಥವಾ ಪುಣ್ಯಬರತ್ತೆ   ಬರುವ ಪುಣ್ಯಕ್ಕೆಣೆಯಿಲ್ಲ. ಮೇಲೆ ಹೇಳಿದ ತೀರ್ಥಕ್ಷೆತ್ರ ಸಂಚಾರ ಮಾಡಿದರೂ ಅಷ್ಟು ಬರುವದಿಲ್ಲ. 


"ಅಶ್ಬಮೇಧ ದಶಸಹಸ್ರಾಣಿ ವಾಜಪೇಯ ಶತಾನಿ ಚ|

ಏಕಾದಶ್ಯುಪವಾಸಸ್ಯ ಕಲಾಂನಾರ್ಹಂತಿ ಷೋಡಶೀಮ್ ||" (ಶ್ರೀ.ಕೃ..ಮ)

 

ಸಾವಿರಾರು ಅಶ್ಬಮೇಧ, ನೂರಾರು ವಾಜಪೇಯ ರಾಜಸೂಯ ಮೊದಲಾದ ಯಾಗಗಳೂ ಏಕಾದಶಿಯ ಹದಿನಾರನೆಯ ಒಂದಂಶಕ್ಕೆ ಸಮವಲ್ಲ. ಇದು ಏಕಾದಶಿಯ ವೈಭವ. 


 "ಏಕಾದಶೀ ಸಮುತ್ಥೇನ ವಹ್ನಿನಾ ಪಾತಕೇಂಧನಮ್ |

ಭಸ್ಮೀಭವತಿ ರಾಜೇಂದ್ರ ಅಪಿ ಜನ್ಮ ಶತೋದ್ಜಬವಮ್ || (ಶ್ರೀ.ಕೃ.ಮ).


"ಏಕಾದಶೀ ಉಪವಾಸ, ಜಪ, ಪಾರಾಯಣ, ಜಾಗರ ಮೊದಲಾದವುಗಳಿಂದ ಜನಿಸಿದ  ಅಗ್ನಿಯಿಂದ ಸುಡುವದೇನಿದೆ ಎಂದರೆ ಪಾಪಗಳೆಂಬ ಕಟ್ಟಿಗೆ"  ಎಂದು ಆಚಾರ್ಯರು ಹೇಳುತ್ತಾರೆ. 


"ಏಕಾದಶೇಂದ್ರಿಯೈಃ ಪಾಪಂ ಯತ್ಕೃತಂ ಭವತಿ ಪ್ರಭೋ |

 ಏಕಾದಶ್ಯುಪವಾಸೇನ ತತ್ಸರ್ವಂ ವಿಲಯಂ ನಯೇತ್ ||" (ಶ್ರೀ.ಕೃ.ಮ)


ಏಕಾದಶೇಂದ್ರಿಯಗಳಿಂದ ಮಾಡಿದ ಪಾಪಗಳೆಲ್ಲಾ ಏಕಾದಶಿ ಉಪವಾಸದಿಂದ ತೊಲಗುವವು. ಇದರಲ್ಲಿ ಯಾವ ಸಂಶಯವೂ ಸಲ್ಲ.. 


 "ಏಕಾದಶೀ ಸಮಂ ಕಿಂಚಿತ್ ಪಾಪತ್ರಾಣಂ ನ ವಿದ್ಯತೇ |

 ವ್ಯಾಜೇನಾಪಿ ಕೃತಂ ರಾಜನ್ ನ ದರ್ಶಯತಿ ಭಾಸ್ಕರೀಮ್||" (ಶ್ರೀ.ಕೃ.ಮ)


ಏಕಾದಶಿಗೆ ಸಮನಾದ ಪಾಪನಾಶನ ವ್ರತ ಇನ್ನೊಂದಿಲ್ಲ. 

ಆ ವ್ರತವನ್ನು  ಕಪಟದಿಂದಾಗಿ, ಬಯ್ಕೊಳ್ತಾ, ಗೊಳಾಡ್ತಾ ಆಚರಿಸಿದರೂ ಕೂಡಾ ಸೂರ್ಯನ ಮಗನಾದ ಯಮನ ದರ್ಶನವಾಗುವದೇ ಇಲ್ಲ. ಇದು ಏಕಾದಶಿಯ ವೈಭವ. 


 "ಜ್ಞಾತ್ವಾ ವಿಪ್ರಾಸ್ತಿಥಿಂ ಸಮ್ಯಗ್ ದೈವಜ್ಞೈಃ ಸಮುದೀರಿತಾಮ್ |

ಕರ್ತವ್ಯಂ  ಉಪವಾಸಸ್ತು ಅನ್ಯಥಾ ನರಕಂ ವೃಜೇತ್||" (ಶ್ರೀ.ಕೃ.ಮ)


ಜ್ಯೋತಿಃಶಾಸ್ತ್ರವನ್ನು  ಬಲ್ಲವರ ಬಳಿ ತಿಥಿಯನ್ನು ಸರಿಯಾಗಿ ತಿಳಿದುಕೊಂಡು ಏಕಾದಶಿಯಂದು ಉಪವಾಸವನ್ನು ಆಚರಿಸಬೇಕು. ಏಕಾದಶಿಯಂದು ಉಣ್ಣುವವನು ನರಕ ಯಾತನೆ

ಗಳನ್ನೇ ಉಣ್ಣುವವ. ಇದರಲ್ಲಿ ಸರ್ವಥಾ ಸಂಶಯಬೇಡ. "ಹರಿದಿನದಲಿ ಉಂಡ ನನರರಿಗೆ ಘೋರ ನರಕ ತಪ್ಪದು ಎಂದು ಶೃತಿಸಾರುತಿದೆ" ಎಂದರು ದಾಸರು.


*ದ್ವಾದಶೀ ಪಾರಣೇ..*


ಏಕಾದಶಿ ಉಪವಾಸವು ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಮುಖ್ಯವಾಗಿ ದ್ವಾದಶಿಯಂದು ಪಾರಣೆಮಾಡುವದು‌.  ಅಂತೆಯೇ  ಅತ್ಯವಶ್ಯವಾಗಿ ಸಕಾಲದಲ್ಲಿ ಪಾರಣೆಯನ್ನೂ ಕಡ್ಡಾಯವಾಗಿ ಮಾಡಬೇಕು. ಜಾಗರಣೆ ಆಗಬೇಕು. ಮೌನ ಇರಬೇಕು. ಭಗವತ್ಪೂಜೆ ಆಗಲೇಬೇಕು. 


*✍🏽✍🏽ನ್ಯಾಸ...*

ಗೋಪಾಲದಾಸ, 

ವಿಜಯಾಶ್ರಮ. ಸಿರವಾರ.

Comments

Anonymous said…
Ekadashi tapso hagillaaaa... Aagide lekhaaaaa

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*