*ದತ್ತಸ್ತ್ವಯೋಗಾದಥ ಯೋಗನಾಥಃ* (ದತ್ತ ಜಯಂತೀ)
* ದತ್ತಸ್ತ್ವಯೋಗಾದಥ ಯೋಗನಾಥಃ* (ದತ್ತ ಜಯಂತೀ) ಇಂದು ದತ್ತಾತ್ರೇಯರೂಪಿ ಭಗವಂತನ ಅವತಾರದ ದಿನ. ಅಂತೆಯೇ ವೈಭವದ ಜಯಂತೀ ಉತ್ಸವ ನಡೆದು ಬಂದಿದೆ. *ಯೋಗನಾಥ - ಯೋಗ ಉಪಾಯಗಳಿಗೆ ಸ್ವಾಮಿಯಾದ ದತ್ತರೂಪಿಯು, ಅನುಪಯುಕ್ತ, ನಮ್ಮನ್ನು ಹಾಳುಗೆಡಗುವ ಅಯೋಗಗಳಿಂದ ರಕ್ಷಿಸಲಿ. ಅಷ್ಟಾಂಗ ಯೋಗಗಳಿಗೆ ಸ್ಚಾಮಿಯಾದ ದತ್ತನು, ಯೋಗಗಳಲ್ಲಿದ ಆರೋಗ್ಯ ಹಾನಿ ಮಾಡಿಕೊಳ್ಳುವ ದುರವಸ್ಥೆಯಿಂದ ಕಾಪಾಡಲಿ. ಯೋಗ ಆತ್ಮ ಸ್ವರೂಪ ಸುಖವನ್ನು ಹೊಂದಿಸಿಕೊಡುವ ದತ್ತನು, ಅಯೋಗ ಆತ್ಮಸುಖದ ಸಂಬಂಧವೇ ಇಲ್ಲದ ವೈಷಯಿಕ ಸಾಂಸಾರಿಕ ಸುಖದುಃಖಗಳ ಸಂಬಂಧವೇ ಬರದಿರಯವಂತೆ ಮಾಡಿ ರಕ್ಷಿಸಲಿ* ಹೀಗೆ ಅನೇಕ ಅರ್ಥಗಳನ್ನು ಒಳಗೊಂಡು ಶ್ರೀಮದ್ಭಾಗವತ ಪ್ರಾರ್ಥಿಸುತ್ತದೆ ತಿಳಿಸಿಕೊಡುತ್ತದೆ. *ದತ್ತನ ಅವತಾರ ಹೇಗೇ....??* ಅನುಸೂಯಾ ದೇವಿ ಹಾಗೂ ಅತ್ರಿ ಋಷಿಗಳಲ್ಲಿ ದತ್ತರೂಪಿ ಅವತಾರ ಮಾಡಿದ. ಅತ್ರಿ ಋಷಿಗಳು ತಪಸ್ಸಿಗೆ ಕುಳಿತು "ಸೃಷ್ಟಿ ಸ್ಥಿತಿ ಲಯ" ಕತೃವಾದ ದೇವರನ್ಬು ಚಿಂತಿಸುತ್ತಿರುವಾಗ "ಸೃಷ್ಟಿ ಕತೃವಾದ ಬ್ರಹ್ಮ, ಬ್ರಹ್ಮದೇವರಿಂದ ಅಧಿಷ್ಠಿತನಾದ ಚಂದ್ರ. ಸ್ಥಿತಿ ಕತೃವಾದ ನಾರಾಯಣ, ಸಂಹಾರ ಕತೃವಾದ ಶಿವನ ಅವತಾರಿಯಾದ ದೂರ್ವಾಸ" ಹೀಗೆ ಮೂರು ಜನ ಅವತರಿಸುತ್ತಾರೆ. ಸ್ಥಿತಿ ಕರ್ತೃವಾದ ದೇವರು ತಮ್ಮನ್ನು ತಾನೇ ಮಗನ್ನಾಗಿ ದತ್ತ ಕೊಟ್ಟಿದ್ದಕ್ಕೆ *ದತ್ತ* ಎಂದು ಹೆಸರು. ಅತ್ರಿಋಷಿಗಳ ಮಗನಾದದ್ದಕ್ಕೆ *ಆತ್ರೆಯ* ಎಂದು ಹೆಸರು. ಪ್ರಸಿದ್ಧ *ದತ್ತಾತ್ರೇಯ* ಎಂದು. ...