*ಧರ್ಮ ಇಟ್ಟಿಗೆ ಇಂದ ಕಟ್ಟಿದ ಕೋಟೆಯಾಗಬಾರದು*
*ಧರ್ಮಮೂಲಮಿದಂ ಜಗತ್* ಧರ್ಮದ ಅಡಿಪಾಯದಲ್ಲಿಯೇ ಈ ಜಗತ್ತು ಇದೆ. ಧರ್ಮ ಜಗತ್ತಿನ ಎಲ್ಲ ಮೂಲೆಯ ಕಣಕಣದಲ್ಲಿ ವ್ಯಾಪಿಸಿದೆ. ಒಂದೋ ಕಾರ್ಯರೂಪದಲ್ಲಿ ಅಥವಾ ಕಾರಣರೂಪದಲ್ಲಿ. ಅಂತೂ ಎಲ್ಲಡೆ ವ್ಯಾಪಿಸಿದೆ.
ಹೇಗೆ ಧರ್ಮ ಎಲ್ಲೆಡೆ ವ್ಯಾಪಿಸಿದೆಯೋ ಅದೇರೀತಿ ಧರ್ಮದಿಂದ ಕಟ್ಟಿ ಹಾಕಿಕೊಂಡವರು ಎಲ್ಲರೂ. ಒಬ್ಬ ದೇವರು ಇನ್ನೊಬ್ಬಳು ಲಕ್ಷ್ಮಿದೇವಿ ಇವರೀರ್ವರು ಮಾತ್ರ ಧರ್ಮವಿದೂರರು. ಧರ್ಮವಿರದ ಪ್ರದೇಶ ವೈಕುಂಠ ಮಾತ್ರ. ಮುಕ್ತರಿಗೂ ಧರ್ಮದ ನಂಟು ವರ್ತಮಾನ ಭವಿಷ್ಯದಲ್ಲಿ ಇಲ್ಲದಿರಬಹುದು ಭೂತದಲ್ಲಿ ಇರುವದೇ. ಇಂತಹದ್ದು ಧರ್ಮ.
ಈ ಧರ್ಮದ ನಂಟು ಅನಾದಿಯಿಂದ ಇದೆ. ವ್ಯಾಪಕವಾಗಿ ಇದೆ. ಈ ಧರ್ಮ ಇರುವದೇ ಎಮ್ಮನು ಬಿಗಿದಿಡಲು. ಧರ್ಮದ ಬಲೆಯಿಂದ ದೂರಾಗುವ ಹಂಬಲ ಇದ್ದರೆ ಒಂದೋ ಮುಕ್ತರಾಗಬೇಕು. ಇಲ್ಲೋ ತಮಸ್ಸಿಗಾದರೂ ಸೆರಬೇಕು. ತಮಸ್ಸಿನಲ್ಲೋ ಶಾಶ್ವತ ದುಃಖ. ಕ್ಷಣದ ಸುಖಬೇಕಾದರೂ ಧರ್ಮ ಅತ್ಯವಶ್ಯಕ.
"ಯಾವ ವ್ಯಕ್ತಿಗೆ ಧರ್ಮ ಬಿಗಿದಿಟ್ಟಿದೆ ಅವ ಸುಖಿ. ಯಾರು ಧರ್ಮವನ್ನೇ ಬಿಗಿದಿಡುವ ಯತ್ನ ಮಾಡಿದಾನೆ ಅವನ ಅವನತಿ ಅತಿ ಶೀಘ್ರ" ಇದು ನಿಶ್ಚಿತ.
ಇಟ್ಟಗಿಗೆಯ ಕೋಟೆಯನ್ನು ಕಟ್ಟಿ ಧರ್ಮವನ್ನು ಬಿಗಿದು ಇಟ್ಟು ಕೊಂಡರೆ, ಆ ಧರ್ಮಕೋಟೆಯನ್ನು ಸೀಳುವವರು ಒಳಗಿನಿಂದಲೇ ಹುಟ್ಟಿ ಬರುತ್ತಾರೆ. ವ್ಯಾಪಕವಾದ ಧರ್ಮ ನಮ್ಮನ್ನು ಕಟ್ಟಿ ಹಾಕಿದ್ದರೆ ನಾವು ಎಲ್ಲಿ ಹೋದಲ್ಲಿಯೂ ಧರ್ಮದ ಬಯಲೇ. ಧರ್ಮದ ಬಯಲಾಕಾಶದಲ್ಲಿ ವಿಹರಿಸುವವನ ಜೀವನ ತುಂಬ ನೆಮ್ಮದಿಯೇ.
ಉದಾ...
ಮಡಿ ಆಚರಣೆ ಒಂದು ಧರ್ಮ. ಆ ಧರ್ಮವನ್ನು ಕೋಟೆಗೋಡೆಯ ಹಾಗೆ ಕಟ್ಟಿಹಾಕಿದರೆ, ಹಿರಿಯರು ಗುರುಗಳು ಬಂದಾಗಲೂ ತನ್ನ ಕೋಟೆಬಿಟ್ಟು ತಾನು ಹೊರಬರಲಾರ. ತಾನು ಮೈಲಿಗೆ ಆಗಬಹುದು ಎಂಬ ಹೆದರಿಕೆ. ಆದರೆ ಆ ಧರ್ಮವೇ ನಮ್ಮನ್ನು ಕಟ್ಟಿ ಹಾಕಿದ್ದರೆ, ಬಂದ ಗುರುಗಳ ಬ್ರಾಹ್ಮಣರ ಹಿರಿಯರ ಪಾದಮುಟ್ಟಿ ನಮಸ್ಕರಿಸಿದರೂ ಮೈಲಿಗೆ ಇಲ್ಲ ಮಹಾನ್ ಧರ್ಮವೇ ಆಗುತ್ತದೆ. ಅಂತೆಯೇ "ಧರ್ಮಾಚರಣೆ ಬಹು ಸುಲಭ, ಧರ್ಮಜ್ಙಾನ ತುಂಬ ದುಷ್ಕರ" ಎಂದಿತು ಇತಿಹಾಸ.
ಧರ್ಮಾಚರಣೆ ನಮ್ಮನ್ನು ಕಟ್ಟಿಹಾಕಿಕೊಳ್ಳಲೇ ಇರಬೇಕು. ಧರ್ಮ ಎಂದಿಗೂ ಮತ್ತೊಬ್ಬರಿಗೆ ಪೀಡಾಕಾರಕ ಆಗಬಾರದು. ಆಗ ಮನೆಮಂದಿಯಿಂದ ಎಲ್ಲರೂ ವಿರೋಧಿಗಳಾಗಿ ಉದ್ಭವಿಸುತ್ತಾರೆ.
ಧರ್ಮ ಇಟ್ಡಿಗೆಯ ಕೋಟೆಯಂತೆ ಆಗಬಾರದು ಎಂದಾಗಿದ್ದರೆ ಧರ್ಮದ ಮರ್ಮ ತಿಳಿದುಕೊಳ್ಳುವದು ಅನಿವಾರ್ಯ. ಅದಕ್ಕೆ ವ್ಯಾಪಕ ಜ್ಙಾನ ವಿಶಾಲವಾದ ತೆರೆದ ಮನಸ್ಸು ಅತ್ಯಾವಷ್ಯಕ. ಜೊತೆಗೆ ಸಹನೆ ಜವಾಬ್ದಾರಿಯುತ ನಡವಳೆಕೆಯೂ ಅತ್ಯಗತ್ಯ.
*ಮತಿಯಿಲ್ಲದ ಮತ ಧರ್ಮ ಮನುಷ್ಯಕುಲಕ್ಕೇ ಅಪಾಯಕಾರಿ.* *ಧರ್ಮದ ಅತಿರೇಕತೆ ಧರ್ಮದ ಹಿಂದಿರುವ ಮರ್ಮವನ್ನು ಅಲ್ಲಗಳೆಯುತ್ತದೆ.*
ಗುರು ಹಿರಿಯರ ಸನಾತನದ ಆದರ್ಶ ಮತ್ತು ಮಾನವೀಯತೆಗಳ ನಡುವೆ ಸಮರಸದ ಸಂಬಂಧವಿದ್ದಾಗಲೆ ಧರ್ಮಕ್ಕೆ ಕಂಪು. ಅದುವೇ ಜೀವನದ ತಂಪು. ಆ ತಂಪನ್ನು ಈಯುವವ ಧರ್ಮವಿತ್ ಆದ ಗುರುಗಳ ಶ್ರೀಮಟ್ಟೀಕಾಕೃತ್ಪಾದರು. ಧರ್ಮಸ್ವರೂಪರು ಶ್ರೀಮದಾಚಾರ್ಯರು. ಧರ್ಮರಕ್ಷಕ ಪೋಷಕ ನಿಯಾಮಕ ನಮ್ಮ ಸ್ವಾಮಿ ನರಸಿಂಹದೇವರು. ಅಂತೆಯೇ ಶ್ರೀಮಟ್ಟೀಕಾಕೃತ್ಪಾದರ ಮುಖಾಂತರ ಧರ್ಮರಕ್ಷಕ ಷೋಡ ಬಾಹೂ ನರಸಿಂಹದೇವರಿಗೇ ಅನಂತ ನಮನಪೂರ್ವಕ ಶರಣು ಹೋಗೋಣ.
*✍🏻✍🏻✍🏻🙏🏼ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments