*ಶ್ರೀರಾಮನವಮಿಯ ಶ್ರೀರಾಮಚಂದ್ರ.*
*ಶ್ರೀರಾಮನವಮಿಯ ಶ್ರೀರಾಮಚಂದ್ರ.*
ಶ್ರೀರಾಮಚಂದ್ರ ಅನಂತಗುಣಪೂರ್ಣ. ಆ ಅನಂತಗುಣಗಳಲ್ಲಿ ಮಾನವು ಯಾವ ಗುಣಗಳನ್ನು ರೂಢಿಸಿಕೊಳ್ಳಬಹುದೋ ಅಂತಹ ಅನೇಕ ಗುಣಗಳನ್ನು ರಾಮಯಣ ತಿಳಿಸುತ್ತದೆ. ಶ್ರೀರಾಮಚಂದ್ರನ ಅನೇಕ ಗುಣಗಳು ಮಾನವ ಸಂಕುಲದ ಉನ್ನತಿಗೂ ಕಾರಣಾವಾಗಿವೆ.
*ನಾಲ್ಕು ಜನ ನಮ್ಮನ್ನು ಹೇಗೆ ಗುರುತಿಸಬೇಕು* ಎಂಬ ನಮ್ಮ ನಿರ್ಧಾರಕ್ಕೆ ಅನುಗುಣವಾಗಿ ನಮ್ಮ ಗುಣವಂತಿಕೆಯನ್ನು ನಾವು ಅಭಿವ್ಯಕ್ತಿಗೊಳಿಸುತ್ತೇವೆ. ನಮ್ಮಲ್ಲಿ ಇರುವ ಆ ಎಲ್ಲ ಗುಣಗಳೂ ಶ್ರೀ ರಾಮನ ಗುಣಗಳ ಪ್ರತಿಬಂಬ ಗುಣಗಳೇ. ನಮ್ಮಲ್ಲಿರುವ ಗುಣಗಳಿಗೆ ಬಿಂಬವಾಗಿವೆ ಶ್ರೀರಾಮನ ಗುಣಗಳು. ಅವುಗಳಲ್ಲಿ ಒಂದೆರಡು ಗುಣಗಳನ್ನು ಮೆಲಕು ಹಾಕುವ ಪುಟ್ಟ ಪ್ರಯತ್ನ. ಗುಣವಂತರಿಗೆ ಗುಣಗಳು ತುಂಬ ಇಷ್ಟವಾಗುತ್ತವೆ.
*ಪ್ರಶಾಂತಾತ್ಮಾ*
ಶ್ರೀರಾಮನ ಮನಸ್ಸು ತುಂಬ ಶಾಂತವಾಗಿತ್ತು. ಮನಸ್ಸು ಒಂದು ಸಾಗರ. ಶ್ರೀರಾಮನ ಮನಸ್ಸಿನಲ್ಲಿ ಕ್ಷುಬ್ಧತೆ ಇಲ್ಲ. "ನಿನಗೆ ನಾಳೇ ಪಟ್ಟ ಎಂದರೂ ಸಮಾಧಾನದಿಂದ ಇದ್ದರಾಮ ಇವತ್ತೇ ವನಕ್ಕೆ ತೆರಳಬೇಕು ಎಂದಾಗಲೂ ಅಷ್ಟೇ ಪ್ರಶಾಂತ." ಇದು ನಮಗೆ ತುಂಬ ಆದರ್ಶಗುಣ.
ಶಾಂತತೆ ನಮಗೆ ಬೇಕು ನಮ್ಮ ಅಪೇಕ್ಷೆಯೂ ಇದೆ. ಶಾಂತತೆ ಎಲ್ಲಿ ಸಿಗತ್ತೆ ತಿಳದಿಲ್ಲ. ನಾವು ಭಾವಿಸಿರುವದು ಶಾಂತತೆ ನಮ್ಮಿಂದ ಹೊರಗೆ ಸಿಗುತ್ತದೆ ಎಂದು. ಅಂತೆಯೇ ಹೊರಗಿನ ನೂರಾರು ಜನರನ್ನು ಪದಾರ್ಥಗಳನ್ನು ಹಂಬಲಿಸುತ್ತೇವೆ. "ರಾಮ ಹೇಳುವದು ಅದು ನಮ್ಮೊಳಗೆ ಇದೆ" ಎಂದು.
*ಮೃದು ಪೂರ್ವಭಾಷೀ*
ಶ್ರೀರಾಮನ ಮಾತು ಎಂದಿಗೂ ಮೊದಲೇ ಇರುತ್ತಿದ್ದವು. "ಅವನು ಮಾತಾಡಲಿ ನಂತರ ನಾ ಮಾತಾಡುವೆ" ಎಂಬ ಭಾವ ರಾಮನ ವಿಚಾರದಲ್ಲಿ ಇರಲೇ ಇಲ್ಲ. ಆಡುವ ಪ್ರತೀ ಮಾತಗಳೂ ಎಂದಿಗೂ ಕಠೋರ, ಮತ್ಲಬಿ ಇರುತ್ತಿರಲಿಲ್ಲ. ಮಾತಿನಲ್ಲಿ ಸ್ವಾರ್ಥ ಇರಲಿಲ್ಲ. "ಶ್ರೀರಾಮ ಮಾತಾಡುವದು ಯಾಕೆ ನಿಲ್ಲಿಸಿದ" ಎಂಬ ವಿಚಾರವೇ ಬರುತ್ತಿರಲಿಲ್ಲ ಪ್ರಜೆಗಳಿಗೆ. ಮೃದುವಾದ ಮಾತು. ಋಜುವಾದ ಮಾತು. ಸತ್ಯ ಮಾತು ಆದರೆ ಅಪ್ರಿಯವಾಗಿರುತ್ತಿಲಿಲ್ಲ. ಅಂತೆಯೇ ಜಗತ್ತಿಗೆ ಪ್ರಿಯನಾದ.
*ಪ್ರತ್ಯುತ್ತರ ಕೊಡುವದು ಇರಲಿಲ್ಲ*
ಇನ್ನೊಬ್ಬರು ಎಷ್ಟೇ ಕಠೋರವಾಗಿ ಮಾತಾಡಿದರೂ ತಾನು ಎಂದಿಗೂ ಅವರ ಬಾಯಿಮುಚ್ಚಿಸುವ ಕೆಲಸ ಮಾಡಲಿಲ್ಲ.
*ಉಪಕಾರ ಅಪಕಾರಗಳ ಸ್ಮರಣೆ*
ಅತಿ ಸಣ್ಣ ಉಪಕಾರವಿದ್ದರೂ ಎಲ್ಲರ ಮುಂದೆ ಹಾಡಿ ಹೊಗಳುವ ಸ್ವಭಾವ ಶ್ರೀರಾಮನದು. ಎಂತಹ ಘೋರ ನೂರಾರು ಅಪಕಾರಗಳಿದ್ದರೂ ತಾನು ಏಕಾಂತದಲ್ಲಿರುವಾಗಲೂ, ತನ್ನ ಮನಸ್ಸಿನಲ್ಲೂ ನೆನಿಸುತ್ತಿರಲಿಲ್ಲ. ಇದು ದೊಡ್ಡಗುಣ.
*ಸಹವಾಸ*
ಶೀಲವೃದ್ದ, ಜ್ಙಾನವೃದ್ಧ, ವಯೋವೃದ್ಧರಾದ ಸಜ್ಜನರ ಜೊತೆಗೆ ಸಹವಾಸ. ಅವರ ಛತ್ರ ಛಾಯೆಯಲ್ಲಿಯೇ ಬೆಳೆದ. ಅಂತೆಯೇ ದುರ್ವಿಚಾರಗಳು ಸುಳಿಯಲಿಲ್ಲ. ದುರ್ವೃತ್ತಗಳು ಅವನಿಂದ ಆಗಲೇ ಇಲ್ಲ. ಅಂತೆಯೇ ದೋಷದೂರ. ಸಂಪೂರ್ಣ ರಾಮಾಯಣ ನೋಡಿದರೂ "ಶ್ರೀರಾಮ ಹೀಗೆ ಮಾಡಬಾರದಿತ್ತು, ಹೀಗೆ ಮಾಡಿದ್ದರೆ ಉತ್ತಮ ಇರುತ್ತಿತ್ತು" ಎಂಬ ಒಂದು ಮಾತೂ ಕೇಳುವದಿಲ್ಲ. ಸ್ವಯಂ ಅನಂತ ಗುಣಪೂರ್ಣ. ಆದರೆ ಈ ತರಹದ ವ್ಯಕ್ತಿತ್ವಕ್ಕೆ ಹಿರಿಯರ ಸಜ್ಜನರ ಸಹವಾಸ ಮೂಲ ಎಂದು ನಮಗೆ ಅರುಹಿಸಿದ.
*ಪರದೋಷವಿತ್ - ಆಡಿತೋರಿಸಲಿಲ್ಲ*
ಇನ್ನೊಬ್ಬರ ದೋಷಗಳ ಸಂಪೂರ್ಣ ಜ್ನಾನವಿತ್ತು. ಆದರೆ ಎಂದಿಗೂ ಆಡಿ ತೋರಿಸಲಿಲ್ಲ. ಇದು ಗುಣವಂತರ ದೊಡ್ಡಸ್ತನಿಕೆ. ಅಂತೆಯೇ ಕೈಕೇಯಿಗೂ ಪ್ರಿಯನಾಗಿದ್ದ ಶ್ರೀರಾಮ. "ಪರರ ದೋಷಗಳನ್ನು ತಿಳಿದುಕೊಂಡವ ಬುದ್ಧಿವಂತ, ಆಡಿ ಅಂದು ತೋರಿಸಿದವ ಚಿಲ್ಲರೆ ವ್ಯಕ್ತಿ" ಶ್ರೀರಾಮನಿಗೆ ಎಲ್ಲರ ದೋಷಗಳ ಜ್ಙಾನವೂ ಇತ್ತು. ಕೊಡುವಾಗ ಕೊಡುವರೀತಿಯಲ್ಲಿ ಶಿಕ್ಷೆಕೊಟ್ಟ. ಆದರೆ ಆಡಿ ತೋರಿಸಲಿಲ್ಲ.
*ಕೀರ್ತಿ....*
ಕೀರ್ತಿ ಯಶಸ್ಸಿನ ವ್ಯಾಮೋಹಕ್ಕೆ ಎಂದೂ ಬೀಳಲಿಲ್ಲ. ಅಂತೆಯೇ ಕೀರ್ತಿವಂತನಾದ ಶ್ರೀರಾಮ.
ಕೀರ್ತಿ ಯಶಸ್ಸುಗಳು ಇದೊಂದು ಉನ್ಮಾದ. ಈ ನಶೇ ಏರಿತು ಎಂದಾದರೆ ಅನೇಕ ತಪ್ಪುಗಳನ್ನಾದರೂ ಮಾಡಿ ನಾಲ್ಕು ಜನರ ಬಾಯಲ್ಲಿ ಹೆಸರು ಇರುವಂತೆ ನೋಡಿಕೊಳ್ಳುತ್ತಾನೆ. ಈ ಮಾರ್ಗ ಹಿತವಲ್ಲ ಎಂದೇ ತಿಳಿಸಿಕೊಟ್ಟರು ಶ್ರೀರಾಮಚಂದ್ರರು.
*ವಿರುದ್ಧಕಥಾ ಅರುಚಿಃ....*
ವಿರುದ್ಧವಾಗೇ ಮಾತಾಡುವವರ ಅಥವಾ ದೋಷಗಳನ್ನೇ ಹುಡುಕುವವರಲ್ಲಿ ಎಂದಿಗೂ ಆಸಕ್ತಿ ತೋರಿಸಲೇ ಇಲ್ಲ. ಪ್ರೋತ್ಸಾಹವಂತೂ ಕೊಡಲೆ ಇಲ್ಲ.
ಏನೇ ಎಷ್ಟೇ ಶುದ್ಧ ಆಗಿದ್ದರೂ ಅದರಲ್ಲಿ ಒಂದು ದೋಷ ಹುಡುಕುವದೇ ಹವ್ಯಾಸ ಆಗಿರುವ ನಮಗೆ ಶ್ರೀರಾಮ ಆದರ್ಶ.
ಇತ್ಯಾದಿ ಇತ್ಯಾದಿ ಅನಂತ ಗುಣವಂತ ಶ್ರೀರಾಮ. ಆ ರಾಮನ ಕರುಣೆ ನಾವು ಗುಣವಂತರು. ಗುಣವಂತರಾದರೆ ನಾವೂ ಶ್ರೀರಾಮರೇ. ಈ ಒಂದೊಂದು ಗುಣಗಳೂ ನಮ್ಮ ಉನ್ನತಿಗೆ ಕಾರಣವಾಗಿವೆ. ಈ ಗುಣಗಳು ಇಲ್ಲವಾದಲ್ಲಿ ಅರಾಮರೇ ದುಃಖಿಗಳೇ... ಈ ಗುಣಗಳು ಅಭಿವ್ಯಕ್ತವಾಗುವದು ಹನುಮಂತ ದೇವರ ಅನುಗ್ರಹ ಇದ್ದರೆ ಮಾತ್ರ. ಇಲ್ಲದಿದ್ದರೆ ಆಗುವದು ಸಾಧ್ಯವಿಲ್ಲ. ಶ್ರೀರಾಮನಿಗೆ ಮಾಡುವ ನಮಸ್ಕಾರವೂ ಹನುಮಂತನ ದ್ವಾರಾ ಆಗಿದ್ದರೆ ಮಾತ್ರ ಶ್ರೀರಾಮನಿಗೆ ಪ್ರೀತಿ. ಇಲ್ಲವಾದಲ್ಲಿ ಇಲ್ಲ. ಅಂತೆಯೇ ಶ್ರೀರಾಮ ಹನುಮದ್ವಾಹನನಾಗಿಯೇ ಇರುವದು ಬರುವದು ಅನುಗ್ರಹಿಸುವದು.
*ಶ್ರೀರಾಮ ರಾಮ ರಾಮೇತಿ ರಮೇ ರಾಮೆ ಮನೋರಮೇ. ಸಹಸ್ರನಾಮ ತತ್ತುಲ್ಯಂ ರಾಮನಾಮವರಾನನೆ* ಸಾಧ್ಯವಿದ್ದಷ್ಟು ಹೇಳಿಕೊಳ್ಳೋಣ. ನಿನ್ನಗುಣದ ಪ್ರತಿಬಿಂಬ ಗುಣಗಳೇ ಎನ್ನಿಲ್ಲಿ ಇವೆ. ಅವುಗಳನ್ನು ಅಭಿವ್ಯಕ್ತಗೊಳಿಸು ಎಂದೂ ಪ್ರಾರ್ಥಿಸೋಣ....
*✍🏼✍🏼ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
https://drive.google.com/file/d/102r2938m2dn_KxHIxXG-6ILkruoeTZnI/view?usp=drivesdk