*ಅತ್ಯುತ್ತಮವಾದದ್ದನ್ನು ಹುಡುಕುವ ಭರದಲ್ಲಿ, ಉತ್ತಮವಾದದ್ದನ್ನು ಕಳೆದುಕೊಳ್ಳುವಂತಾಗಬಾರದು....*
*ಅತ್ಯುತ್ತಮವಾದದ್ದನ್ನು ಹುಡುಕುವ ಭರದಲ್ಲಿ, ಉತ್ತಮವಾದದ್ದನ್ನು ಕಳೆದುಕೊಳ್ಳುವಂತಾಗಬಾರದು....*
ಹುಡುಕುವದು, ಹುಡುಕುತ್ತಾ ಇರುವದು, ಅದಕ್ಕಾಗಿ ಅಲೆಯುವದು ಇದು ಸಹಜ ಪ್ರವೃತ್ತಿ ಯಾಗಿದೆ. ಇದು ಎರಡು ತರಹ...
೧)ಅತ್ಯುತ್ತಮವಾದದ್ದನ್ನು ಹುಡುಕುವ ಹಂಬಲದಲ್ಲಿ ಉತ್ತಮವಾದದ್ದನ್ನು ಕಳೆದುಕೊಳ್ಳುವದು..
೨)ಉತ್ತಮವಾದದ್ದನ್ನು ಹುಡುಕುತ್ತಿರುವಾಗಲೇ ಅತ್ಯುತ್ತಮವಾದದ್ದನ್ನು ಪಡೆದು ಕೊಳ್ಳುವದು....
ಸಾಮಾನ್ಯವಾಗಿ ಇಂದು ನಮಗೆ ಮೊದಲನೆಯದೇ ಆಯ್ಕೆಯನ್ನೇ ಅನುಸರಿಸಿರುತ್ತೇವೆ. ಅತ್ಯುತ್ತಮವಾದ "ಹಣ - ಪ್ರತಿಷ್ಠೆ" ಇವುಗಳನ್ನು ಪಡೆಯುವ ಹಂಬಲದಲ್ಲಿ ಕನಿಷ್ಠವಾದ ಒತ್ತಡದ, ಉಸಿರಾಡಲೂ ಅಸಾಧ್ಯವಾದ ಜೀವನವನ್ನು ಆರಿಸಿಕೊಂಡಿರುತ್ತೇವೆ. ಒಂದರ ಸಂಪಾದನೆಯ ಒತ್ತಡದಲ್ಲಿ ಮನೆಯ ಲವಲವಿಕೆಯ ನೆಮ್ಮಿದಿಯ ವಾತಾವರಣವನ್ನೇ ಧೂಳಿಪಟ ಮಾಡಿರುತ್ತೇವೆ... ಹಾಗಾಗದೆ...
ಎರಡನೇಯ ಆಯ್ಕೆ ಅತ್ಯುತ್ತಮ ಎಂದೆನಿಸುತ್ತದೆ... ಉತ್ತಮವಾದ ಜ್ಙಾನ ಸಂಪಾದನೆಯ ಹಂಬಲದಲ್ಲಿ ತೊಡಗಿ, ಅತ್ಯುತ್ತಮವಾದ *ವಿಷ್ಣುವನ್ನು - ವಿಷ್ಣುವಿನ ಭಕ್ತಿಯನ್ನು* ಸಂಪಾದಿಸಿಕೊಳ್ಳಬಹುದಾಗಿದೆ. ಯಾವುದೇ ವಿಷಯಕ ಜ್ಙಾನ ಬಂದಾಗ ಸಿಗುವದು ತೃಪ್ತಿ. ದೇವರಲ್ಲಿ ಭಕ್ತಿ ಬೆಳೆದಾಗ ಮೂಡುವದು ಭರವಸೆ. ದೇವರೇ ಬಂದಾದಾಗ ಎಲ್ಲವೂ ಒಲಿದು ಬರುತ್ತದೆ. ಪಡೆಯುವದು ಎನ್ನುವದೇನು ಇರುವದಿಲ್ಲ. ಉತ್ತಮವಾದ ಜ್ಙಾನ ಸಂಪಾದನೆಯ ಹಂಬಲವಿಟ್ಟುಕೊಂಡು ಅತ್ಯುತ್ತಮ ದೇವರನ್ನು ಒಲಿಸಿಕೊಳ್ಳುವದು ಅತ್ಯುತ್ತಮ ಆಯ್ಕೆ ಎಂದೆನಿಸುತ್ತದೆ...
"ಯಾವದು ಉತ್ತಮ, ಯಾವದು ಅತ್ಯುತ್ತಮ" ಇವುಗಳನ್ನು ತಿಳಿಯುವದು ನಮ್ಮ ಕೈಯಲ್ಲಿ ಇದೆ. ಗುರುಗಳ ಮಾರ್ಗದರ್ಶನದಲ್ಲಿ ಇದೆ. ದಿನದ ಇಪ್ಪತ್ತು ನಾಲಕು ಗಂಟೆ ಜ್ಙಾನ ಸಂಪಾದನೆಯಲ್ಲಿ / ಧರ್ಮ ರಕ್ಷಣೆಯಲ್ಲಿ ತೊಡಗಿಕೊಳ್ಳಲಾಗದಿದ್ದರೂ ಕೆಲ ಸಮಯವಾದರೂ ತೊಡಗಿಕೊಳ್ಳುವದು ಅನಿವಾರ್ಯವಾಗಿದೆ ಇಂದು. ಹಿಂದು ಹಿರಿಯರು ಮಾಡಿಟ್ಟ ಜ್ಙಾನದ ಫಲ ಹಾಗೂ ಧರ್ಮದ ಫಲ ಇಲ್ಲಿಯವರೆಗೆ ನಾವು ಉಂಡಾಗಿದೆ, ಇಂದು ನಾವೇ ಖುದ್ದು ಮಾಡಿದರೆ ನಮಗೆ ಉಣ್ಣಲು ಫಲವಿದೆ, ಮುಂದಿನ ಪೀಳಿಗೆಗೂ ಉಳಿಯುತ್ತದೆ.
ಒಂದು ಕೋತಿ ಮೀನಗಳನ್ನು ತಂದು ಗಿಡದ ಮೇಲಿಡುತ್ತಿತ್ತು ಅಂತೆ.
ಅದನ್ನು ಕಂಡ *ನ್ಯಾಸ* ಕೇಳಿದ.. ಏ ಕೋತಿ !! ಮೀನಗಳನ್ನೇಕ್ಕೆ ಗಿಡದ ಮೇಲಿಡುತ್ತಿದ್ದೀ... ?? ಎಂದು. ಕೋತಿ ಉತ್ತರಿಸಿತು *ಮೀನಗಳು ನೀರಿನಲ್ಲಿ ಮುಳುಗಿ ಸಾಯದಂತೆ ರಕ್ಷಿಸುತ್ತಿದ್ದೇನೆ* ಎಂದು. ಈ ತರಹದ ಮೂರ್ಖತನದ ಆಯ್ಕೆಗಳೂ ನಮ್ಮೆದುರಿಗೆ ಬರುತ್ತವೆ. ಎಚ್ಚರದಿಂದ ಇರಬೇಕು ಅಷ್ಟೆ....
*(ಸೂ.. ಎಲ್ಲ ಪುರುಷರು ಸಂಧ್ಯಾವಂದನೆ/ ದೇವರ ಪೂಜೆ ಅವಶ್ಯವಾಗಿ ಮಾಡೋಣ. ಸ್ತ್ರೀಯರೆಲ್ಲರೂ "ಅಚ್ಯುತಾನಂತ ಗೋವಿಂದ" ನಾಮ ಸ್ಮರಣೆಯನ್ನು ತಪ್ಪದೆ ಮಾಡುವಂತಾಗಲಿ.)*
*✍🏽✍🏽ನ್ಯಾಸ...*
ಗೋಪಾಲ್ ದಾಸ.
ವಿಜಯಾಶ್ರಮ, ಸಿರವಾರ.
Comments
a really good article… but what can I say… I hesitate a whole lot
and don't seem to get nearly anything done.
Would you be interested in trading links or maybe guest authoring a blog post or vice-versa?
My site addresses a lot of the same subjects as yours and I believe we could greatly benefit
from each other. If you're interested feel free to send me an e-mail.
I look forward to hearing from you! Terrific blog by the way!
tested to see if it can survive a 40 foot
drop, just so she can be a youtube sensation. My iPad is now
broken and she has 83 views. I know this is totally off
topic but I had to share it with someone!
Thank you! Exactly where are your contact details
though?