*ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ*
*ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ* ಐತಿಹಾಸಿಕ ಶ್ರೀಮನ್ಯಾಯಸುಧಾ ಮಂಗಳ ೧) ತಮ್ಮ ಕೇವಲ ನಾಲವತ್ತನೇಯ ವಯಸ್ಸಿಗೆ ಏರಡನೇಯ ಮಂಗಳಮಹೋತ್ಸವ. ೨) ಏರಡನೇಯ ಸುಧಾಮಂಗಳದಲ್ಲಿಯೇ ಏಳು ಜನರಿಂದ ಸಮಗ್ರ ಶ್ರೀಮನ್ಯಾಯಸುಧಾ ಪರೀಕ್ಷೆ. ೩) ಎರಡೂ ಸುಧಾಮಂಗಳ ಸೇರಿಸಿ ಆರವತ್ತು ವಿದ್ಯಾರ್ಥಿಗಳಿಗೆ ಸುಧಾ ಪಾಠ ಹೀಗೆ ಹಲವಾರುಕಾರಣಗಳಿಂದ ತಮ್ಮ ಈ ಸುಧಾಮಂಗಳವನ್ನು ಐತಿಹಾಸಿಕವಾಗಿರಿಸಿದ್ದಾರೆ ಪಂ ವಿಶ್ವಪ್ರಜ್ಙಾಚಾರ್ಯರು. ಆಗಮಿಸಿದ ಯತಿವರೇಣ್ಯರುಗಳು, ಆಹ್ವಾನಿತ ವಿದುಷರು, ಭಾಗವಹಿಸಿದ ಈ ಜನಸ್ತೋಮ ಇವುಗಳನ್ನು ಗಮನಿಸಿದರೆ ಈ ಮುಂಬಯಿಯಲ್ಲೂ ಇಷ್ಟು ಧಾರ್ಮಿಕ, ವಿಷ್ಣುಭಕ್ತ ಇದ್ದಾರೆ ಅವರಲ್ಲಿ ಯಾವ ಮಟ್ಟಿಗೆ ಧರ್ಮ ಜಾಗೃತಿ ಆಗಿರಬಹುದು ಎಂದು ಯೋಚಿಸಲೂ ಅಸಾಧ್ಯದ ಮಾತೇ. ನೂರಾರು ಜನ ಪರೀಕ್ಷಕರು, ಅವರು ಕೇಳುವ ಪ್ರಶ್ನೆಗಳು, ವಿದ್ಯಾರ್ಥಿಗಳು ಕೊಡುವ ಥಟ್ಟನೆ ಉತ್ತರಗಳು ಇವುಗಳನ್ನು ಗಮನಿಸಿದರೆ ನಮ್ಮ ಗುರುಪುತ್ರರಾದ, ವೈಯಕ್ತಿಕವಾಗಿ ನನ್ನ ಅತ್ಯಂತ ಆತ್ಮೀಯ ಮಿತ್ರರೂ ಆದ ವಿಶ್ವಪ್ರಜ್ಙಾಚಾರ್ಯರ ಪರಿಶ್ರಮ, ತಪಸ್ಸು, ವಿದ್ಯಾರ್ಥಿವಾತ್ಸಲ್ಯ ವಿದ್ಯಾರ್ಥಿಗಳ ಮಹಿಮಾ ಹಾಗೂ ವಿದ್ಯಾರ್ಥಿಗಳ ಗುರುಭಕ್ತಿ ಇತ್ಯಾದಿಗಳಲ್ಲವೂ ಎದ್ದು ಬರುತ್ತಿತ್ತು. ಮಂಗಳಾನುವಾದ ಪಂ ವಿಶ್ವಪ್ರಜ್ಙಾಚಾರ್ಯರು ಮಂಗಳಾನುವಾದವನ್ನು ಶ್ರೀಮನ್ಯಾಯಸುಧಾ ಹಾಗೂ ಟಿಪ್ಪಣಿಗಳಲ್ಲಿಯ ಎ...