Posts

Showing posts from March, 2026

*ವಿಶ್ವ ನಿದ್ರಾ ದಿನ - ನಿದ್ರಾ ಪ್ರಿಯರಿಗೊಂದು ಶುಭಾಷಯ

Image
 *ವಿಶ್ವ ನಿದ್ರಾ ದಿನ* ನಿದ್ರಾ ಪ್ರಿಯರಿಗೆ ವಿಶ್ವ ನಿದ್ರಾದಿನದ ಶುಭಾಷಯಗಳು....🌹🌹🪷 ನಿದ್ರೆ ಇದು ದೇವರು ಕೊಟ್ಟ ಅಮೂಲ್ಯವಾದ ಸ್ಥಿತಿ. ದೈನಂದಿನವಾದ ಅವಶ್ಥೆಗಳು ಮೂರು. ೧) ಜಾಗ್ರದವಸ್ಥೆ, ೨) ಸುಷುಪ್ತಾವಸ್ಥೆ ೩ ) ಸ್ವಪ್ನಾವಸ್ಥೆ. ದೇವರು ಏನು ಕೊಡ್ತಾನೆ ಅದರಲ್ಲಿ ಒಂದು ಮಹತ್ವವಿದೆ. ಅಮೂಲ್ಯತೆ ಇರುತ್ತದೆ. ಅನಿವಾರ್ಯತೆಯೂ ಹೆಚ್ಚಿರತ್ತೆ. ಕೊನೆಗೆ ಸಾಧನೋಪಯೋಗಿಯೂ ಆಗಿರುತ್ತದೆ. ಇದುವೇ ದೇವರ ಕೊಡುಗೆಯಾಗಿರುತ್ತದೆ.  *ನಿದ್ರೆ ಇದೊಂದು ಅದ್ಭುತ* ನಿದ್ರೆ ಇಲ್ಲದೆ ಜಾಗ್ರತ್ ಅವಸ್ಥೆ ಇಲ್ಲ. ನಿದ್ರೆ ಇಲ್ಲದೆ ಉತ್ಸಾಹವಿಲ್ಲ. ನಿದ್ರೆಯಿಲ್ಲ ಸಮಾಧಾನವಿಲ್ಲ. ನಿದ್ರೆಯಿಲ್ಲದೆ ಜೀರ್ಣವಾಗುವದಿಲ್ಲ. ನಿದ್ರೆಇಲ್ಲದೆ ದೇಹದ ಬೆಳವಣಿಗೆ ಇಲ್ಲ. ನಿದ್ರೆ ಇಲ್ಲದೆ ಸ್ವಪ್ನಗಳು ಇಲ್ಲ. ನಿದ್ರೆ ಇಲ್ಲದೆ ಲವಲವಿಕೆ ಇಲ್ಲ.  ನಿದ್ರೆಯಲ್ಲಿ ಸಮಾಧಾನವಿದೆ. ನಿದ್ರೆಯಲ್ಲಿ ಶಾಂತತೆ ಇದೆ. ನಿದ್ರೆಯಲ್ಲಿ ಅಪೂರ್ವವಾದ ಸುಖವಿದೆ. ಸಂಪೂರ್ಣ ನಿದ್ರೆ ಹತ್ತೇನಿಮಿಷವಾದರೂ ಎಂಟು ಗಂಟೆ ದುಡಿಯುವ ಉತ್ಸಾಹವಿದೆ. ನಿದ್ರೆಯಲ್ಲಿ ದೇವರ ಆಲಿಂಗನವಿದೆ. ನಿದ್ರೆಯಲ್ಲಿಯೇನೆ ಸ್ವರೂಪದ ಸುಖಾಭಿವ್ಯಕ್ತಿ ಇದೆ. ಅಂತೆಯೇ ನಿದ್ರೆಯೇ ಪರದೇವತೆ.  ಒಬ್ಬ ಕವಿ ಬಹಳ ಸುಂದರವಾಗಿ ಹಾಸ್ಯ ಮಾಡ್ತಾನೆ..  ೧) ಭೋಗೇ ರೋಗಭಯಂ. ೨) ಕುಲೇ ಚ್ಯುತಿ ಭಯಂ, ೩) ಪಾಠೇ ಪರೀಕ್ಷಾದ್ಭಯಂ, ೪) ಸರ್ವಂ ವಸ್ತು ಭಯಾನ್ವಿತಂ ಭುವಿ ನೃಣಾಂ *ನಿದ್ದಿಮೇವಾಭಯಮ್* ಎಂದು....

*ವಿಶ್ವ ಕಿಡ್ನಿ (kidney) ದಿನ - ದೇವರ ಕಾರುಣ್ಯ*

Image
  * ವಿಶ್ವ ಕಿಡ್ನಿ (kidney) ದಿನ* ದೇವರ ಸೃಷ್ಟಿಯೇ ತುಂಬ ವಿಚಿತ್ರ. ಅದರಲ್ಲೂ ಪೂರ್ಣವಾದ ಸೃಷ್ಟಿ ಪುರುಷನ (ಪುರುಷ ಸ್ತ್ರೀ) ಸೃಷ್ಟಿ. ಹಾಗಾಗಿ ಪುರುಷ ಸೃಷ್ಟಿ ತುಂಬ ಆಶ್ಚರ್ಯತಮವಾದ ಸೃಷ್ಟಿ.  ಪುರುಷನಲ್ಲಿ ಇರುವ ಯಾವ ಅಂಗಾಗಗಳೂ ಪುರುಷ ಬೇಡಿ ಪಡೆದದ್ದು ಅಲ್ಲ. ಕರುಣೆ ಮಾಡಿ ದೇವನೇ ಕೊಟ್ಟದ್ದು. ಒಂದೊಂದು ಅಂಗಾಗಗಳ ಮಹತ್ವ, ಆವುಗಳ ಆವಶ್ಯಕತೆ, ಇತ್ಯಾದಿಗಳನ್ನು ತಿಳಿದು ಕೊಳ್ಳುವದು ಸಾಮಾನ್ಯನಾದ ಈ ಕುನ್ನಿ ಮಾನವನಿಗೆ ಅಸಾಧ್ಯವೇ.  ತಲೇಯಿಂದ ಆರಂಭಿಸಿ ಪಾದದವರೆಗೂ ಒಂದು ಶಿಸ್ತು ಇದೆ. ಅದ್ಭುತತೆ ಇದೆ. ಆಶ್ಚರ್ಯ ಅಡಗಿದೆ. ಅನಿವಾರ್ಯತೆ ತುಂಬಿದೆ. ತಿಳಿದವರಿಗೆ ಜ್ಙಾನಿಗಳಿಗೆ ಈ ಪಿಂಡಾಂಡ ಬ್ರಹ್ಮಾಂಡವೇ ಆಗಿದೆ.  *ಮಂಗ್ಯನ ಕೈಲಿ ಮಾಣಿಕ್ಯ ಕೊಟ್ಟಂತೆ...* ಉಚಿತವಾಗಿ ದೇವ ಒಂದೊಂದು ಅಂಗಾಂಗಗಳನ್ನು ಕೊಟ್ಟಿದ್ದಾನೆ. ಅವುಗಳ ಸರಿಯಾದ ಉಪಗಗಳನ್ನೂ ತಿಳಿಸಿದ್ದಾನೆ. ಸರಿಯಾಗಿ ಉಪಯೋಗಿಸಿಕೊಳ್ಳುವ ಕೌಶಲ ಎಲ್ಲರಿಗೂ ಕೊಟ್ಟಿಲ್ಲ. ಹಾಗಾಗಿ *ಆ ಅಂಗಾಗಗಳ ಶಕ್ತಿ, ಉಪಯುಕ್ತತೆ, ಅನಿವಾರ್ಯತೆ, ಮಹತ್ವ, ಗೋತ್ತು ಆಗುವದೇ ಇಲ್ಲ. ಉಚಿತವಾಗಿ ಕೊಟ್ಟದ್ದಕ್ಕಾಗಿ ಬಳಿಸಿಕೊಳ್ಳುವ ರೀತಿಯೂ ಗೊತ್ತಾಗುವದಿಲ್ಲ. ಎರ್ರಾಬಿರ್ರಿ ಬಳಿಸಿಕೊಳ್ಳುತ್ತಾನೆ.  ಆದರೇ....... *ಈ ಅಂಗಾಗಳ ವೈಫಲ್ಯಗಳು,  ಅಪ್ಪಳಿಸಿದಾಗಲೇ, ತಮ್ಮ ಶಕ್ತಿ ಸಾಮರ್ಥ್ಯಕಳೆದುಕೊಂಡಾಗಲೇ, ರೋಗಗಳಗೆ ಬಲಿಯಾದಾಗಲೇ ಅಂಗಾಂಗಗಳ ಮಹತ್ವ ಶಕ್ತಿ ಉಪಯೋಗ ಇತ್ಯಾಗಿಳ...