ಶ್ರೀಸತ್ಯಾತ್ಮತೀರ್ಥರ ವರ್ಧಂತಿ ಮಹೋತ್ಸವ
*ಪರೋಪಕಾರದ ಮಹಾಗಣಿ - ಶ್ರೀಸತ್ಯಾತ್ಮತೀರ್ಥರು*
ಇಂದಿನ ವಾರ್ತಾ ಪೇಪರ್ ಅಲ್ಲಿ ಒಂದು ವಿಷಯ ಇತ್ತು "ಭಾರತದ ಜನರು - ಸರ್ವಾಧಿಕವಾಗಿ *ದೇವಸ್ಥಾನಗಳಿಗೆ ಹಾಗೂ ದೀನರಿಗೆ ದಾನವಾಗಿ ಕೊಡುತ್ತಾರೆ* ಎಂದು.
ಈ ಕಾರ್ಯವನ್ನು ನಮ್ಮ ಸ್ವಾಮಿಗಳು ಎಷ್ಟು ವಿಸ್ತರಿಸಿಕೊಂಡಿದ್ದಾರೆ ಎಂದರೆ *ಕೇವಲ ಹಣ ದಾನಮಾತ್ರವಲ್ಲದೆ - ಜ್ಙಾನಧನ, ಗುಣಧನ, ನಡತೆಯಧನ, ಆದರ್ಶಗಳಧ ಹೀಗೇ ನೂರಾರು ಸಹಸ್ರ ಸಹಸ್ರ ಧನಗಳ ದಾನದ ರೂವಾರಿಗಳು* ನಮ್ಮ ಮಹಾಸ್ವಾಮಿಗಳು ಆಅಗಿದ್ದಾರೆ. ನೂರಾರು ತರಹದ ದಾನಗಳಿಗೆ ಆದರ್ಶರು ನಮ್ಮ ಮಹಾಸ್ವಾಮಿಗಳು ಆಗಿದ್ದಾರೆ. *ಈ ಆದರ್ಶವನ್ನು ಪಡೆದ ಅನೇಕ ಸದ್ಗ್ರಹಸ್ಥರು ದಾನವೀರರಗಿದ್ದಾರೆ* ಎಂದರೆ ತಪ್ಪಾಗದು.
*ದೀನ ನಾನು ಸಮಸ್ತಲೋಕಕೆ ದಾನಿ ನೀನು*
ಸಮಸ್ತ ಲೋಕಗಳಿಕೆ ಸರ್ವಸ್ವದಾನಿಯಾದ ದೇವನ ಅತ್ಯುತ್ತಮಗುಣಮಟ್ಟದ ಆರಾಧಕರಾದ ಶ್ರೀಸತ್ಯಾತ್ಮತೀರ್ಥರೂ ಸಹ *ದಾನದಗಣಿ* ಯೇ. ಪಾಪಿಷ್ಠರಾದ ಅಂತೆಯೇ ದೀನರಾದ ನಮ್ಮಂಥ ಕೊಟಿ ಕೋಟಿ ಭಾಕ್ತರಿಗೆ ದಾನಿಗಳಾಗಿ ಚಿಂತಾಮಣಿ- ಕಲ್ಪವೃಕ್ಷ- ಕಾಮಧೇನುವಿನಂತೆ ಒಲೆದುಬಂದ ಮಹಾ *ಮಹಾ ಆತ್ಮಾ- ಸತ್ಯಾತ್ಮತೀರ್ಥರು - ದೀನಾತ್ಮರು*
*೧) ಜ್ಙಾನದಾನ - ಜ್ಙಾನಾತ್ಮರಿವರು*
ಜಯತೀರ್ಥವಿದ್ಯಾಪೀಠದ ಮುಖಾಂತರ ಅವರು ಜ್ಙಾನದಾನವನ್ನು ಕನಿಷ್ಠ ನೂರಕ್ಕೂ ಹೆಚ್ಚು ವಿದ್ವಾಂಸರುಗಳಿಗೆ ಜ್ಙಾನವನ್ನು ದಾನಮಾಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮಗ್ರ ಸುಧಾಪರೀಕ್ಷೆಕೊಡಿಸುವ ಮುಖಾಂತರ ವೈಭವದ ಜ್ಙಾನದಾನ ಇವರಿಂದಾಗಿದೆ.
ಜಗತ್ತಿನಲ್ಲಿ ನಡೆಯುವ ಸಮಗ್ರ ಸುಧಾಪರೀಕ್ಷಗಳಿಗೆ ಇವರೇ ಆದರ್ಶರಾಗಿ ಇದ್ದಾರೆ. ಲಕ್ಷ ಲಕ್ಷ ಭಕ್ತರಿಗೆ ನಿರಂತರ ಜ್ಙಾನಮೃತವನ್ನು ಉಣಿಸುತ್ತಲಿದ್ದಾರೆ. ಇವರ ಜ್ಙಾನದಾನದ ಕೊನೆ ಇಲ್ಲವೇ ಇಲ್ಲ... .
*೨) ಅನ್ನದಾನ - ಅನ್ನಾತ್ಮರಿವರು*
ನಿತ್ಯವೂ ಸಹಸ್ರಸಹಸ್ರ ಜನರಿಗೆ ಶ್ರೀಮಠದಲ್ಲಿ ಅನ್ನದಾನ. ತಿರುಮಲ ಕೊಲ್ಹಾಪುರ ಸೇರಿದಂತೆ ಅನೇಕ್ ಕ್ಷೇತ್ರಗಳಲ್ಲಿ ಅನ್ನದಾನ. ವಿದ್ಯಾಪೀಠದಲ್ಲಂತೂ ನಿರಂತರ ಅನ್ನದಾನ. ಯತಿಗಳಿಗೆ ಭಿಕ್ಷೆ ಹಾಕಿದಾಗ ಮೇರುವಿನಷ್ಡು ಅನ್ನದಾನ ಮಾಡಿದ ಪುಣ್ಯಬರತ್ತೋ ಇಲ್ಲವೋ ಗೊತ್ತಿಲ್ಲ, ಇವರು ಮಾಡುವ ಅನ್ನದಾನವಂತೂ ಮೇರುವಿನಷ್ಟು ನಿತ್ಯವೂ ಇರುತ್ತದೆ. .
*೩) ಧನದಾನ - ಧನಾತ್ಮರಿವರು*
ಪ್ರಾಧ್ಯಾಪಕರಿಗೆ, ಮಠದ ಸಿಬ್ಬಂದಿಗಳಿಗೆ ನಿರಂತರ ಧನದಾನದ ಪ್ರವಾಹ. ವಿದ್ವಾಂಸರಿಗೆ ಮಹಾಪ್ರವಾಹವೇ ಸರಿ. ಹತ್ತುಕೋಟಿಗೂ ಮಿಗಿಲು ವಿದ್ವಾಂಸರುಗಳಿಗೆ ವಿದ್ಯಾರ್ಥಿಗಳಿಗೆ ಧನದಾನಮಾಡಿದ್ದಾರೆ ಎಂದು ಅವರ ಮಹಿಮೇಯೇ ಇದೆ.
ನಮ್ಮಂಥ ಸಾಮಾನ್ಯರಿಗೂ ಕರೋನಾ ಮೊದಲಾದ ಆಪತ್ತುಗಳಲ್ಲಿ ಲಕ್ಷ ಲಕ್ಷ ರೂಗಳಲ್ಲಿ ಧನದಾನ ಮಾಡಿದ್ದಾರೆ.
ತಮ್ಮ ಭಕ್ತವರ್ಗದಿಂದ ಶಿಷ್ಯವರ್ಗದಿಂದ ಮಾಡಿಸಿದ ಧನದಾನ ನನ್ನ ವಿಚಾರಕ್ಕೆ ಯೋಚಿಸಿದರೆ ಕನಿಷ್ಟ ನೂರುಕೋಟಿಯಾದರೂ ಇರಬಹುದು. ಆ ಮಟ್ಡದಲ್ಲಿ ನಮ್ಮ ಸ್ವಾಮಿಗಳು ದೀನರಾದ ಜನರಿಗೆ ಭಕ್ತರಿಗೆ ದಾನಿಯಾಗಿ ನಿಂತಿದಾರೆ. ಈ ಗುಂಪಿನಲ್ಲಿ *(ನಮ್ಮ ತಮ್ಮನೂ ಒಬ್ಬನಿದ್ದಾನೆ.)* .
*೪) ವಸ್ತ್ರದಾನ - ವಸ್ತ್ರಾತ್ಮರಿವರು*
ಅಪಾರ ಪ್ರಮಾಣದಲ್ಲಿ ವಸ್ತ್ರಗಳನ್ನು ದಾನ ಮಾಡಿದ ಧೀರರು. ವಿದ್ಯಾರ್ಥಿಗಳಿಗೆ ಉಡುವ ತೊಡುವ ವಸ್ತ್ರಗಳು, ವಿದ್ವಾಂಸರಿಗೆ ಶಾಲು ಶಕಲಾತಿಗಳು, ಸದ್ಗ್ರಹಸ್ಥರಿಗೆ ಧೋತ್ರ ರೇಷ್ಮವಸ್ತ್ರಗಳು, ಸದ್ಗೃಹಿಣಿಯರಿಗೆ ಸೀರಿಗಳು ರೇಷ್ಮೆಸೀರಿಗಳು ಹೀಗೆ ಲೆಕ್ಖವಿಲ್ಲದಷ್ಟು ವಸ್ತ್ರದಾನ ಇವರ ಹೆಗಲಿಗೆ ಇದೆ. .
*೫) ಸ್ವರ್ಣ ರಜತ ದಾನ - ಸ್ವರ್ಣಾತ್ಮರಿವರು*
ಸಾವಿರಾರು ವಿದ್ವಾಂಸರುಗಳಿಗೆ ಗುರುಗಳ ಜನ್ಮಶತಮಾನೋತ್ಸವ ನಿಮಿತ್ತ ಭಂಗಾರದ ನಾಣ್ಯಗಳನ್ನು ದಾನವಾಗಿ ಕೊಟ್ಟಿದ್ದಾರೆ. ಅನೇಕರಿಗೆ ಕಡಗ ಹಾರಗಳನ್ನು ಮಾಡಿಸಿ ಕೊಟ್ಟಿದ್ದಾರೆ. ರಜರತ ದಾನವಂತೂ ಸಾಕ್ಷಾತ್ತಾಗಿ ಪರೋಕ್ಷವಾಗಿ ಸಾವಿರ ಕೇಜಿಯಷ್ಟಾದರು ದಾನ ಮಾಡಿರಬಹುದು.
*೫) ಭೂದಾನ - ಪುಣ್ಯಾತ್ಮರಿವರು*
ಅನೇಕರಿಗೆ ತಮ್ಮ ಆಶ್ರಯದಲ್ಲೇ ಮಠವನ್ನೇ ಮನೆಯನ್ನಾಗಿ ದಯಪಾಲಿಸಿದ್ದಾರೆ, ಇನ್ನನೇಕರಿಗೆ ಮಠದಲ್ಲೇ ಮನೆಯನ್ನು ಕೊಟ್ಟಿದ್ದಾರೆ. ಮತ್ಯನೇಕರಿಗೆ ಆ ಆ ಊರುಗಳಲ್ಲಿರಿವ ಮಠಗಳಲ್ಲಿ ಆಶ್ರಯಕಲ್ಪಸಿದ್ದಾರೆ, ಹಲವರಿಗೆ ಭೂಮಿ ಕೊಟ್ಟಿದ್ದಾರೆ. ಮನೆಕಟ್ಟಲು ಹಣ ಕೊಟ್ಟಿದ್ದಾರೆ ಪಟ್ಡಿಮಾಡಲು ಆಗದಷ್ಟು ಭೂದಾನ ಮಾಡಿದ .
*೬) ಸದ್ಗುಣಗಳ ದಾನಿ - ಗುಣಾತ್ಮರಿವರು.*
ತಾವು ರೂಢಿಸಿಕೊಂಡ ನೂರಾರು ಸಹಸ್ರಾರು ಲಕ್ಷಲಕ್ಷ ಸದ್ಗುಣಗಳನ್ನು ತಮ್ಮ ನುಡಿ ಹಾಗೂ ನಡೆಯಲ್ಲಿ ತರುವ ಮುಖಾಂತರ ಕೋಟಿ ಕೋಟಿ ಭಕ್ತರಿಗೆ ಆದರ್ಶದಂತೆ ನಿಂತು ಸದ್ಗುಣಗಳನ್ನು ಧಾರೆಯೆರೆದ ಗುಣಾತ್ಮರಿವರು.
ಇಂದು ಅವರ ಅವತಾರದ ವೈಭವದ ದಿನ. ನಮ್ಮ ಪಾಲಿನ ಶ್ರೀಮಟ್ಟೀಕಾಕೃತ್ಪಾದರ ಜಯಂತಿ ಎಂದರೂ ತಪ್ಪಾಗದು. ಆ ಮಹಾತ್ಮರಿಗೆ ಅನಂತಾನಂತ ವಂದಮೆಗಳು ನಮಸ್ಕಾರಗಳು....🙏🏼🙏🏼🙏🏼
*ನ್ಯಾಸ ದಾಸ*
ಗೋಪಾಲದಾಸ.
Comments