Posts

Showing posts from April, 2025

*ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....*

Image
 *ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....* ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣ್ಯಕ್ಕೆ ಪೀಡೆಕೊಡುವದು ಎಂದರೆ ಜಗತ್ತಿಗೆ ನಮ್ಮ ಸರ್ಕಾರಗಳಿಗೆ ನಮ್ಮ ರಾಜಕಾರಣಿಗಳಿಗೆ ತುಂಬ ಪ್ರೀತಿ. "ಬ್ರಾಹಣರನ್ನು ಉಳಿದು ಬೇರೆಯವರನ್ನು ಒಲಿಸಿಕೊಳ್ಳಲು ಎಷ್ಟು ಪ್ರೀತಿಯೋ ಅಭಿರುಚಿಯೋ ಅಷ್ಟೇ ಪ್ರೀತಿ ಅಭಿರುಚಿ ಬ್ರಾಹ್ಮಣರನ್ನು ಬ್ರಾಹ್ಮಣ್ಯವನ್ನು ಪೀಡಿಸುವದು" ಎಂದರೆ. ಈ ಅವಸ್ಥೆ ಇಂದಿನದು ಅಲ್ಲ. ದ್ವಾಪರಯುಗದಿಂದಲೂ ಇದ್ದೇ ಇದೆ. ಮುಘಲರಾಗಲಿ ಬ್ರಿಟೀಶರಾಗಲಿ ಅಥವಾ ಇಂದಿನ ಕೆಲಸರ್ಕಾರಗಳಾಗಲಿ ಶತಮಾನ ಶಾನಗಳಿಂದ ಕುಗ್ಗಿಸಲು ನಿರಂತರ ಪರಿಶ್ರಮಪಟ್ಟರೂ ಸಫಲರಾಗಿದ್ದು ಕಡಿಮೆಯೇ. ವಿಫಲರಾಗಿರುವದೇ ಹೆಚ್ಚಿಗೆ ಇದೆ.  ತುಳಿತಗಳು, ಪೀಡೆಗಳು, ಸುನಾಮಿಯಂತೆ ಅಪ್ಪಳಿಸಿದರೂ ಬ್ರಾಹ್ಮಣ ಎಂದಿಗೂ ಕುಗ್ಗುವದಿಲ್ಲ, ಬಗ್ಗುವದಿಲ್ಲ, ಅಂಗಲಾಚುವದಂತೂ ಇಲ್ಲವೇ ಇಲ್ಲ. ತನ್ನ ನೈಜವಾದ ಅಮೋಘವಾದ ತಪಸ್ಸು, ಪ್ರಖರವಾದ ಬುದ್ಧಿವಂತಿಕೆ, ಅಪ್ರತಿಮ ವ್ಯಕ್ತಿತ್ವ ದೃಢವಾಗಿ ನಿಲ್ಲುವದಕ್ಕೆ ಇವುಗಳೇ ಆಧಾರಸ್ಥಂಭಗಳು.  *ಇಂದಿನ ಅಮೋಘವಾದ ದುರಂತಕ್ಕೆ ಮೂಕಸಾಕ್ಷಿಗಳು ಅ(ನಾ)ವರೆಲ್ಲರು....* ಹದಿನಾರು ಹದಿನೇಳು ವರ್ಷಗಳಿಂದ ಪರೀಕ್ಷೆಯಲ್ಲ ಉತ್ತೀರ್ಣನಾಗಿ ಬರುತ್ತಿರುವ ಅಪ್ಪಟ ಬ್ರಾಹ್ಮಣ ವಿದ್ಯಾರ್ಥಿ ಪರಿಕ್ಷೆಗಾಗಿ ಹೊರಟ. ಪರೀಕ್ಷಾಕೋಣೆಯ ಪ್ರವೇಶದ ಸಮಯಕ್ಕೆ ಶೀಕ್ಷಕವರ್ಗ ಹಾಗೂ ಅಧಿಕಾರಿವರ್ಗದ...

ಕಲಿಯುಗದ ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)*

Image
 *"ಕಲಿಯುಗದ  ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)* ದ್ವಾಪರಯುಗದ ಕುಂತಿಗೆ ೫ ಮಕ್ಕಳು. ಆದರೆ ಈ ಕಲಿಯುಗದ ಕುಂತಿಗೆ ನಮ್ಮಂತಹ ನೂರಾರು ಮಕ್ಕಳು. ಕೌಂತೇಯರು ಎನ್ನುವದೇ ಪಾಂಡವರ ಹೆಮ್ಮೆ ಆಗಿತ್ತು. ಹಾಗೆಯೇ ಪೂ ಕಾಕು ಅವರ ಮಕ್ಕಳು ನಾವು ಎಂದಾಗುವದೇ ನಮ್ಮದೊಂದು ವೈಭವ.  ಶ್ರೇಷ್ಠವಾದ ಶ್ರೀಸತ್ಯಕಾಮತೀರ್ಥರಂತಹ ಮಹಾನುಭಾವರು ಅವತರಿಸಿದ ಕುಲ. ವಿಶಾಲವಾದ ಕುಟುಂಬ. ತುಂಬ ಕಷ್ಟ. ಕಡುದಾರಿದ್ರ್ಯ. ಆಗಿನ ಕಾಲವೂ ತುಂಬ ಘೋರ. ಅದರಲ್ಲಿ ಸಾಧನೆಯ ವಿದ್ವನ್ಮಾರ್ಗ ಮುಳ್ಳುಹಾಸಿದ ದಾರಿಯಾಗಿತ್ತು. ಈ ತರಹದ ವಿಪರೀತವಾದ ಪ್ರತಿಕೂಲ ವಾತಾವರಣದಲ್ಲಿಯೂ ಪರಮಪೂಜ್ಯ ಮಹಾಚಾರ್ಯರರನ್ನು ವರೆಸಿದಿರು. *"ವಿದ್ಯಾಪೀಠವಿಧಾತೃ"ಗಳು ಪರಮಪೂಜ್ಯ ಆಚಾರ್ಯರಾದರೆ, ವಿದ್ಯಾಪೀಠದ "ಮಹಾತಾಯಿ* ಪೂಜ್ಯ ಕಾಕೂ ಅವರು ಆದರು.  ನಿರಂತರ ಹರಿನಾಮಸ್ಮರಣ. ನಿರಂತರ ಹರಿನಾಮಸ್ಮರಣೆಯನ್ನು ಎಲ್ಲಿಯಾದರೂ ನೋಡಬೇಕು ಒಂದು ದೃಷ್ಟಾಂತ ಸಿಗಬೇಕು ಎಂದರೆ ಅದು ಪೂಜ್ಯರಲ್ಲಿ ಕಾಣುತ್ತಿತ್ತು.   ನಿತ್ಯವೂ ಶ್ರೀಮದ್ಭಾಗವತ ಪಾರಾಯಣ ಅನೇಕ ವಿದ್ಯಾರ್ಥಿಗಳಿಂದ ಮಾಡಿಸಿದ್ದರು. ಕನಿಷ್ಟ ನೂರುಬಾರಿಯಾದರೂ ಶ್ರೀಮದ್ಭಾಗವತ ಪಾರಾಯಣ ಕೇಳಿರಬಹುದು.  ಒಂದುಬಾರಿ ನನಗೂ ಎರಡು ಮೂರು ಸ್ಕಂಧಗಳ ಪಾರಾಯಣ ಮಾಡುವ ಸೌಭಾಗ್ಯ ಒದಗಿಸಿ ಅನುಗ್ರಹಿಸಿದ್ದರು. ಆ ಪಾರಾಯಣದ ಅನುಗ್ರಹದ ಕುರುಹು ಇಂದಿಗೂ ಮನೆಯಲ್ಲಿ ಇದೆ.  *ಮಹಾ ಅನ್ನದಾನಿ* ಮದುವೆಯಾದ ಆರಂಭದ ಹತ್ತಾರುವರ...