*ಕೃಷ್ಣನ ಭಕ್ತಿಭೂಮಿಯಲ್ಲಿ ಜ್ಙಾನವೈಭವ*
* ಕೃಷ್ಣನ ಭಕ್ತಿಭೂಮಿಯಲ್ಲಿ ಜ್ಙಾನವೈಭವ * * ಮೋಕ್ಷದಾಯಕ - ಮಥುರಾ * ಮೋಕ್ಷಕ್ಕೆ ಆವಶ್ಯಕವಾದ ಸಾಧನೆಗಳನ್ನು ಹೆಚ್ಚೆಚ್ಚು ಮಾಡಿಸುವ ಏಳು ಕ್ಷೇತ್ರಗಳಲ್ಲಿ ಅತ್ಯುತ್ತಮ ಕ್ಷೇತ್ರ ಮಥುರಾ ಕ್ಷೇತ್ರ. ಮಥುರಾ ವೃಂದಾವನ ಗೋಕುಲ ಈ ಪ್ರಾಂತಗಳಲ್ಲಿ ಸಚ್ಚಿದಾನಂದ ಮೂರ್ತಿಯಾದ, ನಮ್ಮಲ್ಲೆರ ಇಷ್ಟ ದೈವನಾದ, ಅಖಿಲಪ್ರದನಾದ, ಸರ್ವಾನಿಷ್ಟನಿವಾರಕನಾದ, ಶ್ರೀಕೃಷ್ಣನ ಪಾದಧೂಳಿ ಕಣ ಕಣಕಣಗಳಲ್ಲಿ ಪಡೆದ ಕ್ಷೇತ್ರ ಅದು ಮಥರಾಕ್ಷೇತ್ರ. ಶ್ರೀಕೃಷ್ಣನ ನಿತ್ಯ ಸನ್ನಿಧಾನವಿರುವ, ಕೃಷ್ಣನ ಅಧಿಷ್ಠಾನ ಪ್ರತಿಮೆಯಂತಿರುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಮಥುರಾ. ಕೃಷ್ಣನ ಸನ್ನಿಧಾ ಇರುವದರಿಂದಲೇ ದೇವಾಧಿದೇವತೆಗಳು, ಋಷಿಮುನಿಗಳು, ಸಾಧಕರು, ವಿರಕ್ತರು ಬಂದು ಸಾಧನೆಮಾಡಿಕೊಂಡ ಕ್ಷೇತ್ರ ಮಥುರಾಕ್ಷೇತ್ರ. * ಭಕ್ತಿ ತುಂಬಿದ ನಾಡು * ಮಥುರಾ ಪಟ್ಟಣಕ್ಕೆ ದೇಶ ವಿದೇಶಗಳಿಂದ ಭಕ್ತರು ಓಡೋಡಿ ಬರುತ್ತಾರೆ. ಮೈ ಮರೆಯುತ್ತಾರೆ. ನಿರಂತ ಕೃಷ್ಣನಾಮಸ್ಮರಿಸುತ್ತಾರೆ. ಮಥುರಾ ವೃಂದಾವನ ಹಾಗೂ ಗೋವರ್ಧನ ಈ ಕ್ಷೇತ್ರಗಳ ಪ್ರದಕ್ಷಿಣೆ ಹಾಕ್ತಾರೆ. ಪ್ರತಿಯೊಂದು ಕ್ಷೇತ್ರವೂ ಕನಿಷ್ಠ ಹದಿನೈದು km ಗೂ ಹೆಚ್ಚಾದ ಪರಿಸರ ಹೊಂದಿದೆ. ಸಂಪೂರ್ಣ ಊರು ಬೆಟ್ಟಗಳಿಗೆ ಹೆಜ್ಜೆ ನಮಸ್ಕಾರ ಹಾಕ್ತಾರೆ. ಹಾಡು ಭಜನೆ ನಾಮಸ್ಮರಣೆ ಇತ್ಯಾದಿಗಳಿಂದ ಭಕ್ತಿ ಭೂಮಿಯಾಗಿದೆ ಮಥುರಾ ವೃಂದಾವನಕ್ಷೇತ್ರಗಳು. * ಕೃಷ್ಣ ಜನ್ಮ ಭೂಮಿ * ಕೃಷ್ಣ ಅವತರಿಸಿ ಆ ಜನ್ಮಭೂಮಿ ಜೈಲು ಒಳಗೆ ...