*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*
ಶ್ರೀಸತ್ಯಾತ್ಮತೀರ್ಥರ ಇಪ್ಪತ್ತೊಂಭತ್ತನೇಯ ಹಾಗೂ ಶ್ರೀ ವೇದವರ್ಧನತೀರ್ಥರ ನಾಲ್ಕನೇಯ ಚಾತುರ್ಮಾಸ್ಯ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಾ ಸಾಗಿದೆ.
*ಜ್ಙಾನಪ್ರಧಾನ ಚಾತುರ್ಮಾಸ್ಯ*
ಮುಂಬಯಿಯ ಈ ಚಾತುರ್ಮಾಸ್ಯದ ಅತ್ಯಂತ ವಿಶೇಷವೇನೆಂದರೆ *ಜ್ಙಾನಪ್ರಧಾನ* ವಾದ ಈ ಚಾತುರ್ಮಾಸ್ಯ. ಇದುವೇ ಅತ್ಯಂತ ವಿಶೇಷ.
"ಸತ್ವ ಸತ್ವ ಮಹಾಸತ್ವ" ಇರುವಲ್ಲಿ ತತ್ವಜ್ಙಾನ ಇರಲೇಬೇಕು. ತತ್ವಜ್ಙಾನವಿದೆ ಎಂದರೆ ಸತ್ವಗುಣದ ವ್ಯಾಪಾರ ಇರಲೇಬೇಕು.
ಬೆಳಿಗಿನ ಝಾವಾ ೫ ಗಂಟೆ ಇಂದ ಎಂಟು ಗಂ ವರೆಗೆ ಪರಮಪೂಜ್ಯ ಶ್ರೀಶ್ರೀಗಳವರಿಂದ ಶ್ರೀಮನ್ಯಾಯಸುಧಾ ಪಾಠ. ಇದೇ ಸಮಯದಲ್ಲಿ ಪೂ ಆಚಾರ್ಯರರಿಂದ ಸುಧಾಪಾಠ. ಎಂಟರಿಂದ ಒಂಭತ್ತರವರೆಗೆ ತತ್ವಪ್ರಕಾಶಿಕಾ ಪಾಠ. ಹತ್ತು ಗಂ ಇಂದ ಹನ್ನೆರಡು ಮೂವತ್ತರ ವರೆಗೆ ಪೂಜೆಯ ಪ್ರಸಂಗದಲ್ಲಿ ಪಂಡಿತರುಗಳಿಂದ ವಿಶೇಷ ಉಪನ್ಯಾಸ. ನಂತರ ಪೂಜ್ಯ ಆಚಾರ್ಯರಿಂದ ವಿಶೇಷ ತತ್ವ ಉಪನ್ಯಾಸಗಳ ವೈಭವ.
*ಪೂ ಆಚಾರ್ಯರ ತತ್ವೋಪನ್ಯಾಸ*
ಆರವತ್ತೈದು ವರ್ಷದ ಹಳೆಯದಾದ ವಿಶೇಷವಾದ ಒಂದು ವೃಕ್ಷ. ಆ ವೃಕ್ಷದಲ್ಲಿ ಒಂದೇ ತೆರನಾದ ಹಣ್ಣುಗಳು ಸಿಗುವಂತಹದ್ದಲ್ಲ ಕಿಂತು ನಾನಾವಿಧ ಪಕ್ವವಾದ ರುಚಿರುಚಿಯಾದ ಮೋಕ್ಷಜ್ಙಾನಕ್ಕೆ ಕಾರಣಾವದ ದಿವ್ಯ ಹಣ್ಣುಗಳನ್ನು ಕೊಡುವ ಉಣಿಸುವ ವೃಕ್ಷ. ಆ ವೃಕ್ಷ ಮತ್ಯಾವದೂ ಅಲ್ಲ *ಪೂಜ್ಯ ಆಚಾರ್ಯರೆಂಬ ಮಹಾ ವೃಕ್ಷ.*
ದತ್ತಸ್ಚಾತಂತ್ರ್ಯ, ಸೃಷ್ಟಿ, ನೈವೇದ್ಯ, ದೇವರ ಉಪಕಾರ, ಸಪ್ತಾನ್ನವಿದ್ಯೆ, ಇವೇ ಮೊದಲಾದ ಮೂವತ್ತುಕ್ಕೂ ಮಿಗಿಲಾದ ಅತ್ಯಪರೂಪದ ತತ್ವಜ್ನಾನ ಉಣಿಸುವ, ಅಜ್ಙಾನ ಕಳೆಯುವ, ಹಲವಾರು ವಿಷಯಗಳು ಜೊತೆಗೆ ಅತ್ಯಪರೂಪದ ಪ್ರೋಷ್ಠಪದಿ ಭಾಗವತ ಹೀಗೆ ಅತ್ಯಂತ ವೈಭವದ ಪರಿಪಕ್ವವಾದ ರುಚಿರುಚಿಯಾದ ಸವಿಯಾದ ಹಿತಕಾರಿಯಾದ ತತ್ವಜ್ಙಾನಗಳೆಂಬ ಹಣ್ಣುಗಳು ದೊರೆತವು. ಆ ಹಣ್ಣುಗಳನ್ನು ಉಂಡವರೇ ಧನ್ಯರು.
*ಪೂ ಮಾಹುಲೀ ಆಚಾರ್ಯರಿಂದ "ಮಹಾಭಾರತ ಮಂಗಲ"*
ಸರಿಯಾಗಿ ಇಪ್ಪತ್ತೆರಡು ವರ್ಷದ ಹಿಂದೆ ನಾಲಕು ತಿಂಗಳು ವರೆಗೆ ಸಮಗ್ರ ಚಾತುರ್ಮಾಸ್ಯದಲ್ಲಿ ಪ್ರತಿನಿತ್ಯವೂ ಮೂರು ಗಂಟೆಯಂತೆ, ಕೊನೆಕೊನೆಗೆ ಐದು ಆರು ಗಂಟೆಗಳಂತೆ ಶ್ರೀಮನ್ಮಹಾಭಾರತ ಉಪನ್ಯಾಸ ಪೂ ಆಚಾರ್ಯರು ವೈಭವದಿಂದ ನೆರೆವೇರಿಸಿದ್ದರು.
ನಂತರ ಕೆಲವೇ ದಿನಗಳಲ್ಲಿ ವಿಸ್ತೃತವಾಗಿ ಮಹಾಭಾರತದ ಜ್ಙಾನ ಜಗತ್ತಿಗೆ ಸಿಗಲಿ ಎಂಬ ಪ್ರಾಮಾಣಿಕ ಮನಸ್ಸಿನಿಂದ ಪ್ರತಿ ಗುರುವಾರ ಆರಂಭಿಸಿದರು. ಅಂದಿನಿಂದ ನಿರಂತರವಾಗಿ ಇಪ್ಪತ್ತೆರಡು ವರ್ಷಗಳಿಂದ ಸರಾಗವಾಗಿ ಪ್ರತಿ ಗುರುವಾರವೂ ಅತ್ಯಂತ ವೈಭವದಿಂದ ವಿಸ್ತ್ರತವಾಗಿ ನಡೆಯುತ್ತಿದೆ.
*ಆಚಾರ್ಯರ ಜ್ಙಾನ*
ಪೂ ಆಚಾರ್ಯರ ಮಹಾಭಾರತ ಉಪನ್ಯಾಸ ಅಂದರೆ ಕಣ್ಮುಂದೆ ಚಿತ್ರಣ ಮೂಡುವಂಥದ್ದು. ತಾತ್ಪರ್ಯನಿರ್ಣಯದ ನಿರ್ಣಯ ಹಾಸುಹೊಕ್ಕಿರುತ್ತಿತ್ತು. ಅಲ್ಲಿ ಭರುವ ಭಗವನ್ಮಹಿಮೆ, ಋಷಿಗಳಮಹಿಮೆ, ರಾಜರುಗಳ ಮಹಿಮೆ, ಪಾಂಡವರ ವೈಭವ, ಅಂಶ ಆವೇಶ ವರ ಶಾಪ, ಪುಣ್ಯ ಪಾಪ, ಧರ್ಮ, ಅಧರ್ಮ, ಪಾತ್ರವಿಮರ್ಷೆಗಳು, ಕಾಲನಿರ್ಣಯ, ತಾರತಮ್ಯ ವ್ಯವಸ್ಥೆ, ಇತ್ಯಾದಿ ಇತ್ಯಾದಿ ನೂರಾರುವಿಷಯಗಳ ಕರಾರುವಾಕ್ ನಿರ್ಣಯಿಸಿ ತಿಳಿಸುವ ಪೂಜ್ಯರ ಜ್ಙಾನ ತುಂಬ ಅಗಾಧವಾಗಿರುತ್ತಿತ್ತು.
ಕೃಷ್ಣ ಕೃಷ್ಣನ ಮಹಿಮೆ, ಭೀಮಸೇನದೇವರ ಧರ್ಮ, ಬಲ, ಶಕ್ತಿ, ಜ್ಙಾನ. ಅರ್ಜುನನ ಪರಾಕ್ರಮ, ದ್ರೌಪದಿಯ ತಪಸ್ಸು ಇವುಗಳನ್ನು ವರ್ಣಿಸುವಾಗ ಮೈಮರೆಯುತ್ತಿದ್ದರು. ಅತ್ಯಂತ ಸೂಕ್ಷ್ಮವಾದ ಧರ್ಮದಬೊಧನೆ, ಧರ್ಮಗಳ ನಿರೂಪಣೆ ಬಹಳೆ ಸುಂದರವಾಗಿರುತ್ತಿತ್ತು. ಕಥೆಗಳಂತೂ ಕಣ್ಣಿಗೆಕಟ್ಟಿದಂತೇ ಇರುತ್ತಿತ್ತು.
ಕರ್ಣ ದುರ್ಯೋಧನ ದುಃಶಾಸನ ಶಕುನಿ ಇವರುಗಳನ್ನು ವಿಮರ್ಷಿಸುವಾಗ ಅತ್ಯಂತ ಜಾಗರೂಕವಾಗಿ ವಿಮರ್ಷೆ ಮಾಡಿ ಸ್ಪಷ್ಟವಾಗಿ ತಿಳಿಸುತ್ತಿದ್ದರು.
(ಪೂ ಆಚಾರ್ಯರ ಪರಮಾನುಗ್ರಹದಿಂದ ಆರಂಭದ ನಾಲ್ಕು ತಿಂಗಳು ನಡೆದ ಉಪನ್ಯಾಸದಲ್ಲಾಗಲಿ, ಈ ಉಪನ್ಯಾಸದ ಮೊದಲ ಹತ್ತು ವರ್ಷಗಳಲ್ಲಿ ಭಾಗವಹಿಸುವ ಸೌಭಾಗ್ಯ ನನ್ನದೂ ಆಗಿತ್ತು.)
*ವಿಮರ್ಷೆಗಳು*
ಮಹಾಭಾರತಕ್ಕೆ ಬಂದ ಅನೇಕ ವ್ಯಾಖ್ಯಾನಗಳು. ಒಬ್ಬೊಬ್ಬರಿಗೆ ಒಂದೊಂದು ತರಹ ತೋರಿದ ವ್ಯಕ್ತಿತ್ವಗಳು. ಈಗಿನ ಕಾಲದ ಅನೇಕ ಕಾದಂಬರಿಗಳು. ಅವುಗಳಲ್ಲಿ ತೋರಿದ ವಿಚಿತ್ರ ಸನ್ನಿವೇಶಗಳು, ಅವುಗಳ ವಿಮರ್ಷೆ ಊಹಾತೀತವಾಗಿರುತ್ತಿತ್ತು. ಮಹಾಭಾರತದ ಮೇಲೆ ಬಂದ ನೂರಾರು ನೂರಾರುತರಹದ ಆಕ್ಷೇಪಗಳು. ಅವುಗಳಿಗೆ ಕೊಡುವ ಸಮಂಜಸವಾದ ವಿಶಿಷ್ಟರೀತಿಯ ಸಮಾಧಾನಗಳು ಅದ್ಭುತವಾಗಿರುತ್ತಿತ್ತು.
*ಇಂದು ನಡೆದ ಮಂಗಳಾನುವಾದ*
ಇಂದಿನ ಮಹಾಭಾರತದ ಮಂಗಳ ಅನುವಾದವಂತೂ ಅತ್ಯಂತ ಪರಮ ವೈಭವದ್ದೇ ಸರಿ. ಕೃಷ್ಣನ ದೃಷ್ಟಿಕೋನದಲ್ಲಿ ಧರ್ಮ ಯಾವದು ? ಅಧರ್ಮವೂ ಧರ್ಮವಾಗಬಹುದೆ ? ಈ ವಿಷಯಗಳ ವಿಮರ್ಷೆ ನಿರ್ಣಯ ಅತ್ಯದ್ಭುತ. ಪಾಂಡವರು ಗೆಲ್ಲಲೇಬೇಕೆಂಬ ಕೃಷ್ಣನ ಹಠ, ಭೀಮಸೇನದೇವರ ಧರ್ಮಸಂರಕ್ಷಣೆ ಇತ್ಯಾದಿ ಹಲವಾರು ಅಪರೂಪದ ನೂರಾರು ವಿಷಯಗಳನ್ನೆಲ್ಲ ಬಹಳ ಸ್ಪಷ್ಟಪಡಿಸಿ ನಮಗೆಲ್ಲ ಪರಮಾನುಗ್ರಹಿಸಿದರು. ಈ ಸುದೀರ್ಘವಾದ ಮಹಾಭಾರತ ವ್ಯಾಖ್ಯಾನರೂಪ ಮಾಹಾ ತಪಸ್ಸನ್ನು ಪರಮಪೂಜ್ಯ ಪರಮಾಚಾರ್ಯರ ಅಡೆದಾವರೆಗಳಲ್ಲಿ ಸಮರ್ಪಸಿದರು.
ಪೂ ಆಚಾರ್ಯರ ಈ ಸುದೀರ್ಘವಾದ ತಪಸ್ಸನ್ನು ನೋಡಿ ಪರಮಪೂಜ್ಯ ಮಹಾಸ್ಬಾಮಿಗಳು ಪೂರ್ಣವಾಗಿ ಹರಿಸಿ ಅನುಗ್ರಹಿಸಿದರು.
*ವೈಶ್ವಾನರಯಜ್ಙ*
ತತ್ವಜ್ಙಾನಕ್ಕೆ ಆವಶ್ಯಕವಾದ ಶುದ್ಧ ಆಹಾರ. ಈ ಚಾತುರ್ಮಾಸ್ಯದಲ್ಲಿ ಅತ್ಯಂತ ಪರಿಶುದ್ಧವಾದ ಅನ್ನವಿತ್ತು. ಮೊದಲನೇಯದ್ದು ಎಂಭತ್ತು ವರ್ಷದಿಂದ ನಿರಂತರ ಅನ್ನದಾನ ನಡೆಯುವಸ್ಥಳ. ೪೦ ವರ್ಷದಿಂದ ಅನ್ನದಾನ ವಿದ್ಯಾದಾನ ಮಾಡುವ ಪೂ ಆಚಾರ್ಯರ ಯಾಜಮಾನ್ಯ. ಪರಮಪೂಜ್ಯ ಮಹಾಸ್ವಾಮಿಗಳು ಮಾಡಿದ ರಾಮದೇವರ ನೈವೇದ್ಯ. ಪರಿಚಾರಕರು ಸುಧಾದಿ ಗ್ರಂಥಗಳ ಅಧ್ಯಯನ ಮಾಡಿದ ವಿದ್ವಾಸರಗಳು. ಹೀಗಿರುವಾಗ ಅನ್ನದ ಶುದ್ಧತೆ ಎಷ್ಟು ಮಟ್ಟದಲ್ಲಿ ಇರಬಹುದು ಎಂದು ಊಹಿಸಲೂ ಅಸಾಧ್ಯ. ಅತ್ಯಂತ ರುಚಿರುಚಿಯಾದ ಸಮೃದ್ಧವಾದ ಭಾಗವತಾದಿ ಗ್ರಂಥಗಳ ಶ್ರವಣದೊಂದಿಗೆ ವೈಶ್ವಾನರಯಜ್ಙ.
*ಸಂಗೀತೋತ್ಸವ*
ಸರಿಯಾಗಿ ಊಟ ಮುಗಿದ ಕೆಲ ನಿಮಿಷಗಳಲ್ಲೇ ದೇಶದ ಉದ್ದಗಲದ ವಿವಿಧ ಸಂಗೀತಕಾರರಿಂದ ನಾಮಸ್ಮರಣ.
*ಸಾಯಂ ಉಪನ್ಯಾಸ...*
ಸಂಗೀತ ಮುಗಿದ ಕ್ಷಣದಲ್ಲೆ ಪುನಃ ವಿವಿಧ ವಿದ್ವಾಂಸರುಗಳಿಂದ ವಿವಿಧ ವಿಷಯಗಳ ಮೇಲೆ, ವಿವಿಧತರಹದಿಂದ ಉಪನ್ಯಾಸ. ಮಧ್ಯೆ ಮಧ್ಯೆ ಪಂ ವಿಶ್ವಪ್ರಜ್ಙಾಚಾರ್ಯರಿಂದ ಹೊಸಹೊಸ ವಿಷಯಗಳ ಚುಟುಕು ಉಪನ್ಯಾಸಗಳ ರಸದೌತಣ.
*ಮಹಾಸ್ವಾಮಿಗಳ ಅನುಗ್ರಹೋತ್ಸವ*
ಶ್ರೀಶ್ರೀವೇದವರ್ಧನ ತೀರ್ಥಶ್ರೀಪಾದಂಗಳವರಿಂದ ಬಹಳ ಸುಂದರವಾಗಿ ಸರಳವಾಗಿ ಮನೋಜ್ಙವಾಗಿ ವಾಯುಸ್ತುತಿಯ ಅರ್ಥವನ್ನು ಬಹಳ ಚೊಕ್ಕಾಗಿ ಶ್ರೀಮದಾಚಾರ್ಯರ ಅನುಗ್ರಹ ಆಗುವಂತೆ ಹರಿಸಿ ಅನುಗ್ರಹಿಸಿದರು.
*ಶ್ರೀಸತ್ಯಾತ್ಮತೀರ್ಥರ ದಿವ್ಯ ಸಂದೇಶ*
ಮಹಾಭಾರತದ ದಿವ್ಯ ಸಂದೇಶಗಳನ್ನು ಭಕ್ತಕೋಟಿಗೆ ದಾರಿದೀಪವಾಗಿದ್ದವು. ಪಾಪಪರಿಹಾರಕವಾಗಿದ್ದವು. ಪುಣ್ಯಪ್ರದವಾಗಿದ್ದವು. ಒಂದೊಂದವಿಷಯವೂ ಪರಮಸುಂದರ. *ಅಂತೇಷು ರೇಮಿರೇ ಧೀರಾಃ* ಎಂಬ ಶ್ಲೋಕದ ಅರ್ಥವನ್ನು ನೂರಾರು ತರಹದಿಂದ ಅರ್ಥಗಳನ್ನು ತಿಳಿಸುತ್ತಾ ಅನುಗ್ರಹಿಸಿದರು. ಪ್ರೋಷ್ಠಪದೀ ನಿಮಿತ್ತ ಭಾಗವತದ ಕೃಷ್ಣನ ದಿವ್ಯವಾದ ಕಥೆಗಳು ತಿಳಿಸುವ ಮುಖಾಂತರ ಮತ್ತೆ ಅನುಗ್ರಹೋನ್ಮುಖರಾದರು. ಮಾರ್ಗದರ್ಶನ, ಆದೇಶ, ಕಳಕಳಿ, ಇತ್ಯಾದಿಗಳಿಂದ ಕೂಡಿದ ಶ್ರೀಗಳವರ ಅನುಗ್ರಹ ಸಂದೇಶ ಅದ್ಭುತವೇ ಸರಿ. ಸ್ವಾಮಿಗಳ ಅನುಗ್ರಹ ಸಂದೇಶ ಮುಗಿದಾಗ ರಾತ್ರಿ ಹತ್ತು ಗಂಟೆಯಾಗಿರುತ್ತಿತ್ತು.
ಈ ರೀತಿಯಲ್ಲಿ ಬೆಳಿಗಿನ ಝಾವಾ ೫ ಗಂಟೆಗೆ ಆರಂಭವಾದ ತತ್ವಜ್ಙಾನ ರಾತ್ರಿ ಹತ್ತರವೆರೆಗೂ ಜರುತ್ತಿತ್ತು ಎಂದರೆ *ಈ ಚಾತುರ್ಮಾಸ್ಯ "ತತ್ವಜ್ಙಾನ ಚಾತುರ್ಮಾಸ್ಯ"* ಎಂದರೇನೇ ವೈಭವ ಇರುತ್ತದೆ. ಈ ರೀತಿಯಾದ ವೈಭವದ " ತತ್ವಜ್ಙಾನ ಚಾತುರ್ಮಾಸ್ಯ"ವನ್ನು ಅತ್ಯಂತ ಯಶಸ್ವಿಯಾಗಿ ವೈಭವದಿಂದ ಪೂ ಆಚಾರ್ಯರ ಹಾಗೂ ಪಂ ವಿಶ್ವಪ್ರಜ್ಙಾಚಾರ್ಯರ ಯಾಜಮಾನ್ಯ ಮಾರ್ಗದರ್ಶನದಲ್ಲಿ ಅತ್ಯಂತ ವಿಜೃಂಭಣೆಯಿಂದ ವೈಭವದಿಂದ ಜರುಗಿತು.
*✍🏽ನ್ಯಾಸ..*
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ
Comments