ನಮ್ಮ ನಾಡು..*

 *ನಮ್ಮ ನಾಡು..*


ಅಂತರ್ನಿಹಿತ ಪಶುಭಾವದ ತೃಪ್ತಿಗಾಗಿ ಸದಾ ತೊಯ್ದಾಡುವ ಮಾನವನಿಗೆ ಮನಶ್ಶಾಂತಿ ನೀಡುವ ನೀಡುವ ತತ್ವಜ್ಙಾನ, ನೀತಿ ಅಧ್ಯಾತ್ಮಗಳ ತವರು ನಮ್ಮ ಸಿದ್ಧಾಂತ ..


ಮಾನವ ತಾ ತನ್ನ ಪಾಶವೀಯ ಮೇಲ್ಮಸುಗನ್ನು ಕಿತ್ತೆಸೆದು, ತನ್ನ ಜನ್ಮ ಮೃತ್ಯುರಹಿತ ಆನಂದಮಯ ಆತ್ಮ ರೂಪದಲ್ಲಿ ನಿರಂತರ ತನ್ನನ್ನು ತಾ ಕಂಡುಕೊಳ್ಳುವಂಥ ಸರ್ವವಿದ್ಯೆಗಳ ಸಾಧನಾ ಸ್ಥಳ ನಮ್ಮ ಭಾರತ.


ಸುಖಭೋಗಗಳನ್ನುಂಡು, ಅದಕ್ಕಿಂತೂ ಹೆಚ್ಚಾಗಿ ದುಃಖದ ನಂಜು ನುಂಗಿ, ಕಡೆಗೆ ಅವೆಲ್ಲ ಅಸಾರ ಅನುಪಯುಕ್ತ ಎಂಬ ಭಾವನೆ ಅನುಭವಿಸಕ್ಕಿಂತಲೂ ಮೊದಲಿಗೇ ತಿಳಿಸಿದ ಭೂಮಿ ನಮ್ಮ ಭಾರತ..


ನವ ಯವ್ವನದ ಮದ, ಮದುಯುಕ್ತ ವಿಲಾಸಿ ಜೀವನ, ಆ ಭವ್ಯ ಜೀವನದ ಅಮಲಿನಲ್ಲಿ ಮುಳುಗುವದಕ್ಕೂ ಪೂರ್ವದಲ್ಲೆ ಇದು ಅನುಪಯುಕ್ತ, ಅತ್ಯಂತ ಹೇಯ ಅಂತ ಸಾರಿದ ಭೂಮಿ ನಮ್ಮ ಭಾರತ.


ಭವಸಾಗರ. ಇದರಲ್ಲಿ ನೋವು ನಲಿವು, ಸಬಲತೆ ದುರ್ಬಲತೆ, ಸುಖ ದುಃಖ, ಸಮೃದ್ಧಿ ದಾರಿದ್ರಯ, ಸಾವು ಬದುಕು, ಪ್ರೇಮ ದ್ವೇಶ, ಪ್ರೀತಿ ಮಾತ್ಸರ್ಯ, ಇವೆ ಮೊದಲಾದ ಪ್ರಬಲ ಪ್ರವಾಹಗಳ ಮಧ್ಯದಲ್ಲಿಯೇ ನಿಸ್ಸೀಮ ಶಾಂತಿಯನ್ನು ಅರಹುವ ಏಕೈಕ ದೇಶ ಅದು ನಮ್ಮ ದೇಶ.


ಜ್ಙಾನದ ಮೇರುಗಳನ್ನು, ವಾಙ್ಮಯ ಗಂಗೆಗಳನ್ನು ಹರಿಸುವ ಮುಖಾಂತರ ಧರ್ಮದ ಭಯ ಹುಟ್ಟಿಸಿ, ಸನ್ಮಾರ್ಗದಲ್ಲಿ ಇರಿಸುವ ದೇಶ ನಮ್ಮ ದೇಶ.


ಎಂತಹ ದುಃಖಗಳು ಅಪ್ಪಳಿಸಿದರೂ , ಆ ದುಃಖದ ಮಧ್ಯದಲ್ಲಿಯೇ *ಸಣ್ಣದರಲ್ಲಿಯೇ ಆಯಿತು* ಎಂಬ ಸಮಾಧಾನದ ಸೂತ್ರವನ್ನು ತಿಳಿಸಿದ ದೇಶ. 


ಎನೆಲ್ಲವನ್ನುಬಪಡೆದರೂ ತಪಸದಸಿನಿಂದಲೇ ಪಡೆ. ಅದುವೇ ಸಾರ್ಥಕ. ತಪಸದಸಿಲ್ಲದ ಪದಾರ್ಥ ಬಿಸಲ್ಗುದರೆ ಇದ್ದಂತೆ ಎಂದು ಅರುಹಿದ ಸಾರಿದ ನಾಡು ನಮ್ಮ ನಾಡು.


ಗುರು ಹಿರಿಯರು ತಂದೆ ತಾಯಿ ಅತ್ತೆ ಮಾವ ದೇವತಾ ದೇವರು ಇವರಲ್ಲಿಯ ಗೌರವ ಆದರ, ಇವುಗಳಮುಖಾಂತರವೇ ನಮಗೆ ಹಿತ. ಇದುವೇ ಮುಖ್ಯಧ್ಯೇಯ ಎಂದು ಅರುಹಿ ತಿಳುಹಿಸಿ ಎಮ್ಮನ್ನು ನೃಶಂಸನನ್ನಾಗಿ ಮಾಡದ ನಾಡು ಎಮ್ಮ ನಾಡು. 


ಪುಣ್ಯ ಪಾಪಗಳೆಂಬ ದೊಡ್ಡ ವಿಷಯವನ್ನು ಒದಗಿಸಿ, ಸನ್ಮಾರ್ಗದಲ್ಲಿ , ಸಾತ್ವಿಕನನ್ನಾಗಿ ಇಡಲು ಹೊಣೆಹೊತ್ತ ನಾಡು ನಮ್ಮ ನಾಡು. 


ಯಾವೊಬ್ಬ ಜೀವನೂ use n throw ಅಲ್ಲ.  ಎಲ್ಲರನ್ನೂ ಆದರಿಸು. ಗೌರವಿಸು. ಪ್ರೀತಿಸು. ಎಂದೆ ಸಾರಿದ ನಾಡು ಎಮ್ಮ ನಾಡು. 


 ಭಕ್ತಿಯೊಂದರಲ್ಲಿಯೇ ದುಃಖಕಳೆದು, ಸುಖಪಡೆದು, ನೆಮ್ಮದಿಯ ಉಸಿರಾಡಿಸುವಂತೆ ಮಾಡುವ ನಾಡು ಎಮ್ಮ ನಾಡು.


ರಾಮ ಕೃಷ್ಣ ಹನುಮ ಭೀಮ ಕಪಿಲ ಧನ್ವಂತ್ರಿ ಅರ್ಜುನ ಪರೀಕ್ಷಿತ ಅಂಬರೀಷ ಮೊದಲಾದ ಮಹನೀಯರು ಆಳಿದ ದೇಶ. 


ಶ್ರೀಮದಾಚಾರ್ಯರು, ಟೀಕಾಕೃತ್ಪಾದರು, ವ್ಯಾದರಾಜರು, ರಘೂತ್ತಮರು, ರಾಘವೇಂದ್ರರು, ಯಾದವಾರ್ಯರು, ಪುರಂದರ ಕನಕ ವಿಜಯ ಮೊದಲಾದ ದಾಸವರೇಣ್ಯರು, ಶ್ರೀಸತ್ಯಾತ್ಮಾದಿ ಮಹಾ ಯತಿವರೇಣ್ಯರುಗಳು. ನಮ್ಮ ಪರಮ ಗುರುಗಳು (ಮಾಹುಲೀ ಆಚಾರ್ಯರು) ಮುಂತಾದ ಮಹಾ ಮಹಾ ತಪಿಸ್ವಿ , ಜ್ಙಾನಿ,  ಧ್ಯಾನಿ, ಸಿದ್ಧಪುರುಷರನ್ನು ನೀಡಿದ ದೇಶ ನಮ್ಮ ದೇಶ.


ಸಾಧನೆ ಮಾಡಿಕೊಂಡರೆ ವೈಕುಂಠವನ್ನೇ ಒದಗಿಸುವ ದೇಶದಲ್ಲಿ, ಇಂತಿಂಥ ಗುರುಗಳ ದೇವತೆಗಳ ಸನ್ಮಾರ್ಗದಲ್ಲಿ ಅವರೆಲ್ಲರ ಛಾಯಾಛತ್ರದಲ್ಲಿ ಬಂದ ನಾವೇ ಧನ್ಯರು. ಸೌಭಾಗ್ಯವಂತರು. 


*✍🏼✍🏼✍🏼ನ್ಯಾಸ*

Comments

Anonymous said…
ಅದ್ಭುತವಾದ ಬರವಣಿಗೆ ಆಚಾರ್ಯರೆ🙏🙏🙏🙏🙏❤️❤️❤️❤️❤️
Anonymous said…
Beautiful writing acharya re❤️❤️❤️����������
Anonymous said…
Super dear❤️
Anonymous said…
Super..👌👌
Anonymous said…
ಅದ್ಭುತ್ ನಿಮ್ಮ ಬರಹ👌👌👌👌👌👌

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*