Posts

Showing posts from May, 2024

ನಮ್ಮ ನಾಡು..*

 *ನಮ್ಮ ನಾಡು ..* ಅಂತರ್ನಿಹಿತ ಪಶುಭಾವದ ತೃಪ್ತಿಗಾಗಿ ಸದಾ ತೊಯ್ದಾಡುವ ಮಾನವನಿಗೆ ಮನಶ್ಶಾಂತಿ ನೀಡುವ ನೀಡುವ ತತ್ವಜ್ಙಾನ, ನೀತಿ ಅಧ್ಯಾತ್ಮಗಳ ತವರು ನಮ್ಮ ಸಿದ್ಧಾಂತ .. ಮಾನವ ತಾ ತನ್ನ ಪಾಶವೀಯ ಮೇಲ್ಮಸುಗನ್ನು ಕಿತ್ತೆಸೆದು, ತನ್ನ ಜನ್ಮ ಮೃತ್ಯುರಹಿತ ಆನಂದಮಯ ಆತ್ಮ ರೂಪದಲ್ಲಿ ನಿರಂತರ ತನ್ನನ್ನು ತಾ ಕಂಡುಕೊಳ್ಳುವಂಥ ಸರ್ವವಿದ್ಯೆಗಳ ಸಾಧನಾ ಸ್ಥಳ ನಮ್ಮ ಭಾರತ. ಸುಖಭೋಗಗಳನ್ನುಂಡು, ಅದಕ್ಕಿಂತೂ ಹೆಚ್ಚಾಗಿ ದುಃಖದ ನಂಜು ನುಂಗಿ, ಕಡೆಗೆ ಅವೆಲ್ಲ ಅಸಾರ ಅನುಪಯುಕ್ತ ಎಂಬ ಭಾವನೆ ಅನುಭವಿಸಕ್ಕಿಂತಲೂ ಮೊದಲಿಗೇ ತಿಳಿಸಿದ ಭೂಮಿ ನಮ್ಮ ಭಾರತ.. ನವ ಯವ್ವನದ ಮದ, ಮದುಯುಕ್ತ ವಿಲಾಸಿ ಜೀವನ, ಆ ಭವ್ಯ ಜೀವನದ ಅಮಲಿನಲ್ಲಿ ಮುಳುಗುವದಕ್ಕೂ ಪೂರ್ವದಲ್ಲೆ ಇದು ಅನುಪಯುಕ್ತ, ಅತ್ಯಂತ ಹೇಯ ಅಂತ ಸಾರಿದ ಭೂಮಿ ನಮ್ಮ ಭಾರತ. ಭವಸಾಗರ. ಇದರಲ್ಲಿ ನೋವು ನಲಿವು, ಸಬಲತೆ ದುರ್ಬಲತೆ, ಸುಖ ದುಃಖ, ಸಮೃದ್ಧಿ ದಾರಿದ್ರಯ, ಸಾವು ಬದುಕು, ಪ್ರೇಮ ದ್ವೇಶ, ಪ್ರೀತಿ ಮಾತ್ಸರ್ಯ, ಇವೆ ಮೊದಲಾದ ಪ್ರಬಲ ಪ್ರವಾಹಗಳ ಮಧ್ಯದಲ್ಲಿಯೇ ನಿಸ್ಸೀಮ ಶಾಂತಿಯನ್ನು ಅರಹುವ ಏಕೈಕ ದೇಶ ಅದು ನಮ್ಮ ದೇಶ. ಜ್ಙಾನದ ಮೇರುಗಳನ್ನು, ವಾಙ್ಮಯ ಗಂಗೆಗಳನ್ನು ಹರಿಸುವ ಮುಖಾಂತರ ಧರ್ಮದ ಭಯ ಹುಟ್ಟಿಸಿ, ಸನ್ಮಾರ್ಗದಲ್ಲಿ ಇರಿಸುವ ದೇಶ ನಮ್ಮ ದೇಶ. ಎಂತಹ ದುಃಖಗಳು ಅಪ್ಪಳಿಸಿದರೂ , ಆ ದುಃಖದ ಮಧ್ಯದಲ್ಲಿಯೇ *ಸಣ್ಣದರಲ್ಲಿಯೇ ಆಯಿತು* ಎಂಬ ಸಮಾಧಾನದ ಸೂತ್ರವನ್ನು ತಿಳಿಸಿದ ದೇಶ.  ಎನೆಲ್ಲವನ್...

ಇರುವದೆಲ್ಲವನ್ನೂಅಭಿವ್ಯಕ್ತಗೊಳಿಸುವದು ಮನಸ್ಸು*

Image
 * ಇರುವದೆಲ್ಲವನ್ನೂಅಭಿವ್ಯಕ್ತಗೊಳಿಸುವದು ಮನಸ್ಸು*  ಮನಸ್ಸು ಇದೊಂದು ಅಮೂಲ್ಯವಾದ ಪದಾರ್ಥ. ಒಂದು ಬಾರಿ ಮನಸ್ಸಿನಲ್ಲಿ ಏನೋ ಒಂದು ವಿಷಯ, ಯಾವುದೋ ರೀತಿಯಲ್ಲಿ ಒಳ ಸೇರಿತೋ ಅದು ಮನಸ್ಸಿನಲ್ಲಿ  ಸಂಸ್ಕಾರ ರೂಪದಿಂದ ಶಾಶ್ವತವಾಗಿ ಉಳಿದು ಬಿಡುತ್ತದೆ.  ಮನಸ್ಸಿನಲ್ಲಿ ಒಮ್ಮೆ ಒಂದು ವಿಷಯ ಸೇರಿತು ಎಂದಾದರೆ ಆ ವಿಷಯವೆಂಬ ಹುಳ ಒಳಗೆ ಕೊರೆಯಲು ಆರಂಭಿಸುತ್ತದೆ.  ಆ ವಿಷಯವನ್ನು ಒಳಗೇ ಇಟ್ಟು ಕೊಳ್ಳುತ್ತೇನೇ ಎಂಬುವದೂ ಅಸಾಧ್ಯದ ಮಾತೆ. ಒಂದಿಲ್ಲ ಒಂದು ರೂಪದಿಂದ ಅಭಿವ್ಯಕ್ತವಾಗಲೇ ಬೇಕು. ಆಗಿಯೇ ಆಗುತ್ತದೆ. ಸಕಾರಾತ್ಮಕ ವಿಷಯಗಳು ಮನಸ್ಸಿನಲ್ಲಿ ಸೇರಿದ್ದರೆ, ಸಾಕಾರಾತ್ಮಕ ವಿಚಾರಗಳೇ ಹೊರಬರುತ್ತವೆ. ನಕಾರಾತ್ಮಕ ವಿಷಯಗಳು ಸೇರಿದ್ದರೆ ನಕಾರಾತ್ಮಕ ವಿಚಾರಗಳೇ ಅಭಿವ್ಯಕ್ತವಾಗುವದು.  ಗುರು ದೇವತಾ ದೇವರುಗಳ, ಧರ್ಮ ಶಾಸ್ತ್ರ, ತಂದೆ ತಾಯಿ ಅತ್ತೆ ಮಾವ, ಅಕ್ಕ ತಂಗಿ, ಅಣ್ಣ ತಮ್ಮ, ಆತ್ಮೀಯರು ಹಿತೈಷಿಗಳು ಇತ್ಯಾದಿ ಅಂತರಂಗದ ಅಥವಾ ಬಹಿರಂಗದ ವ್ಯಕ್ತಿಗಳ ವಿಷಯಕ ಸಕಾರಾತ್ಮಕ positive ವಿಷಯಗಳು ಸೇರಿದ್ದರೆ ಸಕಾರಾತ್ಮಕವಾಗಿಯೇ ಮಾತಾಡುವ. ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ. ನಕಾರಾತ್ಮಕ negative ಆಗಿದ್ದರೆ ನಕಾರಾತ್ಮಕವಾಗಿಯೇ. ಒಂದಂತೂ ನಿಶ್ಚಿತ ಅಭಿವ್ಯಕ್ತಗೊಳಿಸದೇ ಇರಲಾರ.  ಒಂದು ಸುಂದರ ಉದಾಹರಣೆ. ಒಂದು ಹಣ್ಣು ಚಿಕ್ಕು ತೆಗೆದುಕೊಂಡು ಅದನ್ನು ಹಿಂಡೋಣ , ಹಿಂಡಿದಾಗ ಬರುವ ರಸವೇನು ?? ಸಿಹಿಯಾದ ...

ಆಯುಧಗಳಿವೆ - ಉಪಯೋಗಿಸುತ್ತಿಲ್ಲವೇಕೆ... ??*

Image
 *ಆಯುಧಗಳಿವೆ -  ಉಪಯೋಗಿಸುತ್ತಿಲ್ಲವೇಕೆ... ??* ಓ ಆಯುಧ !! ಪ್ರತಿಯೊಂದು ಆಪತ್ತಿಗೂ ನೀನೇ ಒಂದು ದೊಡ್ಡ ಆಯುಧ, ನೀನು ಎನ್ನ ಬಳಿ ಇರಲಾಗಿ ನಿನ್ನನ್ನೂ ಬಳಿಸದೆ ಬಿಟ್ಟರೆ ನನಗೆ ಸೋಲಲ್ಲದೇ ಮತ್ತಿನ್ನೇನೂ.....  ಒಂದೇ ಏಟಿಗೆ ಇಷ್ಟೊಂದು ಪರೀಕ್ಷೆಗಳು ಎದುರಾದರೆ ನಾನೇನು ಮಾಡಲು ಸಾಧ್ಯ... ??? ಈ ಪ್ರಶ್ನೆ ಆಪತ್ತಿನಲ್ಲಿ ಸಿಲುಕಿದ ಎಲ್ಲರದೂ ಆಗಿರುವದೇ. ನನಗೂ ಅನೇಕಬಾರಿ ಬಂದದ್ದೂ ಇದೆ...  ಗುಬ್ಬಚ್ಚಿಯ ಹಾಗೆ ಕಾಸು ಕಾಸು ಗೂಡಿಸಿದೆ, ಸಾಲ ತಗೆಸಿದೆ ಕೊನೆಗೆ  ಮನೆ ಕಟ್ಟಿದೆ.  ಭರ್ಜರಿ ವಾಸ್ತು ಮಾಡಿದೆ. ಮನೆ ಆಯಿತು ಕೆರಿಯರ್ ಸೆಟ್ ಮಾಡ್ಕೋಬೇಕು ಅಂದೆ..  ಅಷ್ಟರಲ್ಲೆ ಮಕ್ಕಳು ಆದರು. ಕೈಲಿ ಹಣವಿಲ್ಲ. ಬಂದ ಎಲ್ಲ ದುಡ್ಡು ಸಾಲದ ಕಂತಿಗೇ ಹೋಗುತ್ತದೆ. ಈ ಪ್ರಸಂಗದಲ್ಕೇ ಟ್ರಾನ್ಸ್ಫರ್ ಆಯ್ತು.. ಎಕ್ಸ್ಟ್ರಾ ದುಡಿಯೋಣ ಅಂದರೆ ಮನೆಯಲ್ಲಿ ಕಿರಿಕಿರಿ.  ನನ್ನಿಂದ ಉಪಯೋಗವಿಲ್ಲ ಎಂದಾಕ್ಷಣಕ್ಕೆ ನನ್ನ ಆತ್ಮೀಯರೆಲ್ಲರೂ ಪಲಾಯನ ಮಾಡಿದರು.   ಹೀಗೆ ಮನೆಯಲ್ಕಿ ಒಂದರಮೇಲೆ ಒಂದು ಸಮಸ್ಯೆ.. ಈ ಸಮಸ್ಯೆಗಳು ನನ್ನ ಮೆಲೆಯೇ ಯಾಕೆ ಬರುತ್ತವೆ... ?? ಒಮ್ಮೆಲೆ ಈ ಸಮಸ್ಯೆಗಳು ಎಗರಿಬಂದರೆ ನಾನಾದರೂ ಏನು ಮಾಡಲಿ... ??? ಆ ದೇವರಿಗೆ ಸ್ವಲ್ಪಾನೂ ಕರುಣೆ ಇಲ್ಲವೆ.. ?? ಛೇ ನನ್ನ ಜನ್ಮಕ್ಕಿಷ್ಟು...  ಮಜಾ ಏನೆಂದರೆ ಇಷ್ಟೆಲ್ಲ ಒದ್ದಾಡು ಮನುಷ್ಯ ಸಮಸ್ಯೆಗಳ ಪರಿಹಾರದ ಬಗ್ಗೆ ಒಂದು ಕ್ಷಣವೂ ಯೋಚಿ...

ಚೈತ್ರದಲ್ಲಿ ಧೀರರ ಮೂರನೇಯ ಜೈತ್ರಯಾತ್ರೆ....*

Image
 *ಚೈತ್ರದಲ್ಲಿ ಧೀರರ ಮೂರನೇಯ ಜೈತ್ರಯಾತ್ರೆ....*  ಚೈತ್ರಮಾಸದ ಕೊನೆಯ ದಿನವಾದ ಅಮಾವಾಸಯೆಯ ಶುಭ ಅವಸರದಿ ಇಹ ಲೋಕದ ಭವ್ಯ ದಿವ್ಯ ಯಾತ್ರೆಯನ್ನು ಮುಗಿಸಿ ಪರಲೋಕದ ಯಾತ್ರೆಯನ್ನು ಆರಂಭಿಸಿದ ಮಹಾ ಚೇತನ ಸಿರಿವಾರದ ಜಯಣ್ಣ ಅವರು. ಪರಲೋಕದ ಯಾತ್ರೆ ಆರಂಭಿಸಿ ಇಂದಿಗೆ ಮೂರು ವರ್ಷಗಳಾಯ್ತು. ಪರಲೋಕದ ಯಾತ್ರೆ ಹೇಗೆ ನಡೆದಿದೆ ನಮಗೆ ತಿಳಿಯದು, ಈ ಲೋಕದಯಾತ್ರೆಯಲ್ಲಿ ಕೆಲ ವಿಷಯಗಳನ್ನು ತಿಳಿಯುವದು ನನ್ನ ಆದ್ಯ ಕರ್ತವ್ಯಗಳಲ್ಲಿ ಇದೂ ಒಂದಾಗಿದೆ.   ಸಮಕಾಲಿನ ಹಿರಿಯರು ತಿಳಿಸಿದ ಒಂದೆರಡು ಹೊಸ ವಿಷಯಗಳನ್ನು ತಿಳಿಯುವ ಪ್ರಯತ್ನ.  *ನಗು ಮೊಗದ ಸರದಾರ....* "ಸಮೃದ್ಧಿ ಇರುವಾಗಿನ ನಗು, ದಾರಿದ್ರ್ಯದಲ್ಲಿ ಮಾಸಿರುತ್ತದೆ" ಇದು ಇಂದಿನ ಸತ್ಯ. ಆದರೆ ಸಮೃದ್ಧಿಯ ಉತ್ತುಂಗದಲ್ಲಿ ಇರುವಾಗಲೂ, ದಾರಿದ್ರ್ಯದ ಪರಾಕಾಷ್ಠೆಯಲ್ಲಿ ಇರುವಾಗಲೂ ಏಕ ಪ್ರಕಾರದ ನಗುಮೊಗವೇನಿದೆ ಅದು *ವಿಷ್ಣುಪ್ರಿಯ* ನ ಸ್ವತ್ತು. ಅದುವೇ ಭಗವದಾರಾಧಕನ ವೈಭವ. ಈಭವದ ಸರದಾರ ಸಿರಿವಾರ ಜಯಣ್ಣ ಅವರು  ಎಂದರೆ ತಪ್ಪಾಗದು.  ದರಿದ್ರ ಸಿರಿವಂತನಾಗುವದು ಕಂಡಿದೆ, ಆದರೆ ಸಿರಿವಂತ ದರಿದ್ರನಾಗುವದು ತುಂಬ ವಿರಳ. ಆಗರ್ಭ ಶ್ರೀಮಂತಿಕಯಲ್ಲಿಯೇ ಹುಟ್ಟಿ ಬಂದ, ಕಡು ದಾರಿದ್ರ್ಯದಲ್ಲಿ ಕಾಲವಾದ ತುಂಬ ಅಪರೂಪದ ವ್ಯಕ್ತಿತ್ವದ ಸಾಧಕರು ಇವರು.  "ಅವರ ಆ ತೃಪ್ತಭಾದಿಂದ ಕೂಡಿದ, ಕೃತಜ್ಙತಾಭಾವವನ್ನೊಳಗೊಂಡ, ಉಪಕಾರ ಹಾಗೂ ದಯೆ ಇವುಗಳನ್ನು ಅನುಭವಿಸುವ ಮುಖಾಂತರ...