Posts

Showing posts from March, 2024

*ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ*

Image
 *ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ* ಐತಿಹಾಸಿಕ ಶ್ರೀಮನ್ಯಾಯಸುಧಾ ಮಂಗಳ  ೧) ತಮ್ಮ ಕೇವಲ ನಾಲವತ್ತನೇಯ ವಯಸ್ಸಿಗೆ ಏರಡನೇಯ ಮಂಗಳ‌ಮಹೋತ್ಸವ. ೨) ಏರಡನೇಯ ಸುಧಾಮಂಗಳದಲ್ಲಿಯೇ ಏಳು ಜನರಿಂದ ಸಮಗ್ರ ಶ್ರೀಮನ್ಯಾಯಸುಧಾ ಪರೀಕ್ಷೆ. ೩) ಎರಡೂ ಸುಧಾಮಂಗಳ ಸೇರಿಸಿ ಆರವತ್ತು ವಿದ್ಯಾರ್ಥಿಗಳಿಗೆ ಸುಧಾ ಪಾಠ ಹೀಗೆ ಹಲವಾರುಕಾರಣಗಳಿಂದ ತಮ್ಮ ಈ ಸುಧಾಮಂಗಳವನ್ನು ಐತಿಹಾಸಿಕವಾಗಿರಿಸಿದ್ದಾರೆ ಪಂ ವಿಶ್ವಪ್ರಜ್ಙಾಚಾರ್ಯರು.  ಆಗಮಿಸಿದ ಯತಿವರೇಣ್ಯರುಗಳು, ಆಹ್ವಾನಿತ ವಿದುಷರು, ಭಾಗವಹಿಸಿದ ಈ ಜನಸ್ತೋಮ ಇವುಗಳನ್ನು ಗಮನಿಸಿದರೆ ಈ ಮುಂಬಯಿಯಲ್ಲೂ ಇಷ್ಟು ಧಾರ್ಮಿಕ, ವಿಷ್ಣುಭಕ್ತ ಇದ್ದಾರೆ ಅವರಲ್ಲಿ ಯಾವ ಮಟ್ಟಿಗೆ ಧರ್ಮ ಜಾಗೃತಿ ಆಗಿರಬಹುದು ಎಂದು ಯೋಚಿಸಲೂ ಅಸಾಧ್ಯದ ಮಾತೇ.  ನೂರಾರು ಜನ ಪರೀಕ್ಷಕರು, ಅವರು ಕೇಳುವ ಪ್ರಶ್ನೆಗಳು, ವಿದ್ಯಾರ್ಥಿಗಳು ಕೊಡುವ ಥಟ್ಟನೆ ಉತ್ತರಗಳು ಇವುಗಳನ್ನು ಗಮನಿಸಿದರೆ ನಮ್ಮ ಗುರುಪುತ್ರರಾದ, ವೈಯಕ್ತಿಕವಾಗಿ ನನ್ನ ಅತ್ಯಂತ ಆತ್ಮೀಯ ಮಿತ್ರರೂ ಆದ ವಿಶ್ವಪ್ರಜ್ಙಾಚಾರ್ಯರ ಪರಿಶ್ರಮ, ತಪಸ್ಸು, ವಿದ್ಯಾರ್ಥಿವಾತ್ಸಲ್ಯ ವಿದ್ಯಾರ್ಥಿಗಳ ಮಹಿಮಾ ಹಾಗೂ ವಿದ್ಯಾರ್ಥಿಗಳ ಗುರುಭಕ್ತಿ ಇತ್ಯಾದಿಗಳಲ್ಲವೂ ಎದ್ದು ಬರುತ್ತಿತ್ತು.  ಮಂಗಳಾನುವಾದ  ಪಂ ವಿಶ್ವಪ್ರಜ್ಙಾಚಾರ್ಯರು ಮಂಗಳಾನುವಾದವನ್ನು ಶ್ರೀಮನ್ಯಾಯಸುಧಾ  ಹಾಗೂ ಟಿಪ್ಪಣಿಗಳಲ್ಲಿಯ ಎ...

*ಸುಧಾಯಾತ್ರೆ - ಸುಧಾ ಸತ್ರ*

Image
 *ಸುಧಾಯಾತ್ರೆ - ಸುಧಾ ಸತ್ರ*  ಯಾತ್ರೆಗಳು ಅನೇಕ, ಸತ್ರಗಳೂ ನೂರಾರು, ಆದರೆ ಅತ್ಯುತ್ತಮ ಯಾತ್ರೆ *ಶ್ರೀಮನ್ಯಾಯಸುಧಾ ಮಂಗಳ* ದ ಯಾತ್ರೆ. ಸತ್ರಗಳು ಸಾವಿರಾರು ಇದ್ದರೂ *ಶ್ರೀಮನ್ಯಾಯಸುಧಾ ಪರೀಕ್ಷೆಯ ಸತ್ರ* ವೇ ಸರ್ವೋತ್ತಮ ಸತ್ರ.  *ಸುಧಾ ಯಾತ್ರೆ ಉತ್ತಮವೇಕೆ...?* ಯಾತ್ರೆ ಎಂದರೆ ತೀರ್ಥ ಕ್ಷೇತ್ರಗಳ ಯಾತ್ರೆ. ಭಗವತ್ಸನ್ನಿಧಾನ ವಿಶೇಷ ಒಂದು ಕಾರಣವಾದರೆ, ಪುಣ್ಯ ಸಂಪಾದನೆಗೆ ಬಹಳ ಶ್ರೇಷ್ಠ ಮಾರ್ಗ ಎರಡನೇಯ ಕಾರಣ. ಈ ಎರಡೂ "ಸುಧಾಯಾತ್ರೆಯಲ್ಲಿ ಎಷ್ಟಿರಬಹುದು" ಎಂದು ಯೋಚಿಸಲು ತೊಡಗಿದರೆ ಹಯಬ್ವೇರಿಸಬೇಕೇ ಹೊರತು ಆದಿ ಅಂತ ಕಾಣುವದಿಲ್ಲ.  *ಸುಧಾಯಾತ್ರೆಗೆ ಫಲಗಳೇನು .. ?? ಫಲವೆಷ್ಟು...??* ಕೆಲ ತೀರ್ಥಯಾತ್ರೆ ಪುಣ್ಯ ಸಂಪಾದನೆ ಮಾಡಿಸಬಹುದು. ಇನ್ನನೇಕ ಯಾತ್ರೆಗಳು ಅರ್ಥಾದಿಗಳನ್ನು ಒದಗಿಸಬಹುದು. ಆದರೆ ಈ "ಸುಧಾಯಾತ್ರೆ"ಧರ್ಮಾದಿ ಮೋಕ್ಷಾಂತ ಎಲ್ಲ ಪುರುಷಾರ್ಥಗಳಿಗೆ ಕಾರಣವಾಗಿದೆ.  ಅಡವೀ ಆಚಾರ್ಯರು ತಮ್ಮ ಸ್ತೋತ್ರದಲ್ಲಿ ತಪಸ್ವಿಗಳ ಫಲ ಒಂದು ವಾಕ್ಯದ ಅಧ್ಯಯನದಿಂದ ಒದಗುತ್ತದೆ. ಗುರು ಸೇವೆ ಮಾಡಿದ ಫಲ, ತೀರ್ಥಯಾತ್ರೆ ಮಾಡಿದ ಫಲ, ವನವಾಸದ ಫಲವೇನಿದೆ ಆಫಲ, ವಿಹಿತ ಸಕಲ ಕರ್ಮಗಳ ಫಲ, ವೇದೋಕ್ತ ಭಗವದಜ್ಝಾನವೇ ಮೊದಲಾದ ಫಲ,  ಹೀಗೆ ಹತ್ತಾರು ಫಲಗಳನ್ನು ತಿಳಿಸುತ್ತಾರೆ. ಆದ್ದರಿಂದಲೂ ಯಾತ್ರೆಗಳಲ್ಲಿ ಸರ್ವೋತ್ತಮ ಯಾತ್ರೆ *ಸುಧಾಯಾತ್ರೆ....*  *ಸುಧಾ ಸತ್ರ....*  ಅನ್ನ ಸತ್ರ, ಜಲಸತ್ರ, ಜ್...