* ಅನಿಷ್ಟ ಪರಿಹರಿಸಿಕೊಳ್ಳಲು, ಪುಣ್ಯಘಳಿಸಲು ಒಂದು ಸದವಕಾಶ*


 *ಪಾಪ ಪರಿಹರಿಸಿಕೊಳ್ಳಲು ಪುಣ್ಯಘಳಿಸಲು  ಒಂದು ಸದವಕಾಶ*


ಜೀವನ ಸರ್ವಸ್ವಕ್ಕೆ ಕಾರಣ ಪುಣ್ಯಪಾಪಗಳು. ನಿತ್ಯ ಪುಣ್ಯ ಸಂಪಾದಿಸಬೇಕು. ಪಾಪಗಳನ್ನು ಪರಿಹರಿಸಿಕೊಳ್ಳಬೇಕು. ಆದರೆ.....


ಒತ್ತಡವೋ, ಆಲಸ್ಯವೋ, ತಾತ್ಸಾರವೋ, ಅನಾಸಕ್ತಿಯೋ, ಅವಿಶ್ವಾಸನೋ ತಿಳಿಯದು ಅಂತೂ ನಿತ್ಯ ಪುಣ್ಯ ಸಂಪಾದನೆಯಾಗುವದಿಲ್ಲ ಇದು ಅತ್ಯಂತ ನಿಶ್ಚಿತ. 


ಪಾಪದಲ್ಲಿ ಅಭಿರುಚಿಯೋ, ತೃಪ್ತಿಸಿಗತ್ತೆ ಎಂಬ ಸಂತೋಷವೋ, ಪಾಪ ಮಾಡಿದರೆ ಏನಾಗತ್ತೆ ಎಂಬ ಭಂಡ ಧೈರ್ಯವೋ ಅತ್ಯಂತ ಅನಾಯಾಸವಾಗಿ ನಿತ್ಯವೂ ಪಾಪಗಳು ಘಟಿಸುತ್ತಾ ಹೋಗುತ್ತವೆ ಇದುವೂ ಅಷ್ಟೇ ನಿಶ್ಚಿತ. 


ನಿತ್ಯವೂ ಪಾಪಗಳನ್ನು ಪರಿಹರಿಸಿಕೊಳ್ಳುತ್ತಾ ಪುಣ್ಯ ಸಂಪಾದನೆಯ ಮಾರ್ಗವನ್ಬು ಅವಲಂಬಿಸಿದಿದ್ದರೂ ಕನಿಷ್ಠ ಕೆಲವೊಂದು ದಿನವಾದರೂ ಅನುಸರಿಸಲಿ, ಅಂದು ದುಪ್ಪಣ್ಯಕೊಡುವೆ ಎಂಬುವದು ದೇವರ ಸಂಕಲ್ಪವೋ ಏನೋ ಕೆಲವೊಂದು ದಿನಗಳನ್ನು ಮೀಸಲು ಇಟ್ಟಿದ್ದಾನೆ. 


ಆ ದಿನಗಳು ಎಂದರೆ *ಪ್ರತಿ ಹದಿನೈದು ದಿನಕ್ಕೊಮ್ಮೆ ಬರುವ ಏಕಾದಶೀ ಉಪವಾಸಗಳು, ಪ್ರತಿ ತಿಂಗಳಿನ ಸಂಕ್ರಮಣಗಳು, ಆರು ತಿಂಗಳಿಗೊಮ್ಮೆ ಬರುವ ೨ ಮುಖ್ಯ ಸಂಕ್ರಮಣಗಳು, ಆಗಾಗ ಬರುವ ಪರ್ವಕಾಲಗಳು, ಗ್ರಹಣ, ಮಗು ಜನಿಸುವಕ್ಷಣದ ಕಾಲ, ಗುರುಗಳ ಆರಾಧನೆಯ ಪ್ರಸಂಗ, ಹಬ್ಬ ಹರಿದಿನಗಳು* ಇತ್ಯಾದಿಯಾಗಿ ಮೀಸಲು ಇಟ್ಟಿದ್ದಾನೆ. ಆ ಆ ದಿನಗಳಂದು ಮಾಡುವ ಸಾಧನೆ ನೂರಾರುಪಟ್ಟು ಹೆಚ್ಚಿನ ಫಲ ದೊರೆಯುತ್ತದೆ. ಮಹಾಮಹಾ ಪಾಪಗಳ ನಾಶವೂ ಆಗುತ್ತದೆ. 


ಈಗ ಪ್ರಕೃತ ಇಂದು ರಾತ್ರಿ ಚಂದ್ರಗ್ರಹಣವಿದೆ. ಆ ಗ್ರಹಣದ ಪ್ರಸಂಗದಲ್ಕಿ ಮಾಡುವ *ಸ್ನಾನ, ಜಪ, ದಾನ, ಪಾರಾಯಣ, ಪೂಜೆ, ಗುರುಪೂಜೆ, ಹೋಮ, ನವಗ್ರಹ ಪೂಜೆ,  ನಮಸ್ಕಾರ, ವಿಧಿನಿಷೇಧಾಚರಣೆ ಇತ್ಯಾದಿಗಳಿಂದ ಮಹಾ ಮಹಾ ಫಲವಿದೆ, ಸರ್ವಪಾಪಗಳ ಪರಿಹಾರವೂ ಇದೆ ಎಂದು ಶಾಸ್ತ್ರ ಸಾರುತ್ತದೆ. ಇಂದು ಎಷ್ಟು ಸಾಧ್ಯವಿದೆಯೋ ಅಷ್ಟು ಸಾಧಿಸಿಕೊಳ್ಳೋಣ.


ಇಂದು ಇದೆಲ್ಲ ಮೂಢನಂಬಿಕೆ ಎಂದು ಹೇಳಿ ಬೇಕು ಎಂದೇ ಇಂದಿನ ದಿನ ವ್ಯರ್ಥ ಪೋಲು ಮಾಡುವ, ನಮ್ಮಿಂದ ಮಾಡಿಸುವ ನೂರಾರು ವಾದಗಳು, ಪ್ರಚಾರಕರು, ಪ್ರವರ್ತಕರು ಹರಡಿದ್ದಾರೆ. ನಮ್ಮೆಲ್ಲರ ನಡುವೇ ಇದ್ದಾರೆ.  ಅವರೆಲ್ಲರೊಟ್ಟಿಗೆ ವಾದವಿವಾದ ಬೇಡ. ನಾವು ನಂಬಿದ  ಶಾಸ್ತ್ರ ಹೇಳಿದೆ ಆಚರಿಸೋಣ. ಹಾನಿಯಂತೂ ಇಲ್ಲವೇ ಇಲ್ಲ. ಸನ್ಮಂಗಳ ಅತ್ಯಂತ ನಿಶ್ಚಿತ. 


ಪುರುಷರೆಲ್ಲರೂ ಸಹಸ್ರ ಗಾಯತ್ರೀಜಪ, ವಿಷ್ಣುಸಹಸ್ರನಾಮ, ಗೀತಾ, ಬ್ರಹ್ಮಸೂತ್ರ, ಗುರೂಪದಿಷ್ಟ ಮಂತ್ರಗಳನ್ನು ಹಾಗೂ ಸುಮಧ್ವವಿಜಯ, ಟೀಕಾಕೃತ್ಪಾದಾದಿ ಗುರುಸ್ತೋತ್ರಗಳನ್ನು ಜಪಿಸೋಣ. ಎಲ್ಲ ಸ್ತ್ರೀಯರೂ ರಾಮಕೃಷ್ಣ ಮಂತ್ರ ಜಪ, ಮಧ್ವನಾಮ, ಇತ್ಯಾದಿಗಳನ್ಬು ಮಾಡುವಂತಾಗಲಿ. 


ಎಲ್ಲರೂ ಎರಡು ಹೊತ್ತು ಸ್ನಾನ, ಸಾಧ್ಯವಿರುವ ಎಲ್ಲತರಹದ ದಾನ, ದೇವಸ್ಥಾನಗಳಲ್ಲಿ ನೂರೆಂಟು ಪ್ರದಕ್ಷಿಣೆ ನಮಸ್ಕಾರ, ಗ್ರಹಣ ಸ್ತೋತ್ರ ಪಠಣ ಇತ್ಯಾದಿಗಳನ್ನು ಮಾಡಿ ಇಂದಿನ ಈ ದಿನವನ್ನು ಪೂರ್ಣ ಸಾರ್ಥಕ ಮಾಡಿಕೊಳ್ಳೋಣ. ಎಲ್ಲ ಪಾಪಗಳನ್ನೂ ಪರಿಹರಿಸಿಕೊಂಡು, ಪುಣ್ಯಸಂಪಾದಿಸಿಕೊಳ್ಳೋಣ. 


*ಗ್ರಹಣಕಾಲದಲ್ಲಿ ಅವಶ್ಯಪಠನೀಯ ಸ್ತೋತ್ರ* 


ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: |

ಸೂರ್ಯಗ್ರಹೋಪರಾಗೋ ತ್ಥಗ್ರಹಪೀಡಾಂ ವ್ಯಪೋಹತು |

ಯೋಸೌ ದಂಡಧರೋ ದೇವ: ಯಮೋ ಮಹಿಷವಾಹನ: |

ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |

ಯೋಸೌ ಶೂಲಧರೋ ದೇವ: ಪಿನಾಕೀ ವೃಷವಾಹನ: |

ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |


योसौ वज्रधरो देव: आदित्यानां प्रभुर्मत: ।

सूर्यग्रहोपरागो त्थग्रहपीडां व्यपोहतु ।

योसौ दंडधरो देव: यमो महिषवाहन: ।

सूर्यग्रहोपरागोत्थ ग्रहपीडां व्यपोहतु ।

योसौ शूलधरो देव: पिनाकी वृषवाहन: ।

सूर्यग्रहोपरागोत्थ ग्रहपीडां व्यपोहतु ।


*✍🏻✍🏻✍ನ್ಯಾಸ*

ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ.

Comments

Anonymous said…
Sooopperrr
Anonymous said…
Sooopperrr

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*