*ಕನ್ನಡಿಯಲ್ಲಿ ಕಂಡ ಮುಖ..!!*

 



ಕನ್ನಡಿಯಲ್ಲಿ ಕಂಡ ಮುಖ..!!*


ಕನ್ನಡಿಯಲ್ಲಿ ಕಾಣುವ ಮುಖ ಸಾಮಾನ್ಯವಾಗಿ ನೈಜ ಮುಖವನ್ನು ಮುಚ್ಚಿಟ್ಟದ್ದೇ ಆಗಿರುತ್ತದೆ. ಅದಾಗುವದು ಇನ್ನೊಬ್ಬರಗಿಂತಲೂ ನಾನು ಭಾರೀ ಎಂದು ತೋರಿಸಲೋ ಅಥವಾ ತಮ್ಮದರ ಮೇಲಿನ ಅಸಂತೃಪ್ತಿಯೋ..... 


ನಾನು ಭಾರೀ ಎಂದು ತೋರಿಸುವದೇನಿದೆ ಅದು ಒಂದು ಸ್ಪರ್ಧೆ. ಸ್ಪರ್ಧೆ ಜಗತ್ತಿಗೆ ಹಿತವನ್ನುಂಟು ಮಾಡುವದೇ.. ಆದರೆ ಅಸಂತೃಪ್ತಿ ಏನಿದೆ ಕುಗ್ಗಿಸಿ ಹಾಕುವಂತಹದ್ದೇ.. ಇತರರು ಸಂತೋಷದಿಂದ ಇರುವದನ್ನು ನೋಡಿದಾಗ ಕೆಲವರಿಗೆ ಸಹಿಸಲೇ ಆಗುವದಿಲ್ಲ. ಬಾಡಿಗೆ ಮನೆಯಲ್ಲಿ ಇರುವವರು ಅನುಭವಕ್ಕೆ ತಂದು ಕೊಂಡಿರುತ್ತಾರೆ. 


ಬಾಡಿಗೆ ಮನುಷ್ಯ ಏಸಿ, ಫ್ರಿಡ್ಜ ಮೊದಲಾದದ್ದನ್ನು ತಂದ ಎಂದರೆ, ಮಾಲೀಕ ಮನೆ ಬಾಡಿಗೆ ಏರಿಸಿಯೇ ಬಿಡುತ್ತಾನೆ. ಬಾಡಿಗೆಯ ಮಕ್ಕಳು ಉತ್ತೀರ್ಣರಾದರೂ ಎಂದಾದರೆ, ರಾತ್ರಿ ಹತ್ತಕ್ಕೇ ಲೈಟ್ ಆರಿಸಬೇಕು ಎಂದು ಫರ್ಮಾನು ಹೂಡುತ್ತಾನೆ. ಅಚ್ಚುಕಟ್ಟು ಮಡಿ ಮಾಡುವ ಮನುಷ್ಯ ಇದ್ದ ಎಂದರೆ ನೀರೇ ಬಿಡುವದಿಲ್ಲ... ಹೀಗೆ ಅನೇಕ... ಇದು ಕೇವಲ ದೃಷ್ಟಾಂತ... (ಯಾರ ವೈಯಕ್ತಿಕವೂ ಅಲ್ಲ.)  ಹೀಗೆ ಮತ್ಸರದ ಕೆಂಡದಲ್ಲಿ ಬೆಂದು ಬಳಲಿಹೋದ ಮಂದಿಯು  ಮನಸ್ಥಿತಿ ಹೇಗಿರಬಹುದು ಎಂದು ತಿಳಿಯಲು ಒಂದು ಸುಂದರ ಕಥೆ.... 


ಒಂದು ಓಫೀಸ್. ಅನೇಕರು ಕೆಲಸಗಾರರು. ಒಬ್ಬ ಸ್ಟೋರ್ ಕೀಪರ್ ಗೆ ಅಲ್ಲೊಂದೇನೋ ಕವರ್ ಸಿಗತ್ತೆ. ತಂದು ಮೆನೆಜರ್ ಕೈಲಿ ಕೊಡುತ್ತಾನೆ. ನೋಡಿದ ಮೇನೆಜರ್ ಎತ್ತಿ ಬಿಸಾಡಿ ಬಿಡ್ತಾನೆ. 

ಅಷ್ಟರಲ್ಲಿಯೇ ಆ ಕವರ್ ಅನ್ನು ಇನ್ನೊಬ್ಬ ತೆಗೆದು ನೋಡುತ್ತಾನೆ. ಅದರಲ್ಲಿ ಎರೆಡು ವಿದೇಶಪ್ರವಾಸದ ಎರೆಡು ಟಿಕೆಟ್ ಗಳು ಇರುತ್ತವೆ. ಪತ್ರದಲ್ಲಿ ಬರೆದಿರುತ್ತಾರೆ ಮನಸೋ ಇಚ್ಛೆ ಬಳಿಸಿಕೊಳ್ಳಬಹುದು ಎಂದು.. 


ಸ್ಟೋರ್ ಕೀಪರ್ ಗೆ ಸಿಕ್ಕಿತ್ತು  ಸೋ ಅವನಿಗೊಂದು ಟಿಕೆಟ್ ಕೊಟ್ಟರು.. ಇನ್ನೊಬ್ಬ ವರ್ಕರ್ ಅವನು ತೆಗೆದು ನೋಡಿದ ಹಾಗಾಗಿ ಅವನಿಗೆ ಸಿಕ್ಕಿತು. ಮೆನೇಜರ್ಗೆ ಸಿಗಲಿಲ್ಲ. ಹೊಟ್ಟೆ ಉರಿ ಶುರು ಆಯಿತು. ಆ ಮೇನೇಜರ್ "ಟಿಕೇಟ್ ಕೊಟ್ಟ ಕಂಪನಿಗೆ ತಿಳಿಸುತ್ತಾನೆ ಒಂದೇ ವಾರದಲ್ಲಿ ಇವರು ಕೆಲಸಕ್ಕೆ ಹಜಾರ್ ಆಗಬೇಕು ಎಂದು.." ಹೇಗಿದೇ ನೋಡಿ ಈ ವರಸೆ... ಇಂಥಹ ಕೆರೆಕ್ಟರ್ ನೋಡಲಿಕ್ಕೆ ತುಂಬ ಸಿಗ್ತಾರೆ... ಅವರದೊಂದೇ ಮನೋಭಾವ *ನನಗೇನು ಸಿಕ್ಕಿಲ್ಲ, ಅದನ್ನು ಮತ್ಯಾರೂ ಪಡೆಯಬಾರದು* ಎಂದು. ಬೆರೊಬ್ಬರ ಸಂತೋಷವನ್ನು ಹಾಳು ಮಾಡುವದರಿಂದ ಪೈಶಾಚಿಕ ಕ್ಷಣಿಕ ತೃಪ್ತಿ ಸಿಗಬಹುದು ಏನೋ.. ಅದರಿಂದ ಬಹಳೇನು ಪ್ರಯೋಜನ ಆಗದು. ಸಿಗುವದು ಶಾಶ್ವತ ಬೇಗುದಿ ಮಾತ್ರ. 


ಮತ್ಸರದ ಜನ ನಮ್ಮ ಎದರು ಬರಬಹುದು, ನಮ್ಮ ಜೀವನದಲ್ಲೂ ಬರಬಹುದು. ಆದರೆ ನಾವು ಸಿಡಿಮಿಡಿಗೊಳ್ಳುವದು ಬೇಡವೇಬೇಡ. *ಮತ್ಸರಿ ಇನ್ನೊಬ್ಬರ ಸಂತೋಷವನ್ನು ಕಂಡ ಕ್ಷಣದಲ್ಲಿ ತನ್ನಲ್ಲಿಯೇ ಕೋಪ, ಅಸಹ್ಯ ಇವುಗಳನ್ಬು ಉದ್ಭವಿಸಿಕೊಂಡು ಬಿಡುತ್ತಾನೆ.* ಕೋಪ ಅಸಹ್ಯಗಳು ಎಂದಿಗೂ ಹಿತಕಾರಿ ಅಲ್ಲವೇ ಅಲ್ಲ..


ಮತ್ಸರಿಗಳು ಎದುರಬಂದಾಗೊಮ್ಮೆ ನಗುನಗುತಾ ಸ್ವೀಕರಿಸಿಬಿಡೋಣ. ನಮ್ಮ ನಗುವೇ ಆ ಮತ್ಸರಿ ಉತ್ತರವಾಗಿ ಆಗಿಬಿಡಲಿ. 


ನಮ್ಮ ಮಾತ್ಸರ್ಯ ತೋರಿಸಿ ನಮಗೆ ಪೀಡಿಸಿದ ಆ ಮೂರ್ಖನಿಗೆ ಶಾಸ್ತಿಕೊಡುವದು ಬೇಡವೆ... ?? ಅಂದರೆ ಖಂಡಿತ ಬೇಡ ಎಂದುತ್ತರ ಸಿಗಬಹುದೇನೋ... 


ಒಂದು ಸುಂದರ ಕನ್ನಡಿಯ ಮನೆ. ಅದರಲ್ಲಿ ಒಂದು ಸುಂದರವಾದ ಬೀದಿಯಲ್ಲಿ ಆಟವಾಡುತ್ತಿರುವ ನಾಯಿ ಮರಿಯೊಂದನ್ನು ಒಳಗೆ ಬಿಡೋಣ. ಆ ನಾಯಿ ನೋಡಿದಲ್ಲೆಲ್ಲ ಆಟವಾಡುತ್ತಿರುವ ನಗುನಗುತ್ತಿರುವ ನಾಯಿಗಳೆ. ನಗುನಗುತ್ತಿರುವ ನಾಯಿಗಳನ್ನು ನೋಡಿದ ಆ ನಾಯಿಯ ಖುಶಿ ಇಮ್ಮಡಿ ಮುಮ್ಮಡಿ ಆಯಿತು.

ಅದೇ ಸಿಡುಕು ಸಿಡಕಿನ ಇನ್ನೊಂದ ನಾಯಿಯನ್ನು ಅಲ್ಲಿ ತಂದುಬಿಟ್ಟರೆ, ಸಿಡುಕಿನ ನಾಯಿಗಳೇ ಸುತ್ತಮುತ್ತ... ಹಾಗಾಗಿ ಸಿಟ್ಟನಿಂದ ಒದರಿತು.. ಕನ್ನಡಿಯಲ್ಲಿಯ ನಾಯಿಗಳೂ ಒದರಿದವು... ಸಿಟ್ಟಿಂದ ಕನ್ನಡಿಯನ್ನು ಒಡಿತು... ಕಾಜುಗಳೆಲ್ಲಾ ಸೇರಿ ತರಿಚಿ ಮೈಯೆಲ್ಲ ರಕ್ತ ಸಿಕ್ತ ಮಾಡಿಕೊಂಡಿತು....


ನಮ್ಮ ಸುತ್ತ ಮುತ್ತಲಿರುವ ಎಲ್ಲ ಮುಖಗಳೂ ಕನ್ನಡಿ ಇದ್ದ ಹಾಗೆಯೇ. ಎದುರಿನ ವ್ಯಕ್ತಿಯಲ್ಲಿ ಕಾಣುವ ಮುಖಭಾವ ನಮ್ಮ ಮುಖಭಾವವೇ..... ನಮ್ಮನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಳ್ತಾನೆ ಎಂದರೆ ಅದಕ್ಜೇನು ಅರ್ಥ... ? ಅವರು ಹೊಟ್ಟೆಯುರಿಯುವ ಮಟ್ಟಿಗೆ ಯಾವುದೋ ಒಂದು ವಿಷಯದಲ್ಲಿ ಅವರಿಗಿಂತಲೂ ನಾವು ತುಂಬ ಮುಂದೇ ಇದ್ದೇವಿ ಎಂದೇ ಅರ್ಥ. ಹೀಗಿರುವಾಗ ಅವರ ಹೊಟ್ಟ ಉರಿ ನಮಗೆ ಕೊಡುವ ಡಾಕ್ಟರೆಟ್ ಅವಾರ್ಡ ಎಂದೇ ಏಕೇ ಸ್ವೀಕರಿಸಬಾರದು... 😊😊😊😊


ಹಾಗಾಗಿ ನಾವು ಮತ್ಸರಿಗಳಾಗುವದು ಬೇಡ. ಎಂತಹ ಮತ್ಸರಿಗಳು ಎದುರಿಗೆ ಬಂದರೂ ನಾವು ಕುದಿಯುವದು ಬೇಡ.. ಎರಡರಿಂದಲೂ ಅನರ್ಥವಾಗುವದು ನನಗೆ ಇದು ಶತಸ್ಸಿದ್ಧ. 


ಕನ್ಬಡಿಯಲ್ಲಿಯ ಮುಖ ನೋಡಿಕೊಂಡಾಗ , ಅಸಹನೆಗಿಂತಲೂ ಸ್ಪರ್ಧೆ ಉತ್ತಮ, ಸ್ಪರ್ಧೆಗಿಂತಲೂ ಆತ್ಮ ತೃಪ್ತಿ ಅತ್ಯುತ್ತಮ ಎಂದೇ ತಿಳಿಯುವದು ಅತಿಸೂಕ್ತ. 


ಅಸಹನೆ ನಮ್ಮನ್ನೇ ಕೆರಳಿಸಿದರೆ, ಸ್ಪರ್ಧೆ ಪರರನ್ನು ಕೆರಳಿಸುವಂತೆ ಮಾಡುತ್ತದೆ. ಆತ್ಮತೃಪ್ತಿ ಎಲ್ಲರನ್ನೂ ಸಂತೃಪ್ತಿಯಿಂದಿಡುತ್ತದೆ....


*✍🏽✍🏽✍🏽ನ್ಯಾಸ...*

ಗೋಪಾಲದಾಸ.

ವಿಜಯಾಶ್ರಮ. ಸಿರವಾರ.

Comments

Gouri said…
🙏🏼🙏🏼🙏🏼🙏🏼🙏🏼🙏🏼🙏🏼👌👌👌👌👌
Gouri said…
🙏🏼🙏🏼🙏🏼🙏🏼🙏🏼🙏🏼🙏🏼👌👌👌👌👌

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*