Posts

Showing posts from April, 2023

*ಅವಧೂತ ಜಯಣ್ಣ*

Image
 * ಅವಧೂತ ಜಯಣ್ಣ* ನಾನು ಕಂಡ ಅತ್ಯಂತ ಸಾತ್ವಿಕ ಸಜ್ಜನ ನಿಃಸ್ಪೃಹ ವ್ಯಕ್ತಿ ಎಂದರೆ ನನ್ನ ಅತ್ಯಂತ ಆತ್ಮೀಯ ಮಿತ್ರ ಹಾಗೂ ಶಿಷ್ಯ *ಸಿರಿವಾರ ಜಯಣ್ಣ* ಅಂದರೆ ತಪ್ಪಾಗದು. ತನ್ನ ಇಳೆ ಹಾಗೂ ಇಳಿ ವಯಸ್ಸುಗಳಲ್ಲಿ ಉತ್ತಮ ವಿರಕ್ತ ಅವಧೂತ ಜೀವನ ನಡೆಸಿದವ ಜಯಪ್ಪ.  ತನ್ನ ಜೀವಮಾನದಲ್ಲಿ ಸಾಧನೆಯನ್ನು ಉಳಿದು ಇನ್ಯಾವದನ್ನೂ (ಹೊಲ ಮನೆ ಹಣ ) ತನ್ನದು ಎಂದು ಮಾಡಿಕೊಳ್ಳದ ತನ್ನ ಹೆಸರಿನಿಂದ ಇಟ್ಟುಕೊಳ್ಳದ ಸಾದಕ ನಮ್ಮ ಜಯಣ್ಣ. ವಿಜಯರಾಯರ ಸಮಗ್ರ ಸುಳಾದಿಗಳ ಆಳವಾದ ಅಧ್ಯನ ಮಾಡಿದವ, ಸುಳಾದಿಗಳನ್ನು ಪ್ರಕಾಶಿಸಿದವ, ತೀರ್ಥಕ್ಷೇತ್ರಗಳನ್ನು ಸಂಚರಿಸಿದವ, ನಿರಂತರ ಜಪ ತಪ ಅಧ್ಯಯನ ಹಾಗೂ ಉಪಸನಾಶೀಲ ಇಂದು ನನ್ನನ್ನು ಅಗಲಿದ್ದು ಬಹಳೇ ಖೆದಕರ ಸಂಗತಿ. ಅವನಿಗೆ ಉತ್ತಮ ಸದ್ಗತಿಯಾಗಲಿ.  ಜೀವಮಾನದಲ್ಲಿ ಮೂರುಬಾರಿ ಇಪ್ಪತ್ತುನಾಲ್ಕು ಲಕ್ಷ ಗಾಯತ್ರೀಜಪ ಮಾಡಿದ ಉತ್ತಮ ತಪಸ್ವೀ. ಅವನೇ ತಿಳಿಸಿದ ಹಾಗೆ ಒಂದುಬಾರಿ ಬದರಿಯಲ್ಲಿ, ಮತ್ತೊಂದು ಬಾರಿ ತಿರುಪತಿಯಲ್ಲಿ ಮುಗದೊಂದು ಬಾರಿ ೮೦ ವರ್ಷದ ಜೀವನದಲ್ಲಿ. ನನ್ನ ಜೊತೆಗೆ ಎಲ್ಲ ಜ್ಙಾನಸತ್ರಗಳಿಗೂ ಭಾಗವಹಿಸುತ್ತಿದ್ದ. ಬದರಿಗೆ ಹೋದಾಗ ನಮ್ಮೆಲ್ಲರನ್ನು ಕಳುಹಿಸಿ ಇಪ್ಪತ್ತು ದಿನಗಳವರೆಗೆ ಇದ್ದು ನಿರಂತರ ಜಪ ಮಾಡಿದ ಧೀರ. ಅದೂ ತನ್ನ ಎಪ್ಪತ್ತನೇಯ ವಯಸ್ಸಿನಲ್ಲಿ.  ಕಲಬುರ್ಗಿಗೆ ಬರುವದು ನನ್ನ ಭೆಟ್ಟಿಗಾಗಿಯೇ. ಬಂದು ಮಾತಿಗೆ ಕುಳಿತರೆ ಸಾಧನೆಯ ವಿಷಯದ ಮಾತುಗಳನ್ನುಳಿದು ಬೇರೆ ಮಾತಾಡಿದ ಕ್ಷಣವನ್ನೂ ನ...

ಇಂದು ಯುವಕರ ಅವಸ್ಥೆ ಹೀಗೇಕೆ ..

Image
  ಇಂದು ಯುವಕರ ಅವಸ್ಥೆ ಹೀಗೇಕೆ ..  *ಶಾಂತಿ ಇಲ್ಲ...* ಹಿಂದೆ ಬಡತನದಲ್ಲಿಯೂ ಯುವಕರಲ್ಲಿ ಶಾಂತತೆ ಅಡಗಿತ್ತು. ಇಂದಿನ ಮಹಾ ಶ್ರೀಮಂತಿಕೆಯಲ್ಲಿ ಹುಡುಕಿದರೂ ಶಾಂತಿ ದೊರೆಯುತ್ತಿಲ್ಲ ಏಕೆ... ??  *ವಿದ್ಯೆಯಿಲ್ಲ* ಹಿಂದೆ ತಂದೆ ತಾಯಿಗಳನ್ನು ಬಿಟ್ಟು ಗುರುಗಳ ಹತ್ರ ದೂರದಲ್ಲಿ ಹೋಗಿ ಗುರು ಸೇವೆಯನ್ನೇ  ಮಾಡುತ್ತಿದ್ದರೂ ವಿದ್ಯೆ ಹರೆದು ಬರುತ್ತಿತ್ತು ವಿ  ವಿದ್ಯೆಗೋಸ್ಕರ ಕೋಟಿಕೋಟಿ ಹಣ ವ್ಯಚ್ಚ ಮಾಡಿದರೂ ನಮ್ಮ ವಿದ್ಯೇ ಏಕಿಲ್ಲ... ?? *ಸಮಾಧಾನ ದೂರಮಾತೇ.....* ಹಿಂದು ಏನಿಲ್ಲದಿದ್ದರೂ ಸಮಾಧಾನ ತೃಪ್ತಿ ಇರುತ್ತಿತ್ತು. ಇಂದು ಏನೆಲ್ಲ ಇದ್ದರೂ ಸಮಾಧಾನ ತೃಪ್ತಿಗಳು ಏಕೆ ಮರೀಚಿಕೆಯಾಗಿವೆ.... ? ಯುವಕರು ಕೇಳಿದ್ದು ಕೊಡಲು ಪಾಲಕರು ಸಮರ್ಥರಿದ್ದಾರೆ, ಕೊಟ್ಟೇಕೊಡುತ್ತಾರೆ. ಸ್ವಯಂ ತಮಗೇನು ಬೇಕು ಅದನ್ನು ಪಡೆಯಲು ಸಮರ್ಥರೂ ಆಗಿದ್ದಾರೆ ಹಾಗಿದ್ದರೂ...... *ನೆಮ್ಮದಿ ಹೇಳಿಕೊಳ್ಳಲು ಮಾತ್ರ..* ಸಮಯ ಹೇಗೆ ಕಳೆಯಲಿ ಎಂಬ ಚಿಂತೆ ಹಿಂದಿದ್ದರೂ ನೆಮ್ಮೆದಿ ಮನೆ ಮಾತಾಗಿತ್ತು. *ಕ್ಷಣವನ್ನೂ ಖಾಲಿ ಇಡಬಾರದು* ಎನ್ನುವಷ್ಟರಮಟ್ಟಿಗೆ  ವ್ಯಸ್ತರಾದ ನಮಗೆ ಇಂದಿಗೂ ಮನೆ ಮಠ ಮಂದಿರ ಕಛೇರಿ ಮಾರ್ಕೆಟು ಎಲ್ಲಿ ಹುಡುಕಿದರೂ ನೆಮ್ಮೆದಿ ಸಿಗುತ್ತಿಲ್ಲ ಏನಕೆ.... ???? *ಏಳಿಗೆ ನಿಲಕದ್ದು..* ಏಳಿಗೆ ಉನ್ನತಿ ಎಂಬ ಪದವೇ ನಿಲುಕದಮಾತಾಗಿದೆ. ಉನ್ನತಿಗೆ ಹೋಗುವದು ದೂರದ ವಿಚಾರ. ಉನ್ನತಿ ಅಂದರೆ ಏನು ಇಂದಿನ ಯುವಕರಿಗೆ ಗೊತ್ತೇ ...