*ಭಾಗೀರಥಿ ಜಯಂತಿ
ಭಗೀರಥನ ಘೋರ ತಪಸ್ಸಿಗೆ ಒಲಿದು ಬಂದ ಕಾರಣ ಗಂಗೆಗೆ ಭಾಗೀರಥಿ ಎಂದು. ಆ ಭಾಗೀರಥಿ ಭುವಿಗಿಳಿದು ಬಂದ ದಿನ.
*ಗಂಗೆಯ ಅವತರಣದ ಹಿನ್ನಲೆ*
ಸಗರನ ಮಕ್ಕಳ ಉದ್ಧಾರಕ್ಕಾಗಿ ಗಂಗೆಗೆ ಭೂಮಿಗೆ ಬರಬೇಕಿತ್ತು. ಸಗರ ೧೦ ಸಹಸ್ರ ವರ್ಷ ತಪಸ್ಸು ಮಾಡಿದ. ನಂತರ ಸಗರನ ಮೊಮ್ಮಗ ಅಂಶುಮಾನ್ ಹತ್ತು ಸಹಸ್ರವರ್ಷ, ನಂತರ ಅವನ ಮಗ ದಿಲೀಪ ಹತ್ತು ಸಹಸ್ರವರ್ಷ ನಂತರ ಭಗೀರಥ ಹತ್ತು ಸಹಸ್ರವರ್ಷ ಈ ನಿಟ್ಟಿನಲ್ಲಿ ನಾಲ್ವತ್ತೈದು ಸಾವಿರ ವರ್ಷಗಳ ಸುದೀರ್ಘ ತಪಸ್ಸಿನ ಫಲವಾಗಿ ಭುವಿಗಿಳದ ಮಹಾತಾಯಿ ಭಾಗೀರಥಿ.
ಎಲ್ಲ ತರಹದ ಪಾಪಗಳನ್ನು ಪರಿಹರಿಸುವ ಸಾಮರ್ಥ್ಯವಿರುವದು ಕೇವಲ ತಪಸ್ಸು ಹಾಗು ಪುಣ್ಯಗಳಿಗೆ. ತಪಸ್ಸಿನಿಮದಲೇ ಬಂದ ಸ್ವಯಂ ಪುಣ್ಯ ಸ್ವರೂಪಿಯಾದ ಕಾರಣದಿಂದಲೇ ಏನೋ ಎಂಬಂತೆ ನಮ್ಮೆಲ್ಲರ ರಾಶಿ ರಾಶಿ ಪಾಪಗಳನ್ನು ಸುಟ್ಟು ಬೂದಿಮಾಡಿಬಿಡವವಳೂ ಕೂಡ.
ತ್ರಿವಿಕ್ರಮರೂಪಿ ನಾರಾಣನ ಪಾದವಿಕ್ಷೇಪದಿಂದ ಬ್ರಹ್ಮಾಂಡ ಕಟಾಹ ಸೀಳಿ ಬ್ರಹ್ಮಾಂಡದ ಹೊರ ಇರುವ ಗಂಗೆ ಒಳಗೆ ಬಂದಳು. ಆ ಜಲದಿಂದಲೇ ಬ್ರಹ್ಮದೇವರು ಅದೇ ಪಾದಕ್ಕೆ ನೆ ಅಭಿಷೇಕ ಮಾಡಿದರು. ಆ ಜಲವೇ ಪಾರ್ವತಿಯ ತಂಗಿಯಾಗಿ ಹುಟ್ಟಿ ಶಿವನ ಜಡೆ ಸೇರಿದಳು. ಮುಂದೆ ವಿಯದ್ಗಂಗೆ ಯಾಗಿ ದೇವಲೋಕದಲ್ಲಿ ಹರಿದಳು. ಇತಹ ಗಂಗೆಯನ್ನೇ ಭುವಿಗೆ ತಂದ ಭಗೀರಥ. ಇದುವೇ ಗಂಗೆಯ ಮಹಾಮಹಿಮೆ...
"ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ.
ಮುಚ್ಯತೆ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ" ಗಂಗೆಯನ್ನು ನೆನದರೆ ಪಾಪಪರಿಹಾರ. ಗಂಗೆಯ ದರ್ಶನ ಪಾಪನಾಶನ. ಗಂಗೆಯಲ್ಲಿ ಮಿಂದರೆ ಪಾಪನಾಶ. ಸತ್ತಮೇಲೆ ಅಸ್ಥಿಗಳನ್ನು ಗಂಗೆಯಲ್ಲಿ ವಿಸರ್ಜಿಸಿದರೂ ಪಾಪನಾಶ. ಜೊತೆಗೆ ವಿಷ್ಣುಲೋಕವೆ ಪ್ರಾಪ್ತಿ. ವಿಷ್ಣು ಲೋಕ ಪ್ರತಿಬಂಧಕ ಪಾಪಾರಿಷ್ಟಗಳ ನಿವೃತ್ತಿಗೆ ಕಾರಣಳು ಗಂಗೆ.
*ಈ ಶಕ್ತಿ ಎಲ್ಲಿಂದ ಬಂತು..??*
"ಯೋಸೌ ಸರ್ವಗತೋ ದೇವಃ ಚಿತ್ಸವರೂಪೀ ನಿರಂಜನಃ
ಸ ಏವ ದ್ರವರೂಪೇಣ ಗಂಗಾಂಭೋ ನಾತ್ರ ಸಂಶಯಃ"
ಸರ್ವವ್ಯಾಪ್ತನಾದ, ಸಚ್ಚಿದಾನಂದ ಸ್ವರೂಪನಾದ, ದೋಷಗಳಿಲ್ಲದಿರುವ, ಯಾವ ನಾರಾಯಣನು ಇದ್ದಾನೆಯೋ ಆ ನಾರಾಯಣನೇ ದ್ರವರೂಪದಿಂದ ಗಂಗಾನದಿಯಲ್ಲಿ ನಿತ್ಯ ಸನ್ನಿಹಿತನಾಗಿದ್ದಾನೆ. ಗಂಗೆ ನಾಯಾಣನಿಗೆ ಒಂದರ್ಥದಲ್ಲಿ ಅಧಿಷ್ಠಾನಳಾದವಳು. ಅಮತೆಯೇ ದಿವ್ಯ ಸಾಮರ್ಥ್ಯ. ಆ ಕಾರಣದಿಂದಲೇ ಗಂಗೆ ಹರಿಯುವ ಊರುಗಳು ಪ್ರದೇಶಗಳೆಲ್ಲ ಮಾಹಾಕ್ಷೇತ್ರಗಳು ಎಂದೇ ಪ್ರಸಿದ್ಧಿ ಇದೆ.
"ನಂದಿನೀ ನಲಿನೀ ಸೀತಾ ಮಾಲತೀ ಮಲಾಪಹಾ ವಿಷ್ಣುಪಾದಾಬ್ಜಸಂಭೂತಾ ಗಂಗಾ ತ್ರಿಪಥಗಾಮಿನೀ ಭಾಗೀರಥಿ ಭೋಗವತೀ ಜಾಹ್ನವೀ ತ್ರಿದಶೇಶ್ವರೀ" ಹೀಗೆ ಹನ್ನೆರಡು ನಾಮಗಳಿಂದ ಪ್ರಸಿದ್ಧಿಪಡೆದವಳು ಗಂಗಾದೇವಿ. ಈ ನಾಮಗಳನ್ನು ಎಲ್ಲಿ ಸ್ಮರಿಸುತ್ತಾರೆ ಅಲ್ಲೇ ಗಂಗಾ ಸನ್ನಿಧಿ. ಗಂಗೆಯಲ್ಲಿ ದೇವರ ಸನ್ನಿಧಿ. ದೇವರ ಸನ್ನಿಧಾನವೇ ಮಹಾಕ್ಷೇತ್ರ. ಆದ್ದರಿಂದ ಗಂಗೆಯನ್ನು ನಾವು ನೆನಿಸಿದ ಸ್ಥಳ ಮಹಾಕ್ಷೇತ್ರ.
ಈ ಗಂಗೆಯನ್ನು ನೆನಿಸಿ ಸ್ನಾನ ಮಾಡಿದರೆ ಮಡಿ. ಇಲ್ಲವೇ ಮೈತೊಳೆದುಕೊಂಡ ಹಾಗೆಯೆ. ಗಂಗೆಯ ನೆನಪು ಆಗಲಿ ಎನ್ನುವ ಏಕೈಕ ಉದ್ಯೇಶ್ಯದಿಂದಲೇ ಸ್ನಾನದ ಪಾತ್ರೆಗೆ "ಗಂಗಾಹಾಳ" ಗಂಗಾ ಇದ್ದಾಳೆ ಎಂಬ ಅರ್ಥವನ್ನು ಸೂಚಿಸುವ ಶಬ್ದವನ್ನೇ ಬಳಿಸಿದರು. ಅದು ಹೋಗಿ "ಗಂಗಾಳ" ಆಯ್ತು. ಈಗ ಇನ್ನೇನೋ ಆಗಿ ಹೋಗಿದೆ....
*ನಿತ್ಯಜೀವನಕ್ಕೆ ಅನಿವಾರ್ಯ ಗಂಗೆ*
ಯಾವುದೇ ಸಾಧನೆಯಾಗಲು ಅನಿವಾರ್ಯ ಬೇಕು ನೀರು. ಬದುಕಿರಲು ಅತ್ಯವಶ್ಯಕ ನೀರು. ಈ ನೀರಿಗೆ ಅಭಿಮಾನಿ ಗಂಗೆ. ಗಂಗೆಯ ಸನ್ನಿಧಾನವಿಲ್ಲದ ನೀರು ಎಷ್ಟೇ filtur ಆಗಿದ್ದರೂ ಆ ನೀರು ಮಡೆಗೆ ಬಾರದು. ಸಾಧನೆಗೆ ಅನುಕೂಲವಾಗದು. ಸಾಧನೆಗೆ ಅನುಕೂಲ ನೀರು ಗಂಗೆಯಿಂದ ಅಭಿಮನ್ಯವಾನವಾದ ನೀರೇ.
ಭೂಮಿಯಲ್ಲಿ ನೀರು ಇರಬೇಕು. ಘಾಳಿಯಲ್ಲಿ ನೀರಿನಂಶ ಇರಬೇಕು. ಆಕಾಶದಲ್ಲಿ ಸ್ವಯಂ ಗಂಗೆ ಇದ್ದಾಳೆ. ನಮ್ಮ ಶರೀರದ ನಾಡಿಗಳಲ್ಲಿ ಗಂಗೆ ಇದ್ದಾಳೆ. ಶರೀರದಲ್ಲಿ ನೀರಿನಂಶ ಇರಬೇಕು. ಹೀಗೆ ಒಂದಲ್ಲ ಎರಡಲ್ಲ ನೂರಾರು ತರಹದಿಂದ ಗಂಗೆ ನಮಗೆ ನಿತ್ಯ ಉಪಯುಕ್ತಳಾಗಿದ್ದಾಳೆ. ಆ ಗಂಗೆ ನಮ್ಮಿಂದ ಸ್ವಲ್ಪವೂ ಶುಲ್ಕ ಸ್ವೀಕರಿಸುವದಿಲ್ಲ ಇದುವೂ ಅಷ್ಟೇ ಸತ್ಯ.
ಇಂತಹ ಭಾಗೀರಥೀ ದೇವಿಯನ್ನು "ಭಾಗೀರಥೀ ಗದ್ಯ" ಭಾಗೀರಥೀ ಸ್ತೋತ್ರ" ಗಳಿಂದ ಕೊಂಡಾಡುತ್ತಾರೆ. ಅನೇಕ ದಾಸರೂ ಹಾಡುಗಳನ್ನು ರಚಿಸಿದ್ದಾರೆ. ಅವುಗಳನ್ನು ನೆನಿಸಿ ಗಂಗಾ ಹಾಗೂ ಗಂಗಾಜನಕರನ್ನು ಸಂತುಷ್ಟರನ್ನಾಗಿ ಇರಿಸಿ ನಮ್ಮ ಪಾಪಗಳನ್ನು ಪರಿಹರಿಸಿಕೊಳ್ಳೋಣ.....
*✍🏽ನ್ಯಾಸ....*
ಗೋಪಾಲ ದಾಸ
ವಿಜಯಾಶ್ರಮ, ಸಿರಿವಾರ.
Comments