*ಸುನೀತಿ ಸುರುಚಿ*



 *ಸುನೀತಿ ಸುರುಚಿ*


ಸುನೀತಿ ಇರುವಲ್ಲಿ ಸುರುಚಿ ಇರಲಾರದು. ಸುರುಚಿ ಇರುವಲ್ಲಿ ಸುನೀತಿ ಇರಲಾರದು. ಇದು ನಿಶ್ಚಿತ. ರುಚಿ ಪ್ರಿಯನಾದ ಉತ್ತಾನಪಾದ ರಾಜನಿಗೆ ಸುನೀತಿಗಿಂತಲೂ ಸುರೂಚಿ ಪ್ರಿಯಳೇ......


ಸಾಮಾನ್ಯವಾಗಿ ರುಚಿ ನೀತಿಗೆಡಸತ್ತೆ. ನೀತಿ ರುಚಿಯನ್ನು ಹದ್ದುಬಸ್ತಿನಲ್ಲಿ ಇಡತ್ತೆ. ನೀತಿ ರುಚಿಯ ಹಿಂದೆ ಬೀಳಿಸುದಿಲ್ಲ. ತಿನ್ನುವ ರುಚಿ ಹಂಬಲ ಹೆಚ್ಚು ಇದ್ದರೂ ನೀತಿವಂತನ ಊಟ ಶಿಸ್ತು. ತಿನ್ನುವ ರುಚಿಗೆ ಜೋತುಬಿದ್ದ ವ್ಯಕ್ತಿ ತುಂಬ ಅಶಿಸ್ತು. ಇದು ರುಚಿ ನೀತಿಗಳ ನೀತಿ. 

ರುಚಿಯ ದಾಸನಿಗೆ ದೀರ್ಘದರ್ಶಿತಾ ಇರುವದಿಲ್ಲ. ನೀತಿಯ ದಾಸ ಸುದೀರ್ಘ, ಸುದೃಢ, ವ್ಯಾಪಕದರ್ಶಿಯಾಗಿರುವ. ನೀತಿವಂತನ ನಿರ್ಣಯ ಅದ್ಭುತ. ರುಚಿವಂತನ ನಿರ್ಣಯ ತನಗೇ ತಾನೇ ಮೋಸಮಾಡಿಕೊಳ್ಳುವಂತಹದ್ದು. 


ಸುರೂಚಿ ಸವತಿ ಮಗನಾದ ಧೃವನನ್ನು ತಂದೆಯ ತೊಡೆಯಮೇಲಿನಿಂದ ತಳ್ಳಿದಳು, ತಾಯಿ ಸುನೀತಿ ಘೋರವಾದ ಕಾಡಿಗೆ ತೆರಳಲು ಅನುಮತಿಸಿದಳು. 

ರುಚಿಯ ದಬ್ಬಾಳಿಕೆಗೆ ಅವಮಾನಿತನಾದ ಮಗನನ್ನು ನೋಡಿದರೂ ರುಚಿಗೆ ದಾಸನಾದ ಉತ್ತಾನಪಾದ ನೋಡದ ಹಾಗೆ ಕುಳಿತ. ನೀತಿ ಕಾಣಲೇ ಇಲ್ಲ. ನೀತಿವಂತನಾಗಲಿಲ್ಲ. ಅವನ ಸ್ಥಿತಿ ತುಂಬ ಹದೆಗೆಟ್ಟು ಹೋಗುತ್ತದೆ. 


ಸುನೀತಿಯ ದಾಸನಾದ ಧೃವ ತನಗಾದ ಅವಮಾನವನ್ನು ಮೆಟ್ಟಲುಗಳನ್ನಾಗಿ ಸ್ವೀಕರಿಸಿದ. ನೀತಿವಂತ ತಾಯಿಯ ಅನುಮತಿಯಿಂದ ಪ್ರೋತ್ಸಾಹಿತನಾದ ತಪಸ್ಸಿಗೆ ತೆರಳಿದ. ದೇವರನ್ನು ಒಲಿಸಿಕೊಂಡ. ದೃಢವಾದ *ಧೃವ ಪದವಿ*ಯನ್ನೇ ಪಡೆದ. ಇಂದಿಗೂ ಅಜರಾಮರನಾಗಿ ಉಳಿದ. ಇದು ಸುರುಚಿ ಹಾಗೂ ಸುನೀತಿಯರ ಒಂದು ಕಥಾನಕದಿಂದ ಭಾಗವತ ನಮಗೆ ತಿಳಿಸುವ ಆದರ್ಶ. 


ಇಂದಿನ ಯುವಕರಾದ ನಾವೆಲ್ಲರೂ *ರುಚಿಗೆ ದಾಸರಾಗದೇ, ನೀತಿಗೆ ದಾಸರಾಗೋಣ* ಇದುವೇ ಉದ್ದೆಶ್ಯವಾಗಿ ಇಟ್ಟುಕೊಳ್ಳೋಣ. ಆಗುವ ಅವಮಾನಗಳನ್ನು ಮೆಟ್ಟಲುಗಳನ್ನಾಗಿ ಮಾಡಿಕೊಳ್ಳೊಣ. ಗುರು ದೇವತಾ ದೇವರನ್ನು ಒಲಿಸಿಕೊಳ್ಳೋಣ. ದೃಢವಾದ ಯೋಗ್ಯವಾದ ಸ್ಥಾನಗಳನ್ನು ಪಡೆಯೋಣ. ರುಚಿಗೆ ದಾಸರಾಗುವದು ಸರ್ವಥಾ ಬೇಡ. ರುಚಿಗೆ ದಾಸರಾದವರ ಅವಸ್ಥೆ ಇಂದಿಗೂ ನಿತ್ಯ ಪೇಪರ್ ಗಳಲ್ಲಿ ಕಾಣುತ್ತೇವೆ. 

ರುಚಿ ಬೇಗ ಆರ್ಶಿಸುತ್ತದೆ. ನೀತಿ ತಡವಾದರೂ ದೃಢವಾಗಿಸುತ್ತದೆ. ಅಂತೆಯೇ ಇಂದಿನ ಅತ್ಯಂತ ವೇಗದ ಯುಗದ ಯುವಕರಿಗೆ ರುಚಿ ಬೇಕೇ ಹೋರತು ನೀತಿ ಬೇಡವಾಗಿದೆ. ಥಟ್ಟನೆ ಫಲ ಸಿಗಬೇಕು. ಹದವಾಗುವಷ್ಟು ತಾಳ್ಮೆ ಇಲ್ಲ. ಕೈ ಸೇರುವಷ್ಟು ಸಹನೆ ಇಲ್ಲ. ಹೊರ ರುಚಿ ಇಷ್ಟವಾದಷ್ಟು ನೈವೇದ್ಯದ ರುಚಿಯ ಸ್ವಾದವನ್ನೇ ಕಳೆದುಕೊಂಡಿದೆ ಇಂದಿನ ಯುವ ಪೀಳಿಗೆ. ರುಚಿ ಪ್ರಿಯರು ಅವರು. 

ನೀತಿಪ್ರಯರೂ ತುಂಬ ಇದಾರೆ. ನೀತಿ ಪ್ರಿಯರಿಗೆ ಮೊಟ್ಟ ಮೊದಲು ಸಹನೆ ತಾಳ್ಮೆ ಆವಷ್ಯಕ. ನೀತಿವಂತನಿಗೆ ತಾತ್ಕಾಲಿಕ ಕಷ್ಟವೆನಿಸಿದರೂ ದೇವರ ಪೂಜೆ ಸಂಧ್ಯಾವಂದನೆ ತಪ್ಪಸಲಾರ. ಅದರ ಫಲ ದೃಢವಾಗಿ ಎಂದು ತಿಳಿದವನು ಅವ. ರುಚಿವಂತ ಮುಂದೆ ತಾತ್ಕಾಲಿಕ ಕಷ್ಟ ಪಡಲಾರ. ಈಗಿಂದೀಗಲೇ ಬೇಕು. zomato ದಿಂದ ಪಾರ್ಸಲ್ ಬೇಕು.  ನೀತಿವಂತ ಸುನಿಶ್ಚಿತ ಹಿತ ಮಾರ್ಗವನ್ನೇ ತುಳಿಯುವ. ರುಚಿವಂತ ಸಾಮಾನ್ಯವಾಗಿ ಅಹಿತ ಮಾರ್ಗದಲ್ಲೇ ಉಳಿಯುವ. ಅಂತೆಯೇ ರುಚಿ ನಮಗೆ ಪ್ರಿಯಳಾದಷ್ಟು ನೀತಿ ಪ್ರಿಯಳಾಗಲಿಲ್ಲ..... 

ನಾವು ಧೃವರಾಗಬೇಕು ನೀತಿಯನ್ನೇ ಪ್ರಿಯಳನ್ನಾಗಿಸಬೇಕು.... ಇದು ಎಂದಿಗೂ ಸಾರ್ವಕಾಲಿಕ ಇದುವೇ ಸತ್ಯ....


*✍🏼✍🏼✍🏼ನ್ಯಾಸ*

ಗೋಪಾಲ ದಾಸ. 

ವಿಜಯಾಶ್ರಮ ಸಿರವಾರ.

Comments

Nyasa said…
Olleya lekhana
Unknown said…
Amazing ! Thought proving . Wellsaid .thaaluvikeginthanya thapavu illa . 🙏🏻




Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*