*ಧರ್ಮ ಅಧರ್ಮಗಳ ಯುದ್ಧ*
*ಧರ್ಮ ಅಧರ್ಮಗಳ ಯುದ್ಧ*
ಧರ್ಮಾಧರ್ಮಗಳ ಯುದ್ಧ ಇಂದಿನದು ಅಲ್ಲ ಅನಾದಿಯಿಂದ ಇರುವಂತಹದ್ದು. ಅನಾದಿಯಿಂದ ವೇದಗಳಿವೆ. ವೇದೋಕ್ತವಾದವುಗಳೇ ಧರ್ಮಾಧರ್ಮಗಳು. ಹಾಗಾಗಿ ಅನಾದಿಯಿಂದ ಘರ್ಷಣೆ ಇರುವಂತಹದ್ದೇ.
ದೈವೀಶಕ್ತಿ ಹೆಚ್ಚಾದಾಗ, ಧರ್ಮಜಾಗೃತಿ ಪಸರಿತವಾದಾಗ ಧರ್ಮಕ್ಕೇ ಗೆಲುವು. ದುಷ್ಟಶಕ್ತಿ ಹೆಚ್ಚಾದಾಗ, ಆಧಾರ್ಮಿಕತೆಗೇ ಬೆಂಬಲ ಹೆಚ್ಚಾದಾಗ ಅಧರ್ಮಕ್ಕೇ ಗೆಲವು. ಆದರೆ ಕೊನೆಗೆ ಹಾಗೂ ಶಾಶ್ವತವಾಗಿ ಇರುವ ಗೆಲವು ಎಂದರೆ ಅದು ಧರ್ಮಕ್ಜೇನೇ.
*ಧರ್ಮ ನೇರ ಹಾಗೂ ನಿಷ್ಠುರ*
ಧರ್ಮ ಎಂದಿಗೂ ತುಂಬ ನೇರ ಹಾಗು ಬಲು ನಿಷ್ಠುರ. ಅಂತೆಯೇ ವಿರೋಧಿಗಳು ತುಂಬ. ಈ ವಿರೋಧಿಗಳು ಒಂದಾದಾಗ ಧರ್ಮಕ್ಕೆ ಪರಾಭವ. ಈ ಎಲ್ಲ ವಿರೋಧಿಗಳನ್ನು ಸೆದೆಬಡೆಯಲು ಬೇಕು ಧಾರ್ಮಿಕ ಶಕ್ತಿ, ದೈವೀ ಶಕ್ತಿ. ಅವೆರಡೂ ಬಂದಾಗ ಬಲಿಷ್ಠ ಧರ್ಮ. ಆಗ ವಿರೋಧಿಗಳು ನೂರು ಇದ್ದರೂ ಅನಾಯಾಸೇನ ಅಧರ್ಮವನ್ನು ಚಂಡಾಡಿ ಧರ್ಮ ಸ್ಥಾಪನೆಯಾಗುತ್ತದೆ.
*ಕೆಲ ಧಾರ್ಮಿಕರ compromise*
ನಿಷ್ಠುರರಲ್ಲದ ಕೆಲ ಧಾರ್ಮಿಕರು ಇರುತ್ತಾರೆ. ಅವರ ಸ್ವಭಾವ ಕೆಲೊಮ್ಮೆ ಹೊಂದಾಣಿಕಯನ್ನು ಮಾಡಿಕೊಂಡಿರುತ್ತಾರೆ. ನಿಷ್ಠುರರು ಅಲ್ಲ. ನೇರವಾಗಿಯೂ ಇರುವದಿಲ್ಲ. ಆದರೆ ನಿಷ್ಠುರವಾದ ಹಾಗೂ ನೇರವಾಗಿ ಇರುವ ಧರ್ಮ ಹೊಂದಾಣಿಕೆಯ ಧಾರ್ಮಿಕರನ್ನು ಅವಮಾನಿಸಿತೂ ಎಂದಾದರೆ, ಆಗ ಆ ಹೊಂದಾಣಿಕೆಯ compromise ಧಾರ್ಮಿಕರು ಅಧರ್ಮಕ್ಕೆ ಒಲ್ಲದ ಮನಸ್ಸಿನಿಂದಲೇ ಸಪೋರ್ಟ್ ಮಾಡುವ ಸ್ಥಿತಿಗೆ ಬಂದಿಳಿದು ಬಿಡುತ್ತಾರೆ. ಕಾಲ ಅವರನ್ನು ಆ ದಾರಿಗೆ ಕರೆದೊಯ್ಯುತ್ತದೆ.
ನಿದರ್ಶನ ನಾವು ದ್ವಾಪರದಿಂದಲೂ ಕಾಣಬಹುದು. ನೇರ ನಿಷ್ಠುರ ಧರ್ಮವನ್ನು ಮಾಡಲಾಗದೇ, ಅಧರ್ಮವನ್ನು ಒಪ್ಪಿಕೊಳ್ಳಲೂ ಆಗದೆ ಅಧರ್ಮದ ಪರವಾಗಿ ಹೋರಾಡಿದ ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪ, ಭೂರಿ ಭೂರಿಶ್ರವ ಶಲ, ಶಲ್ಯ ಈ ನೂರಾರು ಧಾರ್ಮಿಕ ರಾಜರುಗಳನ್ನು ನಾವು ಕಾಣುತ್ತೇವೆ.
ಕೆಲವರಿಗೆ ಅವಮಾನವಾಗಿದೆ, ಕೆಲವರಿಗೆ ತಾತ್ಸಾರಮಾಡಲಾಗಿದೆ, ಕೆಲವರಿಗೆ ಅಧರ್ಮದ ಪ್ರಭಾವವಾಗಿದೆ, ಕೆಲವರಿಗೆ ಹಣದ ಋಣ ಇದೆ.
ಬಲರಾಮ ವಿದುರ ಮೊದಲಾದವರಿಗೆ ಸ್ನೇಹ ಬಾಧಿಸಿದೆ, ಕಾರಣಗಳು ನೂರು ಇರಬಹುದು. ಆದರೆ ಧಾರ್ಮಿಕರೇ, ಧಾರ್ಮಿಕರ ಕಾರಣದಿಂದಲೇ ಅಧರ್ಮದಲ್ಲಿ ಹೋದರು ತಟಸ್ಥರಾದರು. ಇದು ಸಿದ್ಧ.
ಜರಾಸಂಧ ಕಂಸ ನರಕ ದುರ್ಯೋಧನ ಇವರುಗಳ ಪ್ರಭಾವ ಒಂದಡೆಯಾದರೆ, ಧರ್ಮದಲ್ಲಿಯ ಕಠೋರತೆ, ನಂದೇ ಸರಿ ಎಂಬುವ ನೇರ, ನಿಷ್ಠುರತೆ ಇತ್ಯಾದಿಗಳು ಧಾರ್ಮಿಕರನ್ನೂ ಧರ್ಮದ ವಿರೋಧಿಗಳನ್ನಾಗಿ ಮಾರ್ಪಾಡುಮಾಡಿ ಬಿಡುತ್ತದೆ.
ಕೃಷ್ಣನ ಯುಕ್ತಿ, ಭೀಮಾರ್ಜುನರ ಬಲ ಇವುಗಳ ಪ್ರಭಾವದಿಂದ ಕೊನೆಗೆ ಗೆಲ್ಲುವದು ಧರ್ಮವೇ.
*ಈ ನಿದರ್ಶನ ಇಂದಿಗೂ ಸತ್ಯ....*
ಭಾರತದ ಸ್ಪಷ್ಟ ಹಾಗೂ ನೇರ ನಿಲುವು ಅನೇಕರನ್ನು ಎದುರು ಹಾಕಿಂಕೊಂಡಿತು. ಬೀಜೇಪಿ ನಿಷ್ಠುರತೆಯೇ ಸಪಕ್ಷದವರನ್ನೂ ಕಳೆದುಕೊಂಡಿತು. ಪಕ್ಷದಲ್ಲಿಯೇ ವಿರೋಧಿಗಳನ್ನು ಬಡೆದೆಬ್ಬಿಸಿತು. ಈ ಕ್ರಮದಲ್ಲಿಯೇ ಇಂದಿನ ಮಠ ಮಠಗಳಲ್ಲಿಯ ವಾದ ವಿವಾದಗಳೂ.
ಅಧರ್ಮದ ಪ್ರಭಾವವೋ, ಅಧರ್ಮದಲ್ಲಿಯ ಅಭಿರುಚಿಯೋ, ಧಾರ್ಮಕರಿಂದಾದ ಅವಮಾನವೋ ಅಂತೂ ಧಾರ್ಮಿಕರನ್ನೂ ಅಧರ್ಮದಲ್ಲಿ ತಂದು ನಿಲ್ಲಿಸಿದೆ. ಹಾಗಾಗಿ ವಾದ ವಿವಾದ ಚರ್ಚೆ ಜೋರಾಗಿದೆ. ಒಂದಂತೂ ಶಾಶ್ವತ ನಿಶ್ಚಿತ ಗೆಲುವು ಧರ್ಮಕ್ಕೇ.
*ಧರ್ಮವೇ ಜಯವೆಂಬ ಮೂಲ ಮಂತ್ರ*
ಕೃಷ್ಣ ನೀತಿಗಳು ಬೇಕು. ಭೀಮಾರ್ಜುನರ ಬಲಬೇಕು. ಈ ಕಾಲದಲ್ಲಿ ಕೃಷ್ಣ ಬರುವದಿಲ್ಲ. ಭೀಮ ಅರ್ಜುನ ರು (ಶ್ರೀಮದಾಚಾರ್ಯರು ಹಾಗೂ ಶ್ರೀಮಟ್ಟೀಕಾಕೃತ್ಪಾದರಾಗಿ) ಬಂದು ಹೋಗಿದಾರೆ. ಕೃಷ್ಣನ ಅಗಾಧವಾದ ಯುಕ್ತಿಗಳಿವೆ. ಭೀಮಾರ್ಜುನರ ಪ್ರಮಾಣಗಳಿವೆ. ಇವುಗಳ ಬಲವನ್ನು ಆಶ್ರಯಿಸಿದ ಬಲಿಷ್ಠ ನೇರ ನಿಷ್ಠುರ ಧಾರ್ಮಿಕನಿಗೇ ಜಯವಿದೆ. ಧರ್ಮಕ್ಕೇ ಜಯವಿದೆ.
*ಹಾದಿ ಹಾಗೂ ಗುರಿ ತಪ್ಪಬಾರದು...*
ಧರ್ಮ ತಾನು ಬಲಿಷ್ಠನಾಗುವ ಭರದಲ್ಲಿ ಕೆಲವೊಮ್ನೆ ಹಾದಿತಪ್ಪುವ ಗುರಿತಪ್ಪುವ ಪ್ರಸಂಗವೂ ಇರುತ್ತದೆ. ಕೃಷ್ಣನ ಭೀಮಾರ್ಜುನರ ಬಲವನ್ನು ಆಶ್ರಯಿಸದೇ ಅವಾಂತರ ಬಲಗಳನ್ನೋ ಅಥವಾ ಸ್ವಂತ ಬಲವನ್ನೋ ಆಶ್ರಯಿಸಿತೂ ಎಂದಾದರೆ ಹಾದಿ ತಪ್ಪಿದೆ ಗುರಿ ತಪ್ಪಿದೇ ಎಂದೇ ಅರ್ಥ. ಗುರಿ ತಪ್ಪಿದ , ಹಾದಿಬಿಟ್ಟ ಧರ್ಮ ತನ್ನ ಅಪಕೀರ್ತಿಗೆ ಅಪಯಶಸ್ಸಿಗೆ ಹಾದಿಮಾಡಿಕೊಡುತ್ತದೆ. ಹಾಗಾಗಿ ಹಾದಿಯೂ ತಪ್ಪಬಾರದು. ನಿಶ್ಚಿತ ಗುರಿಯೂ ಇರಬೇಕು.
*ಧರ್ಮಾಧರ್ಮಗಳ ಯುದ್ಧದಲ್ಲಿ ಗೆಲವು ಧರ್ಮಕ್ಕೇ ಇದು ಶಾಶ್ವತ ಸಿದ್ಧ....*
*✍🏽✍🏽ನ್ಯಾಸ..*
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ.
Comments