Posts

Showing posts from July, 2021

ಗುರಿಸಾಧಿಸುವ ಛಲ..... ಪುಸಿ ಹೋಗದು

Image
  ಗುರಿಸಾಧಿಸುವ ಛಲ..... ಪುಸಿಹೋಗದು ಗುರಿ ಸಾಧಿಸುವ ಛಲಗಾರ ಎಂದೂ ಸೋಲನ್ನು ಸುಲಭದಲ್ಲಿ ಒಪ್ಪೊಕೊಳ್ಳಲಾರ. ಎಷ್ಟು ಸಲ ಸೋತರೂ ಗೆದ್ದರೆ ಬರುವೆ ಎಂಬ ಹುಮ್ಮಸಿನಿಂದಲೇ ಕಣಕ್ಕೆ ಇಳಿಯುತ್ತಾನೆ.  ಕೊನೆಗೆ ಒಂದು ದಿನ ಗೆದ್ದು ಬರುತ್ತಾನೆ.  ಪ್ರಯತ್ನಶೀಲ ಪುರುಷ "ಗುರಿ ಸಾಧಿಸಲು ಸೋಲುಗಳೆ ಮೊದಲು ಮೆಟ್ಟಲುಗಳು" ಎಂದೇ ಭಾವಿಸಿರುತ್ತಾನೆ. ಕೊನೆಗೆ ಉತ್ತುಂಗಕ್ಕೇರುವವನೂ ಆ ಪ್ರಯತ್ನಶೀಲನೆ. ಆನುಭಾವಿಕರೊಂದು ಕಥೆ.... ಊರ್ಧ್ವರೇತಸ್ಕರಾದ,  ವಿರಕ್ತ ಶಿಖಾಮಣಿಗಳಾದ, ತ್ರಿಕಾಲಜ್ಙಾನಿಗಳಾದ  ಋಷಿಗಳೊಬ್ಬರು ಕಾಡಿನಲ್ಲಿ  ಸಂಚಾರ ಮಾಡುತ್ತಿರುತ್ತಾರೆ. ಆಷಾಢ ಮಾಸ. ಘೋರ ಮಳೆ. ಮಾರ್ಗಮಧ್ಯದಲ್ಲಿ ಅನೇಕ ತರಹದ ಅನೇಕ ವೃಕ್ಷಗಳು. ಅಲ್ಲಿ ಒಬ್ಬ ದುಷ್ಟ ಒಂದು ಪುಟ್ಟ ವೃಕ್ಷ ಕಿತ್ತುವ ಪ್ರಯತ್ನದಲ್ಲಿ ಇರುತ್ತಾನೆ.  ಋಷಿಗಳು ಕೇಳುತ್ತಾರೆ... ಯಾಕೋ ಗಿಡ ಕೀಳ್ತಾ ಇದ್ದೀ ನಾಚಿಕೆ ಆಗುದಿಲ್ವೆ .. ದುಷ್ಟ.. ಆ ಗಿಡ ಯಾವದಕ್ಕೂ ಉಪಯೋಗಕ್ಕೆ ಬರುವದಿಲ್ಲ. ಅದಕ್ಕಾಗಿ ಕಿತ್ತಿಹಾಕುವೆ .. ಋ.. ಒಂದು ನಿಮಿಷ ಎಂದು ಹೇಳಿ. ಆ ಗಿಡದ ಮುಂದೆ ನಿಂತು ೫ ನಿಮಿಷ ಕಣ್ಣುಮುಚ್ಚಿ ನಿಂತು, ನಂತರ ಹೇಳುತ್ತಾರೆ. ಈ ಗಿಡದ ಜೊತೆ ಮಾತಾಡಿದೆ. ಮುಂದೆ ಅದು ಅತಿ ದೊಡ್ಡ ವೃಕ್ಷವಾಗಿ ಬೆಳೆದು, ಹು ಹಣ್ಣು, ನೆರಳು ಮುಂತಾದವುಗಳನ್ನು ಕೊಟ್ಟು ಹಾದಿ ಹೊಕರಿಗೆ ಅನುಕೂಲ ಮಾಡಿಕೊಳ್ಳುವ ಗುರಿ ಹೊಂದಿದೆ ಅಂತೆ. ಆದ್ದರಿಂದ ಕಿತ್ತಬೇಡ ಎಂದು. ದು......

ಪ್ರಿಯಕೃತ್ ಪ್ರೀತಿವರ್ಧನಃ

Image
  ಅನ್ಯರನ್ನು ಪ್ರೀತಿಸದೇ, ಪ್ರೀತಿಸು ದೇವರನ್ನು... ಪ್ರೀತಿಸುವದು ಪ್ರೀತಿ ಎಂಬುದೇನಿದೆ ಜೀವನದ ಅತ್ಯಮೂಲ್ಯ ವಸ್ತು. ಪ್ರೀತಿಎಂಬುವ ಒಂದು ಪದಾರ್ಥವೇ ಇಲ್ಲ ಎಂದಾಗಿದ್ದರೆ‌ ಜೀವರ ಜೀವನವೇ ಇರುತ್ತಿದ್ದಿಲ್ಲ. ಬದಕನ್ನೇ ಪ್ರೀತಿಸುತ್ತಿದ್ದಿಲ್ಲ. "ಬದುಕಿಗೋಸ್ಕರ ಪ್ರೀತಿಯ ಆವಶ್ಯಕತೆ, ಪ್ರೀತಿಯಿಲ್ಲದ ಬದುಕು ಇಲ್ಲವೇ ಇಲ್ಲ" ಇದು ಶಾಶ್ವತ ಸತ್ಯ ಮಾತು. ಪ್ರೀತಿ ಒಂದು ಕಡೆಯಿಂದ ಹರಿಯುವ ವಸ್ತುವಲ್ಲ. ಎರಡೂಕಡೆಯಿಂದ ಹರೆದಾಗ ಪ್ರೀತಿ ಪ್ರೀತಿ ಎನಿಸುತ್ತದೆ. ಬದುಕಿಗೋಸ್ಕರ ಪ್ರೀತಿ ಎಂದಾದಮೇಲೆ ಪ್ರೀತಿಸುವಿಕೆ ಪ್ರೀತಿಸುವದು ಅನಿವಾರ್ಯ.   ಪ್ರೀತಿಸುವದೇ ಆದರೆ ದೇವರನ್ನೇ ಪ್ರೀತಿಸುವ ಆಯ್ಕೆ ಮೊದಲಿರಲಿ. ಯಾಕೆಂದರೆ  ಆ ಪ್ರೀತಿಗೆ ಬರವಿಲ್ಲ. ಎರಡೂಕಡೆ ಇಂದ ಸಾಗುವ ಪ್ರೀತಿಯೇ ನಿಜವಾದ ಪ್ರೀತಿ. ದೇವರ ಕಡೆಯಿಂದ ಪ್ರೀತಿ ಇದ್ದೇ ಇದೆ. ಅಂತೆಯೆ ನಿನ್ನನ್ನು ಸಾಕುವ, ಪೋಷಿಸುವ, ಆಪತ್ತಿನಿಂದ ರಕ್ಷಿಸುವ, ನಿರಂತರ ನಿನ್ನೊಡೆಗೆ ಇರುವ, ಕ್ಷಣಕಾಲ‌ ನಿನ್ನ  ಬಿಟ್ಟು ತೊಲಗ. ನಿನ್ನ ಕಡೆಯಿಂದ ಪ್ರೀತಿ ಅವನಿಗೆ ದೊರೆಯಬೇಕು ಅಷ್ಟೆ. ಆಗ ಪರಿಪೂರ್ಣ ಯಶಸ್ವೀ.  *ದೇವರನ್ನು ನಾವು ಪ್ರೀತಿಸುತ್ತೇವೆಯಾ.....??? ದೇವರು ತುಂಬ ವಿಚಿತ್ರ.....  ನಾವು ಪೂಜಿಸುತ್ತೇವೆ, ದೇವ ಸುಮ್ಮನಿರುತ್ತಾನೆ. ನೈವೇದ್ಯ ಇಡುತ್ತೇವೆ, ದೇವ ಸುಮ್ಮನೇ ಇರುತ್ತಾನೆ. ಆರತಿ ಮಾಡುತ್ತೇವೆ, ಅಲಗುವದಿಲ್ಲ. ಸ್ತುತಿ ಮಾಡುತ್ತೇವೆ, ತಲೆತೂಗುವದಿಲ...