ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು.....*
ಸಜ್ಜನರ ರಕ್ಷಣೆಗೆ ಧಾವಿಸಿ ಬರುವ ಮಂತ್ರ ರಾಮ ಮಂತ್ರ. ರಕ್ಷಕರು ನೂರಾರು ಜನ ಇದಾರೆ. ಇರುವ ಎಲ್ಲ ರಕ್ಷಕರೂ ಕಷ್ಟಗಳು ಬಂದಾದಮೇಲೆ, ಆಪತ್ತೊದಗಿದಮೇ ರಕ್ಷಣೆಗೆ ಧಾವಿಸಿ ಬರುತ್ತಾರೆ. ಆಪತ್ತು ಬರುವದಕ್ಕೂ ಪೂರ್ವದಲ್ಲಿಯೇ ಆಪತ್ತ ಬಂದಕ್ಷಣದಲ್ಲಿಯೇ ರಕ್ಷಿಸುವವನು *ಶ್ರೀರಾಮ* ಮಾತ್ರ. ಅಂತೆಯೇ ಎಲ್ಲವೂ ರಾಮಮಯವಾಗಿತ್ತು ಅಂದಿನ ಜಗತ್ತು.
*ರಾಮನಾಮ ಭಜಿಸಿದವಗೆ ಉಂಟೇ ಭವದ ಬಂಧನ.."
ರಾಮನಾಮವನ್ನು ಯಾರು ಸ್ತುತಿಸುತ್ತಾರೆಯೋ ಅವರಿಗೆ ಸಂಸಾರಬಂಧನವೇ ಇರುವದಿಲ್ಲ. ಶಿವ ಶಿವಾಣಿಗೆ ಉಪದೇಶ ಮಾಡಿದ ಧರ್ಮ ರಾಮನಾಮ ಸ್ಮರಣರೂಪ ಧರ್ಮ. ವಿಷ್ಣುಸಹಸ್ರನಾಮಕ್ಕೆ ಸಮವಾದ ನಾಮ ರಾಮನಾಮ.
ವಿಶ್ವಾಮಿತ್ರ ಮಹಾಪರಾಕ್ರಮಿ. ಬಲಿಷ್ಠ. ಅಪರೋಕ್ಷಜ್ಙಾನಿ. ಸ್ವಯಂ ಚಕ್ರವರ್ತಿ. ಇದರಮೇಲೆ ಕನಿಷ್ಠ ನಾಲವತ್ತು ಸಾವಿರ ವರ್ಷ ತಪಸ
ದಸಿನಲ್ಲಿ ತೊಡಗಿಸಿ, ಕಾಮಕ್ರೋಧ ದ್ವೇಶ ಹಗೆ ಮತ್ಸರ ಹಸಿವು ನೀರಡಿಕೆ ಕೊನೆಗೆ ಶ್ವಾಸೋಚ್ಛ್ವಾಸ ಇವುಗಳೆಲ್ಲವನ್ನೂ ಗೆದ್ದು *ಬ್ರಹ್ಮರ್ಷಿ* ಎಂದು ಬ್ರಹ್ಮದೇವರಿಂದಲೇ ಕರೆಸಿಕೊಂಡ ಮಹಾಂತ *ವಿಶ್ವಾಮಿತ್ರರು.*
ವಿಶಿಷ್ಟವಾದ ಸಿದ್ಧಿಗೋಸ್ಕರ ಹನ್ನೆರಡು ದಿನಗಳ ಕಾಲ ಜರುಗುವ ಯಜ್ಙದ ರಕ್ಷಣೆಗೋಸ್ಕರ *ಶರಣು ಬರಬೇಕಾಯ್ತು ಶ್ರೀರಾಮಚಂದ್ರದೇವರಿಗೇ.* ಶ್ರೀರಾಮಚಂದ್ರನೇ ವಿಶ್ವಾಮಿತ್ರರಿಗೆ ಅನಿವಾರ್ಯ ಎಂದಾಯ್ತು. ಶ್ರೀರಾಮನಿಂದಲೇ ಸಂರಕ್ಷಿತವಾಯಿತು ಸಂಪೂರ್ಣಗೊಂಡಿತು ಯಜ್ಙ.
ಸ್ವಯಂ ಯೊಗ್ಯತೆ ಇಲ್ಲದ, ತಪಸ್ಸೂ ಮಾಡದ, ದುರ್ಗುಣಗಳಿಗೆ ಆಗರರಾದ ನಮಗೆ *ಶ್ರೀರಾಮ ಹಾಗೂ ರಾಮ ನಾಮ* ಎಷ್ಟು ಅನಿವಾರ್ಯ ಎಂದು ಏಕಾಂತದಲ್ಲಿ ಸ್ವಲ್ಪ ಯೋಚಿಸೋಣ......
ಸಾಧನೆಯಲ್ಲಿ ತೊಡಗ್ತೇವೆ. ವಿಘ್ನಗಳು ಆಗೇ ಅಪ್ಪಳಿಸಿಕೊಂಡು ಬರುತ್ತವೆ..... ಆ ಪ್ರಸಂಗದಲ್ಲಿ ಬೇಕು *ರಾಮನಾಮ.*
ಪೂಜೆ ಪಾಠ ಊಟ ಜಪ ದಿನದಲ್ಲಿ ಆಗುವ ದೊಡ್ಡ ಯಜ್ಙಗಳು ಇವು. ಸಾಮಾನ್ಯವಾಗಿ ಈ ನಾಲಕರ ಪ್ರಸಂಗದಲ್ಲಿಯೇ ನಮ್ಮ ಸಹಮಿತ್ರನಾಗಿ ನಮ್ಮ ಅರ್ಧಾಂಗನಾಗಿ ನಮ್ಮ ಅವಿಜ್ಙಾತಸಖನಂತೆ ಮೋಬೈಲು - ಹರಟೆ - ಟೀವಿ ಇತ್ಯಾದಿಗಳು ಓಡಿ ಬರುತ್ತವೆ. ಸಾಧನೆಯನ್ನು ಕೆಡಸಿಬಿಡುತ್ತವೆ.
ಹರಟೆಗೆ ಮೋಬೈಲಿಗೆ ಸಮಯ ಮತ್ತೆ ಇದೆ. ಆದರೆ ಪೂಜೆ ಜಪ ಪಾಠ ಊಟ ಇವುಗಳಿಗೆ ಸಮಯ ಮತ್ತೊಂದು ಇಲ್ಲ. ಪೂಜೆ ನಡೀತಾ ಇರತ್ತೆ ಯಾರ ಕಾಲು ಬಂತು... ಏನು ಮೆಸೆಜ್ ಬಂದವು... ಐಪಿಎಲ್ ಸ್ಕೋರ್ ಏನಾಯ್ತು.. ಮೋದಿ ಕ್ಯಾಂಪೇನ್ ಎಲ್ಲಿದೆ... ಇವುಗಳ ಕಡೆಗೆಯೇ ಮನಸ್ಸು ಹರಿಸಿಬಿಡುತ್ತಾರೆ ರಾಕ್ಷಸರು. ಹೀಗಾಗಿ ಆಗುವ ಸಾಧನೆಗಳೂ ಆಗದಂತೆ ಮುತುವರ್ಜಿ ವಹಿಸಿ ನಿಂತಿರುತ್ತಾರೆ ದೈತ್ಯರು.
ಈ ತರಹದ ಕಠಿಣ ಪರಿಸ್ಥಿತಿಯಲ್ಲಿ ಶ್ರೀರಾಮನಾಮ ಸ್ಮರಿಸಿ "ಪೂಜೆ- ಜಪ-ಪಾಠ-ಉಪನ್ಯಾಸ-ಊಟ" ಇವುಗಳಿಗೆ ಕುಳಿತರೆ ದುಷ್ಟರ ಹಾವಳಿ ಯಿಂದ ಶ್ರೀರಾಮ ರಕ್ಷಿಸುತ್ತಾನೆ. ಸಾಧನೆ ಹೆಚ್ಚು ಮಾಡಿಸುತ್ತಾನೆ. ಸಿದ್ದಪುರುಷರನ್ನಾಗಿಸುತ್ತಾನೆ.
ರಾಮನನ್ನು ಸ್ಮರಿಸೋಣ. ಶ್ರೀರಾಮನ ಭಕ್ತರು ಆಗೋಣ. ಶ್ರೀರಾಮನಿಗೇ ಶರಣು ಹೊಗೋಣ. ಎಷ್ಟು ಸಾಧ್ಯವೋ ಅಷದಟು ಶ್ರೀರಾಮನಾಮ ಸ್ಮರಣೆ ಮಾಡೋಣ. ಈಗಿರುವ ಎಲ್ಲ ಯತಿವರೇಣ್ಯರುಗಳಲ್ಲಿ ಅರ್ಧಕ್ಕೂ ಹೆಚ್ಚಾದ ಯತಿಗಳು *ಶ್ರೀರಾಮನ ಸೇವೆಯಲ್ಲಿಯೇ ತೊಡಗಿದ್ದಾರೆ - ಶ್ರೀರಾಮನಿಗೋಸ್ಕರವೇ ತಮ್ಮ ಉಸಿರು* ಎಂಬಂತೆ ಆಗಿರುತ್ತಾರೆ. ವಿಶ್ವಾಮಿತ್ರರಿಗೂ ರಾಮ ಬೇಕು. ಇಂದಿನ ಯತಿಗಳನೇಕರಿಗೂ ಶ್ರಿರಾಮ ಬೇಕು. ನಮಗೇಕೇ ಬೇಡ.. ?? ನಾವೇಕೆ ಸ್ಮರಿಸಬಾರದು... ??
*ನಾವೂ ಆರಂಭಿಸೋಣ....*
*ಶ್ರೀರಾಮನಾಮ ಸ್ಮರಣೆಯನ್ನು.* ಶ್ರೀರಾಮ ಪ್ರೇಮದಿಂದ ಎಮ್ಮನು ಸಲಹುತ್ತಾನೆ. ಶ್ರೀರಾಮ ಮಂದಿರ ನಿರ್ಮಾಣದ ಈ ಪ್ರಸಂಗದಲ್ಲಿ ರಾಮ ರಾಜ್ಯ ನಿರ್ಮಾಣವಾಗಲೇಬೇಕು.
ಬರುವ ಪ್ರತಿಪದಾದಿಂದಾರಂಭಿಸಿ ನವಮೀ ಪರ್ಯಂತ ರಾಮನಾಮ ಜಪ ಮಾಡೋಣ. ರಾಮಾಯಣ ಪ್ರವಚನದಲ್ಲಿ ಭಾಗವಹಿಸೋಣ. ಶ್ರೀರಾಮನನ್ನು ಎಷ್ಟು ಸಾಧ್ಯವಿದೋ ಅಷ್ಟು ಸಂತೋಷ ಪಡಿಸೋಣ.
*ಜೈಶ್ರೀರಾಮ... ಜೈ ಶ್ರೀರಾಮ ... ಜೈಶ್ರೀರಾಮ*
*✍🏽✍ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments