*ವಿಶ್ವಗೀತೆ......*
ಭಗವದ್ಗೀತೇ ಗೊತ್ತು, ನಾಡಗೀತೆ ಗೊತ್ತು, ರಾಷ್ಟ್ರ ಗೀತೆ ಗೊತ್ತು. ಆದರೆ ಈ *ವಿಶ್ವಗೀತೆ* ಯಾವುದು.... ???? ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಕೊನೆಗೆ ಸಿಗಬಹುದು.
ವಿಶ್ವಗೀತೆ ಎಂಬುದು ಇದೆ ಎಂದಾದರೆ, ಆ *ವಿಶ್ವಗೀತೆಗೆ* ಇನ್ನೇಷ್ಟು ಗೌರವ ಕೊಡಬೇಕು... ?? ಕೊನೆಗೆ ಉತ್ತರ .....
ಭಗವದ್ಗೀತೆ, ಭ್ರಮರಗೀತೆ, ಉದ್ಧವಗೀತೆ ಹೀಗೆ ಅನೇಕ ಗೀತೆಗಳು ಗೊತ್ತುಂಟು, ಈ *ವಿಶ್ವಗೀತೆ* ಯಾವುದು... 🤔 ವಿಶ್ವಗೀತೆ ಗೊತ್ತಿಲ್ಲವೇ.... ಛೇ..
ವಿಶ್ವಗೀತೆ ಗೊತ್ತಿಲ್ಲ ಎಂದು ಹೇಳಲು ನಾ ಸಿದ್ಧನಿಲ್ಲ. ವಿಶ್ವಗೀತೆ ಯಾವದೂ ಎಂದು ನಮಗೆ ಚೆನ್ನಾಗಿ ಗೊತ್ತು. ಆದೇ ಯಾವದು.. ?? ಕೊನೆಗೆ ತಿಳಿಯುವದು.
*ವಿಶ್ವಗೀತೆ ಯಾವದು...??*
ಕೃಷ್ಣ ಗೀತೆ ಮೊದಲು ಮಾಡಿ ಉಳಿದೆಲ್ಲ ಗೀತೆಗಳು ಮೋಕ್ಷೋಪಯುಕ್ತ ತತ್ವಜ್ಙಾನವನ್ನು ಕೊಟ್ಟರೆ, ಈ *ವಿಶ್ವಗೀತೆ* ಅವುಗಳ ಅಧ್ಯಯನಕ್ಕೇ ಬೇಕಾದ ಅಧಿಕಾರವನ್ನೇ ಕೊಡುವಂತಹದ್ದು.
ಹಾಗಾದರೆ *ಈ ವಿಶ್ವಗೀತೆ ಯಾವದು..??*
ನೆನಪು ಆಗ್ತಿಲ್ಲ ಅಲ್ಲವೇ.. ?? "ವಿಶ್ವಗೀತೆ" ಎಂದು ಕೇಳ್ತಾ ಇರುವದೇ ಇದು ಮೊದಲಬಾರಿಯಾಗಿದೆ ಎಂದೆನಿಸುತ್ತಿದೆ... ??
ವಿಶ್ವಗೀತೆ ಯಾವದು ಎಂದು ಗೊತ್ತಾದ ಕ್ಷಣಕ್ಕೆ ಅಯ್ಯೋ ಇದೆನಾ.... ಎಂಬ ಉದ್ಗಾರ ಅಂತೂ ಬರತ್ತೆ.
ಅಷ್ಟು ಅದರ ಬಗ್ಗೆ ನಮಗೆ ತಿಳಿದಿದೆ. ಆದರೆ ಈ ಕ್ಷಣಕ್ಕೆ ನೆನಪಾಗದಷ್ಟು ಅದನ್ನು ಮೂಲೆಗಸ ಮಾಡಿದ್ದೇವೆ ಅದುವೂ ಅಷ್ಟೇ ನಿಜ.....
ಹತ್ತಾರು ವರ್ಷದ ಅಧ್ಯಯನ, ಅತ್ಯಂತ ಕಠಿಣ ಶ್ರಮ ಹಾಗೂ ಗುರುಗಳ ಅನುಗ್ರಹದಿಂದ ದೊರೆಯುವದು ಕೃಷ್ಣಗೀತೆಯಾದರೆ, ಅತೀ ಪುಟ್ಟ ವಯಸ್ಸಿಗೇ, ಯಾವ ಶ್ರಮವಿಲ್ಲದೇ, ಒಲೆದುಬಂದದ್ದು *ವಿಶ್ವಗೀತೆ.* ಕೃಷ್ಣಗೀತೆ ಗೀತಾಜಯಂತಿ ದಿನ ಮಾತ್ರ ಪಠಿಸುವದಾದರೆ, *ವಿಶ್ವಗೀತೆ ನಿತ್ಯ ಚಿಂತಿಸುವಂತಹದ್ದು.*
"ಕೃಷ್ಣಗೀತೆ" ಪ್ರತಿಯೊಬ್ಬರಿಗೂ ಕೇವಲ ತಮ್ಮ ಬದಲಾವಣೆಗೆ ಕಾರಣವಾದರೆ, *ವಿಶ್ವಗೀತೆ* ತನಗೂ ತನ್ನ ಎದರು ಇರುವ ಜಗತ್ತಿನ ಬದಲಾವಣೆಗೆ ಕಾಣವಾಗಿರುವಂತಹದ್ದು. ಹಾಗಾದರೇ ಆ ವಿಶ್ವಗೀತೆ ಯಾವದು ಸ್ವಾಮಿ... 😡😡??
ಇಷ್ಟು ಹೇಳಿದಾಗಲೂ ಗೊತ್ತಾಗಲಿಲ್ಲವಾ... ?? ಹಾಗಾದರೆ ಕೊನೆಯವರೆಗೂ ತಾಳು.....
ಕೃಷ್ಣಗೀತೆ ಅವಶ್ಯ ಅಧ್ಯಯನೀಯ ಆದರೆ ಒಂದು ದಿನ ಅಧ್ಯನವೋ ಪಾರಾಯಣವೋ ಬಿಟ್ಟರೆ ನಡೆದೀತು. *ವಿಶ್ವಗೀತೆಯ ಚಿಂತನೆ ಧ್ಯಾನ ಬಿಟ್ಟರೆ ನಡೆಯುವದೇ ಇಲ್ಲ.* ಇದನ್ನು ಓದುವ ನಾವ್ಯಾರೂ ಎಂದಿಗೂ ಬಿಟ್ಟಿರಲಿಕ್ಕಿಲ್ಲ ಎಂದೇ ನನ್ನ ಅಭಿಪ್ರಾಯ.
ನ್ಯಾಸಣ್ಣ... ನೀವು ಬಿಡದಿರಬಹುದು.
ಆದರೆ ನಿತ್ಯವೂ ಅತೀ ಸಣ್ಣವಯಸ್ಸಿನಿಂದ ಬಿಡದೇ ಮಾಡಿದ ಚಿಂತನೆ ಧ್ಯಾನ ಒಂದೂ ಇಲ್ಲ. ಸಂಧ್ಯಾವಂದನೆ, ಬ್ರಹ್ಮಯಜ್ಙ, ದೇವರ ಪೂಜೆ, ಮುಂತಾದವುಗಳನ್ನು ಅಂದು ಇಂದು ಬಿಟ್ಟು ಬಿಟ್ಟು ಮಾಡಿದ್ದೇ ನೆನಪು ಇದೆ. ನಿರಂತರ ಮಾಡಿದ್ದು ಒಂದೂ ಇಲ್ಲ. ಅಂತಹದ್ದರಲ್ಲಿ ಇದ್ಯಾವದು *ವಿಶ್ವಗೀತೆ....????*
ಅಂದು ಇಂದು ಕಾಲಕಾಲಕ್ಕೆ *ಬಿಡುವವರು ನಾವು ಆಗಿದ್ದೇವೆ ಎಂದರೆ ದೀಕ್ಷೆ, ಪ್ರೀತಿ, ಗೌರವ, ಆದರಗಳು ಇಲ್ಲ ಎಂದೇ ಅರ್ಥ* ಅಂತೆಯೇ ನಮಗೆ *ವಿಶ್ವಗೀತೆ* ಯ ಅರಿವೂ ಇಲ್ಲ, ಯಾವದೆಂದು ತಿಳಿಯುತ್ತಿಲ್ಲ.
ಈ *ವಿಶ್ವಗೀತೆಯನ್ನು* ಬಿಡುವವರೋ ಅಥವಾ ಬಿಟ್ಟವರೋ ಆಗಿರುವದರಿಂದಲೇ ಪ್ರತಿಯೊಂದರಲ್ಲೂ ಸೋಲು, ಅಪಜಯ, ಅಪಕೀರ್ತಿಯೇ ಕಟ್ಟಿಟ್ಟ ಬುತ್ತಿಯಾಗಿದೆ. ಅಂತೆಯೇ ಜಯ, ಕೀರ್ತಿ, ಯಶಸ್ಸು, ಹಣದ ಸಾರ್ಥಕತೆ, ಪೂರ್ಣ ನೆಮ್ಮದಿ, ಮುಖದ ದೈವೀಕಳೆ, ಮಾತಾಡಿದ್ದರ ಫಲ, ಸಕಲದ ಸಿದ್ಧಿ ಮೊದಲು ಮಾಡಿ ಎಲ್ಲದರಿಂದಲೂ ದೂರಾಗಿದ್ದೇವೆ. ಕಳೆದುಕೊಂಡಿದ್ದೇವೆ. ಅಷ್ಟೇ ಅಲ್ಲ ನಮ್ಮತನವನ್ನೂ ಕಳೆದುಕೊಂಡಾಗಿದೆ.
ನ್ಯಾಸಣ್ಣ.....!!!!!😡😡
*ವಿಶ್ವಗೀತೆ ಯಾವದು...??*
ಸಿಟ್ಟುಬಂತಾ.... ಕ್ಷಮಿಸಣ್ಣ....😄😄
ಇನ್ನು ತಾಳ್ಮೆ ಪರೀಕ್ಷಸದೇ ಹೇಳಲೇ ಬೇಕು ಎಂದಾದರೆ, "ನಿತ್ಯ ನಿರಂತರ ಧೇನಿಸುವ, ಚಿಂತಿಸುವ ವ್ಯಕ್ತಿಗೆ ತನ್ನ ಹಾಗೂ ತನ್ನವರ ಬುದ್ಧ್ಯಾದಿ ಇಂದ್ರಿಯಗಳನ್ನು ಸರಿಯಾಗಿ ಪ್ರೇರಿಸಿ, ಸರ್ವ ಸಮೃದ್ಧಿಯನ್ನೂ ದಯಪಾಲಿಸಿ, ತನ್ನ ಹಾಗೂ ತನವನ್ನೂ ಉಳಿಸಿ, ಜಗತ್ತಿನಲ್ಲಿ ಎಂದೆಂದಿಗೂ *ಇವನೇ ಗೌರವಾರ್ಹ ಹಾಗೂ ಸಮೃದ್ಧ ಮತ್ತು ಪೂರ್ಣ* ಎಂಬುವದಾಗಿ ಮಾಡುವದೇ "ವಿಶ್ವಗೀತೆ...."
ಉಸಿರು ನಿಂತರೆ ಕೇವಲ ನಾನಿಲ್ಲ, "ವಿಶ್ವಗೀತೆ" ಇಲ್ಲದಿರೆ ನನ್ನತನವೇ ಇಲ್ಲ. ಆ ಮಟ್ಟದಲ್ಲಿ ನಮ್ಮ ಉಸಿರುಗಿಂತಲೂ ಮಿಗಿಲು ಆದ ಗೀತೆ ಎಂದರೆ *ವಿಶ್ವಗೀತೆ -- ಗಾಯತ್ರೀ ಮಂತ್ರ*."
ಉತ್ತರ ಸಿಕ್ಕ ತೃಪ್ತಿ ಆಯಿತು ಅಲ್ವೇ.. 😄😃😀
ನಿತ್ಯವೂ ನಿವೃತ್ತ ಸತ್ಪುರುಷರೆಲ್ಲರೂ ಕನಿಷ್ಠ ಒಂದು ಸಾವಿರ, ಉಳಿದವರು ಐದುನೂರು, ನೂರು ಎಷ್ಟು ಸಾಧ್ಯವೋ ಅಷ್ಟು "ವಿಶ್ವಗೀತೆಯಾದ ಗಾಯತ್ರೀ ಮಂತ್ರ" ವನ್ನು ಜಪಿಸೋಣ. ಹಿಂದಿನ ವೈಭವ ಮರುಪಡೆಯೋಣ.....
ಇಂದಿನ ನಮ್ಮ ಜೀವನಕ್ಕಾಗಿ, ನಾವು ನಮ್ಮ ಸಂಪೂರ್ಣ ಜೀವನವನ್ನೇ ಸಮರ್ಪಿಸಿದ ಹಾಗೆ "ನಿಶ್ಶೇಷ ಸಕಲ ಸಿದ್ದಿಗೋಸ್ಕರ" ಒಂದು ಗಂಟೆ ತ್ಯಾಗಮಾಡೋಣ. ಆ ವಿಶ್ವನಿಯಾಮಕ, ವಿಶ್ವಗೀತೆ ಗಾಯತ್ರೀ ಪ್ರತಿಪಾದ್ಯ ಶ್ರೀ ಸವಿತೃನಾರಾಯಣನನ್ನು ತೋಷಿಸುವದಕ್ಕಾಗಿ ಕೇವಲ ಒಂದು ಗಂಟೆಯಾದರೂ ಸಮರ್ಪಿಸೋಣ.
ಎಲ್ಲರೂ ಏನಂತೀರಾ... ಎಲ್ಲರೂ ಕೈ ಜೋಡಿಸೋಣ..... ಎಲ್ಲರಿಗೂ ಪ್ರೇರಿಸೋಣ... "ವಿಶ್ವಗೀತೆ ಬಿಡುವದೇ ಬೇಡ" ಎಂಬ ಪಣ ತೊಡೋಣ....
*✍🏽✍🏽✍ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments