*ಕಸ... ರಸ*
*ಕಸ... ರಸ*
ಕಸ ಮತ್ತು ರಸಗಳು ಕೂಡಿ ಕೂಡಿ ಇರುವಂತಹವುಗಳು. ರಸವಿದ್ದಲ್ಲಿ ಕಸವಿದೆ, ಕಸವಿರುವಲ್ಲಿ ರಸವಿದೆ. ಕಸ ಬಳಿಸಿದಾಗಲೇ ರಸ. ರಸ ಬಳಿಸಿ ಆದಮೇಲೆಯೆ ಕಸ. ಹೀಗೆ ಕಸ ರಸಗಳು ಒಂದಕ್ಕೆ ಒಂದು ಪೂರಕ.
*ಕೈ ಕೆಸರಾದರೆ ಬಾಯಿ ಮೊಸರು.* ಕನ್ನಡ ಪ್ರಸಿದ್ಧ ನಾಣ್ಣುಡಿ. ಕೈ ಕೆಸರಾಗಬೇಕು ಎಂದರೆ ಕಸ ಇರಬೇಕು. ಕಸವಿದ್ದಲ್ಲೇ ಕೆಸರು. ರಸ ಪಡೆಯಬೇಕು ಎಂದಾದರೆ ಕಸದಲ್ಲಿ ಶ್ರಮಿಸಿ, ಕೆಸರಿನಲ್ಲಿ ದುಡಿದಾಗ ಮುಂದೆ ಬಾಯಿಗೆ ಮೊಸರೆಂಬ ರಸ ಸಿದ್ಧ.
ಕೆಲವೊಮ್ಮೆ ಹೀಗಾಗುವದು..
ಕಷ್ಡದ ದಿನಗಳೆ ತ್ಸುನಾನಾಮಿಯಂತೆ ಅಪ್ಪಳಿಸುತ್ತಿರುವಾಗ, ರಸ ತುಂಬ ದೂರದ ಮಾತು. ಕನಸದ್ಸಿನ ಕುದುರೆ, ಅಥವಾ ಹಗಲ್ಗನಸು ಹೀಗೆ ಆಗಿರುತ್ತದೆ. ಈಗಂತೂ ಕರೋನಾಕಾಲಕಷ್ಟಗಳೂ ಪ್ರಾಣಾಂತಿಕವೇ ಆಗಿದೆ. ಕರೋನಾ ಬಂದರೆ ಸಾವು ಒಂದೆಡೆಯಾದರೆ ದೈನಿಂದಿನ ದುಡಿದು ತಿನ್ನುವವರ ಬದುಕು ಇನ್ನೂ ಘೋರ. ಈ ಪ್ರಸಂಗದಲ್ಲಿ ಕಸವೂ ಇಲ್ಲ. ರಸವೂ ಇಲ್ಲ. ಅನೇಕರ ಸ್ಥಿತಿ ಹೀಗೇ ಇದೆ.
ಕಸವೂ ಇಲ್ಲದ ರಸವೂ ಇಲ್ಲದ ಈ ದುರವಸ್ಥೇಯಲ್ಲಿ ಮುಣುಗಿದಾಗ, ಕಸದಲ್ಲೇ ನಿಂತು, ತಾವು ತಮ್ಮ ಕೈ ಕಸಮಾಡಿಕೊಂಡು, ಕ್ಷಣ ಕ್ಷಣಕ್ಕೆ ಬೆಂಬಲವಾಗಿ ಇದ್ದು, ಉತ್ಸಾಹ ತುಂಬಿ, ಭಯ ಹತಾಶೆಗಳನ್ನು ತೊಡಗಿಸಿ, ಕಾನ್ಫಿಡೆಂಟ್ ತುಂಬಿ, ಅನೇಕ ಉಪಾಯಗಳನ್ನು ತೋರಿ, ವಿಘ್ನಗಳನ್ನು ಪರಿಹರಿಸಿ, ದೈವಬಲವನ್ನು ಹೆಚ್ಚಿಸಿ, ನಮಗೆ ರಸ ಸಿಗಲು ತಮ್ಮ ಕೈ ಕೆಸರು ಮಾಡಿಕೊಂಡಿರುತ್ತಾರೆ. ಅಂತಹವರೂ ಇಂದೂ ನೂರಾರುಜನ ಇದ್ದಾರೆ. ನಮ್ಮ ಪಾಲಿಗೆ ಸಿಗಬೇಕು. ನಾವು ಹುಡುಕಬೇಕು.
ಈತರಹದ ಘೋರ ಸ್ಥಿತಿಯಲ್ಲಿಯೂ ಅಪರೂಪದ, ತುಂಬ ದಿನಗಳಿಂದ ತಡಕಾಡಿದ ರಸ ಸಿಕ್ಕ ಕ್ಷಣಕ್ಕೆ ಆ ಕಸಗಳಲ್ಲಿ ಕೈ ಆಡಿಸಿದ ಎಲ್ಲ ಪರಮ ಹಿತೈಷಿಗಳಾದ, ದೇವರು, ವಾಯುದೇವರು, ದೇವತೆಗಳು, ಗುರುಗಳು, ತಂದೆ ತಾಯಿಗಳು, ಹಿತೈಷಿ, ಮಿತ್ರ, ಸ್ನೇಹಿತ ಮೊದಲು ಮಾಡಿ ಎಲ್ಲರೂ ರಸಸಿಕ್ಕವನಿಗೆ ಕಸವೇ ಆಗಿಬಿಟ್ಟಿರುತ್ತಾರೆ. ಇದುವೇ ತುಂಬ ವಿಚಿತ್ರ.
ಇನ್ನೂ ವಿಚಿತ್ರ ಎಂದರೆ ಈ ಕ್ರಮದಲ್ಲಿ ರಸ ಪಡೆದು, ಕೈ ಕೆಸರು ಮಾಡಿಕೊಂಡವರನ್ನು ಮರೆತೆವೂ ಎಂದಾದರೆ "ದೊರೆತ ರಸ ಬಹಳದಿನ ಉಳಿಯದು, ಉಳಿಸಿಕೊಳ್ಳಲು ಮತ್ತೆ ಕಸದ ಅನಿವಾರ್ಯತೆ ಬಂದೆ ಬರುತ್ತದೆ, ಬರಬೇಕು ತಾನೆ. ಇದುವೇ ಪ್ರಕೃತಿಯ ನಿಯಮ."
ಕಸಮಾಡಿಕೊಂಡ ಕೈಗಳು ಎಂದರೆ suggestion box.
Suggestion box ಉಪಾಯಗಳ ಮೆಟ್ಟಿಲುಗಳನ್ನು ಕೊಟ್ಟ ನಂತರ Dustbin ಆಹಬಹುದು. ಆದರೆ ಮುಂದೊಂದು ದಿನ ಈ ರಸವನ್ನೋ ಅಥವಾ ಬೆರೆ ಮತ್ತೊಂದು ರಸ ಪಡೆಯುಲೋ Dustbin , suggestion box ಆಗುವದರಲ್ಲಿ ಸಂಶಯವೇ ಇರದು. ಆದ್ದರಿಂದ ಎಚ್ಚರಿಕೆಯಿಂದರುವದು ತುಂಬ ಮುಖ್ಯ.
ಹಾಲಿಗೋಸ್ಕರ ಹುಲ್ಲು ಹುಡುಕುತ್ತೇವೆ, ನಮ್ಮ ಆಹಾರಕ್ಕಗಿ ಪಲ್ಯೆ ಹಣ್ಣು ಕಸದಲ್ಲೇ ಹುಡುಕಿ ತರುತ್ತೇವೆ. ರಸ ಸಿಕ್ಕು ಹೊಟ್ಟೆ ತುಂಬಿದ ಕ್ಷಣದಲ್ಲಿ ಉಳಿದ ಹುಲ್ಲು, ಪಲ್ಯೆ, ಹಣ್ಣು, ಗೊಟ್ಟ ಇವೆಲ್ಲ ತಿಪ್ಪೆಗೆ ಎಸೆಯುತ್ತೆವೆ. ಆದರೆ ಆ ತಿಪ್ಪೆಯೇ ಮುಂದೆ ಗೊಬ್ಬರವಾಗಿ ಅಕ್ಕಿ ಬೇಳೆ ಗೋಧಿ ಎಂಬ ಮಹಾರಸ ತುಂಬಿ ತುಳುಕಿ ಬರಲು ಕಾರಣವಾಗುತ್ತದೆ ಎಂಬ ಎಚ್ಚರ ಇರಬೇಕು ಅಷ್ಟೇ. ಒಗೆದದ್ದು ಒಂದೇಬೀಜವಾಗಿರಬಹುದು. ಆ ಬೀಜದಲ್ಲಿ ನೂರಾರು ಹಣ್ಣುಗಳಿವೆ. ಅವೆಲ್ಲ ಹಣ್ಣುಗಳನ್ನು ಮತ್ಯಾರೋ ಬಳಿಸಿಕೊಂಡಾರು...
ಆ ಕಸ ಗೊಬ್ಬರ ಇಲ್ಲದಿದ್ದರೂ ಇವತ್ತು ನಾವು ರಸವನ್ನು ಪಡೆಯುತ್ತೇವೆ ಎಂದರೆ, ನಿಜ... ಆದರೆ ಪಡೆದ ರಸರೂಪದ ಅಕ್ಕಿ, ಬೇಳೆ, ತೊಪ್ಪಲು, ಪಲ್ಯೆ, ಹಣ್ಣು ಮುಂತಾದ ಯಾವದರಲ್ಲೂ ನೈಜ ರಸ ಕಳಕೊಂಡದ್ದು ಒಂದಾದರೆ ರೋಗಗಳಿಗೆ ಆಸ್ಪದವಾದದ್ದು ಮತ್ತೊಂದು. ಈ ತರಹದ. ರಸ ಪಡೆಯುವಂತಾಗುತ್ತದೆ.
ಹಾಗೆಯೇ .....
ರಸ ಪಡೆಯಲು ಪುಣ್ಯವೇ ಇಲ್ಲ. ಇದರಮೇಲೆ ವಿಘ್ನಗಳ ಸರಮಾಲೆ. ಎಲ್ಲವನ್ನೂ ಮೆಟ್ಟಿನಿಂತು ನಾನೇ ಪಡೆಯುವೇ ಎಂದರೆ ಕೆಟ್ಟ ಆಲಸಿ. ಕಸದಲ್ಲಿ ಕೈಆಡಿಸಿ ಕೆಸರು ಮಾಡಿಕೊಳ್ಳಲು ಹೇಸಿಗೆ. ಇವೆಲ್ಲದರ ಮೇಲೆ ಹತಾಶೆಯ ಅಲೆಗಳು. ಅಂತಹ ಪ್ರಸಂಗದಲ್ಲಿ ನಮ್ಮ ಜೊತೆಗೆ ಬೆನ್ನೆಲಬು ಆಗಿ ಇದ್ದು, ಪುಣ್ಯಕೊಟ್ಟು, ವಿಘ್ನಕಳೆದು, ಪರಿಶ್ರಮಿಸಿ, ಹತಾಶೆಗಳನ್ನು ಓಡಿಸಿ, ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡಿ, ರಸ ಪಡೆಯುವಲ್ಲಿ ಯಶಸ್ವಿಯನ್ನಾಗಿಸಿದ, ಪರಮಹಿತೈಷಿಗಳಾದ ದೇವರು... ವಾಯುದೇವರು... ಗುರುಗಳು... ತಂದೆ ತಾಯಿಗಳು... ಮಿತ್ರ ಸಖ ಸ್ನೇಹಿತರುಗಳನ್ನು ರಸ ಸಿಕ್ಕಿದೆ ಎಂಬ ಕಾರಣಕ್ಕೆ ಮರೆತೆವು ಎಂದಾದರೆ Dustbin ಮಾಡಿದರೆ.....
ಮುಂದೊಂದು ದಿನದ ಮಹಾರಸಕ್ಕೆ ಕಾರಣವಾದ ಆ box ಹಾಗೂ Box ಅಲ್ಲಿರುವ dust ಕಸ ಎರಡೂ ಪ್ರಸಂಗ ಬಂದಾಗ ಕೈಕೊಡದಿದ್ದರೂ ಬೆಂಬಲವಾಗಿ ನಿಲ್ಲದ ಪ್ರಸಂಗ ಎದುರಾದೀತು....
ಈ ಮಹಾನ್ ರಸಕ್ಕೆ ಕಾರಣರಾದವರುಗಳ ಅನಿವಾರ್ಯತೆ ಇಲ್ಕದೇ ಮುಂದೆ ನಾವು ರಸವನ್ನು ಪಡೆಯುತ್ತೇವೆ ಎಂದರೆ, ಖಂಡಿತ ಪಡೆಯಬಹುದು, ಆದರೆ ಇಂದು ಕಸವಿಲ್ಲದ ಅಂತೆಯೇ ನೀರಸವಾದ ಹಣ್ಣು ಧಾನ್ಯ ಪಡೆಯುವಂತೆ ಪುಣ್ಯವಿಲ್ಲದ, ವಿಘ್ನಗಳೇ ಭೂಯಿಷ್ಠವಾದ ರಸಪಡೆಯುವಂತೆ ಆಗುವದು.
ಆ ಕಾರಣದಿಂದ ರಸವನ್ನೋ ರಸ ಕಾರಣವಾದ ಕಸವನ್ನೋ ಎಂದಿಗೂ ನಿರ್ಲಕ್ಷ್ಯ ಮಾಡುವದು ಬೇಡ. ಬೆಂಬಲ ಪಡೆಯದೇ ಇರುವದಂತೂ ಸರ್ವಥಾ ಬೇಡ. *ಆಪತ್ತಿಗೊದಗುವದು ನಮ್ಮ ಈ ರಸ ಕಾರಣವಾದ, ಕಸವೆಂಬ ಮುದ್ದು ಅರಗಿಣಿಗಳೆ* ಎಂದು ದೃಢವಾಗಿ ನಂಬಿ ಇರೋಣ.
*✍🏽✍🏽✍🏽ನ್ಯಾಸ.*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
Comments