*ವರ್ಷದ ಕೊನೆದಿನಗಳಲ್ಲಿ "ದಾನ" ಮಾಡೊಣ.....*


 *ವರ್ಷದ ಕೊನೆದಿನಗಳಲ್ಲಿ "ದಾನ" ಮಾಡೊಣ.....*

ಬ್ರಾಹ್ಮಣರಲ್ಲಿ ಇರಲೇಬೇಕಾದ ಹನ್ನೆರಡು ಗುಣಗಳಲ್ಲಿ ಇರುವ ಒಂದು ಗುಣ ದಾನ. ಬ್ರಾಹ್ಮಣನ ಆದ್ಯಕರ್ತವ್ಯಗಳಲ್ಲಿ ಒಂದಾದದ್ದು ದಾನ. ಯಜನ ಯಾಜನ, ದಾನ ಪ್ರತಿಗ್ರಹಗಳು ಬ್ರಾಹ್ಮಣನಿಗೆ ವಿಹಿವೂ ಹೌದು. ಅಂತೆಯೇ  ದಾನವನ್ನು ಸದಾ ಮಾಡುತ್ತಾರೆ. ನಾವೆಲ್ಲರೂ  ಮಾಡುತ್ತೇವೆ. ಒಂದಿಲ್ಲ ಒಂದು ಕಾರಣವನ್ನು ದಾನಕ್ಕೋಸ್ಕರ ಹುಡುಕ್ತಾ ಇರುತ್ತೇವೆ. ಅದರಲ್ಲಿ ಯಾವ ಸಂದೇಹವಿಲ್ಲ.


*ದಾನದ ಸಫಲತೇ....*


ನಾವು ಕೊಡುವ ದಾನ ಹಾಗೂ ದಾನದ ಫಲ, ಕೊಡುವ  ದೇಶ , ದಾನಮಾಡುವ ಕಾಲ, ಯಾರಿಗೆ ಕೊಡುತ್ತಿರುತ್ತೇವೆ ಆ ಪಾತ್ರ, ದಾನು ಕೊಡುವಾಗ ನಾನು ಮಾಡುವ ಚಿಂತನೆ ಇವುಗಳ ಮೇಲೆ ಅವಲಂಬಿಸಿದೆ. 


*ಗೀತೆಯಲ್ಲಿ ದಾನ...*


ಶ್ರೀಕೃಷ್ಣ ಗೀತೆಯಲ್ಲಿ ಈ ವಿಷಯವನ್ನು  ತಿಳುಹಿಸಿಕೊಡುತ್ತಾನೆ " ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ವಿಕಂ ಸ್ಮೃತಮ್ " ಎಂದು. 


ತಾರಮ್ಯವನ್ನು ಒಪ್ಪವ ನಾವು, ದೇಶ ಕಾಲಗಳಲ್ಲೂ ತಾರತಮ್ಯವನ್ನು ಒಪ್ಪುತ್ತೇವೆ. ಉತ್ತಮ ಮಧ್ಯಮ ಅಧಮ ದೇಶ. ಕಂಡ ಕಂಡಲ್ಲಿ ದಾನ ಕೊಡುವದು ಸರ್ವಥಾ ಸಲ್ಲ. ಉತ್ತಮವಾದ ದೇಶವೇ ಆಗಿರಬೇಕು. ಉತ್ತಮ ಕ್ಷೇತ್ರಗಳಲ್ಲಿ, ದೇವಸ್ಥಾನದಲ್ಲಿ, ನಮ್ಮ ಗೃಹದಲ್ಲಿ,  ಉಪನ್ಯಾಸ ಪಾಠಗಳು ನಡೆಯುವ ಪ್ರಸಂಗದಲ್ಲಿ ಹೀಗೆ ಉತ್ತಮದೇಶಗಳು ದಾನಕ್ಕೆ ಯೋಗ್ಯ..


ಕಾಲ... ಕಂಡ ಕಾಲದಲ್ಲಿ ಸರ್ವಥಾ ದಾನ ಕೊಡುವದು ಅಲ್ಲ. ಗೃಹಣ,  ಅಮಾವಾಸ್ಯೆ,  ವ್ಯತೀಪಾತ, ಸಂಕ್ರಮಣ, ಜನ್ಮದಿನ, ಮರಣಸನ್ನಿಹಿತವಾದಾಗ, ಮಗ ಜನಿಸಿದಾಗ ಇವೇ ಅತಿ ಯೋಗ್ಯಕಾಲದಲ್ಲಿ. ನಿತ್ಯದ ಸಂಧ್ಯಾಕಾಲಗಳಲ್ಲಿ, ಗುರು ಹಿರಿಯರು ಬಂದ ಕಾಲದಲ್ಲಿ, ದೇವರ ಪೂಜೆ ನಡೆಯುವ ಕಾಲದಲ್ಲಿ ಹೀಗೆ ಉತ್ತಮ ಕಾಲಗಳನ್ನೇ ಹಡುಕಿ ಹೊಂದಿಸಿ ದಾನ ಕೊಡುವದು. 


ಪಾತ್ರ.. ಸಜ್ಜನ ಸಾತ್ವಿಕ ಅನುಷ್ಠಾನ ನಿರತ, ತತ್ವ ಜ್ಙಾನಿ, ಮಹಾಪುಣ್ಯವಂತ, ಗುರು,  ಆಚಾರ್ಯ ಮುಂತಾದ ಪಾತ್ರರು. ಹೀಗೆ ಯೋಗ್ಯ ಪಾತ್ರರನ್ನು ಹುಡುಕಿ ದಾನ ಕೊಡುವದು. 


ನನ್ನ ಚಿಂತನೆ..  ಈ ದಾನದಿಂದ ಎನ್ನ ಪಾಪ ಪರಿಹಾರ, ಅನಿಷ್ಟ ನಿವೃತ್ತಿ, ಧನಶುದ್ಧಿ, ಸರ್ವೋತ್ತಮವಾದ  ವಿಷ್ಣುಪ್ರೀತಿ,  ಹೀಗೆ ನಾನಾ ಉದ್ದ್ಯೇಶ್ಯಗಳ ಚಿಂತನೆ  ಇವುಗಳನ್ನು ಒಳಗೊಂಡದ್ದಿರೆ ಆ ದಾನ ನಮ್ಮ ಪಾಪಗಳನ್ನು ಪರಿಹರಿಸಿ ಪರ ಲೋಕದಲ್ಲಿ ಮಹಾಸುಖವನ್ನು ತಂದುಕೊಡುತ್ತದೆ. ಅತಿ ಮುಖ್ಯವಾಗಿ ನಾಶವಾಗದ ವಿಷ್ಣು ಪ್ರೀತಿಯನ್ನು ತಂದೊದಗಿಸುತ್ತದೆ.


*ಮಹಾಭಾರತದಲ್ಲಿ ದಾನ....*


"ದಾನಂ ದ್ವಿವಿಧಂ ಪ್ರಾಹುಃ

ಪರತ್ರಾರ್ಥಮಿಹೈವ ಚ |

ಸದ್ಭ್ಯೋ ಯದ್ದೀಯತೆ ಕಿಂಚಿತ್

ತತ್ಪರತ್ರೋಪತಿಷ್ಠತೆ ||"


ಉತ್ತಮ ದೇಶ ಹಾಗೂ ಉತ್ತಮ ಕಾಲಗಳನ್ನೊಳಗೊಂಡ ಅತ್ಯುತಮ ಪ್ರಸಂಗದಲ್ಲಿ ಸಜ್ಜನ, ಗುಣವಂತ, ವಿಷ್ಣುಭಕ್ತ, ತತ್ವಜ್ಙಾನಿಯಾದವನನ್ನು ಹುಡುಕಿಯೇ ದಾನ ಕೊಡುವದು. ಸಜ್ಜನರಿಗೆ ಕೊಟ್ಟ ದಾನದ ಫಲ, ಪರಲೋಕದಲ್ಲಿಯೂ ವೈಭವವನ್ನು  ತಂದು ಕೊಡುತ್ತದೆ. ( ಪರಲೋಕ - ವೈಕುಂಠದವರೆಗೆ)


ಸಜ್ಜನರು ಎಂದರೆ ವಿದ್ವಾಂಸರು, ಬ್ರಾಹ್ಮಣರು. ಅವರಿಗೇ ಯಾಕೆ ದಾನ ಕೊಡುವದು... ??? ಜೀವಮಾತ್ರ ಯಾರಿಗಾದರೂ ನಾವು ದಾನ ಕೊಡುತ್ತೇವೆ. ತಪ್ಪೇನು... ?? ಕೊಬ್ಬಿದ ಬ್ರಾಹ್ಮಣರಿಗೆ ಸರ್ವಥಾ ದಾನ ಕೊಡಲಾರೆ. 


ಬ್ರಾಹ್ಮಣರಿಗೆ ವಿದುಷರಿಗೆ ದಾನ ಸರ್ವಥಾ ಕೊಡಲಾರೆ ಈ ಧೋರಣೆ ಶುದ್ಧತಪ್ಪು. ಶಾಸ್ತ್ರೋಕ್ತ ಫಲಕ್ಕಾಗಿ, ಶಾಸ್ತ್ರೋಕ್ತ ಕ್ರಮದಲ್ಲಿ, ಶಾಸ್ತ್ರೋಕ್ತ ಪಾತ್ರನಿಗೇ ದಾನ ಕೊಡುವದು ಅತ್ಯಂತ ಸೂಕ್ತ.


"ಅಸದ್ಯ್ಭೋ ಯದ್ದೀಯತೆ ತತ್ತು

ತದ್ದಾನಂ ಇಹ ಭುಜ್ಯತೆ ||"


ಬ್ರಾಹ್ಮಣರಲ್ಲದ, ಸಜ್ಜನನಲ್ಲದ, ಅಸಜ್ಜನರಿಗೆ ದಾನ ಕೊಟ್ಟರೆ ತಪ್ಪೇನು.. ?? ತಪ್ಪೇನಿಲ್ಲ.  ಈ‌ ಲೋಕದಲ್ಲಿ ಬದುಕಿದಾಗ ವೈಭವದ ಕಿರ್ತಿ ಸಿಗತ್ತೆ. ಸತ್ತಮೇಲೂ ಕೆಲದಿನ ಆ ಕೀರ್ತಿ ಉಳಿಯುತ್ತೆದೆ. ವಿಷ್ಣುಪ್ರೀತಿಯ ಮುಖಾಂತರ ವೈಕುಂಠದವರೆಗಿನ ಪರಲೋಕ ಸರ್ವಥಾ ಸಿಗುವದಿಲ್ಲ.


ಸಿಕ್ಕದೇಶದಲ್ಲಿ , ಸಿಕ್ಕ ಸಮಯದಲ್ಲಿ, ಅಸಜ್ಜನರಿಗೆ ಕೊಡುವ ದಾನದಿಂದ ಕೇವಲ ಇಹದಲ್ಲಿ ಕೀರ್ತಿ ಯಶಸ್ಸು ಗಳನ್ನು ತಂದೊದಗಿಸಿ ಕೊನೆಗಾಣಿಬಿಡುತ್ತದೆ.ಆದ್ದರಿಂದ ದಾನಕೊಡುವಾಗ ಎಚ್ಚರವಹಿಸಿ ದಾನವನ್ನು ಕೊಡೋಣ.


*ವೇದದಲ್ಲಿ ದಾನ...*


ವೇದದಲ್ಲಿ ದ್ವೇಶಿಗಳಿಗೂ ದಾನ ಕೊಡು ಎಂದು ಹೇಳಿದೆ. ಯಾಕೆಂದರೆ ಆ ದ್ವೇಶಿಯೂ ಮಿತ್ರನಾಗಬಹುದು ಎಂಬ ಕರಣಕ್ಕಾಗಿ. ಈ ತರಹದ ನಾನಾ ಫಲಗಳು ಇವೆ. ದಾನ ಕೊಡುವ ನಮಗೆ ನಮ್ಮ ಅಪೇಕ್ಷಿತ ಫಲಗಳಿಗನುವಾಗಿ ದಾನ ಕೊಡುವ ಸ್ವಾತಂತ್ರ್ಯ ಏನಿದ್ರೂ ನಮ್ಮದೆ. 


ವರ್ಷದ ಕೊನೆ ದಿನಗಳು ಸಮೀಪಿಸಿವೆ. ಕೊನೆಕಾಲದ ದಾನ ಮುಂದಿನ ಹೊಸ ದಿನಗಳಲ್ಲಿ ವೈಭವಕ್ಕೆ ಕಾರಣ. ಆದ್ದರಿಂದ ಮಾಡಿದ ಪಾಪಗಳ ಪರಿಹಾರಕ್ಕಾಗಿ, ಬರುವ ದಿನಗಳಲ್ಲಿ ಜ್ಙಾನ, ವಿಷ್ಣು ಭಕ್ತಿ, ದರ್ಮಿನಿಷ್ಠತೆ ಇವುಗಳನ್ನು ಬೆಳಿಸಿಕೊಳ್ಳುವದಕ್ಕಾಗಿ, ಯಥೇಚ್ಛ, ಯಥಾನುಕೂ ದಾನವನ್ನು ಮಾಡೋಣ ವಿಷ್ಣು ಪ್ರಿಯರೂ ಆಗೋಣ....


*✍🏽✍🏽✍🏽ನ್ಯಾಸ...*

ಗೋಪಾಲದಾಸ

ವಿಜಯಾಶ್ರಮ, ಸಿರಿವಾರ.

Comments

Unknown said…
👌👌👌🙏🙏🙏
Unknown said…
Danada bagge uttama mahiti kottaddakke dhanyavadagalu.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*