*ಮನುಷ್ಯನ ಉಳಿವಿಗಾಗಿ ನಿಸರ್ಗವನ್ನು ಬಳಿಸಬೇಕೆ.. ?? ಅಥವಾ ಮನುಷ್ಯನ ಹಾವಳಿ ಇಂದ ನಿಸರ್ಗವನ್ನು ಉಳಿಸಬೇಕೇ..??*
ಪೃಥವಿ, ನೀರು, ಘಾಳಿ, ಅಗ್ನಿ, ಆಕಾಶಗಳಿಂದ ಕೂಡಿದ ಈ ಭವ್ಯ ನಿಸರ್ಗ ಅತ್ಯದ್ಭುತವೇ ಸರಿ. ಮನುಷ್ಯನ ಜೀವನಕ್ಕೂ ಈ ನಿಸರ್ಗ ಅತ್ಯುಪಯುಕ್ತ. ಈ ನಿಸರ್ಗ ದೆರವರ ಮನೆ. ನಿಸರ್ಗದ ಆಳದೊಳಗೆಯೇ ಎಲ್ಲವರ ಜೀವನ.
ಈ ಪಂಚಭೂತಾತ್ಮಕ ನಿರ್ಸಗದ ಮೂಲವೇ ಈ ಜೀವನ (ಮನುಷ್ಯನ) ಜೀವನ. "ತನ್ನ ಮೂಲವನ್ನೇ ತಾನು ರಕ್ಷಿಸಬೆಕು" ಇದು ಜೀವನ ಅತೀ ಮುಖ್ಯ ಜವಾಬ್ದಾರಿ. ಇಲ್ಲವಾದಲ್ಲಿ ತಾ ಕುಳಿತ ಟೊಂಗೆಯನ್ನೇ ತಾನೇ ಕಡಿದರೆ ಹೇಗೋ ಹಾಗಾಗುತ್ತದೆ. ಈ ಪ್ರಸಂಗದಲ್ಲಿ ತನ್ನ ಜವಾಬ್ದಾರಿಯನ್ನು ಮರೆತು ನಿಸರ್ಗವನ್ನು ಹಾಳು ಮಾಡಿ, ತಾನೂ ನಿರ್ಗತಿಕನಾಗಲು ಮುಂದಡಿ ಇಟ್ಟ ಏಕೈಕ ಜೀವ ಎಂದರೆ ಮನುಷ್ಯನೇ ಎಂದು ಉದ್ಗರಿಸಬಹುದು.
ನಿಸರ್ಗ ಮನುಷ್ಯರಿಗೇ ಅವಷ್ಯವಾಗಿ ಬೇಕು. ಇಂದಿನ ಮನುಷ್ಯ ತುಂಬ ಸ್ವಾರ್ಥಿ. ಕೇವಲ ತನ್ನ ಜೀವನಕ್ಕೋಸ್ಕರ ಒಮ್ಮೆ ನಿಸರ್ಗವನ್ನು ಪ್ರವೇಶಿಸಿದ ಎಂದಾದರೆ, ಮುಂದೆ ಅವನೇ ದೊಡ್ಡ ಕಾಡಗಿಚ್ಚು ಆಗಿ ಮಾರ್ಪಾಡು ಆಗುತ್ತಾನೆ. ಈ ನಡವಳಿಕೆ ತುಂಬ ವಿಚಿತ್ರ ಎಂದನಿಸುತ್ತದೆ.
"ನಮ್ಮ ಬದುಕಿಗೋಸ್ಕರ ನಿಸರ್ಗದ ಉಳಿವಿನ ಆವಶ್ಯಕವೇ ಹೊರತು, ತನ್ನ ಬದುಕಿಗಾಗಿ ನಿಸರ್ಗ" ಎಂದಾಗಬಾರದು. ಒಣ ಮರಗಳ ಜೊತೆಗೆ ಹಸಿ ಈಗ ಈಗತಾನೆ ಚಿಗಿತಿರುವ ಗಿಡಗಳನ್ನೂ ಬೀಳಿಸುವ. ಹೊಸ ಗಿಡಗಳನ್ನು ನೆಡ. ಲಕ್ಷಲಕ್ಷ ಮರಗಳನ್ನು ಕಡಿಯಲು ಹೇಸ. ಭೂಮಿಯನ್ನು ಎಲ್ಲು ಬೇಕೋ ಹೇಗೆ ಬೇಕೋ ಹಾಗೆ ಕೊರೆಯಲು ಸಿದ್ಧ. ಭೂಮಿಗೆ ನೀರು ಸೇರಬಾರದು ಹಾಗೆ ಕಾಂಕ್ರೀಟ್ ವ್ಯವಸ್ಥೆ ಸುವ್ಯವಸ್ಥಿತವಾಗಿ ನಡೆಸಿದ. ಇದು ದೊಡ್ಡ ಬ್ಯುಸಿನೆಸ್ ಆಗಿ ಮಾರ್ಪಾಡಾಗಿದೆ. ಈ ಕ್ರಮದಲ್ಲಿ ಭೂಮಿಯ ಸರ್ವಿಧದ ನಾಶ ಅನಾಯಾಸೇನ ಸಾಗ್ತಾ ಇದೆ. ಇದು ಅಭಿವೃದ್ಧಿಪಥ ಎಂದೇ ನಂಬಿದ್ದಾನೆ. ಮನವರಿಕೆ ಆಗುವದರಲ್ಲಿ ತಾನೇ ಇರುವದಿಲ್ಲ.
ಕಾಡು ನಾಶವಾದರೆ ವನ್ಯಜೀವಿಗಳಿಗೆ ಮನೆಯಿಲ್ಲ. ಅವುಗಳು ನಾಡಿಗೆ ಧಾಳಿ ಮಾಡುತ್ತವೆ. ಆ ಎಲ್ಲ ವನ್ಯಜೀವಿಗಳನ್ನು ಕೊಂದು ಹಾಕಲೂ ಸಿದ್ಧ. ಅದರ ರುಚಿ ತಾಕಿತು ಎಂದಾದರೆ ಕಾಡಲ್ಲೇ ಇರುವ ಪ್ರಾಣಿಗಳನ್ನು ಕೊಲ್ಲಲು ಏನೂ ಸಂಕೋಚ ಮಾಡಿಕೊಳ್ಳಲಾರ. ಕೊನೆಗೆ ಅದನ್ನೂ ತಿನ್ನಲೂ ಹೇಸ... ತಾನೊಬ್ಬ ತಿಂದರೆ ಅನಾಹುತ ಏನಿಲ್ಲ, ನಾಡಿಗೆ ಮಾರಲೂ ಹೋಗುವ. ಪ್ರತಿಯೊಂದರಲ್ಲಿಯೂ ಹೀಗೆಯೇ....
"ದಶ ವೈದ್ಯಸಮೋ ವಹ್ನಿಃ" ಎಂಬ ಶಾಸ್ತ್ರಸಮ್ಮತವಾದ ಆನುಭಾವಿಕ ಮಾತು ಮರೆತದ್ದರ ಪ್ರಭಾವದಿಂದ ಇಂದು ಅಗ್ನಿಯ ಸಂಪರ್ಕ ಬದುಕಿದಾಗಂತೂ ಬರಲ್ಲ. ಸತ್ತಮೇಲೆ ಚಿತಾಸ್ಪರ್ಶಕ್ಕೇ ಅಗ್ನಿಯ ಸಂಪರ್ಕ. ಈ ಕ್ರಮದಲ್ಲಿ ಅಗ್ನಿಯ ನಾಶ. ಸರ್ಕಾರವೇ ಅಗ್ನಿಯು ಬೇಡವೇ ಬೇಡ ಎಂದು ಪಣತೊಟ್ಟು ನಿಂತಿದೆ. ಅಗ್ನಿಯ ಸಂಪರ್ಕ ಕಡೆದು ಕೊಂಡವರಿಗೇನೇ ಸಣ್ಣ ವಯಸ್ಸಿಗೆ ತುತ್ತಾಗ್ತಾ ಇದ್ದಾರೆ.
ನೀರು ಭೂಮಿಯಲ್ಲಿ ಸಿಗುವದೇ ಇಲ್ಲ. 800 1200 mtr ಅಗೆದರೂ ಹನಿ ನೀರು ಸಿಗಲ್ಲ. ಈಗಲೇ ನೀರು ಕೊಂಡು ಖರೀದಿ ಮಾಡುವ ಸ್ಥಿತಿ ಬಂದಿದೆ. ಮುಂದೊಂದು ದಿನ petrol ಖರೀದಿಯಂತೆ ನೀರಿನ ಖರೀದಿ ಬಂದರೂ ಆಶ್ಚರ್ಯವೇನಿಲ್ಲ. ಖರೀದಿ ಮಾಡಿದ ನೀರು ಕುಡಿದವರಿಗೇನೇ water infection ತುಂಬ ಆಗ್ತಾ ಇದೆ.
ವಾಯು ಮಾಲಿನ್ಯ ವಿಪರೀತವಾಗಿದೆ. ದೆಹಲಿಯಲ್ಲಂತೂ "ಶುದ್ದ ವಾಯು ಬೇಕೋ, ದುಡ್ಡು ಕೊಡು" ಎಂಬ ಸ್ಥಿತಿ ಆಗಲೇ ಶುರು ಆಗಿದೆ. ಮುಂದೇನು ಅವಸ್ಥೆ ಬರುತ್ತದೆಯೋ ತಿಳಿಯದು. ಆಕಾಶದ ಸ್ಥಿತಿ ಇನ್ನೂ ಏನಾಗುತ್ತದೆಯೋ ತಿಳಿಯದು...
ಹಿಂದಿನ ಕಾಲದಲ್ಲಿ ಹೀಗೆ ಇರಲಿಲ್ಲ. ಏಕೆಂದರೆ ನಿಸರ್ಗದಮೇಲೆ ತುಂಬ ಭಯ ಭಕ್ತಿಗಳು ಇದ್ದವು. ನಿಸರ್ಗದ ಎದರು ನಾನು ಏನೂ ಅಲ್ಲ, ಅತ್ಯಂತ ದುರ್ಬಲ ಎಂದೇ ತಿಳಿದು ಇದ್ದ.
ಭಕ್ತಿ ಇರುವದರಿಂದ ಗೌರವ ಬೆಳಿಸಿಕೊಂಡಿದ್ದ, ಭಯ ಇರುವದರಿಂದ ಸ್ವಾರ್ಥಪೂರಿತ ಅನರ್ಥದಲ್ಲಿ ತೊಡಗಲಿಲ್ಲ. ಹಾಗಾಗಿ ವನ ನೀರು ಘಾಳಿ ಎಲ್ಲವೂ ಉಳಿಸಿಕೊಂಡು, ಅವುಗಳಿಂದಲೇ ತಾನೂ ಬದುಕಿ ಇದ್ದ.
ಪೃಥವಿ ಸಂಪದ್ಭರಿತವಾಗಿತ್ತು. ನದಿ ಕೆರೆ ಭಾವಿ ಹಳ್ಳ ಸಮೃದ್ಧವಾಗಿದ್ದವು. ಅಗ್ನಿಕಾರ್ಯ, ವೈಶ್ವದೇವ, ನಿತ್ಯ ಯಜನ ಯಾಜನ, ಅಡಿಗೆ ಇತ್ಯಾದಿ ಎಲ್ಲದರಲ್ಲೂ ಅಗ್ನಿಯ ಸಂಪರ್ಕ ಇತ್ತು. ಅಂತೆಯೇ ಶುಗರ್ ಬಿಪಿ ಇತ್ಯಾದಿಗಳಿಲ್ಲದೇ ನೂರು ವರ್ಷ ಬದುಕು ಕಾಣುತ್ತಿದ್ದರು. ವಾಯು ಅತ್ಯಂತ ಶುದ್ದವಾದ ಘಾಳಿಯೇ ಸಿಗುತ್ತಿತ್ತು. ಶುದ್ಧ ಘಾಳಿ ಆರೋಗ್ಯಯುಕ್ತ ಜೀವನಕ್ಕೆ ಸಹಕಾರಿ. ಹಾಗಾಗಿ.......
ಎಲ್ಲರೂ "ನಿಸರ್ಗಕ್ಕೆ ವಿನೀತರಾಗಿ ಇದ್ದು ನಿಸರ್ಗ ಬೇಳಿಸಬೇಕು, ನಿಸರ್ಗ ಉಳಿಸಬೇಕು ಎಂಬ ಮನೋಭಾವ ಹೊಂದಿದ್ದರು. ಇಂದು ಬಹುಪಾಲು ಅಂದರೆ 90% ಕಡಿಮೆಯಾಗಿದೆ." *ಔದ್ಯಮಿಕ ಕ್ರಾಂತಿಯ ನಂತರ ವಿಜ್ಙಾನ ತಂತ್ರಜ್ಙಾನಗಳ ವಿವಿಧ ವಿಕಾರಗಳು ಲಭಿಸುತ್ತಾ ಬಂದ ಹಾಗೆ ಆ ಮಾನವ ಸಹಸ್ರಾಕ್ಷನಾಗುತ್ತಾ , ಸಹಸ್ರಬಾಹುವಾಗಿ ನಿಸರ್ಗವನ್ನು ಬಗ್ಗುಬಡಿಯುತ್ತಾ ಸಾಗುತ್ತಿದ್ದಾನೆ...* ಇದುವೇ ದೊಡ್ಡ ವಿಪರ್ಯಾಸ....
ಪೃಥಿವಿ ಹಾಳಾಗಿದೆ, ನೀರು ಸಿಗುತ್ತಿಲ್ಲ, ಘಾಳಿ ಉತ್ತಮವಾಗಿ ಉಳಿದಿಲ್ಲ ಇದೆಲ್ಲದಕ್ಕೂ ಮೂಲ ಸ್ವಾರ್ಥ. ಹಾಗಾಗಿ
ಸ್ವಾರ್ಥಪೂರಿತ ಹಾವಳಿಯಿಂದ ನಿಸರ್ಗವನ್ನು ಹಾಳುಮಾಡುವದು ಬೇಡ. ಭಯ ಭಕ್ತಿಗಳಿಂದ ಕೂಡಿದ ವಿನಯಗಳಿಂದ ನಿಸರ್ಗವನ್ನು ಉಳಿಸಿ, ಆ ನಿಸರ್ಗದಿಂದಲೇ ಜೀವನವನ್ನೂ ಮಾಡೋಣವೇ ಅಲ್ಲವೇ......
*✍✍✍ನ್ಯಾಸ.*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments