*.......ಪುಷ್ಯಾರ್ಕಾದಿ ಸಮಾಗಮೇ (ಒಂದುಬಾರಿ ಓದೋಣ)


 *.......ಪುಷ್ಯಾರ್ಕಾದಿ ಸಮಾಗಮೇ*

(ಒಂದುಬಾರಿ ಓದೋಣ)


ಪ್ರತೀ ದಿನವನ್ನು ನಾವು, ನಮಗಾಗಿ ಹೇಗೆ ಬಳಿಸಿಕೊಳ್ಳಬಹುದು ಎನ್ನುವದಕ್ಕೆ  *ಗುರು ಪುಷ್ಯಾಮೃತ* ಯೋಗವಿರುವ ಈ ದಿನವೂ ಒಂದು ನಿದರ್ಶನ. 


ಇಂದು ನಮಗೆ ಕಷ್ಟಗಳು ತುಂಬ. ಅಪತ್ತುಗಳು ಅಪಾರ. ಈಗಿನ ಕೆಲ ದಿನಗಳಲ್ಲಿ, ಪ್ರತಿನಿತ್ಯವೂ ಕನಿಷ್ಟ ಎರಡರೆ ಕೆಟ್ಟ ಸುದ್ದಿ ಕಿವಿಗೆ ಬಿದ್ದಿರ್ತಾವ. ಸ್ವಯಂ ನಾವು ಆಪತ್ತುಗಳ ಸುಳಿಗಳಲ್ಲಿ ಇದ್ದೇವೆ. ಆದಾಯ ಕುಂಠಿತವಾಗಿದೆ. ಬರುವ ಆದಾಯ ಸರಿಯಾಗಿ ಹೊಂದಿಸಲು ಕಷ್ಟವಾಗಿದೆ. *ಜಪ ಪಾರಾಯಣಗಳೂ ಕುಂಠಿತವಾಗಿವೆ.* ಘೋರದಿನಗಳ ಅರಿವು ಅಂತೂ ನಮಗಾಗಿದೆ.   ಹೀಗಿರುವಾಗ.....


*ನಾಳೆಯದಿನವನ್ನೂ ಯಾಕೆ ಬಳಿಸಿಕೊಳ್ಳಬಾರದು......*


ಅನುಭವಿಸಿದ ಒಳ್ಳೆಯ ದಿನಗಳು ಬರಲು, ಅತ್ಯುತ್ತಮ ಸುದ್ದಿಗಳು ಕೇಳಲು, ಉತ್ತಮ ವಿಚಾರ ರೂಢಿಸಿಕೊಳ್ಳಲು, ಜಪ ಪಾರಾಯಣ ಸುಸೂತ್ರವಾಗಿ ನಡೆಯಲು, ಸಂಪಾದನೆ ಸರಾಗವಾಗಿ ಆಗಲು, ಅನಿಷ್ಟ ಕಳೆದುಕೊಳ್ಳಲು, ಆಪತ್ತುಗಳಿಂದ ಗೆದ್ದುಬರಲು, *ದೇವರ ದೇವತೆಗಳ ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಲು* ನಾಳೆಯ ದಿನವನ್ನು ಬಳಿಸಿಕೊಳ್ಳಣ ಅಲ್ಲವೇ...


*ಹೇಗೆ ಬಳಿಸಿಕೊಳ್ಳುವದು.....*


ದೇವರ ಗುರುಗಳ ಅನುಗ್ರಹದಿಂದ ನಾಳೆ  *ಗುರು ಪುಷ್ಯಾಮೃತ* ಯೋಗ ಒದಗಿದೆ. ಪ್ರಾತಃಸ್ಮರಣೀಯ ಅಪ್ಪಣ್ಣಾಚಾರ್ಯರು ತಿಳಿಸುತ್ತಾರೆ ಈ ದಿನದಂದು *ರಾಯರ ಸ್ತೋತ್ರ ಪಾರಾಯಣ* ಮಾಡುವದರಿಂದ ರಾಯರ ಪರಮಾನುಗ್ರಹ ಆಗತ್ತೆ ಎಂದು. *ದೈವ ವಶಾತ್ ನಮಗೆಲ್ಲ ರಾಯರ ಸ್ತೋತ್ರವೂ ಬರುತ್ತದೆ* ಹೀಗಿರುವಾಗ ಯಾಕೆ ನಾಳೆ ಪಾರಾಯಣ ಮಾಡಬಾರದು.... ????  ಕನಿಷ್ಟ ಹತ್ತು ಬಾರಿ ಪಾರಾಯಣ ಮಾಡಲು ಕೇವಲ ಇಪ್ಪತ್ತು ನಿಮಿಷ, ಮೂವತ್ತು ನಿಮಷಗಳು ಬೇಕಾಗುತ್ತದೆ. ಅಷ್ಟು ಸಮಯವೂ ಇದ್ದೇ ಇದೆ. ಹಾಗಾಗಿ ನಾವೆಲ್ಲರೂ ಸೇರಿ ಯಾಕೆ "ರಾಯರ ಸ್ತೋತ್ರ" ಪಾರಾಯಣ ಮಾಡಿ ನಾಳೆಯ ದಿವನ್ನು ಬಳಿಸಿಕೊಂಡು ಸಾರ್ಥಕ ಮಾಡಿಕೊಳ್ಳಬಾರದು... ???? 


ಈ  ಲೆಖನ ಕನಿಷ್ಟ 3000 ಜನರಿಗೂ ಹೆಚ್ಚಿನ ಜನರಿಗೆ ತಲುಪತ್ತದೆ. ಓದಿದ ನೂರೇ  ಜನರು ಹತ್ತುಬಾರಿ ಪಾರಾಯಣ ಮಾಡಿದರೂ *ಸಾವಿರದೆಂಟು ಸಲ ಪಾರಾಯಣ* ಮಾಡಿದ ಸೌಭಾಗ್ಯಕ್ಕೆ ಭಾಗಿಯಾಗುತ್ತದೆ ಈ ನಮ್ಮ ಭವ್ಯ ಸಮಾಜ. 


ನಮ್ಮ ನಮ್ಮ ಆಪತ್ತುಗಳ, ನಮ್ಮ ವಿಶಾಲ ಕುಟುಂಬದ ಆಪುತ್ತುಗಳ, ಭವ್ಯ ಸಮಾಜದ ಆಪತ್ತುಗಳ ಪರಿಹಾರಕ್ಕೆ *ರಾಯರ ಸ್ತೋತ್ರ* ದ ಪಾರಾಯಣ ಮಾಡೋಣ. ರಾಯರ ಅಂತರ್ಯಾಮಿ ದೇವತೆಗಳ ಅಂತರ್ಯಾಮಿ ವಾಯುದೇವರ ಅಂತರ್ಯಾಮಿ ಲಕ್ಷ್ಮೀ ನಾರಾಯಣರ ಅನುಗ್ರಹಕ್ಕೆ ಪಾತ್ರರಾಗೋಣ. 


*✍🏽✍🏽ನ್ಯಾಸ..*

ಗೋಪಾಲದಾಸ

ವಿಜಯಾಶ್ರಮ, ಸಿರವಾರ.

Comments

ಅದ್ಭುತ ಲೇಖನ. ಸಾರ್ಥಕ ವೆನಿಸಿತು .
NYASADAS said…
ಧದನ್ಯವಾದ
Anonymous said…
ನಾನೂ ೨೧ ಸಲ ಪಾರಾಯ ಮಾಇದ್ದೇನೆ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*