*ಆಪತ್ತಿದೊಗುವದು ಆ ಮುದ್ದು ಅರಗಿಣಿಯು*


 *ಆಪತ್ತಿದೊಗುವದು ಆ ಮುದ್ದು ಅರಗಿಣಿಯು*


ಆಪತ್ತುಗಳು ಬೆಂಬಿಡದಭೂತಗಳು. ಅತೀ ಸಣ್ಣ ಆಪತ್ತುಗಳಿಂದಾರಂಭಿಸಿ ಅತೀದೊಡ್ಡ ಆಪತ್ತು ಯಾವ ಕ್ಷಣಕ್ಕೆ ಹೇಗೆ ಬಂದು ಅಪ್ಪಳಿಸುತ್ತದೆಯೋ ತಿಳಿಯದು. 


*ಇಂದಿನ ಮಹಾಮಾರಿ.... ಮಹಾ ಆಪತ್ತು*


*ಕರೋನಾ* ಎಂಬ ಮಹಾ ಆಪತ್ತು ಜಗತ್ತಿಗೇ ಬಂದು ಇಂದಿಗೆ ವರ್ಷಗಳು ಉರುಳುತ್ತಾ ಬಂತು. ಇಂದಿಗೂ ಆಪತ್ತಾಗಿಯೇ ಇದೆ. ಇದಕ್ಕೆ ಪರಿಹಾರ ಇರುವದು ನಮ್ಮ ಕೈಯಲ್ಲಿ ಎಷ್ಟಿದೆಯೋ ಅಷ್ಟಕ್ಕೂ "ನೂರುಪಾಲು ಹೆಚ್ಚು ದೇವರ ಕೈಯಲ್ಲಿ ಇದೆ" ಇದು ಪ್ರತಿಶತಃ ಸಾವಿರದಷ್ಟು ನಿಶ್ಚಿತ. 


*ಮರೆಯುವದು ಸರ್ವಥಾ ಬೇಡ....*


ಕರೋನಾ ಹೋಗಿದೆ ಎಂದು ಮರೆಯುವದಾಗಲಿ, ಅಥವಾ ರಕ್ಷಿಸುವ ದೇವರನ್ನಾಗಲಿ ಮರೆಯುವದು ಸರ್ವಥಾ ತರವಲ್ಲ. ನಿತ್ಯವೂ "ನಮ್ಮ ಎದುರಿನವನಲ್ಲಿ ಕರೋನಾ ಇದೆ" ಎಂಬ ಎಚ್ಚರಿಕೆ ಒಂದಾದರೆ,  "ಈ ಆಪತ್ತು ಬರದಿರುವಂತೆ ನೋಡಿಕೊಳ್ಳುವ, ಬಂದಮೇಲೆ ಪರಿಹರಿಸುವ ದೇವರನ್ನೂ ದೇವತೆಗಳನ್ನೂ" ಮರೆಯುವದು ಸಲ್ಲ. 


*ಬಾರವೋ ಭಯಗಳು ಬಂದರೋ ನಿಲ್ಲವು.....*


ನಿತ್ಯದಲ್ಲಿಯೂ ರಕ್ಷಿಸುವ ದೇವರ ಎಚ್ಚರಿಕೆಯೊಂದಿಗೆ "೧)ನಿತ್ಯ ನರಸಿಂಹ ಧನ್ವಂತ್ರಿ ಸುದರ್ಶನ ಈ ಮಂತ್ರಗಳ ಜಪ, ೨) ಮನ್ಯಸೂಕ್ತ ದುರ್ಗಾಸ್ತೋತ್ರ ವಿಷ್ಣು ಸಹಸ್ರನಾಮ, ಗೀತಾ ಹನ್ನೊಂದನೇಯ ಅಧ್ಯಾಯ, ಸುಂದರಕಾಂಡ, ರಾಯರಸ್ತೋತ್ರ ಪಾರಾಯಣ - ೩) ತಿಂಗಳಿಗೊಮ್ಮೆಯಾದರು ಪವಮಾನ ನವಗ್ರಹ ನರಸಿಂಹ ಮಂತ್ರಗಳ ಹವನ, ೪) ಸ್ತ್ರೀಯರೆಲ್ಲರೂ ನರಸಿಂಹ ಧನ್ವಂತ್ರಿ ದುರ್ಗಾ ಸುಳಾದಿ, ಮಧ್ವನಾಮ, ಕೇಶವನಾಮ ಇವುಗಳ ಪಾರಾಯಣ, ಎಲ್ಲರೂ ಸಮಯದೊರೆಗಾಲೊಮ್ಮೆ ಹರೇರಾಮರಾಮ ಹರೇರಾಮ, ಅಚ್ಯುತಾನಂತ ಗೋವಿಂದ, ಇತ್ಯಾದಿಗಳ ಪಾರಾಯಣ ನಾಮಸ್ಮರಣೆ ಮಾಡುತ್ತಾ ದೇವರನ್ನು ದೇವತೆಗಳನ್ನು ಗುರುಗಳನ್ನು ನೆನೆಸುವ ಸತ್ಸಂಕಲ್ಪ ಇಂದೇ ಮಾಡೋಣ. ಭಯಗಳು ಆಪತ್ತುಗಳು ಬರುವದೇ ಇಲ್ಲ. ಬಂದರೂ  ನಿಲ್ಲುವದಿಲ್ಲ. 


*........ ಹಾರಿಹೋಗುವವು ದಶದಿಕ್ಕುಗಳಿಗೆ*


ದೇವರ ದೇವತಾ ಗುರುಗಳನ್ನು ನಿರಂತರ ಸ್ಮರಿಸುತ್ತಾ ಭಕ್ತರು ಎಂದು ನಾವು  ಎಂದಾದರೆ, ಭಕ್ತರಿಗೆ ಆಪತ್ತುಗಳು ಬರುವದೇ ಇಲ್ಲ ಪ್ರತಿಶತಃ ನಿಶ್ಚಿತ. ಪ್ರಾರಬ್ಧವಶಾತ್ ಆಪತ್ತುಗಳು ಬಂದರೂ ನಮ್ಮ ಬಳಿನಿಲ್ಲದೇ *ದಿಕ್ಕಪಾಲಾಗಿ ಓಡಿಹೋಗುತ್ತವೆ* ಇದುವೂ ಅಷ್ಟೇ ನಿಶ್ಚಿತ. 


*ಒಂದು ಸಂಕಲ್ಪ ಮಾಡೋಣ...*


ನಾಳೆಯಿಂದ ಜಗತ್ತಿಗೆ ಬಂದ ಈ ಆಪತ್ತು ಪರಿಹಾರಕ್ಕಾಗಿ *ಕೇವಲ ಮೂವತ್ತು ನಿಮಿಷದ ಸಮಯ ದೇವರ ದೇವತೆಗಳ ಸಂತೃಪ್ತಿಗೋಸ್ಕರ ಮೀಸಲಿಡುವೆ* ಎಂದು ಈ ಲೇಖನ ಓದಿದ ನನ್ನ ಆತ್ಮೀಯರಲ್ಲರೂ ಸೇರಿ ಸತ್ಸಂಕಲ್ಪ ಮಾಡಿ, ಮೇಲೆ ತಿಳಿದ, ನಮ್ಮ ನಮ್ಮ ಗುರುಗಳು ಆಚಾರ್ಯರು ತಿಳಿಸಿದ, ಶ್ರೀಗಳವರು ಆಜ್ಙಾಪಿಸಿದ ಜಪ ಪಾರಾಯಣ ಹೋಮ ಹವನ ಸ್ಮರಣ ಇತ್ಯಾದಿ ಈ ಸೇವೆಯಲ್ಲಿ ತೊಡಗಿಕೊಳ್ಳೋಣ ಎಂದು ನಿಮ್ಮವನಾದ ನಾನು ಅತ್ಯಂತ ಸಲುಗೆಯಿಂದ ಆಗ್ರಹಪೂರ್ವಕ ವಿನಂತಿಸಿಕೊಳ್ಳುತ್ತೇನೆ.... 


ನಮ್ಮ ಆಪತ್ತುಗಳು ಎದುರಾದಾಗ ಒಂದುಗಿಬಂದು ರಕ್ಷಿಸುವದು ಭಗವಂತನೆಂಬ ಮುದ್ದು ಅರಗಿಣಿ ಮಾತ್ರ. ಈ ಲೇಖನ ಹೆಚ್ಚಿನ ಜನರಿಗೆ ತಲಿಪಿಸೋಣ. ನೀವೂ ಸಂಕಲ್ಪ ಮಾಡಿ. ನಾನೂ ಮಾಡುವೆ. ನಮ್ಮವರಿಂದಲೂ ಮಾಡಿಸೋಣ. ಉದ್ದೇಶ ದೇವರ ಸಂತೃಪ್ತಿಯೇ....


*✍🏽✍🏽ನ್ಯಾಸ...*

ಗೋಪಾಲದಾಸ

ವಿಜಯಾಶ್ರಮ, ಸಿರವಾರ.

Comments

Anonymous said…
Adbhutaaaa
Anonymous said…
Prama sundara, atyupyuktaaaaa
ಜಗನ್ನಾಥ ದಾಸರಿಗೆ ಆಯಸ್ಸನ್ನು ದಾನ ಮಾಡಿದ ಭಾಗಣ್ಣ. ನಿಜಕ್ಕೂ ಹರಿದಾಸರು ನಮಗೆ ಆಪದ್ಭಾಂದವರಾಗಿದ್ದಾರೆ.
Nyasa said…
Uttama,lekhana

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*