*ಇರುವೆ ..... ಮರ = ಮಹಾತ್ಮಾ*



 *ಇರುವೆ ..... ಮರ = ಮಹಾತ್ಮಾ*


ಮಾನವ ಇರುವೆಯಂತೆಯೂ ಇರಬೇಕು, ಮರದಂತೆಯೂ ಆಗಬೇಕು.  ಹಾಗಾದರೆ ಅವನು ಮಹಾತ್ಮನೇ ಆಗುವ. 


🐜 ಇರುವೆ ಸಿಹಿಯ ಸನಿಹವೇ ಹೋಗುವಂತೆ, ಸಕಾರಾತ್ಮಕ ವಿಚಾರಗಳೇ ತುಂಬಿರಬೇಕು. ಸಕಾರಾತ್ಮಕತೆ ಮಹತಿಗೆ ಮಾರ್ಗ. 

 ಗುಡ್ಡ ನೀರು ಗೊಡೆ ಪರ್ವತ ಮೊದಲಾದ ಎಷ್ಟೇ ಕಷ್ಟದ ದಾರಿ ಎದುರಾದರೂ ತನ್ನ ನಾಜೂಕುತನದಿಂದ ತನ್ನ ದಾರಿಯನ್ನು ಅತ್ಯಂತ ವೈಭವದಿಂದ ತಾನೇ ಮಾಡಿಕೊಳ್ಳುತ್ತದೆ ಇರುವೆ. ಮಹಾತ್ಮರೂ ಹಾಗೆಯೇ.

ತನ್ನವರ ಗುಂಪು ನಿರ್ಮಾಣ ಮಾಡಿಕೊಳ್ಳುತ್ತದೆ. ಏನು ಕಾರಣಕ್ಕೂ ತಮ್ಮವರು ನಡೆದ ದಾರಿಯನ್ನು ಬಿಟ್ಟು ಬೇರೆ ಮಾರ್ಗವನ್ನು ಹಿಡಿಯುದಿಲ್ಲ ಇರುವೆ. ಮಹಾತ್ಮರೂ ಹಾಗೆ ತನ್ನವರು ನಡೆದ ದಾರಿಯಲ್ಲೇ ನಡಿಯುವವರು ಹಾಗೂ ತನ್ನವರನ್ನೂ ನಡೆಸುವವರು. 

ಗುಂಪಿಗೆ ಬಲವಿದೆ ಎಂದೇ ತೋರಿಸಿಕೊಡುತ್ತದೆ ಇರುವೆ. ತಾನು ಆರಿಸಿಕೊಂಡ ಉತ್ತಮ ದಾರಿಯನ್ನು ನಾವು ಎಷ್ಟು ಬದಲಾಯಿಸಿದರೂ ಅದೇ ದಾರಿಗೆ ಮತ್ತೆ ಮರಳುತ್ತದೆ. ಛಲ ಬಿಡುವದಿಲ್ಲ. ತನ್ನ ಆಹಾರಕ್ಜಾಗಿ ಎಂದಿಗೂ ಇನ್ನೊಬ್ಬರಿಗೆ ಕೈಯೊಡ್ಡುವದಿಲ್ಲ. *ಹಾಡಿದರೆ ಎನ್ನ ಒಡೆಯನ ಹಾಡಯವೆ - ಬೇಡಿದರೆ ಎನ್ನ ಒಡೆಯಗೆ ಬೇಡುವೆ* ಎನ್ನುವವರು ಮಹಾತ್ಮರು.

ತಾನು ಕಟ್ಟಿದ ಮನೆಯಲ್ಲಿ ಹಾವು ದೌರ್ಜನ್ಯದಿಂದ ಬಂದು ವಾಸ ಮಾಡಿದರೂ, ಬೇರೆಯೊಂದು ಮನೆಕಟ್ಟಲು ಯೋಚಿಸುತ್ತದೆಯೇ ಹೊರತು ಅಳತಾ ಕೂಡುವದಿಲ್ಲ.  ಹೀಗೇ ನಾನಾವಿಧ ಗುಣಗಳು ಇರುವಿಯಲ್ಲಿ ಉಂಟು... ಮಹಾತ್ಮರೂ ಅಷ್ಟೆ ತಮ್ಮ ವರ್ಚಸ್ಸಿನಿಂದ ಮತ್ತೊಂದು ಗುಂಪು ನಿರ್ಮಿಸುತ್ತಾರೆ. ಕಳೆದದ್ದನ್ನು ನೆನಿಸಿ ಅಳುವದಿಲ್ಲ.


🌳 ಮರ....

ಇಂದಿನ ದಿನಗಳಲ್ಲಿ ಧರ್ಮಲೋಲುಪರು ತುಂಬ. ತಾವು ಮಾಡುವದಿಲ್ಲ ನಮ್ಮಿಂದಲೂ ಮಾಡಿಸುವದಿಲ್ಲ. ಆಗ ವೃಕ್ಷದಂತೆ ಘಟ್ಟಿಯಾಗಿ ತಳ ಊರಿ ನಿಲ್ಲುವದು ಧಾರ್ಮಿಕನಿಗೆ ಅನಿವಾರ್ಯ. ಮಹಾತ್ಮರಿಂದಲೇ ಕಲಿಯಬೇಕು. 

ಸ್ವಾರ್ಥವಿದ್ದಾಗಲೆಲ್ಲ ತನ್ನನ್ನು ಎಷ್ಟು ಜನ ರುಬ್ಬಿಸಿಕೊಂಡರೂ, ಮನಸೋ ಇಚ್ಛೆ ಬಳಿಸಿಕೊಂಡರೂ, ನಿಃಸ್ವಾರ್ಥಿತನ ಮರೆಯಬೇಕು ಎನ್ನವದಕ್ಕೆ ಮರ ಒಂದು ಉದಾಹರಣೆ.  ನೀರು ಹಾಕಿ ಬೆಳಿಸುವದು ಕೇವಲ ಹಣ್ಣಿನ ಹೂವಿನ ಲಾಭವಿದ್ದಾಗ ಮಾತ್ರ. ಅದಿಲ್ಲದಿರೆ ಆ ಮರ ನೀರು ಎಂದಿಗೂ ಕಾಣುವದಿಲ್ಲ. ಆದರೂ ಹಣ್ಣು ಹೂವು ಕೊಡುವದನ್ನು ನಿಲ್ಲಿಸುದಿಲ್ಲ. ಮಹಾತ್ಮರು ಹಾಗೆಯೇ.


ತನಗೆ ಕೆಡಕು ಮಾಡುವವನಿಗೆ ಹಿತ ಮಾಡುತ್ತದೆ ಮರ. ಸ್ವಾರ್ಥಕ್ಕಾಗಿ ಬಲಿಷ್ಠವಾದ ಕಾಂಡವನ್ನು  ಕತ್ತರಿಸಲು ಹೊರಟ ಮಾನವನಿಗೆ ಅದೇ ಮರ ನೆರಳು ಕೊಟ್ಟು ಸುಧಾರಿಸಿಕೋ, ನಂತರ ನನ್ನನ್ನು ಪೂರ್ಣ ಕಡಿದು ಹಾಕು ಎಂದೆನುತ್ತದೆ ಮರ. ಮಹಾತ್ಮರೂ ತನಗೆ ಕಿರುಕಳ ಕೊಡುವವನಿಗೂ ಒಳಿತಾಗಲಿ ಎಂದೇ ಬಯಸುವವರು. 

ತಾನು ತನ್ನ ಎಲೆ ಟೊಂಗೆ ಚಿಗುರು ಹೂ ಹಣ್ಣು ನೆರಳು ಎಲ್ಲವೂ ಪರರಿಗಾಗಿಯೇ ಜೀವನ ಎಂಬಂತೆ ವಿಷಾಲವಾಗಿ ಬೆಳೆದು ಆಶ್ರಯದಾತವಾಗಿದೆ ಮರ. ಮಹಾತ್ಮರ ನಡೆ ನುಡಿ ಜೀವನ ಮಾತು ನೋಟ ಜಪ ತಪ ಎಲ್ಲವೂ ತಮ್ಮರಿಗಾಗಿಯೇ ಇಟ್ಟುಕೊಂಡಿರುತ್ತಾರೆ.


ವಿಚಿತ್ರವೇನೆಂದರೆ ಈ 🐜🌳ಇಬ್ಬರಿಗೂ  ಶತ್ರುಗಳೆ ಹೆಚ್ಚು. ಕೊನೆಗೆ ಸಾಯುತ್ತವೆ. ಸಾಯುವಾಗಲೂ ತಮ್ಮ ಆದರ್ಷವನ್ನು ಬಿಟ್ಟುಕೊಟ್ಟು ಹೋಗುತ್ತವೆ. ಮಹಾತ್ಮರೂ ಅಷ್ಟೇ ಅಲ್ಲವೆ......

ಶ್ರೀಮಟ್ಟೀಕಾಕೃತ್ಪಾದರು, ವ್ಯಾಸರಾಜರಯ, ರಘೂತ್ತಮರು, ಮಂತ್ರಾಲಯ ಪ್ರಭುಗಳು, ಯಾದವಾರ್ಯರು, ಶ್ರೀಸತ್ಯಧ್ಯಾನರು, ದಾಸರಾಯರುಗಳು,  ನಮ್ಮ ಪರಮಗುರುಗಳು, ನಮ್ಮ ಗುರುಗಳು ಇತ್ಯಾದಿ ಅನೇಕ ಧಾರ್ಮಿಕ ಮುಖಂಡರು ಈ ಎಲ್ಲ ಮಹನೀಯರಿಗಳಿಗೂ ಶತ್ರುಗಳು ತುಂಬ. ಕಠಿಣ ದಾರಿ. ಅತ್ಯಂತ ನಾಜೂಕುತನದಿಂದ ಆಚಾರ್ಯರ ಸಿದ್ಧಾಂತ ಸ್ಥಾಪನೆ. ನಿಂತನೀರಾಗದೆ ನಿತ್ಯ ಹೊಸತನವನ್ನು ಸೂಸುವಂತೆ ಬೆಳೆಯಬೇಕು.  ವಿಘ್ನಗಳು ಕೋಟಿ ಕೋಟಿ ಆದರೂ ಎಂದಿಗೂ ಎದೆಗುಂದಲಿಲ್ಲ. ತಮ್ಮ ನಿಸ್ವಾರ್ಥತೆಗೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ತಮ್ಮ ಮಹಾನ್ ಉದ್ದೇಶವನ್ನು ಸಾಧಿಸಿ ಮರದಂತೆ ಹೆಮ್ಮರವಾಗಿ ಬೆಳೆದು  ಬಂದ ಸ್ವಾರ್ಥಿ ಎಲ್ಲ ಮಾನವರಿಗೂ ಅನೇಕ ವಿಧದಿಂದ  ಆಶ್ರಯದಾತರಾದರು. 

ಕೆಲವರಿಗೆ ಇರುವೆಯಷ್ಟೇ ಆಯುಷ್ಯ, ಮತ್ತೆ ಕೆಲವರಿಗೆ ಮರದಂತೆ ಸುದೀರ್ಘ ಆಯುಷ್ಯ. ಆದರೆ ಇರುವೆ ಮರಗಳಲ್ಲಿಯ ಗುಣಗಳು ಮಾತ್ರ ಕೆಲವರಲ್ಲಿಯೇ.

ಧಾರ್ಮಿಕರಿಗೆ  ಆಯು ಅರೋಗ್ಯ ಮೊದಲು ಮಾಡಿ  ಶತ್ರುಗಳೆ ತುಂಬ. ಹಾಗಾಗಿ ಕಣ್ಣಿಗೆ ಇಂದು ಕಾಣದಿದ್ದರೂ ತಮ್ಮ ಮಹಾನ್ ಆದರ್ಷಗಳನ್ನೇ ಉಳಿಸಿ ಹೋಗಿದಾರೆ. ಅವುಗಳ ಪಾಲನೆ ಬನಮ್ಮಿಂದ ಆಗುವಂತೆ ದೇವರಲ್ಲಿ ಗುರುಗಳಲ್ಲಿ ಬೇಡಿಕೊಳ್ಳೋಣ.


*ಮಹಾತ್ಮರಿವರು...*

ಸಮಸ್ತ ಸಜ್ಜನರ ದುಃಖಗಳನ್ನು ತಮ್ಮ ದುಃಖಳೆನ್ನುವ, ಸಜ್ಜನರ ದುಃಖಗಳನ್ನು ಅರಿತು ಕಳವಳಗೊಳ್ಳುವ. ಆ ದುಃಖದ ಪರಿಹಾರ ಉಪಾಯಗಳನ್ನು ಶೋಧಿಸುವ. ಶೋಧಿಸಿದ ಅನೇಕ ಉಪಾಗಳಲ್ಲಿ, ಪರಿಣಾಮಿಕಾರಿಯಾದ, ನಿತ್ಯ ಸತ್ಯವಾದ ಉಪಾಗಳನ್ಮು ಗುರುತಿಸುವ. ಗುರುತಿಸಿದ ಉಪಾಯಗಳನ್ನು ಸಾಕಾರಗೊಳಿಸುವದರಲ್ಲೇ ಇಡೀ ಜೀವನವನ್ನು ವ್ಯಯಿಸಿ, ಯಶಸ್ವಿಯಾಗುವ ವ್ಯಕ್ತಿಗಳೇ ಮಹಾತ್ಮರು...*



*✍🏻✍🏻✍🏻ನ್ಯಾಸ.*

ಗೋಪಾಲ ದಾಸ.

ವಿಜಯಾಶ್ರಮ. ಸಿರವಾರ.

Comments

ನೀ ಇರುವೆಯಂತಾದರೆ,
ಎಲ್ಲರೊಡನೆ ಸಂತೋಷದಿಂದ
ಇರುವೆ
Unknown said…
Adbutha .Olleya thathwa vichaara munduvareyali nimma sadhane . Ide namma prarthane .
Sumathi

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*