*ತುಳಿಯುವವರು ಬಲಿಷ್ಟರಾಗಿಲ್ಲ - ತುಳಿತಕ್ಕೆ ಒಳಗಾದವರು ದುರ್ಬಲರಾಗಿದ್ದಾರೆ*


 *ತುಳಿಯುವವರು ಬಲಿಷ್ಟರಾಗಿಲ್ಲ - ತುಳಿತಕ್ಕೆ ಒಳಗಾದವರು ದುರ್ಬಲರಾಗಿದ್ದಾರೆ*


ನಮ್ಮನ್ನು ತುಳಿಯುವವರು ಎಂದಿಗೂ ಬಲಿಷ್ಠರಾಗಿಲ್ಲ, ತುಳಿತಕ್ಕೊಳಗಾದ ನಾವು ದುರ್ಬಲರಾಗಿದ್ದೇವೆ. ತುಳಿಯುವವರು ನೂರು ಜನ. ತುಳಿತಕ್ಕೊಳಗಾದವ ನಾನೊಬ್ಬ. ನಾನು ದುರ್ಬಲನಾಗಿರುವದರಿಂದ ತುಳಿದವರು ಇಂದು ಹಾರಾಡ್ತಾ ಇದ್ದಾರೆ ಅಷ್ಟೆ. ನಾನೊಂದು ಬಲಿಷ್ಠನಾದೆ ಎಂದಾದರೆ ತುಳಿಯುವ ನೂರು ಜನರೂ ದಿಕ್ಕುಪಾಲಾಗಿ ಓಡಿಹೊಗುವವರು ಆಗುತ್ತಾರೆ. 


*ನಾವು ದುರ್ಬಲರು ಏಕೇ ಆಗಿದ್ದೇವೆ...??*


ನಾವು ದುರ್ಬಲರು ಆಗಿರುವದು ಎಂದರೆ ನಮ್ಮ ಬಲ ಕಳೆದುಕೊಂಡಿದ್ದೇವೆ ಎಂದರ್ಥ. ಹಣ ಬಲವಿದೆ, ಕುಲಬಲವಿದೆ, ಅಭಿಜಾತ ಬಲವಿದೆ, ಹೀಗೆ ಅನೇಕ ಬಲಗಳು ಇರುವಾಗ ನಾನೇಕೆ ದುರ್ಬಲ .. ?? ಎಂದರೆ ನಿಉರು ಬಲಗಳಿವೆ ನಿಜ. ಆದರೆ ಇರಲೇಬೇಕಾದ ಬಲ ಇಲ್ಲ. ಆದ್ದರಿಂದ ದುರ್ಬಲನೇ ಆಗಿರುವಿ. 


*ಬಲವಿದ್ದರೆ ನಾವು ಬಲಿಷ್ಠರಾಗುವೆವು...??*



"ಗಾಯಂತಂ ತ್ರಾಯತೇ ಯಸ್ಮಾತ್ 

ಗಾಯತ್ರೀ ತ್ವಂ ತತಸ್ಸಮೃತಃ"


ನಮ್ಮಲ್ಲಿ ಎಲ್ಲ ಬಲಗಳಿವೆ, ಮೂಲಬಲ ಮಾತ್ರ ಇಲ್ಲ. ನಮ್ಮ ಮೂಲ ಬಲ ಆಧ್ಯಾತ್ಮಿಕ ಬಲ. ಅದುವೇ *ಗಾಯತ್ರೀ ಮೊದಲಾದ ಜಪ ಬಲ.* ಮೂಲ ಬಲವಾದ ದೈವೀ ಬಲವಿಲ್ಲದೇ ಇರುವದರಿಂದಲೇ ಅತ್ಯಂತ ದುರ್ಬಲರಾಗಿದ್ದೇವೆ. 


ಈ ಹಿಂದೆ ಯಾವ ಬಲದಿಂದ ನಾವು ಬಲಿಷ್ಠರಾಗಿ ಇದ್ದೆವು. ಜಗತ್ತು ನಮಗೆ ತಲೆಬಾಗುತ್ತಿತ್ತು . ಇಂದು ಆ ಬಲವಿಲ್ಲದೆ ಇರುವದರಿಂದಲೇ ಅದೇ ಜಗತ್ತು ಇಂದು ನಮ್ಮನ್ನು ತುಳಿದು ಹಾಕುತ್ತಿದೆ. "ತುಳಿಯುವವರು ಬಲಿಷ್ಟರಾಗಿಲ್ಲ. ತುಳಿತಕ್ಕೆ ಒಳಗಾದವರು ದುರ್ಬಲರಾಗಿದ್ದಾರೆ" ಇದು ಸತ್ಯಸ್ಯ ಸತ್ಯ. 


ಇಪ್ಪತ್ತು ನಾಲಕು ಅಕ್ಷರದ  ಗಾಯತ್ರಿಯನ್ನು ಯಾವ ಪುರುಷ ನಿತ್ಯ ೧೦೦೮ ಜಪ ಮಾಡುತ್ತಾರೆಯೋ ಅವನು ಮಹಾ ಬಲಿಷ್ಠ. ಅವನೊಬ್ಬನಲ್ಲ. ಅವನ ಕುಲವೇ ಬಲಿಷ್ಠ. ಅಂತೆಯೇ ಜೀವನದಲ್ಲಿ ಇಪ್ಪತ್ತುನಾಲಕು ಲಕ್ಷ ಜಪವಾಗುವದು ಅತ್ಯಂತ ಅನಿವಾರ್ಯ.  *ಜಪರೂಪ ಗಾಯನ ಯಾರು ಮಾಡುತ್ತಾರೆ ಅವರನ್ನು  ಎಲ್ಲ ತರಹದಿಂದಲೂ  ರಕ್ಷಿಸುವದೇ ಕಾಯಕವಾಗಿಟ್ಟುಕೊಂಡಿರುವಂತಹದ್ದು ಗಾಯತ್ರೀ ..*


ಕ್ಷತ್ರಿಯ ವಿಶ್ವಾಮಿತ್ರ,  ಗಾಯತ್ರಿಯ ಬ್ರಹ್ಮಬಲಕ್ಕೆ ತಲೆಬಾಗಿ ಹೋದ. ತನ್ನ ಬ್ರಹ್ಮಾಸ್ತ್ರ ದುರ್ಬಲವಾಗಿ ಹೋಯಿತು. "ಧಿಗ್ಬಲಂ ಕ್ಷತ್ರಿಯಬಲಂ ಬ್ರಹ್ಮತೇಜೋ ಬಲಂ ಬಲಮ್" ಎಂಬ ಮುಖದಿಂದ ಉದುರಿ ಹೋಯಿತು.. .. ಅಂತೆಯೇ ಬ್ರಹ್ಮ ಋಷಿಯಾಗಲು ಸತತ ಪರಿಶ್ರಮ ಪಟ್ಟ,  ಬ್ರಹ್ಮ ಋಷಿಯಾಗಿಯೇ ತೀರಿದ ಇದು ಬ್ರಹ್ಮಬಲ ಗಾಯತ್ರಿಯ ಬಲ. ಇದುವೇ ದೈವೀ ಬಲ.


ಗಾಯತ್ರೀ ಬಲವಿರುವಲ್ಲಿ ಏನೇನು ಲಾಭವಿದೆ.... ....


ದಾರಿದ್ರ್ಯವಿರಬಹುದು 

ಸೌಖ್ಯಕ್ಕೆ ಕೊರೆತೆ ಇರಲಾರದು.

ಬಾಂಧವರೆಲ್ಲರೂ ದೂರಾಗಿರಬಹುದು, ದೈವೀ ಸಂಪತ್ತಿಗೆ ಕಡಿಮೆ ಇರಲಾರದು.

ಶತ್ರುಗಳು ಅಪಾರವಿರಬಹುದು, ಪರಾಜಯ ಇರಲಾರದು.

ಅಭಿಚಾರಾದಿಗಳ ಪ್ರಯೋಗ ಆಗಬಹುದು, 

ಪರಿಣಾಮ ಏನೂ ಆಗದು


ಹೀಗೆ ಬುದ್ಧಿಶಕ್ತಿ, ಜ್ಙಾನಸಂಪತ್ತು, ಐಶ್ವರ್ಯ, ಸುಲಕ್ಷಣಗಳು, ಶಾಂತಿ ಸಮೃದ್ಧಿಗಳು, ಸಜ್ಜನಿಕೆ, ಧಾರ್ಮಿಕತೆ, ಸುಖ, ತೃಪ್ತಿ, ಅಪೇಕ್ಷಿತಫಲ, ಇಷ್ಟಾರ್ಥಸಿದ್ಧಿ,  ಎಲ್ಲವೂ ಗಾಯತ್ರೀ ಇರುವಲ್ಲಿ ಇದೆ. ಸ್ವಯಂ ದೇವರು ದೇವತೆಗಳು ಎಲ್ಲ ಗುರುಗಳು ಬೆನ್ನಿಗೆ ನಿಲ್ಲವವರು. ಎಲ್ಲರೂ ಜೊತೆಗೆ ಇರುವಾಗ ನಾನೆಷ್ಟು ಬಲಿಷ್ಠ ಎಂದು ಊಹಿಸಲೂ ಸಾಧ್ಯವಾಗದು. ತಾನು ಮಹೋನ್ನತ ಮಟ್ಟಕ್ಕೆ ಏರುವವನು. 


ಸಕಲ ಪಾಪಕ್ಷಯಕ್ಕೆ ಬೇಕು ಗಾಯತ್ರೀ.

ಅಪಾರ ಪುಣ್ಯಕ್ಕೆ ಬೇಕು ಗಾಯತ್ರೀ

ಗತ ವೈಭವ ಮರುಕಳಿಸಲು ಬೆಕು ಗಾಯತ್ರೀ

ದೇವರನ್ನೊಲಿಸಲು ಬೇಕು ಗಾಯತ್ರೀ

ದೇವರ ದಾಸ ಎಂದಾಗಲಿ ಬೇಕು ಗಾಯತ್ರೀ.


ಇಂದಿನಿಂದ ಇದನ್ನು ಓದಿದ ಎಲ್ಲ ಪುರುಷರೂ ಸೇರಿ ಗಾಯತ್ರೀಜಪವನ್ನು ಮಾಡೋಣ. *ಓದಿದ ತಾಯಂದಿರು ಮಕ್ಕಳಿಂದ ಮಾಡಿಸಿ. ಗೆಳತಿಯರು ತಮ್ಮ ಗೆಳಯರಿಂದ ಮಾಡಿಸಿ.* ಒಟ್ಟಾರೆ ಈ ಬ್ರಹ್ಮ ಬಲವೇ ಬಲ. ಈ ಒಂದು ಬಲವಿರೆ ಕಂಕಣ ಬಲವಿದೆ, ಸಂತನಬಲವಿದೆ, ಹಣದ ಹೊಳೆಯೇ ಹರಿಯುತ್ತದೆ, ಧರ್ಮಬೆಳೆಯುತ್ತದೆ, ಜ್ಙಾನಸಂತತಿ ಸರಾಗವಾಗುತ್ತದೆ, ಭಕ್ತಿ ದೃಢವಾಗುತ್ತದೆ, ವಿಷ್ಣು ಪ್ರಸಾದವಾಗುತ್ತದೆ, ಕೊನೆಗೆ ನಮಗೆ ಜಯ.  ನಮ್ಮನ್ನು ತುಳಿಯುವವರೇ ಇರುವದಿಲ್ಲ. ತುಳಿದವರ ಕಾಲೇ ಮುರಿದು ಹೋಗುತ್ತದೆ...


(ಸಾಧ್ಯವಿದ್ದಷ್ಟು ಎಲ್ಲರಿಗೂ ತಲುಪಿಸಿ.......)


*✍🏽✍🏽ನ್ಯಾಸ....*

ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ.

Comments

Anonymous said…
ಧಿಗ್ಬಲಂ ಕ್ಷತ್ರಿಯಬಲಂ ಬ್ರಹ್ಮತೇಜೋ ಬಲಂಬಲಮ್

ಬಹಳಸುಂದರ ಇಂದಿನ ಹುಡುಗರಿಗೆ ಅತ್ಯುಪಯುಕ್ತ ಲೇಖನ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*