*ನಾಸ್ತಿ ಧರ್ಮೇ ಸಹಾಯತಾ*



 *ನಾಸ್ತಿ ಧರ್ಮೇ ಸಹಾಯತಾ*


ಇತಿಹಾಸ ಅವಷ್ಯ ಅಧ್ಯಯನೀಯ. ಹಿಂದೆ ಆದ ತಪ್ಪುಗಳು ಮುಂದೆ ಆಗುವದು ಬೇಡ ಎನ್ನುವ ಕಾರಣಕ್ಕೆ ಇತಿಹಾಸದ ಅಧ್ಯಯನ ಒಂದಾದರೆ, ಮುಂದೆ ಆಗುವ ಸಮಸ್ಯೆಗಳನ್ನು ಹಿಂದೆಯೇ ತೋರಿಸಿಕೊಡುವ ಪರಮೋಪಕಾರಿ ಇತಿಹಾಸ. ಅಂತೆಯೇ ನಿತ್ಯವೂ ಇತಿಹಾಸ ಪುರಾಗಳ ಕಥಾಶ್ರವಣ ಇರುತ್ತದೆ. 


*ಭಾರತ ವಾಣಿ*


ಮಹಾಭಾರತದಲ್ಲಿ ಒಂದು ಮಾತು "ನಾಸ್ತಿ ಧರ್ಮೇ  ಸಹಾಯತಾ" ಎಂದು.


ಮೊದಲು  ಧರ್ಮಮಾಡಲು ಮನಸ್ಸೇ ಇರುವದಿಲ್ಲ. ಕದಾಚಿತ್ ಮನಸ್ಸು ಬಂದರೂ ಪ್ರೋತ್ಸಾಹಕರು ಸಿಗುವದಿಲ್ಲ. ಪ್ರೋತ್ಸಾಹ ಸಿಕ್ಕರು ಸಹಾಯಕರು ಸಿಗಲು ಸಾಧ್ಯವೇ ಇಲ್ಲ. ಎಲ್ಲವಿದ್ದರೂ ಯಾವದು ಧರ್ಮವೆಂದು ತಿಳಿದಿರುವದೇ ಇಲ್ಲ. 


"ಧರ್ಮ ಮಾಡೋ" ಎಂದು ಹೇಳಿದರೆ ಅನಕೂಲರು ಇಲ್ಲ. ಅನುಕೂಲತಗಳಿಲ್ಲ. ಹಾಗಾಗಿ ಕಷ್ಟ ಎಂದು ಹೇಳುವವರು ಹಲವರು. ಒಂದು ನಿಶ್ಚಿತ.... "ಪ್ರೋತ್ಸಾಹಕರು, ಸಹಾಯಕರು ಸಿಗುವದಿಲ್ಲ" ನಾವೇ ಮಾಡಿಕೊಳ್ಳಬೇಕು. 


ಧರ್ಮಾಚರಣೆಗೆ ಪ್ರೋತ್ಸಾಹಕರು  ಸಹಾಯಕರು ಸಿಗಲಿ ನಾ ಧರ್ಮ ಮಾಡುವೆ ಎಂಬ ಮಾತು ಆಡಲು ಈಗಿನ ಕಾಲದಲ್ಲಿ  ಆಸ್ಪದವೇ ಇಲ್ಲ.  


ಮಠ ಮಂದಿರಗಳಿಂದಾರಂಭಿಸಿ, ಮದುವೆ ಮುಂಜಿವಿ ಸಮಾರಂಭಗಳನ್ನು ನೋಡಿದರೂ "ಭೋಜನ ಊಟ ಸವಕಾಶವಾಗಲಿ" ಎಂದು ಹೇಳುವರು ನೂರು ಜನ. ಊಟದ ಸಮಯದಲ್ಲಿ "ಕೈತುಂಬ ದಕ್ಷಿಣೆ ಕೊಡುವವರು" ಸಾವಿರಾರು ಜನ. "ರುಚಿ ರುಚಿ ಅಡುಗೆ ಮಾಡಿಸುವವರು ಅನೇಕರು" ಆದರೆ *ಮಡಿ ಮೈಲಿಗಿ ಉಳಿಸುವವರು -  ರಕ್ಷಿಸುವರು - ಪೂಜೆ- ನೈವೇದ್ಯ ವೈಶ್ವದೇವ ಬಲಿಹರಣ - ಬ್ರಾಹ್ಮಣ ಭೋಜನ ಇತ್ಯಾದಿಗಳು ಇಲ್ಲವೇ ಇಲ್ಲ.* ಮಡಿ ಮೈಲಿಗೆ ಎಂದರೆ ಬಯ್ಯುವವರು ಅನ್ನುವವರು ಸಾವಿರಾರು ಜನ. ಅಧರ್ಮಕ್ಕೇನೇ ಪ್ರೋತ್ಸಾಹಿಸುವವರು ಕೋಟಿ ಕೋಟಿ ಜನ. ಈ ಅವಸ್ಥೆಯಲ್ಲಿ ಧರ್ಮ ಮಾಡುವದು ತುಂಬ ಕಷ್ಟ. ಬಿಟ್ಟರೆ ಉಳಿವಿಲ್ಲ. ಮಾಡಲು ಆಗುವದಿಲ್ಲ. 


ನಮ್ಮ ಗುರುಗಳು ಪೂಜ್ಯ ಮಾಹುಲೀ ಆಚಾರ್ಯರು ಒಂದು ಸುಂದರ ಮಾತನ್ನು ತಿಳಿಸಿ ಕೊಡುತ್ತಾರೆ

*"ಇಲ್ಲಿ  ನಿನಗೆ ಧರ್ಮವನ್ನು ಮಾಡಲು  ಸಹಾಯಕರು ಪ್ರೋತ್ಸಾಹಕರು ಅನಿಂದಕರು ಸಿಗದಿರಬಹುದು ಆದರೆ ಧೃತಿಗೆಡಬೇಡ. ಧೈರ್ಯಮಾಡು. ಧರ್ಮಕ್ಕೆ ಮುನ್ನುಗ್ಗು. ನಿನಗೆ ನೀನೇ ಸಾಹಸಮಾಡಿಕೊಂಡು ಧರ್ಮ ಮಾಡದಿದ್ದರೆ ಧರ್ಮ ಎಂದಿಗೂ ಆಗಲಾರದು"* ಎಂದು. ಬಹಳ ಮಾರ್ಮಿಕವಾದ ಅನೇಕರ ಅನುಭವದ ಮಾತು. 


ಧರ್ಮ ಮಾಡಿದವನ ರಕ್ಷಣೆಗೆ  ಕರ್ಮಾಭಿಮಾನಿ ಪುಷ್ಕರನಿಂದಾರಂಭಿಸಿ ದೇವರ ವರೆಗೆ ಎಲ್ಲರೂ ಟೊಂಕಕ್ಕೆ  ಕೈಕಟ್ಟಿ ನಿನ್ನ ರಕ್ಷಣೆಗೆ ನಿಲ್ಲುತ್ತಾರೆ" ಧರ್ಮ ಬಿಟ್ಟರೆ ಹಣ ಸಿಕ್ಕೀತು, ರಕ್ಷಣೆ ದೊರಕದು. ಇದೇ ನಿಶ್ಚಿತ. ಇದುವೇ ಶಾಶ್ವತ ಸತ್ಯ. ಇದೇನೇ ದೇವರ ಮಹಾ ಪ್ರತಿಜ್ಙೆ. ಅದಕ್ಕೇ ಭಾರತ ಹೇಳಿತು *ನಾಸ್ತಿ ಧರ್ಮೇ ಸಹಾಯತಾ*  ನಿನ್ನ ಹಿತಕ್ಕೆ ಧರ್ಮಬೇಕು. ಅದಕ್ಕಾಗಿ ನಿನ್ನ ಅನುಕೂಲತೆಗಳನ್ನು ಪರಿಕರಗಳನ್ನು ನೀನೇ ಒದಗಿಸಿಕೊಳ್ಳಬೇಕು. ಯಾರದೂ ಸಹಾಯ ನಿನಗೆ ಸಿಗದು ಎಂದು. ಒಂದು ಹೆಜ್ಜೆ ಮುಂದಿಟ್ಟರೆ , ನೂರು ಹೆಜ್ಜೆ ಮುಂದೋಡಿಸಿ, ಕಾವಲಿಗಾಗಿ ದೇವತೆಗಳು ದೇವರು  ಬೆನ್ನಿಗಿರುವವರು ಆಗುತ್ತಾರೆ...


*✍🏽✍🏽ನ್ಯಾಸ......*

ಗೋಪಾಲದಾಸ

ವಿಜಯಾಶ್ರಮ, ಸಿರವಾರ.

Comments

Anonymous said…
Exlent exlent

Utkrushta vichara....

Anubhava siddha matugalu....

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*