*ಅತ್ತೆ - ಸೊಸೆ - ತಂದೆತಾಯಿ* (ಹಾಗೆ ಸುಮ್ಮನೆ ಕಾಲ್ಪನಿಕ ವಿಚಾರ)


 *ಅತ್ತೆ - ಸೊಸೆ - ತಂದೆತಾಯಿ*

(ಹಾಗೆ ಸುಮ್ಮನೆ ಕಾಲ್ಪನಿಕ ವಿಚಾರ)

ಈಗಷ್ಟೇ ಮದುವೆ ಆಗಿ ಹೆಣ್ಣು ಗಂಡನ ಮನೆಗೆ ತನ್ನ ಅತ್ತೆಯ ಜೊತೆ ಬಂದಿದ್ದಳು. ಕೆಲವು ದಿನಗಳ ನಂತರ ಅವಳಿಗೆ ತನ್ನ ಅತ್ತೆಯ ಜೊತೆ ಒಂದೇ ಮನೆಯಲ್ಲಿ ಬದುಕಲು ಕಷ್ಟವಾಗುತ್ತದೆ ತನ್ನ ಅತ್ತೆ ಹಳೆಯ ಕಾಲದವರು ಅವರದು ಹಳೆ ಫ್ಯಾಷನ್ ಮತ್ತು ಅವರ ಯೋಚನೆ ಅಭಿಪ್ರಾಯಗಳು ತನ್ನ ಯೋಚನೆ ಅಭಿಪ್ರಾಯಗಳಿಗೆ ತದ್ವಿರುದ್ದವಾಗಿವೆ ಅಂದುಕೊಳ್ಳಲು ಆರಂಭಿಸಿದಳು. ಇದರಿಂದಾಗಿ ಇಬ್ಬರು ಜಗಳ ಆಡಲು ಪ್ರಾರಂಭಿಸಿದರು.

ತಿಂಗಳುಗಳು ಕಳೆದವು ಅವಳ ಮತ್ತು ಅತ್ತೆಯ ಜೀವನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಬರಿ ಜಗಳವೇ ಇತ್ತು . ಅವಳ ಅತ್ತೆಯು ಯಾವುದೇ ಕೆಲಸ ಮತ್ತು ವಿಚಾರದಲ್ಲಿ ಹೇಗೆ ಇರಬೇಕು ಹೇಗೆ ಮಾಡಬೇಕು ಎಂದು ಅಭಿಪ್ರಾಯ ನೀಡುತ್ತಿದ್ದರು. ಇದು ಅವಳಿಗೆ ಸ್ವಲ್ಪಾನು ಇಷ್ಟ ಆಗಿರಲಿಲ್ಲ.

ಒಂದು ರಾತ್ರಿ ತನ್ನ ಗಂಡನಿಗೆ ಬೇರೆ ಮನೆ ಮಾಡುವ ವಿಚಾರವನ್ನು ಹೇಳಿ ತನಗೆ ಇಲ್ಲಿ ಇರಲು ಆಗಲ್ಲ ನಿಮ್ಮ ಅಮ್ಮ ಮತ್ತು ನನಗೆ ಸರಿ ಆಗಲ್ಲ ಎಲ್ಲ ವಿಷಯದಲ್ಲೂ ನನ್ನ ಜೊತೆ ಜಗಳ ಆಡುತ್ತಾರೆ ಅಂದಳು. ಆದರೆ ಗಂಡ ಸಹ ತನ್ನ ತಾಯಿಯ ಪರವಾಗಿ ಮಾತಾಡಿ ಬೇರೆ ಮನೆ ಮಾಡುವ ಕನಸು ಕೂಡ ಬೇಡ ಅಂದನು. ಅವಳು ಸಿಟ್ಟಿನಿಂದ ಮರುದಿನ ಮನೆ ಬಿಟ್ಟು ಅವಳ ಮನೆಗೆ ಹೋದಳು.


*ಉಗ್ರನಿರ್ಧಾರ*

ಅವಳು ತನ್ನ ಮನೆಗೆ ಹೋಗಿ ತಂದೆಯ ಬಳಿ ನಡೆದುದನ್ನೆಲಾ ಹೇಳಿದಳು. ಅವಳ ತಂದೆಯು ಒಬ್ಬ ಆಯುರ್ವೇದ ಪಂಡಿತರು ಜ್ಞಾನಿಯು ಆಗಿದ್ದರು. ಅವಳು ಅಳುತ್ತ ತಂದೆಗೆ ತನ್ನ ಅತ್ತೆಯನ್ನು ಸಾಯಿಸಲು ಸ್ವಲ್ಪ ವಿಷಕೊಡಿಸಲು ಹೇಳಿದರು. ತನ್ನ ಅತ್ತೆ ಇರೋವರೆಗೂ ನಾನು ಗಂಡನ ಮನೆಗೆ ಹೋಗೋದಿಲ್ಲ ಅಂತ ಹೇಳಿ ಅಳುತ್ತ ಕುಳಿತಳು.

ಅವಳ ತಂದೆ ಅವಳಿಗೆ ತಿಳಿಸಿ ಹೇಳಲು ಪ್ರಯತ್ನಿಸಿ ಹೇಳಿದರು. ಮಗಳೇ, ನೀನು ನಿನ್ನ ಅತ್ತೆಗೆ ವಿಷವನ್ನು ಕೊಟ್ಟರೆ ಪೊಲೀಸರು ನಿನ್ನನ್ನು ಜೈಲಿಗೆ ಹಾಕುತ್ತಾರೆ ಮತ್ತು ನಿನ್ನ ಜೊತೆ ನನ್ನನು ಸಹ. ಅದರಿಂದ ಇದು ಸರಿಯಾದ ಮಾರ್ಗ ಅಲ್ಲ.

ಅದಕ್ಕೆ ಮಗಳು ಹೇಳಿದಳು ನನಗೆ ಗೊತ್ತಿಲ್ಲ ನೀನು ನನಗೆ ಅತ್ತೆಯನ್ನು ಕೊಲ್ಲಲು ವಿಷವನ್ನು ಕೊಡಬೇಕು ಅಷ್ಟೇ. ನನಗೆ ಇನ್ನು ನನ್ನ ಜೀವನದಲ್ಲಿ ಅವರನ್ನು ನೋಡ್ಲಿಕ್ಕೆ ಇನ್ನುಮುಂದೆ ಬೇಡ ಅಷ್ಟೆ.


*ತಂದೆಯ ಅತ್ಯತ್ಕೃಷ್ಟ ವಿಚಾರ*

ತಂದೆಯು ಸ್ವಲ್ಪ ಹೊತ್ತು ಯೋಚಿಸಿ ಹೇಳಿದರು, ಆಯ್ತು, ನಿನ್ನ ಆಸೆಯಂತೆ ನಿನೇಳಿದಂತೆ ಆಗಲಿ ಆದರೆ ನೀನು ಜೈಲಿಗೆ ಹೋಗದಂತೆ ಆಗಬೇಕು ಅಂದರೆ ನಾನು ಹೇಳಿದಂತೆ ಕೇಳಬೇಕು ಅದು ಓಕೆ ಆದರೆ ನಾನು ನಿನೇಳಿದಾಗೆ ಮಾಡುತ್ತೇನೆ. ಅದಕ್ಕೆ ಮಗಳು ಒಪ್ಪಿಗೆ ಕೊಟ್ಟಳು ಮತ್ತು ಏನು ಮಾಡಬೇಕು ಎಂದು ಕೇಳಿದಳು. 

ಅವಳ ತಂದೆಯು ಒಳಗೆ ಹೋಗಿ ಒಂದು ಬಾಟೆಲ್ ತೆಗೆದುಕೊಂಡು ಬಂದು ಅವಳಿಗೆ ಕೊಟ್ಟು ಹೇಳಿದರು, ನೀನು ಈ ಬಾಟೆಲ್ ಅಲ್ಲಿ ಇರೋ ವಿಷದ ಒಂದೊಂದು ಹನಿಯನ್ನು ಹಾಲಿಗೆ ಹಾಕಿ ನಿನ್ನ ಅತ್ತೆಗೆ ಪ್ರತಿದಿನವೂ ಕೊಡು ಅವರು ಒಮ್ಮೆಲೇ ಸಾಯೋದಿಲ್ಲ ಬದಲಾಗಿ ಪ್ರತಿ ದಿನ ನೀಡೋದರಿಂದ ನಿಧಾನವಾಗಿ ಅರೋಗ್ಯ ಹದಗೆಡುತ್ತಾ  ಆರು ಏಳು ತಿಂಗಳಲ್ಲಿ ಸಾಯುತ್ತಾರೆ. ಅವರ ಅರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ನಿಧಾನವಾಗಿ ಸಾಯೋದರಿಂದ ನಿನ್ನ ಮೇಲೆ ಆಗಲಿ ನನ್ನ ಮೇಲೆ ಆಗಲಿ ಯಾವುದೇ ಅನುಮಾನ ಬರೋದಿಲ್ಲ ಆದರೆ ನೀನು ಇಷ್ಟು ತಿಂಗಳು ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಜಗಳ ಆಡೋದನ್ನ ಬಿಡಬೇಕು ಅವರನ್ನು ಗೌರವದಿಂದ ನೋಡಬೇಕು. ಇದರಿಂದ ಗಂಡನಿಗೂ ಯಾವುದೇ ಅನುಮಾನ ಬರೋದಿಲ್ಲ. ಹೀಗೆ ಮಾಡುವುದಾದರೆ ಇದನ್ನು ತೆಗೆದುಕೊಂಡು ಮನೆಗೆ ಹೋಗು ಅಷ್ಟೆ.


*ಟ್ವಿಸ್ಟ......*

ಅವಳು ಯೋಚಿಸಿದಳು ಬರಿ ಐದು ಆರು ತಿಂಗಳಿಗೆ ಅಲ್ವ ಮತ್ತೆ ಅತ್ತೆ ಸಾಯುತ್ತಾರಲ್ವಾ ಅಂತ ಒಪ್ಪಿಕೊಂಡಳು. ಅವಳು ಅದನ್ನು ತೆಗೆದುಕೊಂಡು ತನ್ನ ಗಂಡನ ಮನೆಗೆ ಹೊರಟು ಹೋದಳು. ಮತ್ತು ಮರುದಿನದಿಂದ ಅವಳು ಅತ್ತೆಗೆ ಹಾಲಿನಲ್ಲಿ ಒಂದು ಹನಿ ವಿಷವನ್ನು ಬೆರೆಸಲು ಶುರುಮಾಡಿದಳು. ಅವಳು ಅವಳ ಗುಣಗಳನ್ನು ಬದಲಾಯಿಸಿಕೊಂಡಳು ಮತ್ತು ಅತ್ತೆಯನ್ನು ಪ್ರೀತಿಯಲ್ಲಿ ನೋಡಲು ಶುರುಮಾಡಿದಳು. ಈಗ ಅವಳು ಅತ್ತೆಯ ಪ್ರತಿ ಮಾತನ್ನು ಸುಮ್ಮನೆ ಕೂತು ಕೇಳಲು ಕಲಿತಳು. ಅತ್ತೆ ಹೇಳಿದ ಎಲ್ಲವನ್ನು ಹಾಗೆಯೇ ಮಾಡಲು ಪ್ರಾರಂಭಿಸಿದಳು. ಅತ್ತೆ ಹೇಳಿದ ಎಲ್ಲವನ್ನು ಮಾಡಿದಳು. ಪ್ರತಿ ದಿನ ಅವಳು ಅತ್ತೆಗೆ ವಿಷ ಬೆರೆಸುದನ್ನು ಮರೆಯಲಿಲ್ಲ. 

ಹೀಗೆ ಎರಡು ತಿಂಗಳು ಕಳೆಯಿತು. ಅವಳ ಅತ್ತೆಯು ಸಹ ಬದಲಾದರು ತನ್ನ ಸೊಸೆಯನ್ನು ಪ್ರೀತಿಯಿಂದ ನೋಡಲು ಶುರುಮಾಡಿದರು. ಅವಳು ಅವರು ಒಟ್ಟಿಗೆ ಸಮಯ ಕಳೆಯಲು ಪ್ರಾರಂಭಿಸಿದರು. ಹೀಗೆ ದಿನ ಹೋಯಿತು ನಾಲ್ಕು ತಿಂಗಳು ಅತ್ತೆಗೆ ವಿಷಕುಡಿಸುತ್ತಾ ಹೋದಳು.


*ಪೂರ್ಣ ವೈಪರೀತ್ಯ*

ಈಗ ಅವಳ ಅತ್ತೆಯು ಅವಳನ್ನು ಮಗಳಂತೆ ನೋಡಲು ಶುರುಮಾಡಿದರು. ಅವಳು ಸಹ ಅತ್ತೆಯನ್ನು ತಾಯಿಯಂತೆ ನೋಡಿಕೊಳ್ಳಲು ಪ್ರಾರಂಭಿಸಿದಳು. ಅವಳು ಅತ್ತೆಗೆ ವಿಷವನ್ನು ಕೊಡುವುದನ್ನು ನಿಲ್ಲಿಸಿ ತನ್ನ ಅತ್ತೆಯ ಬಗ್ಗೆ ಯೋಚಿಸಿದಳು, ಅವಳಿಗೆ ತನ್ನ ಅತ್ತೆಯು ಸಾಯೋದು ಕನಸಲ್ಲೂ ಯೋಚಿಸಲು ಆಗಲಿಲ್ಲ ಅವಳಿಗೆ ಮನಸಲ್ಲಿ ಬೇಸರ ನೋವು ಕಾಡಲು ಶುರು ಆಯ್ತು. ತನ್ನ ಅತ್ತೆಯನ್ನು ಹೇಗಾದ್ರು ಉಳಿಸಿಕೊಳ್ಳಬೇಕು ಇಲ್ಲವಾದರೆ ಅವರು ಸಾಯುತ್ತಾರೆ ಮುಂದೆ ಅಂತ ಹೇಳಿ ಮರುದಿನ ತನ್ನ ಮನೆಗೆ ಹೊರಟು ಹೋದಳು.

ಅವಳು ತಂದೆಯ ಬಳಿ ಹೋಗಿ ಜೋರಾಗಿ ಅತ್ತಳು. ತಾನು ಕೊಟ್ಟ ವಿಷವನ್ನು ತೆಗಿಯಲು ಏನಾದ್ರು ಕೊಡಿ ಇಲ್ಲ ನನ್ನ ಅತ್ತೆ ಸಾಯುತ್ತಾರೆ ಅದನ್ನು ನಾನು ಯೋಚಿಸಲು ಆಗಲ್ಲ. ಏನಾದ್ರು ಮಾಡಿ ನನ್ನ ಅತ್ತೆಯನ್ನು ಉಳಿಸಬೇಕು ಅಂದಳು. ನನ್ನ ಅತ್ತೆ ತುಂಬಾ ಒಳ್ಳೆಯವರು . ನನಗೆ ಅವರು ಬೇಕು. ಬೇಗ ನನಗೆ ಸಹಾಯ ಮಾಡಿ ಇಲ್ಲ ನೀವು ಕೊಟ್ಟ ವಿಷ ನನ್ನ ಅತ್ತೆಯನ್ನ ಬಲಿ ತೆಗೆದುಕೊಳ್ಳುತ್ತದೆ ಅಂದಳು. 


*ತಂದೆಯೆಂದರೆ ಹೀಗಿರಬೇಕು*

ಅವಳ ತಂದೆ ನಗಲು ಪ್ರಾರಂಭಿಸಿದರು. "ವಿಷ", ಯಾವ ವಿಷ, ನಾನು ನಿನಗೆ ಕೊಟ್ಟಿದ್ದು ಜೇನುತುಪ್ಪ ಅದರಿಂದ ಅರೋಗ್ಯ ಹೆಚ್ಚುತ್ತದೆ ಹೊರತೂ ಯಾರು ಸಾಯೋದಿಲ್ಲ.


*ನೀತಿ :...*

ಹೆತ್ತವರು ತಮ್ಮ ಮಕ್ಕಳ ಜೀವನವು ಹಾಳಾಗದಂತೆ ನೋಡಬೇಕು. ಮಕ್ಕಳು ಸಿಟ್ಟಲ್ಲಿ ಕೆಟ್ಟದನ್ನು ಮಾಡೋದನ್ನ ತಡೆಯಬೇಕು. ಹೆತ್ತವರು ಮಕ್ಕಳಿಗೆ ಸರಿಯಾದ ದಾರಿಯಲ್ಲಿ ಹೋಗಲು ಕಲಿಸಬೇಕು. ಮತ್ತು ಕೆಟ್ಟ ಕ್ಷಣಗಳನ್ನು ಸಕಾರಾತ್ಮಕ ತೆಗುದುಕೊಳ್ಳುವಂತೆ ಬುದ್ದಿಬರಿಸಬೇಕು. 

*ಇನ್ನೊಂದು ನೀತಿ*

ಬೇರೆಯವರಲ್ಲಿ ಬದಲಾವಣೆ ನೋಡಬೇಕನಿಸಿದರೆ ಮೊದಲು ನಮ್ಮನ್ನ ನಾವೇ ಬದಲಾಯಿಸಿಕೊಳ್ಳಬೇಕು. *ಬದಲಾವಣೆ ಮೊದಲು ನಮ್ಮಿಂದಲೆ ಆಗಲಿ ಅನ್ನೋ ಮನಸು ಬರಬೇಕು....* 


*✍🏽✍🏽ನ್ಯಾಸ*

ಗೋಪಾಲದಾಸ

ವಿಜಯಾಶ್ರಮ ಸಿರವಾರ

Comments

Unknown said…
Verygoodprinciple
Anonymous said…
ಹೆತ್ತವರು ತಮ್ಮ ಮಕ್ಕಳಿಗೆ ಸರಿಯಾದ ಸಮಯಕ್ಕೆ, ಒಳ್ಳೆಯ ಮಾರ್ಗದರ್ಶನ ಕೊಟ್ಟರೆ... ಮುಂಬರುವ ಆಘಾತಕಾರಿಕ ಪರಿಣಾಮಗಳನ್ನು ತಪ್ಪಿಸಬಹುದು... ಸಂಯಮ, ತಾಳ್ಮೆ ಮತ್ತು ಒಳ್ಳೆಯ ಸಂಸ್ಕಾರ ಯಾವಾಗಲು ಸಾಕಾರಾತ್ಮಕ ಹಾದಿಯನ್ನೇ ತೋರಿಸುತ್ತವೆ... ಇದರಲ್ಲಿ ಅತೀ ಮಹತ್ವವಾದದ್ದು ಪೋಷಕರ ಪಾತ್ರ... ಅವರು ಹೆಣ್ಣು ಹೆತ್ತಿದವರೇ ಇರಬಹುದು ಅಥವಾ ಗಂಡು ಹೆತ್ತಿದವರೇ ಇರಬಹುದು 🙏🏻🙏🏻🙏🏻🙏🏻😊
NYASADAS said…
😊😊😊😊😊

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*