"ತಪ್ಪುಗಳ ವಿರುದ್ಧ ಪ್ರತಿಭಟನೆ - ತಪ್ಪುಗಳಮನವರಿಕೆ"
ತಪ್ಪುಗಳ ವಿರುದ್ಧ ಪ್ರತಿಭಟನೆ ಸೂಕ್ತವೇ ಅಥವಾ ತಪ್ಪುಗಳಮನವರಿಕೆಮಾಡುದು ಸುಕ್ತವೇ... ?? ಎಂಬ ಪ್ರಶ್ನೆ ಕಾಡುತ್ತದೆ. ಮನವರಿಕೆ ಅತ್ಯುತ್ತಮ. ಪ್ರತಿಭಟನೆ ಜಘನ್ಯ. ಪ್ರತಿಭಟನೆ ಫಲ ಕೊಡಬೇಕಾದರೆ ಮನವರಿಕೆಯಾಗಲೇಬೇಕು. ಹಾಗಾಗಿ ಮೊದಲೇ ಪ್ತಿಭಟನೆಗೆ ಇಳಿಯದೆ ತಪ್ಪುಗಳ ಮನವರಿಕೆ ಮಾಡುವದು ಸರ್ವಶ್ರೇಷ್ಠ ಎಂದು ಹೇಳಬಹುದು. ಅಂತೆಯೇ ಕೃಷ್ಣ ಗೀತಿಯಲ್ಲಿ ಮನವರಿಕೆ ಮಾಡಿದನೆ ಹೊರತು, ಅರ್ಜುನನ ತಪ್ಪುಗಳನ್ನು ಪ್ರತಿಭಟಿಸಲಿಲ್ಲ. ವಿದು ಪ್ರತಿಭಟಿಸಿದ ದುರ್ಯೋಧನ ಒಪ್ಪಿಕೊಳ್ಳಲಿಲ್ಲ.
*ಪ್ರತಿಭಟನೆ ಮಾಡಬಾರದೇಕೆ .. ?*
ತಪ್ಪುಗಳ ವಿರುದ್ಧ ಪ್ರತಿಭಟನೆ ಮಾಡಬಾರದೇಕೆ .. ? ಈ ಪ್ರಶ್ನೆ ಸಾಮಾನ್ಯರೆಲ್ಲರದ್ದೂ ಆಗಿದೆ. ನಂದೂ ಆಗಿದೆ.
ಉತ್ತರವಿಷ್ಟೆ .. ಪ್ರತಿಭಟಿಸಬಬಾರದು.
ಮೊದಲಿಗೆ "ತಪ್ಪುಗಳ ವಿರುದ್ಧ ಪ್ರತಭಟಿಸಬಾರದು ಏಕೆ.."
ತಪ್ಪುಗಳ ವಿರುದ್ಧದ ಪ್ರತಿಭಟನೆ "ಸಮಾಜದಲ್ಲಿ ಸಾಮರಸ್ಯಕ್ಕಿಂತಲೂ ಹೆಚ್ಚು ಗೊಂದಲಗಳನ್ನೇ ಹುಟ್ಟು ಹಾಕುತ್ತದೆ" ಆ ಕಾರಣ ತಪ್ಪುಗಳ ವಿರುದ್ಧ ಪ್ರತಿಭಟನೆ ಸಲ್ಲದು.
ತಪ್ಪು ಮಾಡಿದವ ಸಾಮಾನ್ಯ ಒಪ್ಪಿಕೊಳ್ಳಲಾರ. ಪ್ರತಿಭಟನೆ ವ್ಯರ್ಥ ಕಾಲಹರಣ ಅಷ್ಟೆ. ತಪ್ಪು ಮಾಡಿದ ತಪ್ಪಿತಸ್ಥನಿಗೆ, "ತಾನು ಸರಿ" 'ತನ್ನ ಕಾರ್ಯ ಸರಿ' ಎಂದು ಮಾಡಿಕೊಳ್ಳಲು ಏನು ಮಾಡಲೂ ಸಿದ್ಧ. ಆದ್ದರಿಂದ ನಮ್ಮ ಪ್ರತಿಭಟನೆ ಪ್ರತಿಭಟನೆಯಾಗಿಯೇ ಉಳಿಯುತ್ತದೆ, ಅದರಿಂದ ಹೆಚ್ಚಿನ ಲಾಭವೇನಾಗುವದಿಲ್ಲ.
ತಂದೆ ಮಗ, ಗಂಡ ಹೆಂಡತಿ, ಗುರು ಶಿಷ್ಯ, ಸಮಾಜ ಸಮಾಜದ ಮುಖಂಡ, ಇತ್ಯಾದಿ ಇತ್ಯಾದಿ ಯಾರೇ ಇರಬಹುದು ತಪ್ಪು ಒಪ್ಪಿಕೊಳ್ಳಲಾರ. ಒಪ್ಪಿಕೊಳ್ಳುವದು ತುಂಬ ಕಷ್ಟ. ತಪ್ಪನ್ನು ಒಪ್ಪಿಕೊಳ್ಳಲಾರದ ಮನುಷ್ಯನ ತಪ್ಪುಗಳನ್ನು ಎಷ್ಟು ಪ್ರದರ್ಶಿಸಿ ಪ್ರತಿಭಟಿಸಿದರೂ ಅದರಿಂದ ಬಹಳವೇನೂ ಲಾಭವನ್ನು ಪಡೆಯಲಾರ. ಮನೆ, ಶಾಲೆ, ಸಮಾಜ ಇವುಗಳಿಗೆ ಹಾನಿ ನಿಶ್ಚಿತ. ಹಾಗಾದರೆ....
*ತಪ್ಪುಗಳನ್ನು ಪ್ರತಿಭಟಿಸಲೇ ಬಾರದೆ.. ??*
*ಪ್ರತಿಭಟಿಸಲೇ ಬಾರದು, ತಪ್ಪಿನಿಂದಾಗುವ ಅನಾಹುತಗಳನ್ನು ಚನ್ನಾಗಿ ಮನವರಿಕೆ ಮಾಡಿಕೊಡಬೇಕು* ಅದರಿಂದ ಆಗುವದು ತಪ್ಪಿತಸ್ಥನಲ್ಲಿ ತುಂಬ ಬದಲಾವಣೆ. ಬದಲಾವಣೆ ಅತೀ ಮುಖ್ಯ.
*ಮನವರಿಕೆ ಸುಪ್ತಮನಸ್ಸಿನ ಜಾಗೃತಿ, ಪ್ರತಿಭಟನೆ ಅಹಂಕಾರ ego ವಿಗೆ ಪೆಟ್ಟು.*
ಮನಸ್ಸಿನ ಜಾಗೃತಿ ಮಾರ್ಪಾಡಿಗೆ ಕಾರಣವೆಂದಾದರೆ, ಅಹಂಕಾರದ ಪೆಟ್ಟು ವಿಪರೀತಕ್ಕೆ ಕಾರಣವಾಗುತ್ತದೆ. ಇದು ಇತಿಹಾಸ ಪುರಾಣಗಳಿಂದಲೂ ಕೇಳುತ್ತಾ ಬಂದಿದ್ದೇವೆ.
"ವಿದುರ ದುರ್ಯೋಧನನ ತಪ್ಪುಗಳನ್ನು ಪ್ರತಿಭಟಿಸಿದ. ಕೃಷ್ಣ ಅರ್ಜುನನ ತಪ್ಪುಗಳನ್ನು, ತಪ್ಪಿನಿಂದಾಗುವ ಅನಾಹುತವನ್ನು ಮನವರಿಕೆ ಮಾಡಿಸಿದ" ಅವಡರಡರ ಫಲ ಕಣ್ಣಾರೆ ಮಹಾಭಾರತದಲ್ಲಿ ಕಾಣಬಹುದು. ಇದು ಕೇವಲ ಒಂದು ನಿದರ್ಶನ ಮಾತ್ರ. ಈ ತರಹದ ನಿದರ್ಶನಗಳು ಸಾವಿರ ಸಿಗಬಹುದು.
*ರೊಚ್ಚಿಗೆ ಎಬ್ಬಿಸುವದು ಪ್ರತಿಭಟನೆಯಾದರೆ, ಮನವರಿಕೆ ಬದಲಾವಣೆಗೆ ಕಾರಣ....*
ಪ್ರತಿಭಟನೆಯಿಂದ ದ್ವೇಶ, ಅಸೂಯ, ಮಾತ್ಸರ್ಯ ಇವುಗಳು ಪ್ರವೃದ್ಧಮಾನಕ್ಕೆ ಬರುವದಾದರೆ.... ... ಮನವರಿಕೆಗೆ ಪ್ರೀತಿ ಅಂತಃಕರಣ ಸ್ಪಷ್ಟತೆ ಇವುಗಳನ್ನು ತಂದುಕೊಡುತ್ತದೆ...... ...
ಹಾಗಾಗಿ ತಪ್ಪುಗಳ ವಿರುದ್ಧ ಅನಾಹುತಗಳ ಮನವರಿಕೆ, ಅದರಿಂದ ಸಂಪೂರ್ಣ ಬದಲಾವಣೆ ಬೇಕೋ ಅಥವಾ ಪ್ರತಿಭಟನೆಯ ಮುಖಾಂತರ ರೊಚ್ಚಿಗೆಬ್ಬಿಸಿ ಅದರಿಂದ ಸಮಾಜದಲ್ಲಿ ಗೊಂದಲಗಳನ್ನು ಹುಟ್ಟಿಸಬೇಕೋ ನಮಗೆಬಿಟ್ಟ ವಿಚಾರ.......
*✍🏼✍🏼✍🏼ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ
Comments