ಜಲಪೂರ್ಣತೆಯು ಸುಖಪೂರ್ಣತೆಯನ್ನೇ ತಂದುಕೊಡಲಿ*(ಓದಲೇಬೇಕಾದ ಒಂದು‌ಲೇಖನ)

 

*ಜಲಪೂರ್ಣತೆಯು ಸುಖಪೂರ್ಣತೆಯನ್ನೇ ತಂದುಕೊಡಲಿ*(ಓದಲೇಬೇಕಾದ ಒಂದು‌ಲೇಖನ)

"ಜಲಪೂರ್ಣತೆ ಸುಖಪೂರ್ಣತೆಯನ್ನು" ತಂದೊದಗಿಸುತ್ತದೆ. ಅಂತೆಯೇ "ಜಲ" ಕ್ಕೆ ಇರುವ ಪ್ರಾಶಸ್ತ್ಯ ಇನ್ಯಾವದಕ್ಕೂ ಇಲ್ಲ. 

*ಜಲಾಭಿಮಾನಿಗಳು....*

"ಆಪೋ ವೈ ಸರ್ವಾ ದೇವತಾಃ" ಎಂಬ ಶೃತಿವಾಕ್ಯ ಇರುವದರಿಂದ ವಾಯುದೇವರಿಂದ ಆರಂಭಿಸಿ ಗಂಗೆಯವರೆಗೆ ಮುಕ್ಕೋಟಿ ದೇವತೆಗಳೂ ನೀರಿಗಭಿಮಾನಿ ದೇವತೆಗಳು. ಅಂತೆಯೇ ನೀರಿನಲ್ಲಿ ಎಲ್ಲ ಪದಾರ್ಥಗಳು ಗುಣಗಳು ಇವೆ. ಅಂತೆಯೇ ಯಾವ ಪದಾರ್ಥದಿಂದಲೂ ಇರದ ತೃಪ್ತಿ, ಕೇವಲ ನೀರಿಗೆ ದೇವರು ಕೊಟ್ಟಿದ್ದಾನೆ. ಅಂತೆಯೇ ನೀರನ್ನು ಮೊದಲು ಸವಿಯುತ್ತಾನೆ. ನೀರು ಕುಡುದೇ ಊಟ ಮುಗಿಸುತ್ತಾನೆ. 

*ಪಾಪಕಳೆಯುವ ಶಕ್ತಿ ನೀರಿಗೆ ಇದೆ...*

ಈ ನೀರಿಗೆ ಅನೇಕ ಶಕ್ತಿಗಳ ಮಧ್ಯೆಯೇ ಒಂದು ಅಪರೂಪದ ಶಕ್ತಿ ಎಂದರೆ ಪಾಪ ಕಳೆಯುವ ಶಕ್ತಿ. ಗಂಗಾದಿ ತೀರ್ಥಗಳ ಸ್ಮರಣ ದರ್ಶನ ಪಾನ ಇವುಗಳಿಂದ ಪಾಪನಾಶ. "ಆಪೋ ಹಿ ಷ್ಠಾಃ" ಎಂಬ ಮಂತ್ರದಿಂದ ಪ್ರೋಕ್ಷಣೆ ಮಾಡಿಕೊಂಡರೆ ದೇಹ ಇಂದ್ರಿಯ ಮನೋ ಶುದ್ಧಿ. "ಋತಂ ಚ ಸತ್ಯಂ ಚ" ಎಂಬ ಮಂತ್ರದಿಂದ ಪಾಪ ಪುರುಷ ವಿಸರ್ಜನೆ ಈ ನೀರಿನಿಂದಲೇ. "ಸೂರ್ಯಶ್ಚ ಮಾಮುನ್ಯಶ್ಚ" ಎಂಬ ಮಂತ್ರದಿಂದ ನೀರಿನ ಪ್ರಾಶನದಿಂದ ನಾನಾವಿಧ ಪಾಪಗಳ ನಾಶ. 

*ನೀರಿನಿಂದಲೇ ಜ್ಙಾನಪ್ರಾಪ್ತಿ - ವಿಷ್ಣುಪ್ರೀತಿ* 

ಈ ನೀರೇ ದೇವರ ಪಾದ ಸೋಕಿ ತೀರ್ಥ ಎಂದಾರೆ ಭಗವಂತನ ತೃಪ್ತಿಯನ್ನೇ ತಂದು ಕೊಡುತ್ತದೆ. ಜ್ಙಾನವನ್ನೂ ಬೆಳೆಸುತ್ತದೆ. ಈ ನೀರನ್ನು ನಿತ್ಯ ನೈವೇದ್ಯ ಮಾಡುವದರಿಂದ ಸಂತೃಪ್ತಿಯ ವೈಭವ ಇದೆ. ಈ ನೀರನ್ನು ದೇವರ ಅಭಿಷೇಕಕ್ಕೆ ಬಳಿಸಿದರೆ *ಭಗವತ್ ಜ್ಙಾನದ ಅಭಿವೃದ್ಧಿ* ನಿತ್ಯವೂ ಬೆಳೆಯುತ್ತದೆ. 

ಈ ನೀರಿನಿಂದಲೇ ನಿತ್ಯವೂ ದೇವತಾ ಋಷಿ ಆಚಾರ್ಯ ಪಿತೃಗಳನ್ನು ಸಂತೃಪ್ತಿಗೊಳಿಸುವ ಒಂದು ಮಾರ್ಗ. ಈ ಎಲ್ಲ ಮಾರ್ಗದಿಂದಲೂ ದೇವರ ಸಂತೃಪ್ತಿಯೂ. 

*ಧಾರ್ಮಿಕನಿಗೆ ನೀರು ಅತೀ ಮುಖ್ಯ*

 ಬ್ರಾಹ್ಮಣ ಪಾದಪೂಜೆಗೆ ಬೇಕು ನೀರು. ನಮ್ಮ ದೇಹ ಶುದ್ಧಿಗೆ ಬೇಕು ನೀರು. ದೇವರ ನೈವೇದ್ಯಕ್ಕೆ ನೀರು ಬೇಕು. ದೇವರ ಅಭಿಷೇಕಕ್ಕೆ ನೀರು ಬೇಕು. ಅಡಿಗೆಗೆ ನೀರು ಬೇಕು. ಮನೆಯಲ್ಲಿ ನೀರು ತುಂಬಿರಬೇಕು. ನೀರಿನ ಕೊಡ ಹೊತ್ತ ಮುತ್ತೈದೆ ಶುಭ ಸೂಚಕ. ಜಲಾಶಯಗಳ ದರ್ಶನ ಶುಭಸೂಚಕ. ತುಲಸೀ‌ಮೊದಲಾದ ವೃಕ್ಷಗಳಿಗೆ ನೀರುಬೇಕು. 

*ಉಚಿತವಾಗಿ ಸಿಗುವ ನೀರು...*

ವಜ್ರ ಒಂದಕ್ಕೆ ಉಪಯೋಗ. ಆದರೆ ನೀರು ಎಲ್ಲದಕ್ಕೂ ಅತ್ಯುಪಯುಕ್ತ. *ನೀರು ಒಂದು - ಶಕ್ತಿಗಳು ಅನಂತ.*  ಅನಂತ ಶಕ್ತಿಗಳನ್ನು ಒಳಗೊಂಡ ನೀರು ಧರ್ಮಗಳು ನಡೆಯುವವರೆಗೆ ಮಾತ್ರ ಉಚಿತವಾಗಿ ಸಿಗುತ್ತಿತ್ತು. "ಯಾರ ಮನೆಯಲ್ಲಿ ಧರ್ಮ ನಿಂತಿದೆ ಎಂದರೆ ನೀರು ನಿಂತಿದೆ ಎಂದೇ ಅರ್ಥ." ನದಿ ಭಾವಿ ಬೋರು ಇವುಗಳಿಂದ ನೀರು ಉಚಿತವಾಗಿ ಸಿಗುವದೇ ಧಾರ್ಮಿಕರ ಮನೆಯಲ್ಲಿ. ಈ ಉಚಿತ ನೀರು ನಿಂತಿದೆ ಇದರ ಅರ್ಥ ಅವರ ಮನೆಯ ಧರ್ಮ ಅವನತಿ ಸೇರುತ್ತಿದೆ ಎಂದೇ ಅರ್ಥ. 

*ಯಾರು ನೀರು ದುಡ್ಡು ಕೊಟ್ಟು ತರುತ್ತಿದ್ದಾರೆ ಎಂದರೆ ಅದರ ಅರ್ಥ ಧರ್ಮಕ್ಕೆ ಎಳ್ಳು ನೀರು ಕೊಟ್ಟಿದ್ದಾರೆ ಎಂದೇ ಅರ್ಥ* ಅಂತಹ ಮನೆಗಳಲ್ಲಿ  ಊರುಗಳಲ್ಲಿ ಧರ್ಮ ಬಿಟ್ಟಿರುವದು ನಿಶ್ಚಿತ. 

*ಬಿಸ್ಲೇರಿ ನೀರಿನಲ್ಲಿ ತುಂಬ ಪ್ರೀತಿ...*


ಧರ್ಮಮಾಡಲು ಆಸಕ್ತಿ ಇಲ್ಲದಿರುವವರೇ *ಬಿಸ್ಲೇರಿ* ನೀರನ್ನು ಪ್ರೀತಿಸುವವರು. ಅವರೇ ತಿರುಪತಿ ಬದರಿ ಮೊದಲಾದ ಕ್ಷೇತ್ರಗಳಿಗೆ ಹೋದರೂ ಸ್ವಾಮಿಪುಷ್ಕರಣಿ ಗಂಗೆ ಇವುಗಳನ್ನು ಬಿಟ್ಟು filter ನೀರಿನ ಸ್ನಾನಕ್ಕೆ ಅತೀ ಹೆಚ್ಚಿನ ಪ್ರಾಶಸ್ತ್ಯ. ಒಂದು ನಿಶ್ಚಿತ *ಧರ್ಮ ಬೇಡದ ಮನುಷ್ಯನಿಗೇ filter ನೀರು ತುಂಬ ಪ್ರೀತಿ* ಎಂಬುವದು. ಖಾರವಾದರೂ ಸತ್ಯ ಮಾತು.

*ಆರೋಗ್ಯವರ್ಧಕ ನೀರು....*

ಸಕಲವಿಧ ಆರೋಗ್ಯ ಇರುವದೂ ನೀರಿನಲ್ಲಿಯೇ. ಅಂತೆಯೆ ನೀರೇ ಕುಡಿದು ಜೀವಿಸುವ ಪ್ರಾಣಿಗಳಿಗೆ ಇರುವ ರೋಗ ನಿರೋಧಕ ಶಕ್ತಿ ಮಾನವರಿಗಿಲ್ಲ. ಯಾಕೆಂದರೆ ಮಾನವ ನೀರು ಕುಡಿಯುವದು ಕಡಿಮೆ ಮಾಡಿದ. ಕುಡಿಯುವ ನೀರು filter ಎಂದು ಸತ್ತ. ದೇವರ ದೇವತೆಗಳ ಋಷಿಗಳ ಬ್ರಾಹ್ಮಣರ ಆರಾಧನೆಗೆ ಇರುವ ನೀರು ಮನೆಯಲ್ಲಿಯೇ ಸುಳಿಯಬಾರದೆಂದು ವ್ಯವಸ್ಥಿತವಾಗಿ ಕಲ್ಪಸಿಕೊಂಡ. ಅಂತೆಯೇ ಸಂತೃಪ್ತಿಕೊಡುವ ನೀರೂ ಉಚಿತವಾಗಿ ಸಿಗದೇ ಹೋಯಿತು. *ನೀರು ಎಂದು ಮಾರಾಟಕ್ಕೆ ಬಂತೋ ಅಂದು ೧) ಸಂತೃಪ್ತಿಯೂ ಮಾಯ,  ೨) ಧರ್ಮ ಮಾಯ, ೩) ಭಗವತ್ಪೂಜೆಗೇ ಗೋವಿಂದ, ೪) ಆರೋಗ್ಯಕ್ಕೆ ತಿಲಾಂಜಲಿ, ೫ ರಿಂದ ೫೦೦೦೦೦೦೦೦೦೦೦೦೦೦೦ ಯ ವರೆಗೆ ಇನ್ನೇನು ಅನರ್ಥಗಳಿವೆಯೋ ತಿಳಿಯದು.....

*ಇಂದು ಜಲಪೂರಣ ತ್ರಯೋದಶಿ...*

ಸಾಧನೆಗೆ, ಭಗವತ್ಪೂಜೆಗೆ, ಧರ್ಮಕ್ಕೆ , ನನ್ನ ಸಂತೃಪ್ತಿಗೆ, ದೃಢ ಆರೋಗ್ಯಕ್ಕೆ, ಉತ್ತಮ ಸಾರ್ಥಕ್ಕೆ ಆಯುಷ್ಯಾಭಿವೃದ್ಧಿಗೆ, ದೇವತಾ ಋಷಿ ಆಚಾರ್ಯ ಪಿತೃ ಇವುರುಗಳ ಸಂತೃಪ್ತಿಗೆ, ಬ್ರಾಹ್ಮಣ ಯತಿ ಮುನಿಗಳ ಆರಾಧನೆಗೆ ಅತ್ಯವಶ್ಯಕವಾದ ನೀರಿನ್ನು ಅತ್ಯಂತ ಪ್ರೀತಿಯಿಂದ ಕಾಣೋಣ. ಆರಾಧನೆ ಮಾಡೋಣ. ವ್ಯರ್ಥ ಮಾಡುವದು ಸರ್ವಥಾ ಬೇಡ.  ನೀರು ತದಂತರ್ಯಾಮಿ ದೇವತೆಗಳು ಸಂತೃಪ್ತರಾಗಿದ್ದರೆ ಲಾಭಗಳು ಕೋಟಿ ಕೋಟಿ, ಮಹಾಲಾಭ ಅಪರೋಕ್ಷ ಮೋಕ್ಷವೇ. 

ನೀರೊಂದು ಒಲಿದರೆ ದೇವರ ಪೂಜೆಗೆ ದರ್ಮಗಳಿಗೆ ಹೆಚ್ಚಾಗಿ ಬಳಿಸುವಂತಾಗುತ್ತದೆ. ಅದೇ  ನೀರು ಮುನಿದರೆ ಈಗಿನ ಟಾಯಲೇಟ್ ಗೆ ಅತೀ ಹೆಚ್ಚು ಬಳಿಸುವಂತಾಗುತ್ತದೆ... ಎಂದರೆ ಇದರ ಮೇಲೆ ಊಹಿಸ ಬಹುದು ಇನ್ನೂ ಅನರ್ಥಗಳು ಎಷ್ಟಿರಬಹುದು ಎಂದು......

ಪೂಜೆ ಮಾಡೋಣ. ಆರಾಧನೆ ಮಾಡೋಣ. ದೇವರ ಪೂಜೆಗೆ ನಿತ್ಯ ಬಳಿಸೋಣ. ಧರ್ಮಕ್ಕಾಗಿ ಬಳಿಸೋಣ. ನೀರನ್ನು ಸಾರ್ಥಕ ಮಾಡಿಕೊಳ್ಳೋಣ. ಉಚಿತವಾಗಿಯೇ ಪಡೆಯುವ ಸಾಧ್ಯತೆ ಬೆಳಿಸಿಕೊಳ್ಳೋಣ.......

 *ಜಲಪೂರ್ಣ ತ್ರಯೋದಶಿ, ಸಂತೃಪ್ತಿಯ ಪೂರ್ಣಿಮೆಯಾಗಲಿ*  ಎಂದು ಹರಿಸುತ್ತಾ ದೀಪಾವಳಿ ಹಬ್ಬದ ಶುಭಾಷಯಗಳು... 🌹🌹💐💐


*✍🏽✍🏽ನ್ಯಾಸ...*

ಗೋಪಾಲ‌ದಾಸ.

ವಿಜಯಾಶ್ರಮ, ಸಿರವಾರ.

೯೪೪೯೬೪೪೮೦೮

Comments

Anonymous said…
Extent..... :)
Anonymous said…
ನೀರಿನ ಮಹತ್ವ ತಿಳಿಸಿವ ಸುಂದರ ಲೇಖನ
NYASADAS said…
ಶಾಸ್ತ್ರದಲ್ಲಿ ಬಂದ ವಿಷಯಗಳೇ ಅತೀ ಸುಂದರ
ಚೆನ್ನಾಗಿದೆ
NYASADAS said…
ಧನ್ಯವಾದಗಳು
Unknown said…
Good information
Unknown said…
Very good information
Anonymous said…
Very nice
Anonymous said…
BahaLa chennagidhe

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*