*ಎನ್ನ ಗುರುಗಳ ಅಡೆದಾವರೆಗಳಿಗೆ ಎನ್ನ ನಮನಗಳು*
*ಎನ್ನ ಗುರುಗಳ ಅಡೆದಾವರೆಗಳಿಗೆ ಎನ್ನ ನಮನಗಳು*
ಎನ್ನದು ಅಜ್ಙಾನಾಂಧಕಾರವಾದರೆ, ಜ್ಙಾನ ಪ್ರಕಾಶರು ಎನ್ನ ಗುರುಗಳು.
ಬೆಳಕು ಕತ್ತಲನ್ನು ನಾಶಮಾಡುವದರ ಜೊತೆಗೆ ತನ್ನ ವರ್ತುಲದಲ್ಲಿ ಬಂದ ಎಲ್ಲ ಪದಾರ್ಥಗಳನ್ನೂ ಬೆಳಗುತ್ತದೆ. ಹಾಗೆಯೇ ಗುರುಗಳೂ ಸಹ. ನಂಬಿದ ಶಿಷ್ಯರನ್ನೂ ತಮ್ಮ ಪ್ರಕಾಶದಿಂದಲೇ, ಪ್ರಕಾಶ ಕೊಟ್ಟು ಬೆಳಗಿಸುತ್ತಾರೆ.
ನಂಬಿದ ತನ್ನ ಶಿಷ್ಯರ ಅಜ್ಙಾನವನ್ನೂ ಕಳೆಯುತ್ತಾರೆ ಜೊತೆಗೆ ನಂಬಿದ ಶಿಷ್ಯನಿಗೆ ಜ್ಙಾನಪ್ರಕಾಶವನ್ನೂ ಒದಗಿಸುತ್ತಾರೆ. ಅವನೂ ಜಗತ್ತಿನಲ್ಲಿ ಬೆಳಗುವಂತೆ ಮಾಡುತ್ತಾರೆ.
ಬುದ್ಧಿವಂತರಾದ, ಸ್ವಯಂ ಪ್ರಕಾಶವಂತರನ್ನೇ ಹುಡುಕುತ್ತದೆ ಅಷ್ಟೇ ಅಲ್ಲದೆ ಪ್ರಕಾಶವಂತರನ್ನೇ ಬೆಳಕಿಗೆ ತರುತ್ತದೆ ಇಂದಿನ ಸಮಾಜ.
ಎನ್ನ ಗುರುಗಳು ಹಾಗಲ್ಲ . ಅಜ್ಙ ಬಧಿರ ಧಡ್ಡ ಏನೆ ಆಗಿದ್ದರೂ ಪ್ರಕಾಶವಂತ, ಬುದ್ಧಿವಂತರ ನಡುವಿನಲ್ಲಿ ಇಟ್ಟು , (ನಪಾಸ್ ಮಾಡದೆ, ಕೆಳಗಿಳಿಸದೇ) ಅವನಿಗೂ ತಮ್ಮ ಕರುಣೆ ದಯೆಗಳನ್ನೊಳಗೊಂಡ ತಪಸ್ಸಿನಿಂದ ಒಂದು ಅದ್ಭುತಪ್ರಕಾಶವನ್ನು ಕೊಟ್ಟು ಜಗತ್ತಿನಲ್ಲಿ ಬೆಳುಗುವಂತೆ ಮಾಡುತ್ತಾರೆ. ಇದುವೇ *ಗುರುಗಳ ಕಾರುಣ್ಯ.* ಇಂಥ ಮಹಾತ್ಮರೇ ಎನ್ನ ಗುರುಗಳು. *ಪರಮಪೂಜ್ಯ ಮಾಹುಲೀ ಆಚಾರ್ಯರು.*
ದೀಪ ಒಂದು ಪ್ರಕಾಶ ಕೊಟ್ಟೀತು. ಆದರೆ ಎನಗೆ ಒಂದು ಪ್ರಕಾಶ ಕೊಡುವವರು ಗುರುಗಳಲ್ಲ.. ಜ್ಜಾನ, ಭಕ್ತಿ, ವಿರಕ್ತಿ, ಸಂತೃಪ್ತಿ, ದೇವರಲ್ಲಿ ನಿಷ್ಠೆ, ಗುರುಗಳಲ್ಲಿ ಶ್ರದ್ಧೆ, ಧರ್ಮದಲ್ಲಿ ಆಸ್ತಿಕತೆ, ಸಹನೆ ದಯಾ, ಕ್ಷಮಾ, ಪರೋಪಕಾರ, ಮುಂತಾದ ನೂರಾರು ಪ್ರಕಾಶಗಳನ್ನು ನಂಬಿದವರ ಯೋಗ್ಯತಾನುಸಾರವಾಗಿ ದಯಪಾಲಿಸುವ ಹೆದ್ದೈವ ದಯಾಮೂರ್ತಿ *ಎನ್ನ ಗುರುಗಳು.*
ಮಹಾನ್ ದೊಡ್ಡದಾದ ಬಂಡೆಗಲ್ಲನ್ನು ರುಚಿಯಾದ ಸಿಹಿ ನೀರು ಆಗಿ ಹರಿಸುತ್ತಾರೆ. ಆ ನೀರೂ ನಿಂತನೀರನ್ನಾಗಿ ಅಲ್ಲ ನಿರಂತರ ಹರಿಯುವ ನೀರನ್ನಾಗಿ ಮಾಡುತ್ತಾರೆ. ಆ ಹರಿಯುವ ನೀರೂ ಅರ್ವಾಕ್ ಸ್ರೋತಸ್ ಆಗುವದಿಲ್ಲ. ಊರ್ಧ್ವಸ್ರೋತಸ್ಸಾಗಿ ಮೇಲ್ಮುಖವಾಗಿ ಹರಿಸುತ್ತಾರೆ. ಇದು *ಎನ್ನ ಗುರುಗಳ ಒಂದು ಮಹಾ ವೈಭವ.*
ಅಂತಹ ಗುರುಗಳಾದ ಪರಮಪೂಜ್ಯ ಆಚಾರ್ಯರ ಪಾದಾರವಿಂದಗಳಿಗೆ ಕೊಟಿ ಕೋಟಿ ವಂದನೆಗಳು. ಅನಂತಾನಂತ ನಮಸ್ಕಾರಗಳು.
ಎನ್ನ ಪಾಲಿಗೆ ಎನ್ನಂಥ ಪಾಪಿಷ್ಠರು ಮತ್ತೊಬ್ಬರು ಇಲ್ಲ ನಿಜ, ಆದರೆ ಎನ್ನ ಪಾಲಿಗೆ *ಎನ್ನ ಗುರುಗಳಂಥ ದಯಾಶೀಲರು ಮತ್ತೊಬ್ಬರು ಜಗತ್ತಿನಲ್ಲಿಯೇ ಇಲ್ಲ* ಇದುವೂ ಅಷ್ಟೇ ನಿಜ.
ಹೇ ಗುರೋ! ನಿಮ್ಮ ಅಡೆದಾವರೆಗಳಿಂದ ವಿಮುಖನಾದರೆ ಒಳ್ಳಯದು ಎಂಬುವದು ಕನಸ್ಸಿನಲ್ಲಿಯೂ ಇಲ್ಲ. *ಗುರುಗಳೆಂಬ ತಾವರೆಗೆ ದುಂಬೆಯಂತಾಗಲಿ ಎನ್ನ ಮನ*
ಕೋಟಿ ಕೋಟಿ ಪ್ರಣಾಮಗಳು. ಅನಂತಾನಂತ ವಂದನೆಗಳು.
*ನಮ್ಮ ಸರ್ವಸ್ವವೂ ಗುರುಗಳ ಅಡೆದಾವರೆಗೆ.....*
ಹನಿ ಹನಿ ಸೇರಿದರೆ ಅದು ಕಡಲು. ಹನಿ ಕಡಲಿನಲ್ಲಿ ಎಷ್ಟು ಸುರಕ್ಷಿತವೋ ಅಷ್ಟೇ ಅಸುರಕ್ಷಿತ ತಾನು ಕಡಲು ಸೇರದೆ ತಾನಾಗಿ ಇದ್ದರೆ. ಹಾಗೆ
ನಮ್ಮ ಹನಿ ಹನಿಯಂತೆ ಇರುವ ಪುಣ್ಯ ಗುರುಗಳು ಎಂಬ ಕಡಲು ಸೇರಿದರೆ ಆ ಪುಣ್ಯ ಸುರಕ್ಷಿತ, ಮಹಾಫಲಕಾರಿ.
ಗುರು ಎಂಬ ಕಡಲು ಸೇರದೆ ನಮ್ಮ ಸನಿಹ ಇಟ್ಟುಕೊಂಡರೆ ಫಲ ಸಿಗುವದೂ ಇಲ್ಲ, ಅನರ್ಥಕಾರಿಯೂ ಅಗುತ್ತದೆ. ಆದ್ದರಿಂದ ನಮ್ಮ ಪುಣ್ಯವನ್ನು ಅನಂತಾನಂತ ಸಾಷ್ಟಾಂಗ ನಮಸ್ಕಾರಪೂರ್ವಕ ನಮ್ಮ ಗುರುಗಳ ಪಾದಾರವಿದಗಳಲ್ಲಿ ಸಮರ್ಪಿಸೋಣ. *"ಅನೇನ ಭಾವಿ ಯತ್ಪುಣ್ಯಂ ಅವಾಪ್ನೋತು ಗುರುರ್ಮಮ"* ಎಂದು.
*✍🏼✍🏼✍🏼ನ್ಯಾಸ...*
(ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ)
Comments