*ಯೋಗ ದಿನ- ಯೋಗೀಶವಂದ್ಯನಿಗೆ ಯೋಗದ ಮುಖಾಂತರ ಕೋಟಿ ಕೋಟಿ ಪ್ರಣಾಮಗಳು*
- *ಯೋಗ ದಿನ- ಯೋಗೀಶವಂದ್ಯನಿಗೆ ಯೋಗದ ಮುಖಾಂತರ ಕೋಟಿ ಕೋಟಿ ಪ್ರಣಾಮಗಳು*
ಮಾನಸಿಕ ದೈಹಿಕ ಆರೋಗ್ಯಕ್ಕೆ ಯೋಗ್ಯಾಭ್ಯಾಸ ಅತ್ಯಂತ ಸದುಪಯುಕ್ತವಾಗಿರುವದು. ಸಕಾರಾತ್ಮಕ ವಿಚಾರಗಳಿಗೆ ಯೋಗ ಶ್ರೇಷ್ಠವಾದ ಉಪಾಯವೇ ಆಗಿದೆ. ಏಕಾಗ್ರತೆಗೆ ಯೋಗ ಮುಖ್ಯ. ಆಧ್ಯಾತ್ಮಿಕ ಅಲೌಕಿಕ ಜೀವನದಲ್ಲಿ ಯೋಗ ಅತ್ಯಂತ ಪ್ರಮುಖವಾದ ಅಂಗವೇ ಆಗಿದೆ. ಅಂತೆಯೇ ಅಂದಿನ ಕಾಲದ ಋಷಿಮುನಿಗಳು ಯೋಗಾಭ್ಯಾಸವನ್ನು ಎಂದಿಗೂ ಕಡೆಗಾಣಿಸಲಿಲ್ಲ. ಇಂದಿನ ಜ್ಙಾನಿಗಳೂ ಬಿಟ್ಟಿಲ್ಲ.
ಅನಾರೋಗ್ಯ, ಕ್ರಿಯಾಶೀಲತೆ ಇಲ್ಲದಿರುವದು, fitness ಸಮಸ್ಯೆ, ಕಫ ಪಿತ್ತ ವಾತಗಳಿಂದ ಉಂಟಾಗುವ acidity, ತಲೆಶೂಲಿ ಮುಂತಾದ ನಾನಾತರಹದ ಸರ್ವೆ ಸಾಮಾನ್ಯವಾದ ದೈಹಿಕ ರೋಗಗಳಿಂದ ತುತ್ತಾಗಿರುವ ಕಾರಣ ಒಂದು ಹತ್ತು ನಿಮಿಷ ಬಿಡದೆ ಸುಖಾಸನದಲ್ಲೂ ಕೂಡಲು ಆಗದ ಪರಿಸ್ಥಿತಿ.
ಚಿಂತೆ, ನಕಾರಾತ್ಮಕ ಭಾವನೆ, ಅಸಂತೃಪ್ತಿ, ಅಶಾಂತಿ, ಮಾನಸಿಕ stress, ದಗುಡ, tension, ಕಂಡದ್ದರ ವಿಚಾರ, ಮುಂತಾದ ಮಾನಸಿಕ ಅನಾರೋಗ್ಯ ಎಲ್ಲರಿಗೂ ಇರುವಂತಹದ್ದು. ಅಂತೆಯೇ ಕಣ್ಣುಮುಚ್ಚಿ ಏಕಾಗ್ರವಾಗಿ ನೂರು ಗಾಯತ್ರೀ ಜಪಮಾಡದ ಪರಿಸ್ಥಿತಿ.
ಯೋಗದಿಂದ ಮಾತ್ರ ಪರಿಹಾರ
ಯಮ ನಿಯಮ ಆಸನ ಪ್ರಾಣಾಯಮ ಪ್ರತ್ಯಾಹಾರ ಧಾರಣ ಧ್ಯಾನ ಈ ರೀತಿಯಾಗಿ ಎಂಟು ತರಹದ್ದು ಆಗಿದೆ ಯೋಗ. ಪ್ರಾಣಾಯಾಮ ಆಸನ ಧ್ಯಾನಗಳಾದರೂ ಇಂದು ಅತ್ಯಂತ ಆವಷ್ಯಕ.
ಆಸನ - ಪ್ರಾಣಾಯಾಮ
ಪ್ರಾಣಾಯಾಮದಿಂದ ಏಕಾಗ್ರತೆ ಹಾಗೂ ಆರೋಗ್ಯಪೂರ್ಣ ಮನಸ್ಸು ಜೊತೆಗೆ ನರನಾಡಿಗಳಿಗೂ ಶುದ್ಧ ಆರೋಗ್ಯ ಹೀಗೆ ನಾನಾ ತರಹದ ಲಾಭಗಳನ್ನು ಸಂಪಾದಿಸಿಕೊಳ್ಳುವ ಮುಖಾಂತರ, ಆಸನಗಳಿಂದ ದೈಹಿಕ ಆರೋಗ್ಯವನ್ನು ಸಂಪಾದಿಸಿಕೊಂಡ ವ್ಯಕ್ತಿಗೆ ಧ್ಯಾನ ಅತಿ ಸುಲಭವಾಗಿ ಬರಲು ಸಾಧ್ಯ.
ಧಾರಣ - ಧ್ಯಾನ
ಕಂಡಲ್ಲಿ ಕಂಡದ್ದರಲ್ಲಿ ಅಲೆದಾಡುವ ಅಲೆಮಾರಿಗೆ ಧಾರಣ - ಧ್ಯಾನ ಅತ್ಯಂತ ಸೂಕ್ತ. ಶಾಂತಿ, ಸಂತೃಪ್ತಿ, ಸಕಾರಾತ್ಮಕ ವಿಚಾರಧಾರೆಗಳು, ಸ್ಪಷ್ಟ ಹಾಗೂ ಸೂಕ್ಷ್ಮ ನಿರ್ಧಾರಗಳು ಇತ್ಯಾದಿ ಇತ್ಯಾದಿ ಎಲ್ಲದಕ್ಕೂ ಧಾರಣ - ಧ್ಯಾನಗಳೇ ಮಹತ್ವದ್ದಾಗಿದೆ. *ಧಾರಣ - ಧ್ಯಾನಗಳೆ ದೇವರನ್ನು ಹಾಗೂ ನಮ್ಮನ್ನು ಒಂದೆಡೆ ಕರೆದೊಯ್ಯವ್ವಂತಹದ್ದು.* ಹಾಗಾಗಿ ಧಾರಣ - ಧ್ಯಾನಗಳು ಅತ್ಯಂತ ಆವಶ್ಯಕ.
ಪ್ರಾಣಾಯಾಮದಿಂದ ಕಾಮ ಕ್ರೋಧ ರಾಗಾದಿ ಸಕಲ ದೋಷಗಳ ಪರಿಹಾರ.
ಧಾರಣೆಯಿಂದ ಬ್ರಹ್ಮ ಹತ್ಯಾದಿ ದೋಷಗಳ ಪರಿಹಾರ.
ಪ್ರತ್ಯಾಹಾರದಿಂದ ದುಷ್ಟವಿಷಯಗಳ ಸಂಸರ್ಗದಿಂದ ಉಟಾದ ದೋಷಗಳ ಪರಿಹಾರ.
ಧ್ಯಾನದಿಂದ ಈಶ್ವರವ್ಯತಿರಿಕ್ತ ಗುಣಗಳಿಂದ ಉಂಟಾದ ದೋಷಗಳ ಪರಿಹಾರ ಜೊತೆಗೆ ಅಪರೋಕ್ಷ ಮೊದಲಾದ ಸಾಧನೆ ಇದೆ. ಎಂದು ಭಾಗವತದಲ್ಲಿ ಕಪಿಲರೂಪಿ ಭಗವಂತ ತನ್ನ ತಾಯಿಯಾದವದೇವಹೂತಿ ದೇವಿಗೆ ಉಪದೇಶಿಸುತ್ತಾನೆ.
ಮೋದೀಜೀ ಅವರ ಕ್ರಿಯಾಶೀಲತೆ, ಧೈರ್ಯ, ಏಕಾಗ್ರತೆ, ಸ್ಪಷ್ಟ ನಿರ್ಧಾರಿತ ಮಾತುಗಳು ಇವುಗಳನ್ನೇ ನೋಡೋಣ.
*ನಮ್ಮ ಅನೇಕ ಯತಿವರೇಣ್ಯರ ಹಾಗೂ ನಮ್ಮ ಪರಮ ಗುರುಗಳ ಮತ್ತು ಗುರುಗಳ ಜೊತೆಗೆ ಇನ್ನನೇಕ ಯೋಗಿಗಳ ವೈರಾಗ್ಯ, ಕ್ರಿಯಾಶೀಲತೆ, ಅಪಾರ ಜ್ಙಾನ, ಏಕಾಗ್ರತೆ, ನೆನಪಿನಶಕ್ತಿ, ಅವರ ಮಾತುಗಳಿಂದಾಗುವ ಸಕಾರಾತ್ಮಕ ಪರಿಣಾಮಗಳು, ಶುದ್ಧ ಅಂತಃಕರಣ, ಅವರ ಪ್ರಚಂಡ ಧೈರ್ಯ, ಆತ್ಮ ಸ್ಥೈರ್ಯ, ಮನೋ ದಾರ್ಢ್ಯತೆ, ಭಗವದ್ದೀಕ್ಷೆ, ಧರ್ಮನಿಷ್ಠುರತಾ, ದೃಢಾ ಭಕ್ತಿ ಇತ್ಯಾದಿ ಇತ್ಯಾದಿ ನೂರಾರು ಸಾವಿರಾರು ಗುಣಗಳ ಮೂರ್ತಿಂತರಾಗಿರುವದಕ್ಕೆ ಯೋಗವೂ ಒಂದು ಮುಖ್ಯಕಾರಣ.*
ಯೋಗದಿಂದದಲೇ ನಾನಾತರಹದ ಲೌಕಿಕ ಹಾಗೂ ಅಲೌಕಿಕ ಲಾಭಗಳು ಇರುವದರಿಂದ ಇಂದಿನಿಂದ ಕೆಲಹೊತ್ತಾದರೂ (೧೦ ನಿಮಿಷ ಪ್ರಾಣಾಯಾಮ, ೨೪ ಸೂರ್ಯನಮಸ್ಕಾರ, ಸಾಧ್ಯವಿರುವ ಸುಖ ಪದ್ಮ ವಜ್ರ ಮೊದಲಾದ ಆಸನಗಳನ್ನು, ಕೇವಲ ಹತ್ತು ನಿಮಿಷ ಧ್ಯಾನ) ಹೀಗೆ ಕೆಲ ಹೊತ್ತು ಆದರೂ ಯೋಗಕ್ಕೆ ಸಮಯವನ್ನು ಮೀಸಲು ಇಡೋಣ ಅಲ್ಲವೆ....
*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments