*ಯೋಗ ದಿನ- ಯೋಗೀಶವಂದ್ಯನಿಗೆ ಯೋಗದ ಮುಖಾಂತರ ಕೋಟಿ ಕೋಟಿ ಪ್ರಣಾಮಗಳು*
*ಯೋಗ ದಿನ- ಯೋಗೀಶವಂದ್ಯನಿಗೆ ಯೋಗದ ಮುಖಾಂತರ ಕೋಟಿ ಕೋಟಿ ಪ್ರಣಾಮಗಳು* ಮಾನಸಿಕ ದೈಹಿಕ ಆರೋಗ್ಯಕ್ಕೆ ಯೋಗ್ಯಾಭ್ಯಾಸ ಅತ್ಯಂತ ಸದುಪಯುಕ್ತವಾಗಿರುವದು. ಸಕಾರಾತ್ಮಕ ವಿಚಾರಗಳಿಗೆ ಯೋಗ ಶ್ರೇಷ್ಠವಾದ ಉಪಾಯವೇ ಆಗಿದೆ. ಏಕಾಗ್ರತೆಗೆ ಯೋಗ ಮುಖ್ಯ. ಆಧ್ಯಾತ್ಮಿಕ ಅಲೌಕಿಕ ಜೀವನದಲ್ಲಿ ಯೋಗ ಅತ್ಯಂತ ಪ್ರಮುಖವಾದ ಅಂಗವೇ ಆಗಿದೆ. ಅಂತೆಯೇ ಅಂದಿನ ಕಾಲದ ಋಷಿಮುನಿಗಳು ಯೋಗಾಭ್ಯಾಸವನ್ನು ಎಂದಿಗೂ ಕಡೆಗಾಣಿಸಲಿಲ್ಲ. ಇಂದಿನ ಜ್ಙಾನಿಗಳೂ ಬಿಟ್ಟಿಲ್ಲ. ಅನಾರೋಗ್ಯ, ಕ್ರಿಯಾಶೀಲತೆ ಇಲ್ಲದಿರುವದು, fitness ಸಮಸ್ಯೆ, ಕಫ ಪಿತ್ತ ವಾತಗಳಿಂದ ಉಂಟಾಗುವ acidity, ತಲೆಶೂಲಿ ಮುಂತಾದ ನಾನಾತರಹದ ಸರ್ವೆ ಸಾಮಾನ್ಯವಾದ ದೈಹಿಕ ರೋಗಗಳಿಂದ ತುತ್ತಾಗಿರುವ ಕಾರಣ ಒಂದು ಹತ್ತು ನಿಮಿಷ ಬಿಡದೆ ಸುಖಾಸನದಲ್ಲೂ ಕೂಡಲು ಆಗದ ಪರಿಸ್ಥಿತಿ. ಚಿಂತೆ, ನಕಾರಾತ್ಮಕ ಭಾವನೆ, ಅಸಂತೃಪ್ತಿ, ಅಶಾಂತಿ, ಮಾನಸಿಕ stress, ದಗುಡ, tension, ಕಂಡದ್ದರ ವಿಚಾರ, ಮುಂತಾದ ಮಾನಸಿಕ ಅನಾರೋಗ್ಯ ಎಲ್ಲರಿಗೂ ಇರುವಂತಹದ್ದು. ಅಂತೆಯೇ ಕಣ್ಣುಮುಚ್ಚಿ ಏಕಾಗ್ರವಾಗಿ ನೂರು ಗಾಯತ್ರೀ ಜಪಮಾಡದ ಪರಿಸ್ಥಿತಿ. ಯೋಗದಿಂದ ಮಾತ್ರ ಪರಿಹಾರ ಯಮ ನಿಯಮ ಆಸನ ಪ್ರಾಣಾಯಮ ಪ್ರತ್ಯಾಹಾರ ಧಾರಣ ಧ್ಯಾನ ಈ ರೀತಿಯಾಗಿ ಎಂಟು ತರಹದ್ದು ಆಗಿದೆ ಯೋಗ. ಪ್ರಾಣಾಯಾಮ ಆಸನ ಧ್ಯಾನಗಳಾದರೂ ಇಂದು ಅತ್ಯಂತ ಆವಷ್ಯಕ. ಆಸನ - ಪ್ರಾಣಾಯಾಮ ...