ಸ ತ್ವಂ ನೃಸಿಂಹ ಮಮ ದೇಹಿ ಕೃಪಾವಲೋಕಮ್...*
ಸ ತ್ವಂ ನೃಸಿಂಹ ಮಮ ದೇಹಿ ಕೃಪಾವಲೋಕಮ್...*
ಇಂದು ನರಸಿಂಹದೇವರು ದುಷ್ಟನಾದ ಹಿರಣ್ಯನನ್ನು ಸೆದೆಬಡೆಯಲು ಅವತರಿಸಿದ ಮಹಾ ಸುದಿನ. ಈ ನರಸಿಂಹ ಎಮ್ಮ ಮನದಲ್ಲಿಯೂ ಅವತರಿಸಬೇಕು. ಮನದಲ್ಲಿಯ ಎಲ್ಲ ದುಷ್ಟರನ್ನೂ ಸಂಹರಿಸಬೇಕು. ದುಷ್ಟ ಭಾವನೆಗಳನ್ನೂ ಸಂಹರಿಸಬೇಕು.
ಹಿರಣ್ಯ ಕಶಿಪುವನ್ನು ಸಂಹರಿಸಲು ಅವತರಸಿದ್ದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯ ನಮ್ಮೆಲ್ಲರ ಹಿತಕ್ಕಾಗಿ , ನಮ್ಮ ಸಮಗ್ರ ಪಾಪಪರಿಹರಿಸಿ , ಎಲ್ಲ ವಿಧ ಮಂಗಳ ಉಂಟು ಮಾಡುವದಕ್ಕಾಗಿಯೇ ಅವತಾರ ಮಾಡಿದ್ದು.
ನೃಸಿಹ ದೆವರ ಮಹಿಮೆ ಪರಮಾದ್ಭುತ. ಶಕ್ತಿ ಬಲ ಅನಂತ. ಶ್ರೀಮದಾಚಾರ್ಯರು ತಿಳಿಸುವಂತೆ ನರಸಿಂಹದೇವರ ನೇತ್ರದ ಮಹಿಮೆಯೇ ಅತ್ಯದ್ಭುತ.
ನೇತ್ರದಲ್ಲಿ ಅನಂತ ಅಗ್ನಿಗಳಿಗೆ ಸಮವಾದ, ಈ ಎಲ್ಲ ಅಗ್ನಿಗಳ ಜನಕವಾದ, ಸಂಪೂರ್ಣ ಬ್ರಹ್ಮಾಂಡವನ್ನೇ ಸುಟ್ಟು ಹಾಕುವ ಭಗವಂತನದೇ ಆದ *ಅಗ್ನಿ* ಎಂಬ ರೂಪವಿದೆ. ಅಪಾರ ಬಲವಿರುವ ಬ್ರಹ್ಮ ರುದ್ರ ಮೊದಲಾದ ದೇವತೆಗಳನ್ನು ಸುಟ್ಟು ಹಾಕುವ ಮಹಾ ಸಾಮರ್ಥ್ಯ ಕೇವಲ ಆ ನೇತ್ರದ ಅಗ್ನಿಯ ಒಂದು ಕಿಡಿಗೆ ಇದೆ.
ಅನಂತ ಸಾಮರ್ಥ್ಯ ಇರುವ ನೇತ್ರಾಗ್ನಿಯ ಒಂದು ಕಿಡಿಯ ಚಿಂತನೆ ಸ್ತೋತ್ರ ಜಪ ನಮಸ್ಕಾರ ಹಾಗೂ ಆ ಕಿಡಿಯ ದಯೆ ಇಂದಿಗೂ ನಮ್ಮನ್ನು ಪೀಡಿಸುವ ದುಷ್ಟರನ್ನು ಶಿಕ್ಷಿಸುವದು. ನಮ್ಮನ್ನು ನಿರ್ದುಷ್ಟನನ್ನಾಗಿ ಮಾಡುವದು. ನಮ್ಮಂತಹ ಅನಂತ ಜನರನ್ನು ರಕ್ಷಿಸುವದು. ಕಿಡಿಗೇ ಇಷ್ಟು ಸಾಮರ್ಥ್ಯವಿದ್ದರೆ ಸಂಪೂರ್ಣ ನೇತ್ರಾಗ್ನಿಗೆ ಎಷ್ಟು ಸಾಮರ್ಥ್ಯ ಇರಬಹುದು ಯೋಚಿಸಿ ಚಿಂತಿಸಬೇಕು.
ಆ ನೇತ್ರದಲ್ಲಿ ಜಗತ್ತನ್ನು ಸುಡುವ ಪಾಪವನ್ನು ಭಸ್ಮಮಾಡುವ ಶಕ್ತಿ ಮಾತ್ರವಲ್ಲದೇ ಅಷ್ಟೇ ಸಮರ್ಥವಾದ ಕರುಣಾರಸವೂ ತುಂಬಿದೆ. ಕರುಣಾರಸಕ್ಜೆ ಪಾತ್ರರಾಗಿದ್ದಾರೆ ಎಂಬ ಕಾರಣಕ್ಕಾಗಿಯೇ ಇಷ್ಟೆಲ್ಲ ಉನ್ನತ ಪದವಿಯನ್ನೂ ಪಡೆದಿದ್ದಾರೆ ಬ್ರಹ್ಮಾದಿ ದೇವತೆಗಳು. ನಮಗೆ ಇಂದಿಗೂ ಮಂಗಳವಾಗುವದು ಕರುಣಾರಸಕ್ಕೆ ಭಜನಾರು ಆಗಿದ್ದಕ್ಕೆ ಮಾತ್ರ. ಇದು ನೇತ್ರದ ಮಹಿಮೆ.
ದೇವರು ನಮ್ಮನ್ನು ಹುಟ್ಟಿಸಿದ ಮೇಲೆ ನಮಗೇನು ಬೇಕು ಎನ್ನುವದನ್ನು ಸೃಷ್ಟಿಸಿಲ್ಲ. ನಮ್ಮ ಹುಟ್ಟಿನ ಜೊತೆಗೆ ನಮ್ಮೆಲ್ಲ ಅಗತ್ಯತೆಗಳನ್ನೂ ಸೃಷ್ಟಿಸಿಬಿಟ್ಟಿದ್ದಾನೆ. ಮೋಕ್ಷಾದಿ ಪುರುಷಾರ್ಥದ ವರೆಗೆ ಎಲ್ಲವೂ ನಮ್ಮ ಜೊತೆಗೆ ನಮ್ಮ ಪಾಲಿನದು ಹುಟ್ಟಿಯಾಗಿದೆ.
ಭೂಮಿ ಸ್ವರ್ಗ ನರಕ ಮುಕ್ತಿ, ಲೌಕಿಕ ಅಲೌಕಿ ಹೀಗೆ ಎಲ್ಲ ವಿಧಫಲಗಳು ನಮಗಾಗಿ ಸೃಷ್ಟಿ ಮಾಡಿದ್ದಾನೆ ನಾರಾಯಣ.
ಆದರೆ ಅದನ್ನು ಪಡೆಯಲು ಆಗುತ್ತಿಲ್ಲ. *ಹೇ ನರಸಿಂಹ ನನ್ನ ಪಾಲಿನದು ಏನಿದೆ, ಏನು ಸೃಷ್ಟವಾಗಿದೆ, ಲೌಕಿಕವಾದ ಎಲ್ಲ ಸೌಖ್ಯ, ಅಲೌಕಿಕವಾದ ಭಕ್ತಿ, ಜ್ಙಾನ, ಅಪರೋಕ್ಷ, ಮೋಕ್ಷ ಪರ್ಯಂತ ಎಲ್ಲವನ್ನೂ ಎನಗೆ ದಯಮಾಡಿ ಕರುಣಿಸು*
ನಿನ್ನ ಶಕ್ತಿ ಪರಮಾದ್ಭುತ.
ನಾಡದ್ದು ಬರುವ ಆಪತ್ತನ್ನು ಮೊನ್ನೇ ಪರಿಹರಿಸುವ ಶಕ್ತಿ ನಿನ್ನಲ್ಲಿ ಇದೆ. ಬ್ರಹ್ಮ ರುದ್ರಾದಿಗಳ ವರದ ಬಲದಿಂದ ಬೀಗುವ ದುಷ್ಟಶಕ್ತಿಯನ್ನೂ ಕೊಂದು ಹಾಕುವ ಶಕ್ತಿ ನಿನ್ನದಿದೆ. ಅನಂತ ಜೀವರ ಜೀವದಲ್ಲಿ ಇದ್ದು ನಿಯಮನ ಮಾಡುವ ಕೌಶಲ ನಿಮ್ಮದು.
ಭಕ್ತರ ಪ್ರಾರ್ಥನೆಗೆ ಎಲ್ಲಿದ್ದರೂ ಹೇಗಿದ್ದರೂ ಓಗೊಡುವ ನೀನೊಬ್ಬನೇ ನನ್ನ ಹಿತೈಷಿ. ನನಗಾಗಿ ನನ್ನ ಬಗ್ಗೆ ನಿಮ್ಮಷ್ಟು ಯೋಚಿಸುವ ಒಂದೂ ಶಕ್ತಿಯೂ ಇಲ್ಲ. ನೀವು ನನ್ನ ಮರೆತ ದಿನವಿಲ್ಲ. ನಾನು ನಿಮ್ಮನ್ನು ನೆಸಿಕೊಳ್ಳವ ಗೋಜಿಗೇ ಹೋಗುವದಿಲ್ಲ. ಆದರೂ ನನ್ನ ರಕ್ಷಣೆ ಮಾಡಿಯೇ ಮಾಡುತ್ತಿರಿ ಇದು ನಿಮ್ಮ ಅಪಾರ ಕಾರುಷ್ಯವಲ್ಲದೇ ಇನ್ನೇನು.
*ಎನ್ನ ಹೃದಯವೆಂಬ ರಥದಲ್ಲಿ ನೆಲೆನಿಂತ ಹೇ ನರಸಿಂಹ ನಿನ್ನ ಕಣ್ಣಿನ ಕೋಪಾಗ್ನಿಯಿಂದ ಒಳಗಿನ ಶತ್ರುಗಳನ್ನು ಸುಟ್ಟು ಹಾಕು. ಕರುಣಾಪೂರ್ಣ ದೃಷ್ಟಿಯಿಂದ ಎನಗೆ ಇಲ್ಲಿ ಹಾಗೂ ಪರದಲ್ಲಿ ಮಂಗಳವನ್ನು ದಯಪಾಲಿಸು* ಎಂದು ಪ್ರಾರ್ಥಿಸೋಣ. ನಿನ್ನ ದಯೆ ಇದ್ದರೆ ನನಗಾಗಿ ಏನು ಸೃಷ್ಟವಾಗಿದೆ ಅದನ್ನೇ ಪಡೆಯುವೆ.
*ಎಮ್ಮನುದ್ಧರಿಸಲೇ ಶ್ರೀಶೂರ್ಪಾಲಿ, ತೊರವಿ, ಕೊಪ್ಪರ, ಗಲಗಲಿ, ಇತ್ಯಾದಿ ಕ್ಷೆತ್ರದಲ್ಕು ನೆಲೆನಿಂತ ನಿನ್ನ ಅದ್ಭುತ ಶಕ್ತಿಗೆ ನಮೋ ನಮೋ !! ನಿನ್ನ ಕರುಣಾರಸ ಎನ್ನ ಮೇಲೆ ನಿರಂತರ ಹರಿಸು* ಎಂದೂ ಪ್ರಾರ್ಥಿಸುವೆ.
ಮೇಲೆ ಇರುವ ವಿಡಿಯೋದಲ್ಲಿ ದಿಗ್ವಿಜಯ ಲಕ್ಷ್ಮೀ ನರಸಿಂಹದೇವರ ವೈಭವದ ಅಭಿಷೇಕ ಕಣ್ಣಿಂದ ನೋಡೋಣ. ನಮ್ಮ ಕುಲಸ್ವಾಮಿಯನ್ನು ನೆನಿಸೋಣ. ಹೃದಯ ಗುಹಾವಾಸಿಯಾದ ನರಸಿಂಹನಿಗೆ ನಮಸ್ಕರಿಸೋಣ... ನಿತ್ಯವೂ ನಸಿಂಹ
*✍🏼✍🏼✍🏼ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
Namma kulaswami Shurpali Laxmi Narasimh devarannu ee varsha vedeodindale nodi kaimugididdeve.
Nanna 62 varsha jeevanadalli ide modal sala Shurpali utsavakke sadhyavagilla...korona karanadindagi
ಮುಂದೆಂದೂ ತಪಸ್ಪಿಸದ ಹಾಗೆ ದೇವರೇ ಕರೆಸಿಕೊಳ್ಳಲಿ.
ನಿಮ್ಮ ಪ್ರತಿ ಪ್ರತಿಕ್ರಯೆಯೂ ನನಗೆ ಸ್ಫೂರ್ತಿ :)