*ಸರ್ವರೋಗ ಭಯಾದಿ ವಿನಾಶಾರ್ಥಂ ದೀಪಜ್ಯೋತಿರ್ನಮೋಸ್ತು ತೇ*

*ಸರ್ವರೋಗ ಭಯಾದಿ ವಿನಾಶಾರ್ಥಂ ದೀಪಜ್ಯೋತಿರ್ನಮೋಸ್ತು ತೇ*

ಪ್ರಾತಃಕಾಲ, ಸಾಯಂಕಾಲ, ರಾತ್ರಿ ಈ ಮೂರೂ ಕಾಲದಲ್ಲಿಯೂ ದೇವರೆದುರಿಗೆ  ದೀಪ ಹಚ್ಚುವದು ಅನೂಚಾನ‌ ಪದ್ಧತಿ. 

ಕತ್ತಲು ಮತ್ತು  ಅಜ್ಙಾನ ಇವುಗಳನಾಶನಕ್ಕಾಗಿ ದೀಪ. ಅನೇಕತರಹದ ಬಾಧೆಗಳ ರೋಗಗಳ ಉಪಶಮನಕ್ಕಾಗಿಯೂ ದೀಪ ಹಚ್ಚುವದನ್ನು ಶಾಸ್ತ್ರದಲ್ಲಿ ನಾವು ಕಾಣುತ್ತೇವೆ. ಅಂತೆಯೇ ಸಾಯಂಕಾಲ ದೀಪ ಹಚ್ಚಿದೊಡನೆ  ಹಿರಿಯರು *ಪೀಡೆಗಳು ಉಪಶಮನ ಆಗುತ್ತದೆ* ಎಂದು ಆಗಾಗ  ಮಾತಾಡಿದ್ದನ್ನು ಸ್ವಯಂ ನಾನು ಕೇಳಿದ್ದೇನೆ. 

*ಕೊರೋನಾ -  ದೀಪ - ರಾತ್ರಿ*

ರಾತ್ರಿ ಹೊತ್ತಿನಲ್ಲಿ ನಮ್ಮನ್ನು ಕಾಪಾಡುವ ರಕ್ಷಿಸುವ ಸೂರ್ಯ ಚಂದ್ರ ಮೊದಲಾದ ನವಗ್ರಹ ಮತ್ತು ನಕ್ಷತ್ರ ಇತ್ಯಾದಿ ದೇವತೆಗಳ ಆರಾಧನೆಗೋಸ್ಕರ ದೀಪ ಹಚ್ಚುವದು. "ನಿಮ್ಮ ಆರಾಧನೆಯಿಂದ ಆಕಾಶ ಗಾಳಿ ಇವಗಳಿಂದಾಗುವ ಯಾವ ಪೀಡೆಯೂ ನಮಗಾಗದಿರಲಿ" ಎಂದೇ ಶಾಸ್ತ್ರದ ಉದ್ಯೇಶ್ಯ. ಇಂದು *ಕೊರೋನಾ* ಎಂಬ ಪಿಡಗು ಗಾಳಿ ಆಕಾಶ ( ಸ್ಪೇಸ್) ಸಂಪರ್ಕ ಇವಗಳಿಂದ ಹರುಡಿತ್ತಿದೆ. ಈ ಮಹಾಮಾರಿಯನ್ನು ತಡೆಗಟ್ಟುವದಕ್ಕಾಗಿ, ತಡೆಗಟ್ಟುವ ಶಕ್ತಿಯನ್ನು ಪ್ರಚೋದಿಸುವದಕ್ಕಾಗಿ, ತಡೆಗಟ್ಟುವ ಕೌಶಲ ಅಭಿವೃದ್ಧಿಗೋಸ್ಕರ  *ದೀಪ ಬೆಳಗಿಸುವ* ಮುಖಾಂತರ ದೇವತೆಗಳಿಗೆ ಪ್ರಾರ್ಥಿಸುವದು. 

*ದೀಪ - ಮೋದೀಜಿ*

"ಸಂಘೇ ಶಕ್ತಿಃ ಕಲೌಯುಗೇ" ಕಲಿಯುಗದಲ್ಲಿ ಸಂಘದಲ್ಲಿಯೇ ಶಕ್ತಿ ಇದೆ ಇದು ಆರ್ಯರ ವಿಚಾರ. ಇಂದು ಸಂಘ ಒಗ್ಗೂಡುವಿಕೆ ಎನ್ನುವದೇ ಇಲ್ಲವಾಗಿದೆ. ಅಂತೆಯೇ ನಮಗೆ ಪ್ರತೀ ಅವಸ್ಥೆಯಲ್ಲಿಯೂ ಸೋಲಾಗ್ತಿದೆ. ಗೆಲ್ಲಲು ಒಗ್ಗೂಡಿಕೆ ಅತ್ಯವಶ್ಯಕ ಎಂದು ಮನಗಂಡು ಸನ್ಮಾನ್ಯ ಮೋದೀಜಿ ಅವರು ಈ ವಿಚಾರವನ್ನು ಹೊರಹಾಕಿರುವದು. 

ವಿಶ್ವ ಮಹಾಮಾರಿಯನ್ನು ಎದರಿಸಲು ಸೋಲಿಸಲು ಬಗ್ಗುಬಡಿಯಲು  ನಾನು ನೀವು ಒಬ್ಬರಿಂದ ಆಗುವ ಕೆಲಸವೇ ಅಲ್ಲ. ಎಂದು ಯೋಚಿಸಿದ ಮೋದೀಜಿ ಅವರು "ಈ ಮಹಾ ಯುದ್ಧದಲ್ಲಿ ನೂರಾಮೂವತ್ತುಕೋಟಿ ಜನರೂ ಪಾಲ್ಗೊಳ್ಳಬೇಕು" ಎಂದೇ ಯೋಚಿಸಿ ಮನೆ ಮನೆಯಲ್ಲಿ ಇದ್ದ ಪ್ರತಿಯೊಬ್ಬರನ್ನೂ ಸೆಳೆಯುವ ಒಂದು ವಿಶಿಷ್ಟ ತಂತ್ರ ಇದರಲ್ಲಿ ಅಡಗಿದೆ. ಎಲ್ಲರೂ ಒಗ್ಗಟ್ಟಾಗಿ ಒಂದು ಗೂಡಿದರೆ ಏನನ್ನೂ ಸಾಧಿಸಬಹುದು ಎನ್ನುವ  ದೊಡ್ಡ ಉದ್ದ್ಯೇಶ್ಯವೂ ಅಡಗಿದೆ.  "ದೀಪ ಬೆಳಗಿಸಲು ಹಿಂದೇಟು ಹಾಕಿದ ವ್ಯಕ್ಯಿ ಭಾರತ ಮಾತೆಯ ಶತ್ರು" ಎಂದೂ ತೋರಿಸಿದಂತಾಗುತ್ತದೆ. 

ಈ ತರಹದ ಒಗ್ಗೂಡಿಕೆ ಈ ಮಹಾಮಾರಿಯನ್ನು ಮಾತ್ರ ಗೆಲ್ಲುವದು ಅಲ್ಲ, ಮುಂದೆ ಜಗತ್ತಿನಲ್ಲಿಯೇ ಸಮರ್ಥ ದೊಡ್ಡ ದೇಶವನ್ನಾಗಿಯೂ ಮಾಡಬಹುದು ಎಂದೂ ನಮ್ಮ ಭಾರತದ ಪ್ರತೀಪ್ರಜೆಗಳಿಗೂ ತಿಳಿಸುವ ಸ್ಪಷ್ಟ ಉದ್ಯೇಶ್ಯ ಇದರಲ್ಲಡಗಿದೆ. 

*ಇಂದು ರಾತ್ರಿ ಸರಿಯಾಗಿ ೯ ಗಂಟೆಗೆ ೯ ನಿಮಿಷದ ವರೆಗೆ ತುಪ್ಪ - ಎಳ್ಳೆಣ್ಣೆ -  ಒಳ್ಳೆಣ್ಣೆಯ ದೀಪವನ್ನೇ ಹಚ್ಚೋಣ.  ಆ ಎಲ್ಲ ಗ್ರಹಗಳ ಅವರ ಸ್ವಾಮಿಯಾದ ರಾತ್ರಿ ನಿಯಾಕಳೂ ಆದ ದುರ್ಗೆಯನ್ನು ಆರಾಧಿಸೋಣ. ನಾವೆಲ್ಲ ನೂರಮೂವತ್ತುಕೋಟಿ ಜನ  ಒಗ್ಗೂಡಿ ಈ  ಎಲ್ಲ ವಿಧದ ಮಹಾಮಾರಿಗಳನ್ನೂ ಗೆದ್ದು ಬರೋಣ. ಈ ಪದ್ಧತಿ ಬ್ರಾಹ್ಮಣರು ನಿತ್ಯ ಮಾಡುತ್ತಾರೆ. ಇಂದು ಆರಂಭಿಸಿದ ಎಲ್ಲರೂ ನಿತ್ಯವೂ ದೀಪಾರಧನೆಯನ್ನು ಮಾಡೋಣ.‌ ಯಾವ ದೇವತೆಯ ಎದುರಿಗೆ ಎಷ್ಟು ಕ್ಷಣ ದೀಪ ಉರಿಯತ್ತೋ ಅಷ್ಟುವರ್ಷ ಸುಖದ ಆರೋಗ್ಯಯುತ ಜೀವನ ಅವನದು ಆಗುತ್ತದೆ. ಅಂತೆಯೇ ನಮ್ಮೆಲ್ಲ ಅನೇಕರ ಮನೆಯಲ್ಕಿ ಇಪ್ಪತ್ತುನಾಲ್ಕು ಗಂಟೆಯೂ ದೀಪ ದೇವರೆದುರಿಗೆ ಇರುತ್ತದೆ. ನಾವೆಲ್ಲ ಒಂದಾಗಿ ಇಂದೂ ಬೆಳಗೋಣ.‌ ನಿತ್ಯವೂ ಬೆಳಗೋಣ. 

*ಒಗ್ಗೂಡಿದಾಗ  ಶತ್ರುವೂ ದುರ್ಬಲನಾಗುವ....*

ಒಬ್ಬೊಬ್ಬರೇ ಯುದ್ಧಕ್ಕೆ ಹೋದರೆ ಶತ್ರು ನಮ್ಮನ್ನು ಮುಗಿಸುತ್ತಾನೆ. ನಾವೆಲ್ಲಾ ಒಗ್ಗೂಡಿ ಯುದ್ಧಕ್ಕೆ ಹೋದರೆ ಶತ್ರುವೇ ಮಣ್ಣಾಗ್ತಾನೆ. ಅದೇರೀತಿ ಇಜ ಕರೋನಾ ಮಬ ಶತ್ರುವಿನ ಬಾಯಿಗೆ ನಾವು ಬೇಳಬೇಕೆ ???? ಅಥವಾ ನಮ್ಮ ಕಾಲ್ಕೆಳಗಿನ ಮಣ್ಣಲ್ಲಿ ಈ ಶತ್ರು ಮಣ್ಣಾಗಬೇಕಾ.. ?? ಯೋಚಿಸಿ ನಿರ್ಣಯಿಸಿ....

*✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
ಜೈ ಮೋದೀ ಜಿ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*