*ಹೆದರಿಕೆ.....*

*ಹೆದರಿಕೆ.....*

ನಿಜವಾಗಿ ಹೆದರಿಕೆ ಇರುವದು ಯಾರಿಂದ..??  ಹೀಗೆ ಉತ್ತರ ಕೊಡಬಹುದು. "ನಮ್ಮಿಂದ ಭಯಭೀತನಾದವನಿಂದ ನಮಗೆ ಹೆದುರಿಕೆ" ಎಂದು.

ಸೊಳ್ಳೆಯನ್ನು ಕೊಂದು ಹಾಕಲು ಮುಂದಾಗ್ತೇನೆ ಎಂದರೆ ಸೊಳ್ಳೆಯಿಂದ ಎನಗೆ ಹೆದರಿಕೆ ಆರಂಭವಾಗಿದೆ ಎಂದೇ ಅರ್ಥ. ಹೆದರಿದವನೇ ಕೈ ಎತ್ತುವವನು. ಬಯ್ಯುವವನು. 

ನಮ್ಮಿಂದ ಯಾರು ಹೆದರಿದ್ದಾರೋ ಅವರಿಂದ ಆಪತ್ತು ಬಂದೇ ಬರುವದು. ಇದುವೂ ಅಷ್ಟೇ ನಿಶ್ಚಿತ.  ಪ್ರಾಣಿ ಪಶು ಪಕ್ಷಿ ಮೊದಲ ಮಾಡಿ  ಯಾರಿಗೂ ನಮ್ಮಿಂದ ಹೆದರಿಕೆ ಬಂದಿರಬಾರದು. ಹೆದರಿದವ ಸಂಚು ಹಾಕಿ ಹೊಡೆಯುತ್ತಾನೆ. ಇಲ್ಲವೋ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಾನೆ. ಈ ಕ್ರಮದಲ್ಲಿ ಹೆದುರಿಕೆ ಬೆನ್ನಟ್ಟುವದೇ.

*ಈ ಎರಡೂ ವಿಷಯದಲ್ಲಿ ಒಂದೊಂದು‌ ಕಥೆ ಸಿಗುತ್ತದೆ..*

ರಾವಣ ಹೆದುರಿದ. ರಾಮನನ್ನು ಸಂಹರಿಸಲು ನೂರು ಪ್ರಯತ್ನ ಮಾಡಿದ. ಸೋತ. ಸತ್ತೂ ಹೋದ. ಒಂದು ನಿಜ ಹೆದುರಿದ ರಾವಣ ರಾಮನನ್ನು ಸಂಹರಿಸಲು ನೂರು ಪ್ರಯತ್ನ ಮಾಡಿದ. ಹೆದುರಿದ ದುರ್ಯೋಧನ ಪಾಂಡವರನ್ನು ಸಂಹರಿಸಲು ಅನೇಕ ಪ್ರಯತ್ನಗಳನ್ನೂ ಮಾಡಿದ. ತಪ್ಪು‌ಮಾಡಿ ಹೆದರಿದವ ಕೈ ಎತ್ತುವದು ಮೊದಲೇ.


ನಮ್ಮಿಂದ ಯಾರೂ ಹೆದರಿರಬಾರದು. ಅವರು ಹೆದರಿದ್ದರೂ ಎಂದಾದರೆ ನಮಗೆ ಅವರಿಂದ ಆಪತ್ತು ಇದ್ದದ್ದೇ. ಅಂತೆಯೇ  ಶ್ರೀರಾಮ ವನವಾಸದಲ್ಲಿ  ತನ್ನ ಧನುಸ್ಸಿನ "ಜ್ಯಾ"ವನ್ನು ಎಂದೂ ಹೆದೆ ಏರಿಸುತ್ತಿರಲಿಲ್ಲ. ಏನಕ್ಕೆ....

ಜ್ಯಾ ವನ್ನು ಹೆದೆ ಏರಿಸಿ ಧನುಸ್ಸು ಸಿದ್ಧವಾಗಿ ಇಟ್ಟು ಕೊಂಡಿರುವದು ಕ್ಷತ್ರಿಯರ ಧರ್ಮ.  

ಹೆದೆ ಏರಿಸಿದ ಧನುರ್ಧಾರಿ ನನ್ನನ್ನು ನೋಡಿದರೆ ಆ ಪ್ರಾಣಿಗಳು ಹೆದರಿ ಓಡಿ ಹೋಗುತ್ತವೆ. ನಂತರ ಗುಪ್ತವಾಗಿ ಸಂಚು ಮಾಡಿ ನಮ್ಮ ಮೇಲೆ ಎರಗಬಹುದು. ಯಾರೂ ಏನು ಸಂಚು ಮಾಡಿದರೂ ರಾಮನಿಗೆ ತೊಂದರೆ ಇಲ್ಲ. ಆದರೆ ನಮಗೆ ಪಾಠ ಕಲಿಸಲು ಶ್ರೀರಾಮ ತೋರಿಸಿಕೊಡುತ್ತಾನೆ.  

ಈ ರೀತಿಯಲ್ಲಿ ವಿಚಾರ ಮಾಡಿದ ಸರ್ವ ಸಮರ್ಥ ಶ್ರೀರಾಮ ಧನುಸ್ಸು ಹೆದೆ ಏರಿಸದೆ ಎಲ್ಲರಿಗೂ ಅಭಯವನ್ನು ನೀಡುತ್ತಾ ಸಂಚರಿಸಿದ. ಎಂದು ರಾಮಾಯಣ ಸಾರುತ್ತದೆ.

ನಾವು ಹೆದರಬಾರದು. ನಮ್ಮಿಂದ ಹೆದುರಿಕೆ ಇನ್ನೊಬ್ಬರಿಗೆ ಬರಬಾರದು. ಹೀಗಿದ್ದರೆ ನಾನು ಸೇಫ್. 

ನಮ್ಮಿಂದ ಹೆದುರಿಕೆ ಬರಬಾರದು ಇದು ಸರಳ.  ಆದರೆ ನಾವು ಹೆದರಬಾರದು ಅಂದರೆ ಹೇಗೆ...?? 

ನಾವು ಹೆದರ ಬಾರದು ಎಂದರೆ ನಮ್ಮಿಂದು ಒಂದೂ ತಪ್ಪು ಘಟಿಸಬಾರದು. ತಪ್ಪುಗಳು ಘಟಿಸಿದ ಹಾಗೆ ಹೆದುರಿಕೆ ಹೆಚ್ಚೆಚ್ಚು. ಅಂತೆಯೇ ದುರ್ಯೋಧನ ರಾವಣರು ಹೆದುರಿದರು.  ತಪ್ಪುಮಾಡದ ಭೀಮನಿಗೆ ಒಟ್ಟಾರೆಯಾಗಿ ಹೆದುರಿಕೆಯೇ ಇರಲಿಲ್ಲ. 

ವಿದ್ಯಾರ್ಥಿ ತಪ್ಪು ಮಾಡದೇ ಇರುವಾಗ ಹೆದರುವದಿಲ್ಲ. ಹೆದುರಿದ ಅಂದರೆ ತಪ್ಪಾಗಿದೆ ಎಂದೇ ಅರ್ಥ. ತಪ್ಪಾದಮೇಲೆ ಶಿಕ್ಷೆ ಆಗಲೇಬೇಕು. ಇನ್ನೊಬ್ಬರನ್ನು ಹೆದುರಿಸುವ ಕ್ರೂರ ರೂಪ ತಾಳಿದ ಎಂದಾದರೆ, ಹೆದರಿದವರಿಂದ ಆಪತ್ತು ಇದ್ದದ್ದೇ. ಅಂತೆಯೇ ರಾಮ ಘೋರ ವನದಲ್ಲಿ ಇದ್ದರೂ ಯಾವ ಪ್ರಾಣಿಗಳಿಂದ ಹೆದುರಿಕೆ ಬರಲೇ ಇಲ್ಲ. ದುರ್ಯೋಧನ ರಾವಣ ಕಂಸರು ಅರಮನೆಯ ಆವರಣದಲ್ಲಿ ಮಲಗಿಕೊಂಡರೂ ಸರಿಯಾದ ನಿದ್ರೆ ಹತ್ತಲೇ ಇಲ್ಲ.  

ನಮ್ಮಿಂದ ಯಾರಿಗೂ ಹೆದುರಿಕೆ ಬರುವದು ಬೇಡ. ನಾವು ಯಾರಿಗೂ ಹೆದರುವ ಪ್ರಸಂಗ ಬರದ ಹಾಗೆ ನೋಡಿಕೊಳ್ಳೋಣ. ಜೈ ಶ್ರೀರಾಮ.

*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ.

Comments

Unknown said…
Well writte. True . I have experienced . 🙏🙏🙏 . I appreciate your writing . Your thought process and writing skill compliment each other. Stay Blessed 🙏🙏🙏
Sumathi Baskar said…
V true. Interesting posts. Your flow of writing is v good . 🙏🙏🙏
NYASADAS said…
ಧನ್ಯವಾದಗಳು

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*