*ದುಷ್ಟ ಶಿಕ್ಷಕ, ಶಿಷ್ಟರಕ್ಷಕ,ಅಕ್ಷಯ ಫಲದಾಯಕ...‌‌*

*ದುಷ್ಟ ಶಿಕ್ಷಕ, ಶಿಷ್ಟರಕ್ಷಕ,ಅಕ್ಷಯ  ಫಲದಾಯಕ...‌‌*

ಅಕ್ಷಯ ತೃತೀಯಾ ಮಹದಿನದ ಶುಭಾಷಯಗಳು. 


ಅಪೇಕ್ಷೆಗಳಿಗೆ ಕೊನೆಯಿಲ್ಲ.  ಪಡೆಯುವ ಫಲಗಳೆಲ್ಲವೂ ಕ್ಷಣಿಕ. ಪಡೆದದ್ದರಲ್ಲಿ ಸುತರಾಂ ತೃಪ್ತಿ ಇಲ್ಲ. ಇದು ಇಂದಿನ (ದು)ಸ್ಥಿತಿ.

ಶಾಸ್ತ್ರ ತಿಳಿಸತ್ತೆ "ಪಡೆಯುವ ಹಂಬಲವೇ ಇದ್ದರೆ ಎಂದೂ ನಶಿಸದ ಫಲವನ್ನೇ ಪಡೆ" ಎಂದು.

ಎಂದಿಗೂ ನಶಿಸದ ಅಂದರೆ ಅಕ್ಷಯವಾದ ಫಲವವೂ ಇದೆ... ಆ ಫಲಕ್ಕೆ  ಅಡ್ಡಿಯಾದವಗಳೂ ಅಕ್ಷಯವಾಗಿವೆ.......

ಅಕ್ಷಯವಾದದ್ದನ್ನು ಪಡೆಯಲು ಅಕ್ಷಯವಾದ ಅಡ್ಡಿಗಳು. ಆ ಅಡ್ಡಿಗಳನ್ನು ದಾಟಲು ಸಾಧ್ಯವಿಲ್ಲ. ದಾಟಿ ಆದಮೇಲೆ ಅಕ್ಷಯ ಫಲ ಅದೂ ಅಸಾಧ್ಯದ ಮಾತೇ... ಒಟ್ಟಾರೆಯಾಗಿ ಮೂಗಿಗೆ ಬೆಣ್ಣೆ ಸವರಿದಂತಿದೆ ನಿಮ್ಮ ಮಾತಿನ ಧಾಟಿ.....


ಜೀವ ಸತ್ ಚಿತ್ ಆನಂದ ಸ್ವರೂಪ. ತನ್ನದೇ ಆದ,  ತನ್ನ ಸ್ವರೂಪವನ್ನು  ಪಡೆಯಲು ಅನಾದಿಯಿಂದ ಕ್ರಮಿಸಬೇಕು. ಸುದೀರ್ಘ ಸಾಧನೆ ಬೆಕು. ಅನೇಕ ಏಳು ಬೀಳುಗನ್ನು ದಾಟಿ ಕೊನೆಗೆ ಹೊಂದಬೇಕು. ಆ ಕೊನೆ ಎಂದು.. ?? ನಾವು ನಿರ್ಧರಿಸುವ ಹಾಗಿಲ್ಲ, ಅದರ ನಿರ್ಧಾರ ಶ್ರೀಹರಿಯದು. 

ಜೀವನಿಗೆ ತನ್ನದೇ ಆದದ್ದನ್ನು ತಾನು ಪಡೆಯಲು ಇರುವ ಅಡ್ಡಿಗಳು ಪ್ರಮುಖವಾಗಿ *ಈಶ್ವರೇಚ್ಛಾ, ಪ್ರಕೃತಿ, ಲಿಂಗದೇಹ, ಜೀವಾಚ್ಛಾದಿಕಾ, ಪರಮಾಚ್ಛಾದಿಕಾ, ಕಾಮ, ಕರ್ಮ* ಹೀಗೆ ಏಳು ಇವೆ. 

ಒಂದು ಅಪೇಕ್ಷೆ.‌ ಅದನ್ನು ಈಡೇರಿಸಿಕೊಳ್ಳಲು ಅನೇಕ ಕರ್ಮ. ಆ ಒಂದು ಕರ್ಮಕ್ಕೆ ಅನೇಕ ಕರ್ಮಗಳ ಫಲ. ಆ ಒಂದೊಂದಕ್ಕೇ ಮತ್ತೆ ನೂರಾರು. ಆ ಒಂದೊಂದಕ್ಕೆ ಮತ್ತೆ ಸಾವಿರಾರು. ಹೀಗೆ ಅನಾದಿಯಿಂದ ಮಾಡಿದ ಅನಂತ ಕರ್ಮ. ಆ ಕರ್ಮಗಳು ಅಕ್ಷಯ. ಅದರ ಫಲಗಳೂ ಅಕ್ಷಯ. ಕೊರೋನಾ ಗೆಲ್ಲಲು ಒಂದು ಉಪಾಯ lockdowne ಇದ್ದ ಹಾಗೆ , ಕರ್ಮಗಳ ಸರಪಳಿ ನಿಲ್ಲಲು ಬೇಕು ಕಾಮನೆಗಳ‌ ಫುಲ್ ಸ್ಟಾಪ್. ಕಾಮಕ್ಕೆ ಮುಗುದಾನ ಹಾಕಿ ಕರ್ಮಗಳನ್ನು ನಮ್ಮ ತಳಹದಿಗೆ ತರುವದೇ ತುಂಬ ಕಠಿಣ.  

ನಿಶ್ಶೇಷ ಕರ್ಮನಾಶಕ್ಕೆ ವಿಶಿಷ್ಟವಾದ ಮಾರ್ಗ ಒಂದು ಇದೆ. ಅದುವೇ ಜ್ಙಾನ ಮಾರ್ಗ. *ತಿಳಿದವ ಕುಕರ್ಮ ಮಾಡಲು ಹೆದರುವ* ಅವಿಹಿತ ಕರ್ಮಗಳಿಗೆ ಕಡಿವಾಣ ಹಾಕುವದು ತಿಳುವಳಿಕೆಯೇ. ತಿಳುವಳಿಕೆ ಪಕ್ವ ಆದಂತೆ ವಿಹಿತ ಕರ್ಮಗಳಲ್ಲಿಯೂ ಯೋಚಿಸುವ.  ಯಾವ ಕರ್ಮ ಶಾಶ್ವತ ಹಿತವಾಗಿದೆ.. ?? ಹಿಂದಿನ ಕರ್ಮವನ್ನೂ ನಾಶ ಮಾಡಿಹಾಕಿ, ಮುಂದೆ ಅಕ್ಷಯಫಲ ಕೊಡುವ ಕರ್ಮ ಯಾವುದು.. ??  ಹೀಗೆ. ಆ ತರಹದ ಕರ್ಮವನ್ನೇ ಮಾಡುವ.   ತಿಳುವಳಿಕೆ ಅಂದರೆ ಜ್ಙಾನ ಆ ಜ್ಙಾನವೇ ಕರ್ಮದ ಓಘಕ್ಕೆ ಮುಗುದಾನ ಹಾಕುವದು. 

ಜ್ಙಾನಮಾರ್ಗದಲ್ಲಿ ಜ್ಙಾನ ಬೆಳೆದಂತೆ ಕಾಮ ಬದಲಾಯಿತು. ಕರ್ಮ ಕಡಿಮೆ ಆಯಿತು. ಹೀಗೆ ಕಾಮ ಕರ್ಮಗಳನ್ನು ಗೆದ್ದ ಮಾನವ ಜೀವಾಚ್ಛಾದಿಕಾ ಪರಾಮಾಚ್ಚಾದಿಕೆಗಳೊಂದಿಗೆ ಹೋರಾಡುತ್ತಾನೆ. ಹೋರಾಡುತ್ತಾ ತನ್ನ ಸ್ವರೂಪದ ಹಾಗೂ ಭಗವತ್ಸ್ವರೂಪದ ಅಭಿರುಚಿ ಪಡೆಯುತ್ತಾನೆ. ಇದುವೇ ಅಪರೋಕ್ಷ ಜ್ಙಾನ ಎಂದೆನಬಹುದು. ಅಪರೋಕ್ಷ ಆದ ಕ್ಷಣಕ್ಕೇನೆ *ಅಕ್ಷಯವಾದ  ಸರ್ವರ್ಮಗಳ ನಾಶವಾಗಿಬಿಡುತ್ತದೆ.* ಹೀಗೆ ಕರ್ಮದ ನಾಶವಾದಮೇಲೆ, ಮುಂದೆ ಪಡೆಯುವದೇನಿದೆ ಅದು ಅಕ್ಷಯವಾದದ್ದೇ....

*ರುಚಿ ಎಂದಿಗೂ ರುಚಿಸಿ ಶಾಂತವಾಗದು, ಆ ರುಚಿ ಮತ್ತೆ ಬೇಕೆನಿಸುವಂತೆ ಮಾಡುತ್ತದೆ* ಅಪರೋಕ್ಷ ಜ್ಙಾನದ ಆ ರುಚಿಯನ್ನು ಆಸ್ವಾದಿಸಲು ತೊಡಗುತ್ತಾನೆ. ಆಸ್ವಾದಿಸುತ್ತಾನೆ. ಇನ್ನೂ ಬೇಕೇನಿಸುತ್ತದೆ, ಹೆಚ್ಚು ಸಾಧನೆ ಮಾಡುತ್ತಾನೆ ಇನ್ನೂ ಹೆಚ್ಚು ಪಡೆಯುತ್ತಾನೆ. ಹೀಗೆ ಪಡೆಯುತ್ತಾ ಸಾಗಿದ ಹಾಗೆ ಲಿಂಗ ದೇಹ ಮತ್ತು ಪ್ರಕೃತಿ ಇವುಗಳು ಶಿಥಿಲವಾಗುತ್ತಾ ಸಾಗುತ್ತವೆ. 

ಕಾಮ ಕರ್ಮ ಗಳು ಕಳೆದವು. ಜೀವಾಚ್ಛಾದಿಕಾ ಮರಮಾಚ್ಛಾದಿಕೆಗಳು ಹೋದವು. ಉಳಿದದ್ದ ಎರಡು ಲಿಂಗದೇಹ ಪ್ರಕೃತಿ ಅವಗಳೂ ಶಿಥಿಲವಾದವು. ಇನ್ನು ಉಳಿದಿರುವದು ಈಶ್ವರೇಚ್ಛೆ ಮಾತ್ರ. ಇಷ್ಟು ಸಾಧನೆ ಮಾಡಿ ಮೇಲೆ ಬಂದಾಗ ಭಗವಾನ್ ಮೋಕ್ಷಪ್ರದ ವಾಸುದೇವ *ಈ ನನ್ನ ಮಹಾನ್ ಭಕ್ತ !! ಉತ್ತಮ ಸಾಧಕ!!!! ಇವನಿಗೆ ಶಾಶ್ವತ ಅಕ್ಷಯ ಫಲಸಿಗಲಿ, ತನ್ನದೇ ಆನಂದವನ್ನು ಅಕ್ಷೀಣವಾಗಿ ಅನುಭವಿಸಲಿ* ಎಂದು ಮನಃಪೂರ್ವಕ ಹರಿಸಿ ಇಚ್ಛೆ ಮಾಡಿದ ಎಂದಾದರೆ ಮುಂದೆ ಸಿಗುವದೆಲ್ಲವೂ *ಅಕ್ಷಯವೇ...*  

ಈ ಅಕ್ಷಯ ಫಲದ ಉದ್ಯೇಶ್ಯದೊಂದಿಗೆ ಇಂದಿನ ಅಕ್ಷಯ ತೃತೀಯಾ ದಿನವನ್ನು ಆಚರಿಸೋಣ. ಸಾಧ್ಯವೊರುಷ್ಟು ಸಾಧನೆಯಲ್ಲಿ ತೊಡಗಿಸಿಕೊಳ್ಳೋಣ. ಏನಾದರೊಂದು ಹೊಸ ಸಾಧನೆ ಆರಂಭಿಸೋಣ. ಒಂದು ಜಪ, ಪಾರಾಯಣ, ಪಾಠ ಉಪನ್ಯಾಸ ಹೀಗೆ ಒಂದು ಹೊಸ ಸಾಧನೆ ಅಕ್ಷಯ ಸಾಧನೆಗೆ ಮೆಟ್ಟಿಲು ಆಗತ್ತೆ. 

ದುಷ್ಟ ಕಾಮನೆಗಳನ್ನು ಹಾಗೂ ದುಷ್ಟ ಫಲಗಳನ್ನು ಶಿಕ್ಷಿಸಿ ಸಂಹರಿಸಿ, ಸತ್ಕಾಮನೆಗಳನ್ನು ಚಿಗುರೊಡೆಯುವಂತೆ ಮಾಡಿ, ಸತ್ಕರ್ಮಗಳನ್ನೇ ಮಾಡಿಸಿ ಅಕ್ಷಯ ಫಲ ಒದಗಿಸಿ ಈ ಶಿಷ್ಟನಾದ ನನ್ನನ್ನೂ ರಕ್ಷಿಸು ಎಂದು ಪ್ರಾರ್ಥಿಸುತ್ತಾ.... ಕೊಡದೇ ಇರುವ ನಾಲ್ಕನ್ನು ಮರೆತು ಕೊಟ್ಟಿರುವ ಅಕ್ಷಯವನ್ನು ನೆನಿಸೋಣ. ನೆನಿಸುತತ್ತಾ ಇರೋಣ. 

ಆತ್ಮೀಯರಾದ ನನ್ನ ಹಿತೈಷಿಗಳೂ ಆದ ತಮ್ಮೆಲ್ಲರಿಗೂ ಅಕ್ಷಯತೃತೀಯಾ ಶುಭದಿನದ  ಹೃತ್ಪೂರ್ವಕ ಶುಭಾಷಯಗಳು🌹🌹🌹🌹🌹

*✍🏽✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Exlent habbada sandesha
Anonymous said…
ಅಕ್ಷಯವಾಗಲಿ ನಮ್ಮೆಲ್ಲರ *ಬಾಂಧವ್ಯ*
ಅಕ್ಷಯವಾಗಲಿ *ಪ್ರೀತಿ ವಿಶ್ವಾಸ*
ಅಕ್ಷಯವಾಗಲಿ *ಸ್ನೇಹ ಗೆಳೆತನ*
ಅಕ್ಷಯವಾಗಲಿ *ಮಮತೆ*
ಅಕ್ಷಯವಾಗಲಿ *ಒಲವು*
ಅಕ್ಷಯವಾಗಲಿ *ಗೆಲುವು*
ಅಕ್ಷಯವಾಗಲಿ *ಉತ್ತಮ ಆರೋಗ್ಯ*
ಅಕ್ಷಯವಾಗಲಿ *ನಂಬಿಕೆ ವಿಶ್ವಾಸ*
ಅಕ್ಷಯವಾಗಲಿ *ಅಭಿವೃದ್ಧಿ*
ಅಕ್ಷಯವಾಗಲಿ *ಕಾರ್ಯಸಿದ್ಧಿ*

*ಅಕ್ಷಯ ತೃತೀಯದ ಈ ಶುಭದಿನದಂದು ಕಷ್ಟ, ಚಿಂತೆ ನೋವು ಕ್ಷಯವಾಗಲಿ,*
ಸದಾ *ಸುಖ ನೆಮ್ಮದಿ ಆನಂದ* ನಮ್ಮ ನಿಮ್ಮದಾಗಲಿ 💐ಅಕ್ಷಯ ತೃತೀಯದ ಶುಭಾಶಯಗಳು
🙏🙏🙏*ಕೃಷ್ಣo ವಂದೇ ಜಗದ್ಗುರು*
ಶುಭೋದಯ*
*ಶುಭ ದಿನ*
ಹರೇ ಶ್ರೀನಿವಾಸ
🙏🏻🌞
NYASADAS said…
ಧನ್ಯವಾದಗಳು
ಅನಂತಾನಂತ ನಮಸ್ಕಾರಗಳು

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*