*"ತುಳಸಿ"ಯಿಂದ ಪ್ರೇರಿತ ಒಂದು ಸಣ್ಣ ವಿಚಾರ.......*
*"ತುಳಸಿ"ಯಿಂದ ಪ್ರೇರಿತ ಒಂದು ಸಣ್ಣ ವಿಚಾರ.......*
ತುಲಸಿಗೆ ನಿನ್ನೆ ನೀರು ಹಾಕುವಾಗ ಯೋಚನೆಗೆ ಬಂತು. ರಾತ್ರಿ ಬರೆದು ಹಾಕಿದೆ. ಸರಿ ಇರಲೂ ಬಹುದು.
ಸರ್ವೌಷಧಿ ರೂಪ ತುಲಸೀ. ಶ್ರೀಮನ್ನಾರಾಯಣನ ಪತ್ನೀ ಸ್ಥಾನ ತುಲಸಿಗೆ. ತುಲಸಿ ಇಲ್ಲದ ಪೂಜೆ ದೇವ ತಾ ವಲ್ಲ ಹಾಗೂ ಕೊಳ್ಳ. ಸೌಮಾಂಗಲ್ಯ ಸೌಭಾಗ್ಯಕ್ಕೆ ನಿತ್ಯವೂ ತುಲಸೀ ಪೂಜೆ ವಿಹಿತ. ಸಮುದ್ರಮಥನದ ಪ್ರಸಂಗದಲ್ಲಿ ಪ್ರಾದುರ್ಭವಿಸಿದವಳು ತುಲಸಿ. ಹೀಗೆ ಸಾವಿರಾರು ಗುಣಗಳು ತುಲಸಿಯಲ್ಲಿ ಇದೆ.
ಆದರೆ "ತುಳಸಿ" ಎಂದಿಗೂ ಹು ಹಣ್ಣು ಹಂಪಲಗಳನ್ನು ಕೊಟ್ಟು ಜನರನ್ನು ಆಕರ್ಷಿಸಲು ಹವಣಿಸಲಿಲ್ಲ. ನೆರಳು ಕೊಡುವದಿಲ್ಲ. ಕಟ್ಟಿಗೆ ಕೊಡುವದಿಲ್ಲ. ಘಮಘಮ ವಾಸೆನೆಯೂ ಇರುವದಿಲ್ಲ. ತನ್ನಷ್ಟಕ್ಕೆ ತಾನು ಬೆಳೆಯುತ್ತದೆ. ಇರುತ್ತದೆ. ಆದರೂ ತುಳಸಿಯ ಕೀರ್ತಿ ಅಜರಾಮರ. ಶಾಶ್ವತ. ಇದು ನಮಗೆ ಒಂದು ನಿದರ್ಶನವೂ ಆಗಬಹುದು. ಯಾಕೆಂದರೆ "ತುಲಸಿ" ತಾನೇನಿದೆ ಹಾಗಿರುತ್ತದೆ. ಬೇಡದ ಉಸಾಬರಿ ಅದಕ್ಕೆ ಬೇಕಿಲ್ಲ. ನನ್ನ ಬಳಿ ಬರುವವರು ನನ್ನ ಗುಣಗಳನ್ನು ಮೆಚ್ಚಿ ಬರಲಿ. ನನ್ನ ಮೇಲ್ನೋಟವನ್ನು ನೋಡಿ ಬರುವ ಯಾವ ಅವಶ್ಯಕತೆ ಇಲ್ಲ. ಎನ್ನುವ ನೀತಿಯನ್ನು ಸಾರುತ್ತದೆ.
*ನಾವೇನು ಮಾಡುತ್ತೇವೆ....*
ನಮ್ಮ ಸುತ್ತಲಿನ ಜನರನ್ನು ನಮ್ಮತ್ತ ಆಕರ್ಷಿಸಲು ನಾವು ಮಾಡುವ ದೊಡ್ಡ ಕೆಲಸವೆನೆಂದರೆ, ನಮ್ಮನ್ನು ನಾವು "ಇರುವದಕ್ಕಿಂತಲೂ ಹೆಚ್ಚಾಗಿ ಪ್ರತಿಬಿಂಬಿಸುವದು". ಅದರಿಂದ ನಮ್ಮ ಮಹತ್ವವನ್ನು ವೃದ್ಧಿಸಿಕೊಳ್ಳಬಹುದು ಎಂಬ ಅತಿ ದರಿದ್ರ ಕ್ಷುದ್ರ ಆಸೆ.
ನಾನು ಎಷ್ಟು ತಿಳಿದುಕೊಂಡಿದ್ದೇನೆ ಎನ್ನುವದು ನನಕಿಂತಲೂ ಹೆಚ್ಚು ಇನ್ಯಾರಿಗೆ ಗೊತ್ತಿರಲು ಸಾಧ್ಯ.... ?? ಧಡ್ಡನಾಗಿದ್ದರೂ ಉತ್ತಮ ಜ್ಙಾನಿ, ದರಿದ್ರನಾಗಿದ್ದರೂ ಅತೀಶ್ರೀಮಂತ, ಸಹನೆ ತಾಳ್ಮೆ ಗಳಿಲ್ಲದಿದ್ದರೂ ಸಹನೆಯಿಂದ ಸಾಕಾರ ಮೂರ್ತಿಯಂತೆ , ದುಷ್ಟತನವನ್ನು ಮುಚ್ಚಿಹಾಕಿ ಸಾತ್ವಿಕತೆಯ ಪ್ರದರ್ಶನ, ಕೆಟ್ಟ ಮಾತುಗಳ ಗೂಡಾಗಿದ್ದರೂ ಒಳ್ಳೊಳ್ಳೆ ಮಾತಾಡುವದು ಹೀಗೆ ನಾನಾತರಹದ ಮಾತುಗಳಿಂದ ಇದ್ದದ್ದನ್ನು ಮುಚ್ಚಿಹಾಕಿ ನೆರೆಹೊರೆಯವರನ್ನು ಮೋಡಿ ಮಾಡಿ ನಮ್ಮ ಮಹತ್ವವನ್ನು ನಾವು ಬೆಳಿಸಿಕೊಂಡಿರುತ್ತೇವೆ. ಈ ಮಹತ್ವವನ್ನು ಬೆಳಿಸಿಕೊಳ್ಳುವ ಭರದಲ್ಲಿ ನಮ್ಮಲ್ಲಿ ಇರುವ ಗುಣಗಳನ್ನು ನಾವೇ ತಿಳಿದಿರುವದಿಲ್ಲ. ಅವುಗಳು ನಮ್ಮಲ್ಲಿಯೇ ಸತ್ತು ಹೋಗಿರುತ್ತವೆ.
*ಮಹತ್ವ ಬಣ್ಣ ಬಯಲಾಗುವವರೆಗೆ ಮಾತ್ರ....*
ಇಲ್ಲದಿರುವದರ ಪ್ರದರ್ಶನ ನಮ್ಮ ಇರುವಿಕೆಯನ್ನು ಮುಚ್ಚಿ ಹಾಕತ್ತೆ. ಎಂದು "ನಾವು ಏನಿದ್ದೇವೆ ಎನ್ನುವದು ಬಯಲಾಗುತ್ತದೆಯೋ ಆ ಕ್ಷಣದಲ್ಲೇ ನಮ್ಮ ಮಹತ್ವ ಕಾಲ್ಗಸಕ್ಕಿಂತಲೂ ಕೀಳನನ್ನಾಗಿ ಮಾಡಿಬಿಡುತ್ತದೆ." ಇದು ನಮ್ಮನ್ನು ನಂಬಿಸಲು ಮಾಡಿದ ಮಹಾಮೋಸ, ಮೋಸಕ್ಕೆ ಮಹಾಫಲ ಸಿಗಲೇಬೇಕು , ಸಿಕ್ಕೆ ಸಿಗುತ್ತದೆ.....
*ನಮ್ಮ ಮಹತ್ವ advertise ಇಂದ ಬೆಳೆಯುವದಿಲ್ಲ....*
ನಮ್ಮನ್ನು ನಾವು ನಮ್ಮಲ್ಲಿ ಇಲ್ಲದಿರುವ ವಿಷಗಳನ್ನು ಮೈಮೇಲೆ ಎಳೆದುಕೊಂಡು ಹೇಳಿಕೊಳ್ಳದಿದ್ದರೆ, ನಮ್ಮಲ್ಲಿರುವ ನಮ್ಮದೇ ಆದ ಗುಣಗಳು ಅಭಿವ್ಯಕ್ತವಾಗುತ್ತಾ ಹೋಗುತ್ತವೆ. "ನಮ್ಮದಲ್ಲದ ನಮ್ಮಲ್ಲಿ ಇಲ್ಲದಿರುವ ವಸ್ತುವಿನ ಕಡೆ ಗಮನ ಕೊಡುವದು ಏನಿದೆ ನಮ್ಮನ್ನು ನಾವು ಕೊಂದುಕೊಳ್ಳುವದು ಎಂದೇ ಅರ್ಥ." ಮಾತಾಡದೆ ಹೇಳಿಕೊಳ್ಳದೇ ತುಲಸಿಯಂತೆ ಎಲ್ಲವನ್ನು ಮಾಡಿದರೆ ಸಾಕು ನಮ್ಮ ಮಹತ್ವ ತಾನಾಗಿಯೇ ಬೆಳಿಯುತ್ತದೆ. ನಮ್ಮ ನಡವಳಿಕೆ ಉತಗತಮವಾಗಿದ್ದರೆ ಸಾಕು ಆ ಮಹತ್ವ ತನ್ನಷ್ಟಕ್ಕೆ ತಾನೇ ಆಕಾಶದೆತ್ತರಕ್ಕೆ ಬೆಳೆಯುತ್ತಾ ಹೊಗುತದೆ.
ಹೇಳಿಕೊಳ್ಳುವದು ದೌರ್ಬಲ್ಯದ ಸಂಕೇತವಾದರೆ, "ಕ್ರಿಯಾ ಕೇವಲಮುತ್ತಮಂ" ನಮ್ಮ ವಿಚಾರಗಳನ್ನು ಹೆಚ್ಚು ಮಾತಾಡದೆ ಕ್ರಿಯೆಗಳಲ್ಲಿ ತರುವದೇನಿದೆ, ನಾವು ಅತಿಬಲಿಷ್ಠರು ಎಂದು ಸಾರುತ್ತದೆ. ಏನಿದೆ ಅದರ ಅಭಿವ್ಯಕ್ತಿ ಬಲಿಷ್ಠರಿಗೆ ಮಾತ್ರ.
ನಮ್ಮ ಸಾತ್ವಿಕ ಮುಚ್ಚುಮರೆಯಿಲ್ಲದ ನಡವಳಿಕೆ ಇಂದ ದೊರೆತ, ತಡವಾಗಿಯಾದರೂ ದೊರೆತ ಅತಿ ಸಾತ್ವಿಕವಾದ, ಶುದ್ಧ ನಿರ್ಮಲವಾದ ಈ ಕೀರ್ತಿ, ಈ ಮಹತ್ವ, ಈ emage ಶಾಶ್ವತ. ಕೊನೆವರೆಗೂ ಉಳಿಯುತ್ತದೆ. ನಾವಿಲ್ಲದಾಗಲೂ ಆ ಕೀರ್ತಿ ವಿರಾಜಮಾನವಾಗಿರುತ್ತದೆ.
ಯಾವ advertise ಇಲ್ಲದೇ ಇದ್ದರೂ ತುಲಸಿ ವಿಷ್ಣು ಪ್ರಿಯೆ, ಒಣಗಿದರೆ ಎಲಿಯೂ ವಿಷ್ಣುಪ್ರಿಯೇ, ಇನ್ನೂ ಒಣಗಿದರೆ ಕಟ್ಟಿಗೆಯೂ ವಿಷ್ಣುಪ್ರಿಯೆ, ಕಟ್ಟಿಗೆಯೂ ಇಲ್ಲವಾದರೆ ಮೃತ್ತಿಕೆಯೂ ವಿಷ್ಣುಪ್ರಿಯೇ, ಮಣ್ಣೂ ಇಲ್ಲವಾದರೆ "ತುಲಸೀ" ಎಂಬ ಸ್ಮರಣೆ ಉಚ್ಚಾರೆಣೆಯೂ ವಿಷ್ಣು ಪ್ರಿಯೆ. ಹಾಗೇ ಇಲ್ಲದ ಮುಖವಾಡಗಳನ್ನು ಕಳಚಿ ಇರುವ ಗುಣದ ಅಭಿವ್ಯಕ್ತಿಗೆ ಗಮನ ಹರಿಸುವ ದೊಡ್ಡ ಗುಣಕ್ಕೆ ಆದರ್ಶ *ತುಲಸೀ..*
*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments