*ನಮ್ಮೂರೇ ವಾಸಿ.....*
*ನಮ್ಮೂರೇ ವಾಸಿ.....*
ಊರು ಬಿಟ್ಟು ದೊಡ್ಡ ಊರಿಗೆ ವಿದೇಶಕ್ಕೆ ಹೋಗುವ ಎಲ್ಲರಿಗೂ ಇಂದು ಅನುಭವಕ್ಕೆ ಬಂದ ಸುಂದರ ಮಾತು ಅಂದರೆ *ನಮ್ಮೂರೇ ವಾಸಿ* ಎಂಬುದು.
2g ಹಿರಿಯರಿಗೆ 3g ಯುವಕರಿಗೆ 4g ಹುಡುಗರಿಗೆ ನಮ್ಮೂರು ಅಂದರೆ ಅಂದಿನಿಂದ ಅಲರ್ಜಿ. ಮಣ್ಣಿನ ಮನೆ, ಮಣ್ಣಿನ ರಸ್ತೆ, ಆಕಳು, ಗೋಮಯ ಗೋಮೂತ್ರ, ಹೊಲ, ಇವೆಲ್ಲ ಈ ಎಲ್ಲರಿಗೂ ಸ್ವಲ್ಪ ಏನು ಬಹಳೇ ಅಲರ್ಜಿ ಎಂದು ಭಾವಿಸಿ ಎಲ್ಲರೂ ನಮ್ಮ ಊರು ನಮ್ಮ ಮನೆ ಬಿಟ್ಟು ಪರ ಊರಿಗೆ ಊರಿಗೆ ಹೋಗಿ ಇನ್ನೊಬ್ಬರ ಮನೆಯಲ್ಲಿ ಇದ್ದು ಅದುವೇ ಶಿಸ್ತು ಎಂದೆನಿಸಿ, ಈ ಊರು, ಈ ವಾತಾವರಣ, ಬಿಟ್ಟು "ಈ" (it) ಊರು ಸೇರಿಕೊಂಡವರೆಲ್ಲರೂ ಇಂದು ಹೇಳುತ್ತಿದ್ದಾರೆ "ನಮ್ಮೂರು ಯಾವಾಗ ಸೇರಿಕೊಂಡೆನೋ" ಅಂತ. ಅದಕ್ಕೆ ದಾಸರು ಹೇಳಿದರು *ನಮ್ಮೂರೇ ವಾಸಿ* ಎಂದು.
*ಇಂದು ನಮ್ಮದು ಏನಿದೆ ನಮಗೆ ದೂರವೇ...*
೧) ನಮ್ಮ ದೇವರು ಬೇಡ. ಏಕೆ...??
ದೇವರನ್ನು ಮನೆಗೆ ಕರೆದರೆ tension. ಅದಕ್ಕೆ ನಮಗೆ ದೇವರು ಬೇಡ, ನಾವು ಕರಿಯಲ್ಲ. ಅದೇಕೆ tension ..??
ದೇವರನ್ನು ಕರೆದರೆ ತಣ್ಣೀರಿನ ಭಾವಿ ಬೋರ್ ನೀರಿನ ಸ್ನಾನ. ಪೂಜೆ ಮಾಡಬೇಕು. ಪೂಜೆಗೋಸ್ಕರ ಮಂತ್ರಗಳನ್ನು ಕಲಿಬೇಕು. ನೈವೇದ್ಯ ಮಾಡಬೇಕು. ಇದ್ಲಿವಲಿ ಅದು ಇದು ಎನಬೇಕು. ಮಡಿ ಮೈಲಿಗಿ... ಯಪ್ಪಾ ಎಷ್ಟು ಸಮಸ್ಯೆ... ನಮ್ಮ ದೇವರು ನಮಗೆ ಬೇಕು ಎಂದರೆ ಇಷ್ಟು ಸಮಸ್ಯೆಗಳು. ಹಾಗಾಗಿ ನಾವು ನಮ್ಮ ದೇವರನ್ನು ಬಿಟ್ಟೆವು.
೨) ಜಪ ಸಂಧ್ಯಾವಂದನೆ ಬಿಟ್ಟೆವು...
ಸಂಧ್ಯಾವಂದನೆ ನಮ್ಮದು ಎಂದು ತೆಗೆದುಕೊಂಡರೆ ಬೆಳಿಗ್ಗೆ ಆರಕ್ಕೇ ಏಳಬೇಕು. ಅರ್ಘ್ಯಕೊಡಬೇಕು. ಒಂದು ಗಂಟೆ ಜಪಮಾಡಬೇಕು.. ತಲಿ ಔಟ್ ಆಗತ್ತೆ. ಹಾಗಾಗಿ ಜಪ ಸಂಧ್ಯಾವಂದನೆ ದೂರು ಮಾಡಿದೆವು.
೩) ಧರ್ಮದ ಅವಸ್ಥೆಯೂ ಅಷ್ಟೆ....
ಧರ್ಮ ಮಾಡಲು ಹೊರಡುವ ವ್ಯಕ್ತಿ ಮೊದಲು ಅಧರ್ಮಕ್ಕೆ ಹೆದರಬೇಕು. ಹೆದರಿದವನೇ ಧರ್ಮ ಮಾಡುವ. ಹೆದರಿ ಸಾಯ್ತಾ ಉಪವಾಸ ವನವಾಸ ಎಂದು ಒದ್ದಾಡ್ತಾ ಕೂಡುವದಕ್ಕಿಂತಲೂ ಯಥೆಚ್ಛವಾಗಿ ನಿರ್ಭಯವಾಗಿ ಮನಸೋ ಇಚ್ಛೆ ಇರಬೇಕು ಎಂಬ ಅಭಿಲಾಶೆ ಇರುವ ನಾವು ಧರ್ಮವನ್ನೂ ನಮ್ಮದಲ್ಲ ಎಂದು ಬಿಟ್ಟು ಬಿಟ್ಟೆವು.
೪) ಪಾಠ ಪ್ರವಚನ .....
ಇವುಗಳ ಅವಸ್ಥೆ ಹೇಳತೀರದು. ಪಾಠ ಪ್ರವಚನ ಇವುಗಳಲ್ಲಿ ಭಾಗವಹಿಸಿದರೆ ನಾವೆಲ್ಲಿ ಜ್ಙಾನಿಗಳು ಆಗ್ತೀವಿ ಎನ್ನುವ ಭಯ ಒಂದಾದರೆ, ಅಧರ್ಮದಲ್ಲಿ ಪಾಲ್ಗೊಂಡರೆ ಇಂಥಿಂಥ ಅನರ್ಥ ಎಂದೂ ತಿಳಿದುಕೊಂಡು ಬಿಟ್ಟರೆ ಮತ್ತೊಂದು ಭಯ. ಹಾಗಾಗಿ ನಮ್ನದೇ ಆದ ನಮ್ಮ ಅತ್ಯಂತ ಹಿತೈಶಿಯೇ ಆದ ಪಾಠಪ್ರವಚನವನ್ನೂ ದೂರು ಮಾಡಿಬಿಟ್ಟೆವು.
ಒಟ್ಟಾರೆಯಾಗಿ ಹೇಳುವದಾದರೆ ನಮ್ಮದೇನಿದೆ ಅದೆಲ್ಲವನ್ನೂ ದೂರ ಮಾಡುವದೇನಿದೆ ಅದರಲ್ಲಿನಾವು PhD ಮಾಡಿಕೊಂಡವಾರಾಗಿ expert ಆಗಿಬಿಟ್ಟಿದ್ದೇವೆ.
*ಆದರೆ ದೇವರು ಮಾತ್ರ ನಮ್ಮನ್ನು ಸರಳವಾಗಿ ಬಿಡುವದಿಲ್ಲ...*
ಇಂದಿನ ಈ ಅವಸ್ಥೆಯಲ್ಲಿ ನಮ್ಮದೇಶ, ನಮ್ಮ ರಾಜ್ಯ, ನಮ್ಮ ಊರು, ನಮ್ಮ ಹಳ್ಳಿ, ನಮ್ಮ ಜನ ಇವರೇ ಅನಿವಾರ್ಯ ಎಂದು ಪರಿಪೂರ್ಣ ಮನವರಿ ಆಗಿಸಿಬಿಟ್ಟಿದ್ದಾನೆ. ನೂರಾರು ಸಾವಿರಾರು ಲಕ್ಷ ಲಕ್ಷ ಜನರಿಗೆ ಅನ್ನಿಸಿದೆ *ನಮ್ಮೂರೇ ವಾಸಿ* ಎಂದು.
ನಮಗಾಗಿಯೂ ಜಪ ಪಾರಾಯಣ ಮಾಡದ ನಾವು ನಮ್ಮ ದೇಶಕ್ಕೆ, ನಮ್ಮ ರಾಜ್ಯಕ್ಜೆ, ನಮ್ಮವರಿಗೆ ಹಿತವಾಗಿ ಉಥತಮವಾಗಲಿ, ಒಳಿತಾಗಲಿ ಎಂದು ಒಕ್ಕೋರಲಿನಿಂದ ಜಪ ಭಜನೆ ಪಾರಾಯಣ ಎಲ್ಲವನ್ನೂ ಇವತ್ತು ನಮ್ಮದಾಗಿಸಿಕೊಂಡೆವು. ದೇವರು ನಮ್ಮದಾಗುವಂತೆ ಅನಿವಾರ್ಯ ಪರಿಸ್ಥಿಯನ್ನು ತಂದೊಡ್ಡಿ ಮಾಡಿದ.
ಇಂದು ನನ್ನ ಪರಿಚಯದ ನೂರಾರು ಜನ ಮನೆಯಲ್ಲಿ ಪೂಜೆ ಜಪ ಸಂಧ್ಯಾವಂದನೆ ಮಾಡುತ್ತಿದ್ದಾರೆ. ಗೊತ್ತಿಲ್ಲದವರು ಸಾವಿರಾರು ಜನರಿರಬಹುದು. ಅನೇಕ ತಾಯಂದಿರು ಮಕ್ಕಳಿಗೆ ಸ್ತೋತ್ರ ಕಲಿಸಿಕೊಡುತ್ತಿದ್ದಾರೆ. ತಂದೆಯರು ಸಂಧ್ಯಾವಂದನೆ ಮಾಡಿಸುತ್ತಿದ್ದಾರೆ. ಅನೇಕರು ಪುಸ್ತಕ ಧೂಳು ಝಾಡಿಸಿ ಹೊರತೆಗೆದಿದ್ದಾರೆ. ಈ ಅವಸ್ಥೆಯನ್ನು ದೇವರೇ ತಂದೊದಗಿಸಿದ. *ನಮಗೆ ಹಿತಮಾಡುವ ಛಲ ದೇವರದ್ದು ಇದೆ.....*
ಅಂತೂ ನಮ್ಮ ದೇವರು ನಮ್ಮ ಕೈ ಬಿಡಲಿಲ್ಲ. ನಮ್ಮೂರೇ ವಾಸಿ ಎನಿಸಿದ. ನಮ್ಮ ದೇವನೇ ಗತಿ ಎಂದೆನಿಸುದ. ನಮ್ಮ ಧರ್ಮವೇ ನಮಗೆ ಹಿತ ಎಂದೂ ಪರಿಚಯಿಸಿದ. ನಮ್ಮ ಶಾಸ್ತ್ರ ಜಪ ಸಂಧ್ಯಾ ಇವೇ ನಮಗೆ ಹಿತವನ್ನು ನೆಮ್ಮೆದಿಯನ್ನು ಕೊಡುವವು ಎಂದೂ ಮನವರಿಕೆ ಮಾಡಿಕೊಟ್ಟ. ನಾವು ಮರೆತಾಗಲೆಲ್ಲ ನೆನಪಿಸ್ತಾನೇ ಇರ್ತಾನೆ.
ಮುಂದೊಂದು ದಿನ ನಮ್ಮದೇನಿದೆ ಅವುಗಳನ್ನೇ ಒಪ್ಪಿಕೊಂಡು ಅಪ್ಪಿಕೊಳ್ಳುವಂತೆಯೂ ಮಾಡುತ್ತಾನೆ....
*ಜೈ ಶ್ರೀರಾಮ. ಜೈ ಶ್ರೀಕೃಷ್ಣ. ಜೈ ನರಹರಿ. ಜೈ ಧನ್ವಂತ್ರಿ*
*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments