*"ಶೂನ್ಯ ಭಾಗ್ಯನ ನೋಡಿ ಸಲಹಯ್ಯ......"*
*"ಶೂನ್ಯ ಭಾಗ್ಯನ ನೋಡಿ ಸಲಹಯ್ಯ......"*
ಧರ್ಮ ಹಾಗು ಧರ್ಮ ನಿಯಾಮಕನಾದ ನಿನ್ನನ್ನು ಯಾರು ದೃಢವಾಗಿ ನಂಬಿದಾರೆ ಅವರನ್ನು ರಕ್ಷಿಸುವ ದೋರೆ ನೀನು. ಧರ್ಮ ಹಾಗೂ ಧರ್ಮನಿಯಾಮಕ ನಿನ್ನನ್ನು ಸುಲಭರೀತಿಯಿಂದ ನಂಬುವದು ನನ್ನಿಂದತೂ ಸಾಧ್ಯವಿಲ್ಲದ ಮಾತು.
ಮಹಾ ಸೌಭಾಗ್ಯವಂತರಿಗೆ ಮಾತ್ರ ಧರ್ಮ ಮತ್ತು ಧರ್ಮನಿಯಾಮಕ ನಿನ್ನಲ್ಲಿ ನಂಬಿಕೆ ಭರವಸೆಗಳು ಬರುತ್ತವೆ. ಮಹಾಸೌಭಾಗ್ಯವಂತರಿಗೆ ಮಾತ್ರ ನೀ ಸಿಗುತ್ತೀಯ. ನಿಮ್ಮಿಬ್ಬರನ್ನು ಯಾರು ಪಡೆದಿದ್ದಾರೆ ಅವರು ಎಲ್ಲವನ್ನೂ ಪಡೆದಿದ್ದಾರೇ ಎಂದೇ ಅರ್ಥ.
ಜಗನ್ನಾಥ ದಾಸರು ತಮ್ಮ ಹಾಡಿಲ್ಲಿ ಹೇಳುತ್ತಾರೆ "ಮಂದಭಾಗ್ಯರಿಗೆ ದೋರಕದು ಇವರ ಮಹಾಸೇವ" ಎಂದು. ಧರ್ಮ ಹಾಗೂ ಧರ್ಮನಿಯಾಮಕ ಶ್ರೀಮನ್ನಾರಾಯಣನಿಗಿಂತಲೂ ತಾರತಮ್ಯದಲ್ಲಿ ಚಿಕ್ಕವರಾದ ಶ್ರೀರಾಘವೇಂದ್ರಸ್ವಾಮಿಗಳ ಸೇವೆಯೇ ಮಂದಭಾಗ್ಯರಾದ ಅಲ್ಪಭಗ್ಯರಾದ ಶೂನ್ಯಭಾಗ್ಯಾರಾದ ಜನರಿಗೆ ದೋರಕುವದಿಲ್ಲ ಎಂದು ಹಳುತ್ತಾರೆ. ಹೀಗಿರುವಗಾವ ಶ್ರೀರಾಯರಗಿಂತಲೂ ಉತ್ತಮೋತ್ತಮರಾದ ಧರ್ಮನಿಯಾಮಕ ಸ್ವಾಮಿಯ ಅಥವಾ ಧರ್ಮದ ಸೇವೆ ಅಲ್ಪಭಾಗ್ಯರಾದ ಇಂದಿನ ಯುವಕರಿಗೆ ಸಿಗುವದು ತುಂಬಾ ಕಷ್ಟದ ಕೆಲಸವೇ. ಧರ್ಮ ಹಾಗೂ ಧರ್ಮನಿಯಾಮಕನ ಸೇವೆ ಇಲ್ಲದಾದಾಗ ಅಪೇಕ್ಷಿತ ಫಲವೂ ದುರ್ಲಭ.
ಧರ್ಮ ಹಾಗೂ ಧರ್ಮನಿಯಾಮಕ ಸ್ವಾಮಿಯ ಸೇವೆ ಆಗದೇ ಅವನ ಪ್ರೀತಿ ಸಂಪಾದಿಸಿಕೊಂಡಿಲ್ಲ ಎಂದಾದರೆ ನಿಯಮೇನ, ಪ್ರತಿಕಾರ್ಯದಲ್ಲಿಯೂ ಅಡೆತಡೆಗಳು ವಿಘ್ನಗಳು ಅವ್ಯಾಹತವಾಗಿ ಬರುವದೇ. ಮಹಾ ಮಹಾ ತೆರೆಗಳಂತೆ ಅಪ್ಪಳಿಸುವವೇ. ಇದರಲ್ಲಿ ಯಾವ ಸಂಶಯವೂ ಇಲ್ಲ.
*ನಾನಂತೂ ಅಲ್ಪಪಭಾಗ್ಯನೇ....*
"ನಾನಂತೂ ಅಲ್ಪಭಾಗ್ಯನೇ" ಈ ವಿಷಯದಲ್ಲಿ ನನಗೂ ಸಂಶಯವಿಲ್ಲ. ಅಲ್ಪಭಾಗ್ಯನಿಗೆ ರಾಯರೇ ಸಿಗುವದಿಲ್ಲ ಎಂದಾದಾಗ ಧರ್ಮ ಹೇಗೆ ಸಿಕ್ಕೀತು. ದೇವರು ಹೇಗೆ ಸಿಕ್ಕಾನು.... ?? ಧರ್ಮ ದೇವರು ಸಿಗದಿದ್ದರೆ ನಾವು ನಮಗೆ ಬೇಕಾಗಿರುವದನ್ನು ಪಡೆದೇವು ಆದರೂ ಹೇಗೆ.. ??
*ಶ್ರೀಮನ್ಮಹಾಭಾರತ ಸುಂದರವಾದು ಉತ್ತರವನ್ನು ಕೊಡುತ್ತದೆ*
"ಮಂದಭಾಗ್ಯೋಲ್ಪಭಾಗ್ಯಾನಾಂ ತಪ ಏಕಂ ಸಮಾಸ್ಥಿತಮ್" ಎಂದು. ಮಂದಭಾಗ್ಯರಾದ ಅಲ್ಪಭಾಗ್ಯರಾದ ಶೂನ್ಯಭಾಗ್ಯರಾದ ನಮಗೆ ಮಹಾಭಾಗ್ಯವಂತರಾಗಬೇಕು, ಅಸಾಧ್ಯವಾದದ್ದನ್ನೂ ಪಡೆಯಬೇಕು ಎಂಬ ಹಂಬಲ ತುಮುಲ ಇದ್ದರೆ ತಪಸ್ಸು ಅತ್ಯಂತ ಅನಿವಾರ್ಯ. ತಪಸ್ಸೇ ಶ್ರೇಷ್ಠ ಸಾಧನೆ. ತಪಸ್ಸು ನಮ್ಮ ಭಾಗ್ಯವನ್ನೇ ಬದಲಾಯಿಸುತ್ತದೆ.
ತಪಸ್ಸು ಸಲಭವಲ್ಲ. ಅತ್ಯಂತ ಕಷ್ಟ ಸಾಧ್ಯವಾದದ್ದು ಜಗತ್ತಿನಲ್ಲಿ ಏನಾದರೂ ಇದ್ದರೆ ಅದು ತಪಸ್ಸೇ. ಸುಲಭದರಲ್ಕಿ ಅತ್ಯಂತ ಸುಲಭವಾದದ್ದು ಏನಾದರೂ ಇದ್ದರೆ ಅದು ತಪಸ್ಸೇ.
*ತಪಸ್ಸಿಗೋಸ್ಕರ ದೇವರ ಕರುಣೆ...*
ದೇವರ ಕರುಣೆ ಇದ್ದರೆ ಸಂಧ್ಯಾವಂದನ ಪೂಜೆ ಪಾಠ ಪ್ರವಚನ ಪ್ರದಕ್ಷಿಣೆ ನಮಸ್ಕಾರ ಜಪ ತಪ ಸತ್ಯವೇ ತಪ, ಶ್ರವಣ ತಪ, ದೇವರಲ್ಲು ಮನಸ್ಸಿಡುವದು ತಪ. ದಮವೇ ತಪ. ಹೀಗೇ ನೂರಾರು ತಪಸ್ಸುಗಳನ್ನು ಶಾಸ್ತ್ರದಲಿ ಹೇಳಿದ್ದಾರೆ. ಆ ಯಾವುದಾದರೂ ಒಂದು ತಪಸ್ಸಿನಲ್ಲಿ ಭಾಗಿಯಾಗೋಣ.
ಈ ಶೂನ್ಯಭಾಗ್ಯನ ನೋಡಿ, ಕರುಣೆ ಮಾಡಿ, ತಪಸ್ಸು ಮಾಡುವ ಸೌಭಾಗ್ಯ ಓದಗಿಸಿ ಸಲಹು ಎಂದು ಪ್ರಾರ್ಥಿಸುವೆ.. *ಇಂದಿನ ಕಥಾನಾಯಕರಾದ "ಶ್ರೀ ಶ್ರೀಸತ್ಯವಿಜಯತೀರ್ಥ" ಶ್ರೀಪಾದರ ಅಡೆದಾವರೆಗಳಲ್ಲೂ ವಿಶೇಷವಾಗಿ ಪ್ರಾರ್ಥಿಸುವೆ.
*✍🏽✍🏽ನ್ಯಾಸ.....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments